ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೇ ದಯಾಸಂಪನ್ನ ಭಕ್ತ ಪ್ರಸನ್ನಾ ಪ ಕಂದನಿನ್ನಯ ದಿವ್ಯಾನಂದ ಮೂರುತಿಯ ನಾ ಕುಂದದೇ ಭಜಿಸಲು ಮರುಗಿ ಬೇಗಾ ಇಂದಿರೇ ಅಜಭವರೆಂದೂ ಕಾಣದ ನಿಜ ವೆಂದೆಂಬೋ ರಾಜ್ಯದೊಳಿದ್ದ ಕಾರಣದಿಂದ 1 ಹರಿಸರ್ವೋತ್ತಮನೆಂದು ಪಿತನಾಜ್ಞೆಯ ಮೀರಲು ಹರಿರೂಪತಾಳ್ದು ದೈತ್ಯನ ಶಿರವಾ ಹರಿದು ಬಾಲನನೆತ್ತಿ ಸಲಹಿದ ಬಗೆಯಿಂದ ಕರುಣಾಕರನೆಂದು ಶ್ರುತಿಯು ಪೇಳುತ್ತಿರಲೂ 2 ಪಾತಕದಿಂದ ಗೌತಮಸತಿ ಶಿಲೆಯಾಗೆ ಭೂತಳದೊಳು ಪರಬೊಮ್ಮನೆಂಬೋ ಸೀತಾರಾಮಾವತಾರರಿಂದ ಸೌಂದರ್ಯ ನೂತನಪದ ಸೋಕಲು ನಿಜಸತಿಯಾದಳೋ 3 ಗುರುತನೂಜನ ಮಂತ್ರಶಕ್ತಿ ವೇದನೆ ತಡೆದೆ ಹರಿಯೆಂದು ಕರೆದ ಉತ್ತರೆಗೆ ಬೇಗಾ ವರಚಕ್ರವನು ಮರೆಮಾಡಿ ಪರೀಕ್ಷಿತನ ಪೊರೆಯೆ ತ್ರಿಜಗದೊಳು ಕೀರ್ತಿಯಾಹುದರಿಂದ 4 ಹರನಿಂದ ಉರಿಯ ಹಸ್ತವ ಪಡೆದು ಭಸ್ಮಾ ಸುರನು ಫಾಲಕ್ಷನ ಖತಿಗೊಳಿಸೆ ಸಿರಿವೇಲಾಪುರ ಚನ್ನಕೇಶವನಾವೇಶದಿಂ ಪರಿದಸುರನ ಕೊಂದು ಸ್ಥಿರವಾದಕಾರಣ 5
--------------
ಬೇಲೂರು ವೈಕುಂಠದಾಸರು
ವಂದಿಪೆ ಹರಿಹರನೇ | ನಿನಗೆ ನಾ ವೃಂದಾರಕನುತನೇ ಪ. ಬಂದು ಈ ಕ್ಷೇತ್ರದಿ ನಿಂದು ಸದ್ಭಕ್ತರ ಮೂರ್ತಿ ಅ.ಪ. ಚತುರ ಹಸ್ತದಿಂದಾ | ಶೋಭಿಸೆ ಅತಿ ಕೌತುಕದಿಂದಾ ಪಾದ ಕಮಲಜನ ತತಿಗೆ ತೋರದಂತೆ ಕ್ಷಿತಿಯಲಡಗಿದೇ 1 ಸೋಮಶೇಖರವಂದ್ಯಾ | ಆರ್ಧದ ಲಾಮಹ ಹರನಿಂದಾ ಪ್ರೇಮದಿ ಕೂಡಿಕೊಂಡೀ ಮಹಿ ಜನರಿಗೆ ನೀಮೋಹಕ ತೋರುವ ಜಗದ್ವಂದ್ಯಾ 2 ಪಾಪಿಗುಹನವರವಾ| ಕೆಡಿಸಲು ರೂಪಧರಿಸಿ ತಾಮಸರಿಗಂಧಮತಮ ಕೂಪದಿ ಕೆಡಹುವೆ ಶ್ರೀ ಮೋಹಿತ 3 ಅರ್ಧಹರನ ರೂಪಾ| ಕೃತಿಯಲಿ ಶುದ್ಧ ವಿಷ್ಣು ರೂಪಾ ಮುದ್ದು ಸುರಿವ ಭವ್ಯಾಂಗ ಸ್ವರೂಪ ಉದ್ಧರಿಸೆನ್ನನು ಶುದ್ಧ ಬುದ್ಧಿಮತಿಯನಿತ್ತು 4 ಶಂಖಚಕ್ರ ಅಭಯಾ| ತ್ರಿಶೂಲವ ಬಿಂಕದಿ ಧರಿಸಿದೆಯಾ ಪಂಕಹೋದ್ಭವೆ ಪಾರ್ವತಿಯ ಉಭ ಯಾಂಕದಲ್ಲಿ ಪೊಂದಿಹೆ ಶುಭಕಾಯಾ 5 ಅರ್ಧಶಿರದಿ ಮಕುಟಾ| ಆರ್ಧದಿ ಶುದ್ಧಗಂಗೆ ತ್ರಿಜಟಾ ಅರ್ಧಚಂದ್ರ ಶೋಭಿಸುತಿದೆ ಜಗತ್ತಿಗೆ ಅದ್ಭುತ ಅಚ್ಚರಿ ರೂಪಧಾರಕ 6 ಪಣೆಯ ತಿಲಕ ಢಾಳಾ | ಕಂಠಾಭ ರಣಗಳು ಪೂಮಾಲಾ ಮಿನುಗುವವಲ್ಲಿ ಪೀತಾಂಬರನುಟ್ಟಿಹ ಗುಣಗಣ ಪೂರ್ಣನೆ ಹನುಮನಯ್ಯ ಹರಿ7 ಮಾಯಾ | ಕವಿಸದೆ ಇನ್ನು ಕಾಯೊ ಜೀಯಾ ಘನ್ನ ಭಕ್ತಿ ಸುಜ್ಞಾನ ವೈರಾಗ್ಯವ ಮನ್ನಿಸಿ ಕರುಣಿಸಿ ನಿನ್ನ ಪದವಿ ಕೊಡು 8 ಹರನೊಳು ಹರ ಶಬ್ದಾ | ವಾಚ್ಯನೆ ಸಿರಿವರ ನಿರವದ್ಯಾ ಸರ್ವ ಶಬ್ದ ಸುರವಾಚ್ಯ ಈ ಪರಿಯೊಳು ಹರಿಹರ ಕ್ಷೇತ್ರದಿ ವರಗೃಹ ಮಾಡಿದಿ 9 ತುಂಗಭದ್ರ ತೀರಾ | ವಾಸನೆ ರಂಗ ಪಾಪ ದೂರಾ ಮಂಗಳ ಗೋಪಾಲಕೃಷ್ಣವಿಠಲ ಭವಹಿಂಗಿಸಿ ಪೊರೆ ದುಸ್ಸಂಗ ಬಿಡಿಸಿ ಹರಿ 10
--------------
ಅಂಬಾಬಾಯಿ
ಶ್ರೀನಿವಾಸ ಸುಜನೋದ್ಧಾರ ಏನು ತಾತ್ಸಾರ ನಾನು ನಿನ್ನ ದಾಸನೆಂದು ಮಾನವರು ನುಡಿದ ಮೇಲೆ ಪ. ಪುಟ್ಟಿದಾಕ್ಷಣಾದಿಯಾಗಿ ದುಷ್ಟಸಂಗಕೊಳಗಾಗಿ ನಷ್ಟಪ್ರಜ್ಞೆಯಿಂದ ಬಹು ಕಷ್ಟಿಯಾದೆನು ಕೃಷ್ಣ ಶಬ್ದ ವಾಚ್ಯಪರಮೇಷ್ಠಿ ಜನಕ ನಿನ್ನ ಮನ ಮುಟ್ಟಿ ಭಜಿಸದೆ ಬಯಲೆಷ್ಟವ ಬಯಸುವೆನಲ್ಲೊ 1 ದಾನಧರ್ಮ ಜಪತಪ ಮೌನ ಮೊದಲಾದ ಸ- ತ್ಸಾಧನ ಹೀನನಾದರು ನಿನ್ನಾನುರಾಗದಿ ಮನಮುಟ್ಟಿ ಕ್ಞಣವಾದರು ಧ್ಯಾನಿಸಲು ಸಕಲವಂದ್ಯ ಮುನಿಗಮ್ಯ ಪದವನೀವಾತನು ನೀನೆಂದೊಂದೆ ತಿಳಿದೆ 2 ಮನವಚನ ಕಾಯಕಾದನುದಿನ ಕೃತವಾದ ಘನ ಪಾಪಂಗಳಿಗೆ ನಾ ಕೊನೆಗಾಣೆನು ದನುಜಾರಿ ರಾಮ ಅನಿಮಿತ್ತಬಂಧು ಎಂಬ ಘನತೆ ತೋರಿಸಿ ನಿನ್ನ ತನಯನೆಂದೆಂನ ಸಲಹೊ 3 ವೀರವೇದೋದ್ಧಾರ ವರಮಂದರಧರ ನರ ಹರಿಕುಬ್ಜಾಕಾರ ಪೃಥ್ವೀಭಾರವಾರಕ ವಾರುಧಿ ಬಂಧಕಯದು ವೀರ ತ್ರಿಪುರ ಸ್ಮರ ಹರನಿಂದ ತರಿಸಿದ ತುರಗವೇರಿದ ಧೀರ 4 ಮಂದಮತಿಯಾದ ಎನ್ನ ಬಂಧುವಾಗಿ ಕೈಯ ಪಿಡಿದು ಮುಂದು ಗಾಣಿಸುವೆನೆಂದು ಹಿಂದೆ ರಕ್ಷಿಸಿ ಇಂದು ಎನ್ನ ಕುಂದನೆಣಿಸಿ ತಂದೆ ನೀನುಪೇಕ್ಷಿಸಲು ಮುಂದೆ ಕಾಯ್ವರಾರೊ ಕರುಣಾಸಿಂಧು ಅನಿಮಿತ್ತ ಬಂಧು 5 ಮಾನಗೇಡಿನಿಂದ ದ್ವೇಷಿ ಮಾನವಾಧಮರ ಮುಂದೆ ಶ್ವಾನಕಿಂತ ಕಡೆಯಾಗಿನ್ನೇನು ಮಾಡಲೊ ನೀನೆ ಗತಿಯೆಂಬ ಮನೋಧ್ಯಾನದಿಂದ ಬಂದೆ ನಿಂದು ಕಾನನದ ಶಿಶುವಿದೆಂದು ಮಾನಿಸಿ ರಕ್ಷಿಸೊ ತಂದೆ 6 ಘಾಸಿಗೊಳಿಸುತೀ ಆಶಾಪಾಶದಿಂದ ಎನ್ನ ಬಿಡಿಸಿ ದಾಸರ ದಾಸ್ಯವನಿತ್ತು ಪೋಷಿಸೆನ್ನುತ ಮೀಸಲಾಗಿಹೆನು ಶ್ರೀನಿವಾಸ ಬೇಗ ಸಲಹೊ ಬಂದು 7
--------------
ತುಪಾಕಿ ವೆಂಕಟರಮಣಾಚಾರ್ಯ
ಸಹಾಯವಿಲ್ಲ ಪಾಪಿಜೀವಿಗೆ ಜಗದಿ ಪ ಶಶಿಧರ ಶಿವನ್ವರವು ದಶಶತಭುಜಬಲವು ಪಶುಪತಿ ಕದವ ಕುಶಲದಿಂ ಕಾಯುವ ಅಸಮಬಲವಿರಲವನು ಕುಸುಮಾಕ್ಷಗ್ವೈರೈನಿಸಿ ಅಸುವ ಕಳೆದುಕೊಂಡ 1 ಆರಿಂದ ಮರಣವು ಬಾರದಂತ್ಹಿರಣ್ಯ ಕೋರಿಕೊಂಡ್ಹರನಿಂದ ಮೀರಿ ಮೆರೆಯುತಲಿ ಮೂರುಲೋಕಗಳನ್ನು ಘೋರಿಸಲತಿಶಯ ಮಾರಜನಕ ಮುನಿದು ಸೇರಿಸಿದೆಮಪುರ 2 ಹರನು ಭಸ್ಮಗೆ ಬಲಪರಿಪೂರ್ಣವಾಗಿ ತ ನ್ನುರಿಹಸ್ತ ವರವನ್ನು ಕರುಣಿಸಿಯಿರಲು ದುರುಳಂಗೆ ಘನತರ ಹರನ ಕರುಣವಿರಲು ನರಹರಿ ತಡೆಯದೆ ಉರುವಿದ್ಯರಲವದಿ 3 ನೂರುಯೋಜನ ಮಹ ವಾರಿಧಿಯೊಳು ಮನೆ ಆರು ಕೋಟ್ಯಾಯುಷ್ಯ ಶೂರತಮ್ಮನ ಬಲವು ಮೀರಿದವರ ಬಲ ಮೇರಿಲ್ಲದೈಶ್ವರ್ಯ ಸಾರಸಾಕ್ಷನು ಮುನಿಯೆ ಹಾರಿತು ನಿಮಿಷದಿ 4 ಪರಿ ಬಲವಿರ್ದು ಸಾಫಲ್ಯಹೊಂದದೆ ಲೋಪಾಯಿತು ಸರ್ವರಾಪಾರ ಬಲವು ವ್ಯಾಪಿಸಿ ತ್ರೈಜಗ ಕಾಪಾಡ್ವ ಶ್ರೀರಾಮನಪ ರೂಪಪಾದಕೃಪೆ ನೋಂಪಿ ಸಂಪಾದಿಸದೆ 5
--------------
ರಾಮದಾಸರು