ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಿನವೇ ಸುದಿನವು ಧ್ಯಾನಮಾಳ್ಪ ಜನವೇ ಸುಜನವು ಪ ಘನತರ ಹರಷದಿ ಮನದಣವಂದದಿ ಮನಸಿಜನಯ್ಯನ ಮಹಿಮೆಯ ಪಾಡುತ ಅ.ಪ ಯುಕ್ತದಿ ಕೂಡಿ ಅಯುಕ್ತ ವಿರಕ್ತಿಯ ಮಾಡಿ ಭುಕ್ತಿಗಾಗಲಿ ಭವಮುಕ್ತಿಗಾಲಿ ಹರಿ ಭಕ್ತರ ನೋಡಗೂಡಿ ರಕ್ತಿಲಿ ಪಾಡುವ 1 ತಾಳ ತಂಬೂರಿಯ ತಪ್ಪದೆ ತಂದು ಮೈಳೈಸಿಶ್ರುತಿಯ ಶ್ರೀಲಾಲಮನ ಕಥೆ ಪೇಳುವ ಕೇಳುವ 2 ಅರ್ಥಾಪೇಕ್ಷೆಯಲಿ ಕಾಲಗಳನು ವ್ಯರ್ಥಮಾಡದಲೆ ಪಾರ್ಥಸಾರಥಿಯನ್ನು ಪ್ರಾರ್ಥನೆ ಮಾಡುವ 3 ಕಾಮಕ್ರೋಧಗಳ ಕಳೆವ ರಘು ರಾಮ ನಾಮಗಳ ಪ್ರೇಮದಿಂ ಪಾಡುತ್ತ ರೋಮಾಂಚದೊಡಗೂಡಿ ಭವ ತಾಮಸ ಕಳೆಯುವ 4 ಹರಿವಾಸರವನು ಸಾಧಿಸಿ ಮುರಹರ ನಾಮಗಳು ಹರಿದಾಸರೊಡಗೂಡಿ ಹರಷದಿಂದೆಚ್ಚತ್ತು ವರದ ವಿಠಲ ನರಹರಿಯೆಂದು ಪಾಡುವ 5
--------------
ವೆಂಕಟವರದಾರ್ಯರು
ಹರಷದಿ ತಾ ಸಖಿ ತ್ವರದಿ ಆರುತಿಯ ದ್ವಿರದ ವರದ ಶಿರಿನರಹರಿಗೆ ಪ ನಿಗಮ ತಂದವಗೆ ನಗಧರ ಕ್ರೋಢಗೆ ಮಗುವಿನ ಸಲಹಿ ಜಗವ್ಯಾಪಿಸಿದಗೆ ಭೃಗುಜಾ, ರಘುಜಾ ವ್ರಜಜಾರ್ತಿ ಹರಣ ವಿಗತವಸನ ತುರುಗನೇರಿದಗೆ 1 ಗರುಡ ಗಮನಗೆ ಶರಧಿಶಯನಗೆ ಸುರನದಿ ಪಿತ ಭೂಸುರ ಪ್ರಿಯಗೆ ಅರುಣಾ, ಚರಣಾ ಕರುಣಾಕರಮಂ- ದರಧರ ಶರಣರ ಪೊರೆವ ಸಿರಿವರಗೆ 2 ಛಳಿಮಳೆ ಸಹಿಸುತ ಛಲದಲಿಧೇನಿಪ ಬಲುವಿಧ ಭಕ್ತಾವಳಿ ಹೃನ್ಮಧ್ಯದಿ ಪೊಳೆವಾ, ನಲಿವಾ ಕಳೆವಾಘವ ಭೂ-ವಲಯದಿ ಕಾರ್ಪರ ನಿಲಯ ನರಹರಿಗೆ 3
--------------
ಕಾರ್ಪರ ನರಹರಿದಾಸರು