ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ). ವಿವಿಧ ದೇವತಾ ಸ್ತುತಿ ರುದ್ರದೇವರು ಬೇಡಿಕೊಂಬೆನು ನಾನು ರೂಢಿಗೊಡೆಯನಾಗಿ ಆಡುವನಂತೇಶನಿದಿರೊಳು ಮೂಡಿದ ಚಂದ್ರಶೇಖರನ ಪ ಒಪ್ಪುವ ಶಿರದೊಳಗೆ ಸರ್ಪನ ಮೇಲೊರಗಿಪ್ಪನ ಮಗಳನ್ನು ಒಪ್ಪದಿ ಧರಿಸಿದನ 1 ಮುಪ್ಪುರಹರನೆಂದು ಮೂರು ದೃಷ್ಟಿಗಳುಳ್ಳ ಕಪ್ಪುಕೊರಳ ದೇವನ ರೌಪ್ಯದ ಪುರವರಧೀಶನೆಂದೆನಿಸಿಯೆ ಇಪ್ಪಂಥ ಪರಶಿವನ 2 ಗಿರಿಯ ನಂದನೆಯನ್ನು ಉರದೊಳು ಧರಿಸಿಯೆ ಕರಿಚರ್ಮ ಪೊದ್ದವನ ಗರುಡನ ಭಯಕಂಜಿ ಮೊರೆಹೊಕ್ಕ ಶರಣನ ಕರುಣದಿ ಕಾಯ್ದವನ 3 ಉರಗಾಭರಣವ ಸುತ್ತಿಕೊಂಡಿರುವಂಥ ಗರುವ ದೇವರ ದೇವನ ಚರಣ ಸೇವಕರನ್ನು ಸ್ಥಿರವಾಗಿ ಸಲುಹುವ ಬಿರುದುಳ್ಳ ಪರಶಿವನ 4 ದ್ವಾರಕಿವಾಸನಾಚಾರ್ಯನ ಮುಖದಿಂದ ಸೇರಿಸಿಕೊಂಡವನ ಧಾರುಣಿ ಸುರರಿಗೆ ಶೈವ ವೈಷ್ಣವವೆಂಬ ಚಾರವ ತೋರಿದನ 5 ಮೀರಿದ ದಾರಿದ್ರ್ಯವೆಂಬ ವೃಕ್ಷದ ಬೇರ ಹಾರಿಸಿ ತರಿದವನ ಸಾರಿದ ಭಕ್ತರ ಸಲುಹುತ್ತ ಮುಂದಣ ದಾರಿಯ ತೋರ್ಪವನ 6 ಬತ್ತೀಸ ಗ್ರಾಮಕ್ಕೆ ಕರ್ತನೆಂದೆನಿಸಿಯೆ ಅರ್ತಿಯಿಂ ನಲಿವವನ ಪಾರ್ಥಸಂಗರದೊಳು ಮೆಚ್ಚಿಯೆ ಶರವಿತ್ತು ಕೀರ್ತಿಯ ಪೊತ್ತವನ 7 ಸ್ಮಾರ್ತರ ನಿಂದಿಸಿ ರಚಿಸುವ ಯಾಗಕ್ಕೆ ಮೃತ್ಯುವನೊಟ್ಟಿದನ ಮೃತ್ಯುಂಜಯನೆಂದು ಮೊರೆಹೊಕ್ಕ ನರರ ಕಾ- ಯುತ್ತಲಿರ್ಪವನ 8 ಕೊಡಲಿಯ ಪಿಡಿದವ ಪಡೆದಿಹ ಕ್ಷೇತ್ರದಿ ಉಡುಪಿನ ಸ್ಥಳವೆಂಬುದು ಪಡುವಲು ಮೂಡಲು ಎರಡಾಗಿ ತೋರುವ ಒಡಲೊಂದೆ ಮೃಡನೊಬ್ಬನೆ 9 ಕಡಗೋಲ ಪಿಡಿದಿಹ ಕೃಷ್ಣ ನಿಂತದರಿಂದ ಪೊಡವಿಯುತ್ತಮವಾದುದು ಬಡವರ ಬಡತನ ಉಡು (ಪಿಯ)1 ಕಾಣಲು ಸಡಲಿತು ಸುಲಭದಲಿ 10 ಚಿಂತೆಗಳೆನ್ನನು ಭ್ರಾಂತಿ(ಬ)2 ಡಿಸುತಿದೆ ಅಂತಕಾಂತಕ ಲಾಲಿಸು ಪಂಥವ ಮಾಡದೆ ಏಕಾಂತ ಭಕ್ತರಿಗೆಲ್ಲ ಸಂತೋಷವನು ಪಾಲಿಸು 11 ಪಿಂತೆನ್ನ ಕೃತ್ಯ ಬೆನ್ನಾಂತು ಬಂದರು ಇಭ- ವಾಂತದಿ ನೀ ಹಾರಿಸು ಸಂತತ ಎನ್ನನು ಸಲಹಯ್ಯ ಪಾರ್ವತೀ ಕಾಂತನೆ ಕಡೆ ಸೇರಿಸು 12 ಹರ ಹರ ಮಹಾದೇವ ಪರದೈವ ಶಂಕರ ಮೆರೆವ ಆ ವೃಷಭಧ್ವಜ ವರದ ಕೃತ್ತೀವಾಸ ಸ್ಮರನಾಶ ದೇವೇಶ ಸಿರಿಕಂಠ ಪುರಹರನೆ 13 ಗಿರಿಯ ಮಗಳ ಗಂಡ ಉರಿಗಣ್ಣ ಮಹಾರುದ್ರ ಸ್ಥಿರವಾದ ಶಿವಬೆಳ್ಳಿಯ ಪುರಪತಿ ಅನಂತೇಶ ವರಾಹತಿಮ್ಮಪ್ಪನ ಸರಿಯೆಂದು ತೋರ್ಪವನ14
--------------
ವರಹತಿಮ್ಮಪ್ಪ
ಪುಟ್ಟಿದೆ ಭುವಿಯೊಳು ಬಹುದಿನ ಕಳೆದೆನೊಪುಟ್ಟಿಸ ಬೇಡವೆನ್ನ ಪ ಪಟ್ಟಾಭಿರಾಮನೆ ಪರಮಘಟ್ಯಾಗಿ ನಿನ್ನ ಪಾದಗಳ ನಂಬಿದೆ ದೇವ ಅ.ಪ ಎಂಭತ್ತು ನಾಲ್ಕು ಲಕ್ಷ ಯೋನಿಯಚೀಲಗಳಲಿ ಬಂದೆನೊ ಕುಂಭಿಣಿಯೊಳು ಪುಟ್ಟಿ ಬಹು ಪಾಪಗಳ ಮಾಡಿಕುಂಭೀಪಾಕದಿ ಬೆಂದೆನೊ ಅಖಿಳ ಸುರರೊಡೆಯನೆಅರ್ತಾರ್ತಿಹರನೆಂದು ಕೇಳಿ ಬಂದೆನು ನಾನು 1 ಜನಪಾಶ ಬದ್ಧನಾದೆಮೀನು ಮಾಂಸದಾಸೆಗ್ಹೋಗಿ ಸಿಕ್ಕಿದಂತೆಮೋಸ ಹೋದೆನೊ ಬರಿದೆಏಣವು ಕಿಂಕಿಣಿಧ್ವನಿಗೆ ಮರುಳಾದಂತೆಇಳೆಯೊಳು ಮಂಕಾದೆನೊಏನೆಂಬೆ ದಾಸರಿ ಕೋಡಗದಂದದಿಕುಣಿಯುವೆ ನಾನೆಲ್ಲ ಜನಗಳ ಮುಂದೆ 2 ಕಾಯ ಪೋಷಣೆಗಾಗಿ ಹೇಯಕರ್ಮಂಗಳಕಾಲ ಕಾಲದಿ ಮಾಡ್ದೆನೊಜಾಯಾದಿಗಳ ರಕ್ಷಣೆಮಾಡೆ ಅದರಿಂದಜಾಗರೂಕನಾದೆನೊನ್ಯಾಯರಹಿತನಾಗಿ ಗುರು ಹಿರಿಯರ ಪಾದಭಜನೆ ಮಾಡದೆ ಪೋದೆನೊಕಾಯಜನೈಯನೆ ಶ್ರೀಕೃಷ್ಣರಾಯನೆಕಾಯಬೇಕೆನ್ನಪರಾಧಗಳನು ದೇವ3
--------------
ವ್ಯಾಸರಾಯರು
ಪ್ರಾಣ ಗುರು ಜಯ ವಿಠಲ ಕಾಪಾಡು ಇವಳ ಪ ಪ್ರಣತಾರ್ತಿ ಹರನೆಂದು ಭಿನ್ನವಿಪೆ ಸತತಾ ಅ.ಪ. ಪತಿವ್ರತಾಮಣಿ ಎನಿಸಿ ಪತಿಸೇವೆಯೊಳುನಿರತೆಸತತ ಸದ್ಭಕ್ತಿ ಶ್ರೀ ಹರಿಗುರುಗಳಲ್ಲೀ |ಅತಿಶಯದಿ ಮಾಡುತಲಿ ವಿಹಿತವನು ತೊರೆಯದಲೆಕೃತಕಾರ್ಯಳಾಗಿಹಳ ಸತಿಯ ಸಲಹುವುದೂ 1 ತೈಜಸ ದಯಾಪಯೋನಿಧಿ ಹರಿಯೆಆ ಪರಿಮಳಾರ್ಯ ಯತಿರೂಪವನೆ ಕೊಂಡುಕೈ ಪಿಡಿದು ಕಾಯ್ವೆನೆಂಬಭಯ ಹಸ್ತವ ತೋರಿರೂಪವನು ಮರೆಮಾಡ್ಡೆ ಬೃಂದಾವನಾಂತ 2 ಮೋಚಕೇಚ್ಛೆಯೊಳ್ಸವ್ಯ ಸಾಚಿಗೇ ಅತಿಪ್ರೀಯಖೇಚರೋತ್ತಮ ಪ್ರಾಣಗೊಪ್ಪಿಸುತ ಇವಳಾನೀಚೋಚ್ಚತರತಮ ಜ್ಞಾನ ಸ್ಥಿರಪಡಿಸುತ್ತಪ್ರಾಚೀನ ದುಷ್ಕರ್ಮ ಪರಿಹರಿಸೊ ಹರಿಯೇ 3 ಪ್ರಣತಜನ ಪರಿಪಾಲಎನುತ ಭಿನ್ನೈಸುವೆನೊ ವೇಣುಗೋಪಾಲ 4 ಬದಿಗ ನೀನಾಗಿರಲು ಭಯವೇನೊ ಬುಧವಂದ್ಯವದಗಿ ಹೃದ್ಗುಹದೊಳಗೆ ತೋರಿತವ ರೂಪಮುದದಿಂದ ಕಳೆ ಇವಳನಾದಿ ರೋಗವನೆಂಬೆಇದನೇವೆ ಸಲಿಸೊ ಗುರು ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಬ್ರಹ್ಮತಾನೆ ನಿತ್ಯಾ ಬ್ರಹ್ಮತಾನೆಬ್ರಹ್ಮ ಪರಾತ್ಪರ ಬ್ರಹ್ಮ ತಾನೇ ಪ ಕಾಲು ಕಣ್ಣು ಕೈ ಬಾಯಿ ಕಿವಿ ಮೂಗು ತಾಳಿಕೊಂಡುಕಾಲವನಿಲ್ಲಿಯೆ ಕಳೆಯಲು ಬಂದ ಗುರುಮೂರ್ತಿಮೂಲಾಧಾರನೆಂದು ತಿಳಿದುಕೊಳ್ಳಿರಾ ಬ್ರಹ್ಮ ತಾನು 1 ಪುತ್ರ ಮಿತ್ರರರು ಕಳತ್ರರಾಗಿ ಬಂಧುವಾಗಿನಿತ್ಯದಾಟವ ಇಲ್ಲಿ ಕಳೆಯಲು ಬಂದ ಬ್ರಹ್ಮ ತಾನೇ2 ಆಪವಿರಲು ಚಂದ್ರನು ಬಂದ ತೆರನಂತೆಉಪಾಧಿಯಿಂದ ಚಿದಾನಂದ ಬಂದ ಬ್ರಹ್ಮತಾನೇಉಪಾಧಿಯಿಂದ ಚಿದಾನಂದ ಬಂದ ಗುರುಮೂರ್ತಿಉಪಾಧಿ ಹರನೆಂದು ತಿಳಿದುಕೊಳ್ಳಿ ಬ್ರಹ್ಮತಾನೆ3
--------------
ಚಿದಾನಂದ ಅವಧೂತರು
ಭವ ಹರಣ ನತ ಶರಣ ಪ ಲೀಲಾ ವಿನೋದದಲಿ ಮೂಜಗವ ಸೃಜಿಸಿ ಪಾಲಿಸುವೆ ನಿನ್ನ ವ್ಯಾಪಾರವನುಸರಿಸಿ ಕಾಲಕಾಲಾರ್ಚಿತನೆ ಕಲುಷಹರನೆಂದು ನೀಲಾಹಿವೇಣಿಯರು ನಿನ್ನ ತೂಗುವರು 1 ಶೇಷ ಪರಿಯಂಕದಲಿ ಶ್ರೀ ಸಮೇತದಲಿ ತೋಷದಿಂ ಪವಡಿಸುವೆ ಪ್ರಳಯ ವಾರಿಯಲಿ ಭಾಷಾಪತಿಯ ಪಡದೆ ನಾಭಿ ಕಮಲದಲಿ ಪೋಷಿಸುವೆ ಜೀವರನು ಸರ್ವಕಾಲದಲಿ 2 ಶ್ರೀರಾಮ ಮಾಧವಾಶ್ರಿತಜನೋದ್ಧಾರಾ ನಾರಾಯಣಾಚ್ಚುತಾನಂತಾವತಾರ ವಾರಿಜಾಯತ ನೇತ್ರ ಗುರುರಾಮವಿಠಲಾ 3
--------------
ಗುರುರಾಮವಿಠಲ
ಭಳಿರೆ ಭಳಿರೆ ನರಸಿಂಹ ಮಹಾಸಿಂಹ | ವೈರಿ ಉರಿಮಾರಿ ಪ ನಗನಗಾ ನಗನಗಗಳಲ್ಲಾಡೆ ಚತುರ್ದಶ | ಜಗಜಗ ಜಗವೆಲ್ಲ ಕಂಪಿಸಿ ಕಂಬನಾಗೆ || ಹಗೆ ಹಗೆ ಬಲವ ದೆಶೆಗೆಡಿಸಿ ರೋಷಗಿಡಿ | ಉಗು ಉಗು ಉಗುಳುತ್ತ ಬಂದ ನರಸಿಂಹ 1 ಬಿಗಿ ಬಿಗಿ ಬಿಗಿದು ಹುಬ್ಬುಗಂಟನೆ ಹಾಕಿ | ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ || ನೆಗ ನೆಗ ನೆಗ ನೆಗದು ಕುಪ್ಪಳಿಸಿ ಅಸುರನ್ನ | ಮಗು ಮಗು ಮಗು ಮಗು ಬೇಡಿಕೊಂಡ ನರಸಿಂಹಾ 2 ಉಗು ಉಗು ಉಗು ಉಗರಿಂದ ಕ್ರೂರನ್ನ ಹೇರೊಡಲ | ಬಗ ಬಗ ಬಗ ಬಗದು ರಕುತವನ್ನು | ಉಗಿ ಉಗೀ ಉಗೀ ಉಗಿದು ಚಲ್ಲಿ ಕೊರಳಿಗೆ ಕರುಳ | ತೆಗೆ ತೆಗೆ ತೆಗೆ ತೆಗೆದು ಇಟ್ಟ ನರಸಿಂಹಾ 3 ಯುಗ ಯುಗ ಯುಗ ಯುಗದೊಳಗೆ ಪ್ರಣತಾರ್ತಿ ಹರನೆಂದು | ಝಗ ಝಗಾ ಝಗಝಗಿಪ ಮಕುಟ ತೂಗೆ | ಸುರರು ಗಗನದಿ ನೆರೆದು | ಮಿಗಿ ಮಿಗಿ ಮಿಗಿ ಮಿಗಿಲೆನೆ ನರಸಿಂಹಾ 4 ಒಂದೊಂದೊಂದೊಂದು ಮುನಿಗಳಿಗೊಲಿದು | ಅಂದಂದಂದಂದದೀಗಾಯತ ವೊಲಿದು | ಅಂದಂದಂದವ ಕಾವ ಚೊಳಂಗಿರಿ | ಮಂದಿರನೆ ವಿಜಯವಿಠ್ಠಲ ನರಸಿಂಹಾ 5
--------------
ವಿಜಯದಾಸ
ಹರಿಯಧಿಕ ಹರನಧಿಕ ಎಂದು ಹೋರಾಡದಿರಿ |ಹರಿಹರರ ಭಕ್ತರೇ ಸಾಕ್ಷಿ ಲೋಕದೊಳು ಪ.ಹರಿಯೆಂದು ಪ್ರಹ್ಲಾದ ಬಂದ ದುರಿತವ ಗೆಲಿದ |ಹರನೆಂದು ಅವನ ಪಿತ ತಾನೆ ಅಳಿದ ||ಹರಿಯೆಂದ ವಿಭೀಷಣನು ಸ್ಥಿರಪಟ್ಟವೈದಿದ |ಹರನೆಂದ ರಾವಣನು ಹತನಾದನಯ್ಯ 1ಹರಿಯೆಂದು ಭೀಮ ಪರಿಪೂರ್ಣಕಾಮನು ಆದ |ಹರನೆಂದ ಆ ಜರಾಸಂಧ ಹತನಾದ ||ಹರಿಯು ಬಾಗಿಲ ಕಾಯ್ದ ಬಲ ಭಾಗ್ಯವಂತನಾದ |ಹರನು ಬಾಗಿಲ ಕಾಯ್ದ ಬಾಣನಳಿದ 2ಹರನ ವರವನು ಪಡೆದ ಭಸ್ಮಾಸುರನು ಅವನ |ಶಿರದಲ್ಲಿ ತನ್ನ ಕರವಿಡಲು ಬರಲು ||ಹರಿ ನೀನೆ ಗತಿಯೆಂದು ತ್ರಿಪುರಾರಿ ಮೊರೆಯಿಡಲು |ವರದ ಪುರಂದರವಿಠಲ ಕಾಯ್ದುದರಿಯ ? 3
--------------
ಪುರಂದರದಾಸರು