ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡಬೇಡೆಲೆ ಮನಸೆ ಶ್ರೀಹರಿಪಾದ ಹಿಡಿ ಬಿಗಿಯಲೆ ಮನಸೇ ಪ ಹಿಡಕೋ ಕಡಕಿಂ ಕಡಲಕಡಿದಮರರ ಪಾದ ಅ.ಪ ಅನುದಿನ ಸಿರಿಯರೊತ್ತುವ ಪಾದ ಪರತರ ಭಕುತಿಯಿಂ ಸುರರುಪೂಜಿಪ ಪಾದ ನೆರೆದು ಋಷಿಸ್ತೋಮರರಸಿನಲಿಯುವ ಪಾದ ಪರಮನಾರದ ತುಂಬುರರು ಪಾಡುವ ಪಾದ ಪಾದ 1 ನೀಲಬಣ್ಣದಪಾದ ಪಿಡಿದೆತ್ತಿ ಮೂಲೋಕಾಳುವ ಪಾದ ತಾಳಿ ವಿಲಸಿತರೂಪ ಖೂಳನ ಎದೆಮೆಟ್ಟಿ ಸೀಳಿ ಉದರಮಂ ಬಾಲನ್ನಪ್ಪಿಕೊಂಡು ಪಾಲಿಸಿದಂಥ ಮಹ ಮೇಲಾದಮಿತಪಾದ ಸುಜನ ತಲೆಮೇಲೆ ಹೊತ್ತಪಾದ 2 ಬಲಿಯತುಳಿದಪಾದ ಮುನಿಯಾಗ ಒಲಿದು ಕಾಯ್ದಪಾದ ಶಿಲೆಯನೊದೆದಪಾದ ವನಕೆ ಪೋದಪಾದ ಖಳರಥಳಿಸಿ ಮುನಿಕುಲವ ಸಲಹಿದಪಾದ ಜಲಧಿದಾಂಟಿ ಸ್ಥಿರಪಟ್ಟ ಭಕ್ತನಿಗೆ ಸುಲಭದೊದಗಿಕೊಟ್ಟ ಚೆಲುವ ಸುದಯಪಾದ 3 ಪಾದ ಬಹು ಜರಮರಣ ನಿವಾರ ಪಾದ ತರಳಗೆ ಸ್ಥಿರವರ ಕರುಣದಿತ್ತ ಪಾದ ಭರದಿಗರಡನೇರಿ ಸರಸಿಗಿಳಿದ ಪಾದ ತರುಣಿಮಣಿಯರವ್ರತ ಹರಣಗೈದ ಪಾದ ಸಿರಿ ಪಾದ 4 ಪಾದ ಭಕುತರ ಮೊರೆಯ ಕೇಳ್ವ ಪಾದ ದುರುಳ ಕುರುಪನ ಗರುವಕಂಡ ಬುವಿ ವಿಶ್ವ ಪಾದ ಪರಮ ತುರಗವೇರಿ ಮೆರೆವ ವಿಮಲ ಪಾದ ಪಾದ 5
--------------
ರಾಮದಾಸರು
ಮರೆವುದುಚಿತವೆ ರಂಗ ದಾರಿ ತೋರಿ ಪ ಯೆನ್ನ ಕಾವರನ್ಯರಿಲ್ಲ ನೀಲಾಂಗ ಅ.ಪ ಧರೆಯ ವೈಭವ ನಿತ್ಯವೆಂದು ಪರರ ಸಿರಿಯ ಹರಣಗೈದು ನಿರುತ ದುರಿತಕಾರ್ಯಗೈದು ಪರಮ ಪಾಪಿಯಾದೆನೆಂದು 1 ಕರುಣಶರಧಿ ನೀನೆಯೆಂದು ಸ್ಮರಿಸುವವರ ಪೊರೆವನೆಂದು ಶರಣಜನರು ಬಳಿಗೆ ಬಂದು ಕರೆಯದಿಹರೆ ದೀನಬಂಧು 2 ಅಂಗದಿಂದ ಗೈದ ಪಾಪ ಕಂಗಳಿಂದ ಗೈದ ಪಾಪ ಭಂಗಗೈವರಿಲ್ಲ ಭೂಪ ಮಾಂಗಿರೀಶ ಜ್ಞಾನದೀಪ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಲಾಲಿಸಿ ರಘುವರನ ಚರಿತೆಯ ಸಾರ ಪೇಳುವೆ ಸುಖನಾಥನ ಪ ಶ್ರೀ ಲಲಾಮನು ಸುರರ ಮೊರೆಯನು ಭಾರ ಹರಿಸಲು ಲೀಲೆಯಲು ದಶರಥ ನೃಪಾಲನ ಬಾಲನೆನಿಸುತ ಅವತರಿಸಿದನು ಅ.ಪ. ಕುಶಿಸುತನ ಯಜ್ಞವ ರಕ್ಷಿಸಿ ಪಥದಿ ಋಷಿ ಪತ್ನಿಯ ಶಿಲಾರೂಪವ ಬಿಡಿಸಿದ ದೇವ ಪಶುಪತಿಯ ಕೋದಂಡ ಖಂಡಿಸಿ ಶಶಿವದನೆ ಜಾನಕಿಯ ಕರವನು ಕುಶಲದಲಿ ಪರಿಗ್ರಹಿಸಿ ಲೀಲೆಯ ನಸಮ ಭಾರ್ಗವನೊಡನೆ ತೋರಿದ 1 ತಂದೆ ವಾಕ್ಯವ ಪಾಲಿಸೆ ತಾ ಧರಣಿಗೆ ಬಂದ ಕಾರ್ಯವ ಸಲ್ಲಿಸೆ ಋಷಿಗಳಾಸೆ ತಂದು ತಾ ಮನಕಂಡು ವನಕೆ ಸತಿ ಸೋದರರ ಸಹಿತದಿ ಮುಂದೆ ಗಂಗೆಯ ದಾಟಿ ಭರದ್ವಾಜ ನಿಂದ ಸತ್ಕಾರವನು ಕೊಂಡನು2 ಚಿತ್ರಕೂಟದಲಿರಲು ವಿನಯದಿ ಬಂದು ಭಕ್ತ ಭರತನು ಬೇಡಲು ಪಾದುಕೆಯಿತು ಮತ್ತೆ ದಂಡಕವನ ಪ್ರವೇಶಿಸಿ ದೈತ್ಯರನು ಸಂಹರಿಸಿ ಶರಭಂಗ ಗಿತ್ತು ಮುಕ್ತಿಯ ಕುಂಭಸಂಭವ ನಿತ್ತ ದಿವ್ಯಾಸ್ತ್ರಗಳ ಪಡೆದನು 3 ವರಪಂಚವಟಿಯೊಳಗೆ ಶೂರ್ಪನಖಿಯು ದುರುಳ ಬುದ್ಧಿಯೊಳು ಬರೆ ಕಿವಿಮೂಗ ಕೊಯ್ಸಿ ಹರಿಣರೂಪದಿ ಬಂದ ದೈತ್ಯನ ಹರಣಗೈದಾಶ್ರಮಕೆ ತಿರುಗಲು | ಧರಣಿಸುತೆಯನು ಕಾಣದೆಲೆ ತಾ ನರರ ಪರಿಯಲಿ ಹಂಬಲಿಸಿದನು 4 ವನಜಾಕ್ಷಿ ವೈದೇಹಿಯ ಪುಡುಕುತ ಪಂಪಾ ಸನಿಹಕ್ಕೈತಂದು ವಾಲಿಯ ಸಂಹರಿಸ್ಯವನ ಅನುಜ ಸುಗ್ರೀವನಿಗೆ ಹರುಷದಿ ವಿನುತ ವಾನರ ರಾಜ್ಯದೊಡೆತನ ವನು ಕರುಣಿಸಿದ ಬಳಿಕ ಜಾನಕಿ ಯನು ಪುಡುಕೆ ಕಳುಹಿದನು ಕಪಿಗಳ 5 ಸ್ವಾಮಿಯ ಸ್ತುತಿಗೈಯುತ ಶ್ರೀ ಹನುಮಂತ ಆ ಮಹೋದದಿಯ ದಾಟುತ ಲಂಕೆಯ ಪೊಕ್ಕು ಭೂಮಿಜಾತೆಯ ಕಂಡು ರಾಮನ ಕ್ಷೇಮ ವಾರ್ತೆಯ ತಿಳುಹಿ ಬಹುಜನ ತಾಮಸರ ಸದೆಬಡಿದು ರಾವಣ ನಾ ಮಹಾ ನಗರಿಯನು ದಹಿಸಿದ 6 ಮರಳಿ ರಾಮನ ಬಳಿಗೆ ಬೇಗದಿ ಬಂದು ಮರುತ ಸುತನು ರಾಮಗೆ ಸೀತೆಯ ಕ್ಷೇಮ ವರುಹಿ ಚೂಡಾಮಣಿಯ ನೀಡಲು ಕರದಿ ಕೈಕೊಂಡದನು ನೋಡುತ ನರರ ಪರಿಯಲಿ ಹರುಷಬಾಷ್ಪವ ಸುರಿಸಿದನು ಶ್ರೀ ಕರಿಗಿರೀಶನು 7
--------------
ವರಾವಾಣಿರಾಮರಾಯದಾಸರು