ಒಟ್ಟು 8 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದರು ನಾರದರ್ಹರುಷದಲಿ ನಿಂದು ಯಜ್ಞ ನೋಡುತ ಮುದದಿ ಇಂದು ಯಾರಿಗರ್ಪಣೆ ಮಾಡುವಿರೆನೆ ಬಂದಿತು ಸಂಶಯ ಋಷಿಗಳಿಗೆ ಮಂಗಳಂ ಜಯ ಮಂಗಳಂ ಪ ತ್ವರದಿಭೃಗು ಮುನಿಗಳು ಹೊರಡುತಲಿ ಹರಬ್ರಹ್ಮರು ಸರಿಯಲ್ಲೆನುತ ಹರಿವೈಕುಂಠದಿ ಮಲಗಿರೆ ನೋಡುತ ಭರದಿಂದೊದೆಯೆ ವಕ್ಷಸ್ಥಳಕೆ ಮಂಗಳಂ ಜಯ ಮಂಗಳಂ 1 ನೊಂದಿತು ಪಾದವೆಂದುಪಚರಿಸೆ ಇಂದಿರಾದೇವಿ ಕೋಪಿಸಿ ತೆರಳೆ ಬಂದು ಋಷಿಗಳಿಗರುಹಿದರು ಶ್ರೀಗೋ- ವಿಂದಗೆ ಸಮರಿಲ್ಲೆಂದೆನುತಾ ಮಂಗಳಂ ಜಯ ಮಂಗಳಂ 2 ಮಡದಿ ಇಲ್ಲದೆ ಬೇಸರ ಪಡುತಾ ಪೊಡವಿಗಿಳಿದು ಹುತ್ತದೊಳಗಿರಲು ಕೊಡಲಿಯ ಗಾಯಕೌಷಧ ಹುಡುಕುತ ಹರಿ ಅಡವಿಗಳಲಿ ಸಂಚರಿಸಿದಗೆ ಮಂಗಳಂ ಜಯ ಮಂಗಳಂ3 ಭೂಮಿಗೊಡೆಯ ವರಹನನು ನೋಡಿ ಕಾಮಿನಿ ಬಕುಳೆ ಸೇವೆಗೆ ಮಾಡಿ ಕಾಮಜನಕ ಬೇಟೆಗೆ ಹೊರಟನು ಬಹು ಪ್ರೇಮದಿಂದಲಂಕರಿಸಿದ ಹರಿಗೆ ಮಂಗಳಂ ಜಯ ಮಂಗಳಂ4 ವನವನ ಚರಿಸಿ ಸ್ತ್ರೀಯರ ನೋಡಿ ವನಜಾಕ್ಷೇರು ನಡುಗುತ ಭಯದಿ ಘನಮಹಿಮಗೆ ಕಲ್ಲು ಕಲ್ಲೆಸೆಯೆ ಹಯ ವನದಿ ಮೃತಿಸೆ ಗಿರಿ ಏರಿದಗೆÉ ಮಂಗಳಂ ಜಯ ಮಂಗಳಂ 5 ಕಾಮಿನಿ ಬಕುಳೆಗೆಲ್ಲವ ಪೇಳಿ ಕೋಮಲೆ ಕೊರವಿ ರೂಪವ ತಾಳಿ ವ್ಯೋಮರಾಜನ ಪುರದಲಿ ಧರಣಿಗೆ ಸಾಮುದ್ರಿಕೆ ಪೇಳಿದ ಹರಿಗೆ ಮಂಗಳಂ ಜಯ ಮಂಗಳಂ 6 ವಶಿಷ್ಟ ಕಶ್ಯಪರು ಶುಕರುಗಳು ವಿಶಿಷ್ಟ ಬಂಧುಗಳ ಕರೆಸುತಲಿ ಪಟ್ಟದರಸಿ ಲಕುಮಿಯು ಬರೆಹರುಷದಲಿ ಕಟ್ಟಿ ಮಾಂಗಲ್ಯ ಹರಿ ಪದ್ಮಿನಿಗೆ ಮಂಗಳಂ ಜಯ ಮಂಗಳಂ 7 ಜಯ ಜಯ ವೆಂಕಟ ಪದ್ಮಿನಿಗೆ ಜಯ ಜಯ ಪದ್ಮಾವತಿಪ್ರಿಯಗೆ ಜಯ ಜಯ ಕಮಲನಾಭ ವಿಠ್ಠಲಗೆ ಜಯ ಜಯ ಶ್ರೀ ಶ್ರೀನಿವಾಸನಿಗೆಮಂಗಳಂ ಜಯ ಮಂಗಳಂ 8
--------------
ನಿಡಗುರುಕಿ ಜೀವೂಬಾಯಿ
ಯಾದವರಾಯ ಬೃಂದಾವನದೊಳು ವೇಣುನಾದವ ಮಾಡುತಿರೆ ಪ ರಾಧೆ ಮುಂತಾದ ಗೋಪಿಯರೆಲ್ಲಮಧುಸೂದನ ನಿಮ್ಮನು ಸೇವಿಸುತ್ತಿರೆ ಅ ಸುರರು ಅಂಬರದಿ ಸಂದಣಿಸಿರೆ ಅ-ಪ್ಸರ ಸ್ತ್ರೀಯರು ಮೈಮರೆದಿರೆಕರದಲಿ ಕೊಳಲನೂದುತ ಪಾಡುತಸರಿಗಮ ಪದನಿ ಸ್ವರಗಳ ನುಡಿಸುತ 1 ಹರಬ್ರಹ್ಮರು ನಲಿದಾಡುತಿರೆ ತುಂ-ಬುರು ನಾರದರು ಪಾಡುತಿರೆಪರಿಪರಿ ವಿಧದಲಿ ರಾಗವ ನುಡಿಸುತತುರು ಹಿಂಡುಗಳ ಕೂಡುತ ಪಾಡುತ2 ತುರು ಹಿಂಡುಗಳ ತರತರದಲಿ ತನ್ನಕರದಿಂ ಬೋಳೈಸಿ ಸಂತೈಸುತಅರವಿಂದ ನಯನ ಆದಿಕೇಶವರಾಯಕರುಗಳ ಸಹಿತ ಗೋವ್ಗಳ ತಿರುಹುತ3
--------------
ಕನಕದಾಸ
ವನಭೋಜನ ಊರ್ವಶಿ: ಇದೀಗ ಮನವು ಇಂದಿರಾಕ್ಷಿ ಇದೀಗ ಮನವುಪ. ಮಧುಸೂದನ ತನ್ನ ಸದನದಿಂದಲಿ ಒಮ್ಮೆ ಒದಗಿ ಪಯಣಗೈದು ಪದುಳದಿ ಮಂಡಿಪ1 ವಾಸುದೇವ ತಂಪಾಶುಗದಿಂದಾ- ಯಾಸವ ಬಿಡಿಸಿ ಸಂತೋಷಪಡಿಸುವಂತಿದೀಗ2 ಭಾಗವತರು ಅನುರಾಗದಿ ಕೂಡಿ ಸ- ರಾಗದಿ ಯೋಗಾರೋಗಣೆಮಾಡುವದೀಗ3 ಸತ್ಪಾತ್ರ ವಿಯೋಗ ಸು- ಕ್ಷೇತ್ರ ಸುಧಾಮಯ ಕೀರ್ತಿಯೆಂದಿನಿಸುವ 4 ತರುಗುಲ್ಮಾವಳಿ ಸುರಮುನಿಗಳು ಕಾಣೆ ಉರು ಪಾಷಾಣವೆಲ್ಲವು ಸಚ್ಚರಿತವು5 ರಂಭೆ : ಪೋಗಿ ಬರುವ ವನಕ್ಕಾಗಿ ನಾಗವೇಣಿ ಲೇಸಾಗಿ ಬೇಗ ನಾವುಪ. ಭಾಗವತಾದಿ ಸಮಾಗಮವಾದರೆ ಭಾಗ್ಯವಂತೆಯರ್ನಾವಾಗಿ1 ಹರಬ್ರಹ್ಮಾದಿ ನಿರ್ಜರರಿಗಸಾಧ್ಯವು ಹರಿಪ್ರಸಾದವೆಂದು ಸಾಗಿ ಬೇಗ2 ನಾರಿ ನಿನ್ನ ಉಪಕಾರ ಮರೆಯೆ ನಾ ಭೂರಿ ಪುಣ್ಯವಶಳಾಗಿ3 ಕಾಣದಿರಲು ಯೆನ್ನ ಪ್ರಾಣ ನಿಲ್ಲದು ಕಾಣೆ ಶ್ರೀನಿವಾಸನ ಭೇಟಿಗಾಗಿ4 ಊರ್ವಶಿ : ಅಭಿಷೇಕವನು ಗೈದರಾಗ ಮನಸಿಗನುರಾಗ ಪ. ವಿಭುಧೋತ್ತಮರೆಲ್ಲರು ಕೂಡುತ್ತ ಶುಭ ಋಗ್ವೇದೋಕ್ತದಿ ನಲಿಯುತ್ತಅ.ಪ. ಕ್ಷೀರಾರ್ಣವದೊಳಗಾಳಿದವಂಗೆ ಕ್ಷೀರಾಬ್ಧಿಯ ದುಹಿತೆಯ ಗಂಡನಿಗೆ ನೀರಜನಾಭನ ನಿಖಿಲ ಚರಾಚರ ಪೂರಿತ ಕಲ್ಮಷದೊರಗೆ ಕ್ಷೀರದ1 ಚದುರತನದಿ ಗೊಲ್ಲರೊಳಾಡಿದಗೆ ದಧಿಪಾಲ್ ಬೆಣ್ಣೆಯ ಸವಿದುಂಡವಗೆ ಮದನಜನಕ ಮಹಿಮಾಂಬುಧಿ ಕರುಣಾ- ಸ್ಪದ ಸತ್ಯಾತ್ಮ ಸನಾಥಗೆ ದಧಿಯ2 ಶ್ರುತಿಸ್ಮøತಿತತಿನುತ ರತಿಪತಿಪಿತಗೆ ಅತುಲಿತಗುಣ ಸೂನೃತಭಾಷಿತಗೆ ದಿತಿಸುತಹತ ಶೋಭಿತ ಮೂರುತಿ ಶಾ- ಶ್ವತವಾಶ್ರಿತ ವಾಂಛಿತಗೆ ಘೃತವ3 ಮಧುಸೂದನ ಮಂದರಗಿರಿಧರೆಗೆ ಮೃದುವಾಕ್ಯಗೆ ಮಂಗಲಾಂಗನಿಗೆ ಪದಮಳಾಕ್ಷ ಪರಾತ್ಪರವಸ್ತು ನೀ- ರದ ಶ್ಯಾಮಲ ನಿತ್ಯಾತ್ಮಗೆ ಮಧುವಿನ4 ಕರುಣಾಕರ ಕಮಲಜತಾತನಿಗೆ ದುರುಳ ಸುಬಾಹು ತಾಟಕಿ ಮರ್ದನಗೆ ನರಕಾಂತಕ ನಾರಾಯಣ ಸಕಲಾ- ಮರಪೂಜಿತಗೆ ಸರ್ವಾತ್ಮಗೆ ಸಕ್ಕರೆ5 ಎಳೆತುಳಸೀವನಮಾಲಾಧರಗೆ ಫಲದಾಯಕ ಪರಬ್ರಹ್ಮರೂಪನಿಗೆ ಕಲುಷರಹಿತ ನಿರ್ಮಲಚಾರಿತ್ರ್ಯ ನಿ- ಶ್ಚಲಿತಾನಂದ ನಿತ್ಯನಿಗಳ ನೀರಿನ6 ಕನಕಾಂಬರಧರ ಶೋಭತನಿಂಗೆ ಮನಕಾನಂದವ ಪಡಿಸುವನಿಂಗೆ ಚಿನಮಯ ಪರಿಪೂರ್ಣ ವಿಶ್ವಂಭರ ಜನಕಜಾ ವರನಿಗೆ ಕನಕಾನನೀಕದ7 * * * ವೆಂಕಟೇಶ ಕಣ್ಣ ಮುಂದೆ ನಿಂತಿದಂತಿದೆಪ. ಶಿರದೊಳು ರತ್ನಕಿರೀಟದ ಝಳಕ ಮೆರೆವ ಲಲಾಟದಿ ಕಸ್ತೂರಿತಿಲಕ ವರ ಕರ್ಣಕುಂಡಲಗಳ ಮಯಕನಕ ಚೆಲುವ ಚರಾಚರಭರಿತಜ ಜನಕ1 ಕಂಬುಕಂಠದಿ ಕೌಸ್ತುಭವನಮಾಲ ಇಂಬಾಗಿಹ ಭೂಷಣ ಶುಭಲೋಲ ಸಂಭ್ರಮಿಸುವ ಮೋಹನ ಗುಣಶೀಲ ಅಂಬುಜನಾಭಾಶ್ರಿತಜನಪಾಲ2 ಶಂಖಸುದರ್ಶನಗದಾಪದ್ಮ ಧಾರಿ ಕಂಕಣವೇಣುವಡ್ಯಾಣವಿಹಾರಿ ಬಿಂಕದ ಬಿರುದಾಂಕಿತ ಕಂಸಾರಿ ಶಂಕೆಯಿಲ್ಲದ ಭೂಷಣಾಲಂಕಾರಿ3 ಎಡಬಲದಲಿ ಮಡದಿಯರ ವಿಲಾಸ ಕಡುಬೆಡಗಿನ ಪೀತಾಂಬರಭೂಷ ಕಡಗ ಕಾಲಗೆಜ್ಜೆ ಅಂದುಗೆಯಿಟ್ಟು ತೋಷ ಒಡೆಯ ಶ್ರೀನಾರಾಯಣ ಸರ್ವೇಶ4 ಈ ರೀತಿಯಲಿ ಶೃಂಗಾರನಾಗುತ್ತ ಭೂರಿಭಕ್ತರ ಕಣ್ಮನಕೆ ತೋರುತ್ತ ನಾರದಾದಿ ಮುನಿವರ ಗೋಚರದ ಚಾರುಚರಣವನು ತೋರಿಸಿ ಪೊರೆದ5 * * * ಆರೋಗಣೆಯ ಗೈದನು ಶ್ರೀರಂಗ ಸಾರಸವಾದ ಸಮಸ್ತ ವಸ್ತುಗಳ ಪ. ಧೂಪದೀಪನೈವೇದ್ಯವಿಧಾನ ಶ್ರೀಪರಮಾತ್ಮ ಮಂಗಲಗುಣಪೂರ್ಣ1 ಸುರತರುವಿನ ಸೌಭಾಗ್ಯದ ತೆರನ ಮರಕತಮಯ ಹರಿವಾಣದೊಳಿದನ2 ಭಕುತರ ಸೌಖ್ಯವಿನ್ನೇನೆಂಬುವೆನು ಶಕುತ ಶ್ರೀಮಾಧವ ನಿರತ ತೋರುವನು3 * * * ಆರತಿ ಶ್ರೀನಿವಾಸಂ ಶ್ರೀವೆಂಕಟೇಶಂ ಗಾರತಿ ಶ್ರೀನಿವಾಸಂಪ. ಮಂಗಲಾಂಗ ನರಸಿಂಗ ಮನೋಹರ ರಂಗರಾಯ ಶ್ರೀಗಂಗಾಜನಕಗೆ1 ಮಾಧವ ಮಧುಹರ ಮೋದಭರಿತ ಜಗ- ದಾಧಾರ ವೇಣುನಾದವಿನೋದಗೆ2 ನಿತ್ಯನಿರಂಜನ ಸತ್ಯಸ್ವರೂಪಗೆ ಪ್ರತ್ಯಗಾತ್ಮಪರತತ್ತ್ವಸ್ವರೂಪಗೆ3 ಭೋಜನವ ಗೈದರು ಪ. ಮೂಜಗತ್ಪತಿಯ ಪ್ರಸಾದಪ್ರತಾಪದಿ ನೈಜವಾಗಿಹ ಪಾಪ ಮಾಜಿ ಹೋಗಾಡುತ್ತ1 ಜಿಹ್ವೆಗೆ ರುಚಿಕರವಪ್ಪುದ ಮಿಗಿಲಾದ ಶಾಕಪಾಕಗಳನ್ನು ಪಾತ್ರದಿ ತೆಗೆದು ಸಂತೋಷ ಬೆಡಗುಗಳ ತೋರುತ್ತ2 ಹಪ್ಪಳ ಸಂಡಿಗೆಯು ತಪ್ಪು ಒಗರ ಶಾಲ್ಯನ್ನಗಳೆಲ್ಲವ ತಪ್ಪದೆ ಸವಿದು ಬಾಯ್ ಚಪ್ಪರಿಸಿದರಾಗ3 ಹೋಳಿಗೆಯು ಕಾಯದ ಜಡಗಳು ಮಾಯಕವಾದವು ಆಯುರಾರೋಗ್ಯ ಸುಶ್ರೇಯ ಕಾರಣವಾಯ್ತು4 ಸುರರು ಉರಗ ಮಾನವರೆಲ್ಲರೂ ದೊರೆಯ ಪ್ರಸಾದವು ದೊರಕಿತು ಎನುತ ವಿ- ಸ್ತರವಾದ ತೋಷದಿ ಭರದಿಂದೊದಗುತಲಿ5
--------------
ತುಪಾಕಿ ವೆಂಕಟರಮಣಾಚಾರ್ಯ
ವನಭೋಜನ ಊರ್ವಶಿ:ಇದೀಗ ಮನವು ಇಂದಿರಾಕ್ಷಿ ಇದೀಗ ಮನವು ಪ. ಮಧುಸೂದನ ತನ್ನ ಸದನದಿಂದಲಿ ಒಮ್ಮೆ ಒದಗಿ ಪಯಣಗೈದು ಪದುಳದಿ ಮಂಡಿಪ 1 ವಾಸುದೇವ ತಂಪಾಶುಗದಿಂದಾ- ಯಾಸವ ಬಿಡಿಸಿ ಸಂತೋಷಪಡಿಸುವಂತಿದೀಗ 2 ಭಾಗವತರು ಅನುರಾಗದಿ ಕೂಡಿ ಸ- ರಾಗದಿ ಯೋಗಾರೋಗಣೆಮಾಡುವದೀಗ 3 ಸತ್ಪಾತ್ರ ವಿಯೋಗ ಸು- ಕ್ಷೇತ್ರ ಸುಧಾಮಯ ಕೀರ್ತಿಯೆಂದಿನಿಸುವ 4 ತರುಗುಲ್ಮಾವಳಿ ಸುರಮುನಿಗಳು ಕಾಣೆ ಉರು ಪಾಷಾಣವೆಲ್ಲವು ಸಚ್ಚರಿತವು 5 ರಂಭೆ : ಪೋಗಿ ಬರುವ ವನಕ್ಕಾಗಿ ನಾಗವೇಣಿ ಲೇಸಾಗಿ ಬೇಗ ನಾವು ಪ. ಭಾಗವತಾದಿ ಸಮಾಗಮವಾದರೆ ಭಾಗ್ಯವಂತೆಯರ್ನಾವಾಗಿ 1 ಹರಬ್ರಹ್ಮಾದಿ ನಿರ್ಜರರಿಗಸಾಧ್ಯವು ಹರಿಪ್ರಸಾದವೆಂದು ಸಾಗಿ ಬೇಗ 2 ನಾರಿ ನಿನ್ನ ಉಪಕಾರ ಮರೆಯೆ ನಾ ಭೂರಿ ಪುಣ್ಯವಶಳಾಗಿ 3 ಕಾಣದಿರಲು ಯೆನ್ನ ಪ್ರಾಣ ನಿಲ್ಲದು ಕಾಣೆ ಶ್ರೀನಿವಾಸನ ಭೇಟಿಗಾಗಿ 4 ಊರ್ವಶಿ :ಅಭಿಷೇಕವನು ಗೈದರಾಗ ಮನಸಿಗನುರಾಗ ಪ. ವಿಭುಧೋತ್ತಮರೆಲ್ಲರು ಕೂಡುತ್ತ ಶುಭ ಋಗ್ವೇದೋಕ್ತದಿ ನಲಿಯುತ್ತ ಅ.ಪ. ಕ್ಷೀರಾರ್ಣವದೊಳಗಾಳಿದವಂಗೆ ಕ್ಷೀರಾಬ್ಧಿಯ ದುಹಿತೆಯ ಗಂಡನಿಗೆ ನೀರಜನಾಭನ ನಿಖಿಲ ಚರಾಚರ ಪೂರಿತ ಕಲ್ಮಷದೊರಗೆ ಕ್ಷೀರದ1 ಚದುರತನದಿ ಗೊಲ್ಲರೊಳಾಡಿದಗೆ ದಧಿಪಾಲ್ ಬೆಣ್ಣೆಯ ಸವಿದುಂಡವಗೆ ಮದನಜನಕ ಮಹಿಮಾಂಬುಧಿ ಕರುಣಾ- ಸ್ಪದ ಸತ್ಯಾತ್ಮ ಸನಾಥಗೆ ದಧಿಯ 2 ಶ್ರುತಿಸ್ಮøತಿತತಿನುತ ರತಿಪತಿಪಿತಗೆ ಅತುಲಿತಗುಣ ಸೂನೃತಭಾಷಿತಗೆ ದಿತಿಸುತಹತ ಶೋಭಿತ ಮೂರುತಿ ಶಾ- ಶ್ವತವಾಶ್ರಿತ ವಾಂಛಿತಗೆ ಘೃತವ 3 ಮಧುಸೂದನ ಮಂದರಗಿರಿಧರೆಗೆ ಮೃದುವಾಕ್ಯಗೆ ಮಂಗಲಾಂಗನಿಗೆ ಪದಮಳಾಕ್ಷ ಪರಾತ್ಪರವಸ್ತು ನೀ- ರದ ಶ್ಯಾಮಲ ನಿತ್ಯಾತ್ಮಗೆ ಮಧುವಿನ 4 ಕರುಣಾಕರ ಕಮಲಜತಾತನಿಗೆ ದುರುಳ ಸುಬಾಹು ತಾಟಕಿ ಮರ್ದನಗೆ ನರಕಾಂತಕ ನಾರಾಯಣ ಸಕಲಾ- ಮರಪೂಜಿತಗೆ ಸರ್ವಾತ್ಮಗೆ ಸಕ್ಕರೆ 5 ಎಳೆತುಳಸೀವನಮಾಲಾಧರಗೆ ಫಲದಾಯಕ ಪರಬ್ರಹ್ಮರೂಪನಿಗೆ ಕಲುಷರಹಿತ ನಿರ್ಮಲಚಾರಿತ್ರ್ಯ ನಿ- ಶ್ಚಲಿತಾನಂದ ನಿತ್ಯನಿಗಳ ನೀರಿನ 6 ಕನಕಾಂಬರಧರ ಶೋಭತನಿಂಗೆ ಮನಕಾನಂದವ ಪಡಿಸುವನಿಂಗೆ ಚಿನಮಯ ಪರಿಪೂರ್ಣ ವಿಶ್ವಂಭರ ಜನಕಜಾ ವರನಿಗೆ ಕನಕಾನನೀಕದ 7 * * * ವೆಂಕಟೇಶ ಕಣ್ಣ ಮುಂದೆ ನಿಂತಿದಂತಿದೆ ಪ. ಶಿರದೊಳು ರತ್ನಕಿರೀಟದ ಝಳಕ ಮೆರೆವ ಲಲಾಟದಿ ಕಸ್ತೂರಿತಿಲಕ ವರ ಕರ್ಣಕುಂಡಲಗಳ ಮಯಕನಕ ಚೆಲುವ ಚರಾಚರಭರಿತಜ ಜನಕ1 ಕಂಬುಕಂಠದಿ ಕೌಸ್ತುಭವನಮಾಲ ಇಂಬಾಗಿಹ ಭೂಷಣ ಶುಭಲೋಲ ಸಂಭ್ರಮಿಸುವ ಮೋಹನ ಗುಣಶೀಲ ಅಂಬುಜನಾಭಾಶ್ರಿತಜನಪಾಲ 2 ಶಂಖಸುದರ್ಶನಗದಾಪದ್ಮ ಧಾರಿ ಕಂಕಣವೇಣುವಡ್ಯಾಣವಿಹಾರಿ ಬಿಂಕದ ಬಿರುದಾಂಕಿತ ಕಂಸಾರಿ ಶಂಕೆಯಿಲ್ಲದ ಭೂಷಣಾಲಂಕಾರಿ 3 ಎಡಬಲದಲಿ ಮಡದಿಯರ ವಿಲಾಸ ಕಡುಬೆಡಗಿನ ಪೀತಾಂಬರಭೂಷ ಕಡಗ ಕಾಲಗೆಜ್ಜೆ ಅಂದುಗೆಯಿಟ್ಟು ತೋಷ ಒಡೆಯ ಶ್ರೀನಾರಾಯಣ ಸರ್ವೇಶ 4 ಈ ರೀತಿಯಲಿ ಶೃಂಗಾರನಾಗುತ್ತ ಭೂರಿಭಕ್ತರ ಕಣ್ಮನಕೆ ತೋರುತ್ತ ನಾರದಾದಿ ಮುನಿವರ ಗೋಚರದ ಚಾರುಚರಣವನು ತೋರಿಸಿ ಪೊರೆದ 5 * * * ಆರೋಗಣೆಯ ಗೈದನು ಶ್ರೀರಂಗ ಸಾರಸವಾದ ಸಮಸ್ತ ವಸ್ತುಗಳ ಪ. ಧೂಪದೀಪನೈವೇದ್ಯವಿಧಾನ ಶ್ರೀಪರಮಾತ್ಮ ಮಂಗಲಗುಣಪೂರ್ಣ 1 ಸುರತರುವಿನ ಸೌಭಾಗ್ಯದ ತೆರನ ಮರಕತಮಯ ಹರಿವಾಣದೊಳಿದನ 2 ಭಕುತರ ಸೌಖ್ಯವಿನ್ನೇನೆಂಬುವೆನು ಶಕುತ ಶ್ರೀಮಾಧವ ನಿರತ ತೋರುವನು 3 * * * ಆರತಿ ಶ್ರೀನಿವಾಸಂ ಶ್ರೀವೆಂಕಟೇಶಂ ಗಾರತಿ ಶ್ರೀನಿವಾಸಂ ಪ. ಮಂಗಲಾಂಗ ನರಸಿಂಗ ಮನೋಹರ ರಂಗರಾಯ ಶ್ರೀಗಂಗಾಜನಕಗೆ 1 ಮಾಧವ ಮಧುಹರ ಮೋದಭರಿತ ಜಗ- ದಾಧಾರ ವೇಣುನಾದವಿನೋದಗೆ 2 ನಿತ್ಯನಿರಂಜನ ಸತ್ಯಸ್ವರೂಪಗೆ ಪ್ರತ್ಯಗಾತ್ಮಪರತತ್ತ್ವಸ್ವರೂಪಗೆ3 ಭೋಜನವ ಗೈದರು ಪ. ಮೂಜಗತ್ಪತಿಯ ಪ್ರಸಾದಪ್ರತಾಪದಿ ನೈಜವಾಗಿಹ ಪಾಪ ಮಾಜಿ ಹೋಗಾಡುತ್ತ1 ಜಿಹ್ವೆಗೆ ರುಚಿಕರವಪ್ಪುದ ಮಿಗಿಲಾದ ಶಾಕಪಾಕಗಳನ್ನು ಪಾತ್ರದಿ ತೆಗೆದು ಸಂತೋಷ ಬೆಡಗುಗಳ ತೋರುತ್ತ 2 ಹಪ್ಪಳ ಸಂಡಿಗೆಯು ತಪ್ಪು ಒಗರ ಶಾಲ್ಯನ್ನಗಳೆಲ್ಲವ ತಪ್ಪದೆ ಸವಿದು ಬಾಯ್ ಚಪ್ಪರಿಸಿದರಾಗ 3 ಹೋಳಿಗೆಯು ಕಾಯದ ಜಡಗಳು ಮಾಯಕವಾದವು ಆಯುರಾರೋಗ್ಯ ಸುಶ್ರೇಯ ಕಾರಣವಾಯ್ತು 4 ಸುರರು ಉರಗ ಮಾನವರೆಲ್ಲರೂ ದೊರೆಯ ಪ್ರಸಾದವು ದೊರಕಿತು ಎನುತ ವಿ- ಸ್ತರವಾದ ತೋಷದಿ ಭರದಿಂದೊದಗುತಲಿ 5 ಭೋಗವಿನ್ನಂತೆಯಿಲ್ಲಿ ರೋಗ ದುರಿತವೆಲ್ಲ ನೀಗಿತು ಎನುತನು- ರಾಗದಿ ಸವಿದುಂಡು ತೇಗಿದರೆಲ್ಲರು 6 ಪುಣ್ಯ-ಫಲದಿಂದ ದೊರಕಿತಲ್ಲೇ ನಲವಿಂದಾನತರು ಕೈ ತೊಳೆದ ನೀರಿನೊಳಿದ್ದ ಜಲಜಂತು ಸಹವು ನಿರ್ಮಲಿನವಾದವು ಕಾಣೆ 7 ಪಾವನವಾದರು ಹಿಂಡು ಉದ್ದಂಡ ಮೃಗಗಳೆಲ್ಲ &ಟಿb
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸಂಪ್ರದಾಯದ ಹಾಡುಗಳು ಅನಿರುದ್ಧ ಪ್ರದ್ಯುಮ್ನ ಸಂಕರ್ಷಣ ಜೋ ವಾಸುದೇವ ನಾರಾಯಣ ಜೋ ಜೋ ಪ ಕೃತಿಶಾಂತಿ ಜಯ ಮಾಯ ಶ್ರೀಲಕ್ಷ್ಮಿಪತಿ ಜೋ ಪತಿತ ಪಾವನ ಪುರುಷೋತ್ತಮ ಜೋ ಜೋ ಅ.ಪ ಕುಂದಣ ಮಯವಾದ ಚಂದ ತೊಟ್ಟಿಲಲಿ ಚಂದ್ರ ಸೂರ್ಯರ ಗೆಲುವ ಮುಖಕಾಂತೆಯಲಿ ಇಂದಿರಾಪತಿ ಶ್ರೀಶ ಇಭರಾಜವರದ ಮೂಕಾಂಬಿಕೆ ಮಲಗೆ ತೂಗುವೆ ಹರುಷದಲಿ 1 ಸುರರೆಲ್ಲ ನೆರೆದು ಸಂಭ್ರಮಗೊಳುತಿರಲು ಸುರಗಂಧರ್ವಪ್ಸರ ಸ್ತ್ರೀಯರು ನಾಚುತಿರಲು ಹರಬ್ರಹ್ಮ ಮೊದಲಾದವರು ಸ್ತುತಿಸುತಲಿರಲು ಭಳಿರೆ ಜಗನ್ಮಾತೆ ರಕ್ಷಿಸು ರಕ್ಷಿಸೆನಲು 2 ಘಲು ಘಲು ಘಲುರೆಂಬ ಕಾಲ್ಗೆಜ್ಜೆಗಳಿಂದ ಥಳ ಥಳ ಹೊಳೆವ ಪೀತಾಂಬರದ ಚಂದ ಗಿಳಿಗೆಜ್ಜೆ ಹೆರಳು ಬಂಗಾರಗಳಿಂದ ಹೊಳೆವ ಮೀನ ಬಾವುಲಿ ಸರಗಳ ಚಂದ 3 ಕನ್ನಡಿ ಕದುಪಿನ ನಗೆಮುಖ ಕಾಂತಿ ಸಣ್ಣ ಮೂಗುತಿನಿಟ್ಟು ನಲಿಯುತ ಶಾಂತಿ- ಯನು ತೋರುತ ಭಕ್ತಜನರಿಗೆ ಭ್ರಾಂತಿ ಯನು ಕಳೆದು ಉದ್ಧರಿಸುವ ಕಾಂತೆ4 ಕಮಲ ಮುಖಿಯ ಕರಕಮಲದಿ ಅಭಯ ತೋರುತ್ತ ಭಕ್ತರಿಗೆಲ್ಲ ಉಣಿಸಿ ಅಮೃತವ ಕಡೆಗಣ್ಣನೋಟದಿ ಜಗವ ಮೋಹಿಸುವ ಕಮಲನಾಭವಿಠ್ಠಲ ಭಕುತರ ಪೊರೆವ 5
--------------
ನಿಡಗುರುಕಿ ಜೀವೂಬಾಯಿ
ಸಾರ ಪ ಧರೆಯನಾಳಿದ ತ್ರಿಶಂಕು ದೊರೆಯು ತಾನೆಲ್ಲಿಹರಿಶ್ಚಂದ್ರ ಮೊದಲಾದ ಚಕ್ರವರ್ತಿಗಳೆಲ್ಲಿಶರಧಿ ಮಧ್ಯದೊಳಿದ್ದ ರಾವಣಾಸುರನೆಲ್ಲಿಸಿರಿಯುಳ್ಳ ಕೌರವರು ಪಾಂಡವರು ತಾವೆಲ್ಲಿಧರೆಗಿಳಿದು ಪೋದಾತ ವಾಲಿಯು ತಾನೆಲ್ಲಿಸುರರೊಡನೆ ಹೋರಿದಾ ಬಲಿಯು ತಾನೆಲ್ಲಿ 1 ದಶರಥ ಮೊದಲು ಷೋಡಶ ರಾಯರುಗಳೆಲ್ಲಿಅಸಹಾಯ ಶೂರ ವೀರ ವಿಕ್ರಮರೆಲ್ಲಿಅಸಮಬಲ ವಸುಮತಿಯ ಹಿರಣ್ಯಾಕ್ಷನೆಲ್ಲಿವಸುಧೆಯೊಳಗಿದ್ದ ಹದಿನಾರು ಸಾವಿರರೆಲ್ಲಿಕುಸುಮ ಬಾಣನ ಪಡೆದ ದೇವ ತಾನೆಲ್ಲಿಸುಶರೀರ ಎನಿಸಿದ ಅಭಿಮನ್ಯು ತಾನೆಲ್ಲಿ 2 ಈ ಪರಿಯೆ ಈ ಧರೆಯನಾಳಿ ಹೋದವರೆಷ್ಟುಈ ಪರಿಯೆ ಸ್ವರ್ಗಕ್ಕೆ ಇಂದ್ರಾದಿಗಳು ಎಷ್ಟುಈ ಪರಿಯೆ ಹರಬ್ರಹ್ಮರಾದವರು ತಾವೆಷ್ಟುಈ ಪರಿಯೆ ಯುಗಪ್ರಳಯವಾಗಿ ಹೋದವು ಎಷ್ಟುಈ ಪರಿಯೆ ಜಲ ಪ್ರಳಯವಾಗಿ ಹೋದವು ಎಷ್ಟುಶ್ರೀಪತಿ ಕೇಶವನಲಿಡು ಭಕುತಿ - ಕೊಡುವ ಮುಕುತಿ 3
--------------
ಕನಕದಾಸ
ಸುಮ್ಮನೆ ಹರಿಯ ದೂಷಿಸದಿರು ಯಮ- ಧರ್ಮನಾಳ್ಗಳು ನಿನ್ನ ಎಳದೊಯ್ವರೊ ಪ ಇಷ್ಟೂನು ವಿಷ್ಣು ಮಾಯವು ಎಂದು ಈ ಸೃಷ್ಟಿ ಕರ್ತನು ಶ್ರೀಹರಿ ಎಂದು ಸ್ಪಷ್ಟದಿ ಮನದಲ್ಲಿ ತಿಳಿಯದೆ ದುರುಳ ಮಾತನಾಡಬಹುದೆ 1 ಲೋಕನಾಯಕ ಲಕ್ಷ್ಮೀಲೋಲನಾ ಜಗದೇಕ ವಿನುತರಾಮ ದೇವರನಾ ಶ್ರೀ ಕರುಣಾಂಬುದಿ ಶಾಂತನಾ ಇನ್ನು ನೀ ಕಾಣದೆ ಈ ಪರಿನಿಂದೆಯೆನೆ 2 ಹರಿಶರಣರ ಕೊಂಡಾಡುತಿರು ಘೋರ ನರಕದೊಳಗೆ ಬಿದ್ದು ನರಳದಿರು ಪರಮಭಕ್ತರ ಬಾಯಿಲೆ ಬೊಗಳದಿರು ಅತಿ ಪಾಪಿಯಾಗಿರುವರ ಸೇರಿ ಹೋಗದಿರು 3 ಶೃತಿ ಶಾಸ್ತ್ರಗಳು ಸುಜ್ಜನ-------- ಇಂಥ ಕೃತಕ ಶಾಸ್ತ್ರಗಳ ನೋಡಿ ಕೂಗಬೇಡಾ ಸದ್ಗತಿ ಮಾರ್ಗಕೆ ಹೊರಗಾಗ ಬೇಡಾ 4 ಹರಬ್ರಹ್ಮ ಇಂದ್ರಾದಿಗಳೆಲ್ಲ ಶ್ರೀಹರಿಯ ಸೇವಕರೆಂಬುದು ಬಲ್ಲ 'ವರಹೆನ್ನ ವಿಠ್ಠಲನ ’ ನೀನೆ ಬಲ್ಲ ಅವರ ಚರಣಕ್ಕೆ ಎರಗುವದು ಅಲ್ಲಾ 5
--------------
ಹೆನ್ನೆರಂಗದಾಸರು
ಹೊಯ್ಯಾಲೊ ಡಂಗುರವ - ಜಗ - |ದಯ್ಯನಯ್ಯ ಶ್ರೀಹರಿ ಅಲ್ಲದಿಲ್ಲವೆಂದುಪ.ಅಷ್ಟೈಶ್ವರ್ಯದ ಲಕುಮಿಯ ಅರಸೆಂದು |ಸೃಷ್ಟಿ - ಸ್ಥಿತಿ - ಲಯಕರ್ತನೆಂದು ||ಗಟ್ಟಿಯಾಗಿ ತಿಳಿದುಹರಿ ಎನ್ನದವರೆಲ್ಲ |ಭ್ರಷ್ಟರಾದರು ಇಹ - ಪರಕೆ ಬಾಹ್ಯರು ಎಂದು 1ಹರಿಯೆಂಬ ಬಾಲನ ಹರಹರ ಎನ್ನೆಂದು |ಕರುಣವಿಲ್ಲದೆ ಪಿತ ಬಾಧಿಸಲು ||ತರಳನ ಮೊರೆಕೇಳಿ ನರಮೃಗರೂಪದಿ |ಹರಿಯ ನಿಂದಕನ ಸಂಹರಿಸಿದ ಮಹಿಮೆಯ 2ಕರಿ ಆದಿಮೂಲನೆ ಕಾಯೆಂದು ಮೊರೆಯಿಡೆ |ಸುರರನು ಕರೆಯಲು ಬಲ್ಲದಿರೆ ||ಗರುಡನನೇರದೆ ಬಂದು ಮಕರಿಯ ಸೀಳ್ದು |ಕರಿರಾಜನ ಕಾಯ್ದ ಪರದೈವ ಹರಿಯೆಂದು 3ಸುರಪಗೊಲಿದು ಬಲಿಯ ಶಿರವನೊದ್ದಾಗಲೇ |ಸುರಸವು ಉದಿಸೆ ಶ್ರೀ ಹರಿಪಾದದಿ ||ಪರಮೇಷ್ಟಿ ತೊಳೆಯಲು ಪವಿತ್ರೋದಕವೆಂದು |ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯ 4ಮಾನಸಲಿಂಗಪೂಜೆಗೆ ಮೆಚ್ಚಿ ಶಿವ ಬಂದು |ಬಾಣನ ಬಾಗಿಲ ಕಾಯ್ದಿರಲು |ದಾನವಾಂತಕ ಸಾಸಿರ ತೋಳ ಕಡಿವಾಗ |ಮೌನದಿಂದೊಪ್ಪಿಸಿಕೊಟ್ಟ ಶಿವನು ಎಂದು 5ಭಕ್ತಗೊಲಿದು ಭಸ್ಮಾಸುರಗೆ ಶಿವ ವರವಿತ್ತು |ಭಕ್ತನ ಭಯದಿಂದ ಓಡುತಿರೆ ||ಯುಕ್ತಿಯಿಂದಸುರನ ಸುಟ್ಟು ಶಿವನ ಕಾಯ್ದ |ಶಕನು ಶ್ರೀಹರಿ ಅಲ್ಲದಿಲ್ಲವೆಂದು 6ಗರಳಜ್ವಾಲೆಗೆ ಸಿರಿರಾಮ - ರಾಮನೆಂದು |ಸ್ಮರಿಸುತಿರಲು ಉಮೆಯರಸನಾಗ ||ಕೊರಳು ಶೀತಲವಾಗೆ ಸಿತಿಕಂಠ ತನ್ನಯ |ಗಿರಿಜೆಗೆ - ರಾಮಮಂತ್ರವ ಕೊಟ್ಟ ಮಹಿಮೆಯ 7ಹರಬ್ರಹ್ಮ ಮೊದಲಾದ ಸುರರನುದಶಶಿರ |ಸೆರೆಹಿಡಿದು ಸೇವೆಯ ಕೊಳುತಿರಲು ||ಶರಧಿಯ ದಾಟಿ ರಾವಣನ ಸಂಹರಿಸಿದ |ಸುರರ ಲಜ್ಜೆಯ ಕಾಯ್ದ ಪರದೈವ ಹರಿಯೆಂದು 8ಜಗದುದ್ಧಾರನು ಜಗವ ಪೊರೆವನೀತ |ಜಗ ಬ್ರಹ್ಮಪ್ರಳಯದಿ ಮುಳುಗಲಾಗಿ ||ಮಗುವಾಗಿ ಜಗವನುದ್ಧರಿಸಿ ಪವಡಿಸಿ ಮತ್ತೆ |ಜಗದ ಜನಕಪುರಂದರವಿಠಲನೆಂದು9
--------------
ಪುರಂದರದಾಸರು