ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಪೇಳಲಮ್ಮಯ್ಯಾ ರಂಗನ ಕ್ರೀಡಾ ಏನು ದಂಡಿಸಲಮ್ಮಯ್ಯಾ ಶ್ರೀ ಕೃಷ್ಣನ್ನ ಪ ಪಿಡಿದು ನಿಂದಾ ದುರುಳ ದೈತ್ಯನ್ನೆಳದೊಡಲವೆ ಸೀಳಿದಾ ಬಲಿಯಲ್ದೈನ್ಯದಿ ದಾನಬೇಡಿ ತಾಯ ಶಿರವ ಕಡಿದು ತೋರಿದಾ ಕಲೆವೆಣ್ಣೈದ್ಮೊಲೆಯುಂಡು ಕಳದ್ವಟ್ಟೆ ಹಯವೇರಿದಾ 1 ಕಾನನದಾ ವರಹನಾದಾ ಆಗಲು ಪಂಚಾನನ ರೂಪನಾದಾ ಸೂನು ಪರಶುರಾಮನಾಗಿ ಜಾನಕಿವರನಾಗಿ ರಾವಣನಾಗಿ ಮಾನಬಿಟ್ಟು ವಾಜಿಯನೇರ್ದಾ 2 ನಿಗಮ ತೋರ್ದಾ ಬೆನ್ನಲಿ ಬೆಟ್ಟವಿರಿಸಿ ಸುರರಾ ಪೊರೆದಾ ಧರಾಲಲನೆಯನೆತ್ತಿ ತಂದಾ ದೈತ್ಯನ ಶೀಳಿ ತರಳನಳಲನು ಕಳೆದಾ ಸುರತಟಿನಿಯಂಗುಟದಿ ಜನಿಸೆ ಧರೆಯ ಪಾವನಗೊಳಿಸೆ ನರಲೋಕವುದ್ಧಾರ ಜನಕ ಸಿರಿಪಾವನ ನರಸಿಂಹವಿಠಲನ 3
--------------
ನರಸಿಂಹವಿಠಲರು
ಏನೆಂದು ಸ್ತುತಿಸಲಿ ದೇವ ರಂಗಯ್ಯ ನಿನ್ನ ಜಾಣ- ತನವ ನೀನೆ ಬಲ್ಲೆ ಶ್ರೀ ರಂಗಯ್ಯ ಪ. ಮತ್ಸ್ಯನಾಗಿ ಶ್ರುತಿಯ ತಂದೆ ರಂಗಯ್ಯ ನೀನು ಕುತ್ಸಿತ ತಮನ ಕೊಂದೆ ರಂಗಯ್ಯ ಸ್ವಚ್ಛ ಕೂರುಮನಾದೆ ರಂಗಯ್ಯ ಭಕ್ತ ರಿಚ್ಛೆಯ ಪಾಲಿಸಿದೆ ಶ್ರೀ ರಂಗಯ್ಯ1 ಆದಿವರಾಹ ನೀನಾದೆ ರಂಗಯ್ಯ ನೀನು ಪೋದ ಮೇದಿನಿಯ ತಂದೆ ರಂಗಯ್ಯ ಭೇದಿಸಿ ಕಂಬದಿ ಬಂದೆ ರಂಗಯ್ಯ ಪ್ರ- ಹ್ಲಾದನ ಕಾಯ್ದೆ ಶ್ರೀ ರಂಗಯ್ಯ 2 ಬಲಿಯನ್ನು ವಂಚಿಸಿದಂಥ ರಂಗಯ್ಯ ನೀನು ನೆಲವ ಓರಡಿ ಮಾಡ್ದೆ ರಂಗಯ್ಯ ಬಲವಂತ ಭಾರ್ಗವನಾದೆ ರಂಗಯ್ಯ ನೀನು ಛಲದಿ ಕ್ಷತ್ರಿಯರ ಗೆದ್ದೆ ರಂಗಯ್ಯ 3 ಜಲಧಿಯನು ಕಟ್ಟಿದೆ ರಂಗಯ್ಯ ಹತ್ತು- ತಲೆಯವನ ಕುಟ್ಟಿದೆ ರಂಗಯ್ಯ ಮಲೆತ ಮಾವನ ಕೊಂದೆ ರಂಗಯ್ಯ ಯದು- ಕುಲವನುದ್ಧರಿಸಿದೆ ಶ್ರೀ ರಂಗಯ್ಯ 4 ಸತಿಯರ ಮೋಹಿಸಿದೆ ನೀನು ರಂಗಯ್ಯ ಬಲು ಚತುರ ಬೌದ್ಧನಾದೆ ರಂಗಯ್ಯ ಖತಿಯಿಂದ ಹಯವೇರಿದೆ ರಂಗಯ್ಯ ದು- ರ್ಮತಿಯ ಕಲಿಯ ಕೊಂದೆ ಶ್ರೀ ರಂಗಯ್ಯ 5 ತ್ರಿಭುವನದೊಳಧಿಕÀ ರಂಗಯ್ಯ ನೀನು ವಿಭೀಷಣನಿಗೆ ಪ್ರಸನ್ನ ರಂಗಯ್ಯ ನೀ- ನಭಯವಿತ್ತೆನ್ನ ಕಾಯೊ ಶ್ರೀ ರಂಗಯ್ಯ 6 ವಾದಿರಾಜಗೊಲಿದೆ ರಂಗಯ್ಯ ನೀನು ಮೋದಿ ಹಯವದನನಾದೆ ರಂಗಯ್ಯ ಸಾಧಿಸಿ ಖಳರ ಕೊಂದೆ ರಂಗಯ್ಯ ವಿ- ನೋದÀದಿ ವೇದವ ತಂದೆ ಶ್ರೀ ರಂಗಯ್ಯ 7
--------------
ವಾದಿರಾಜ
ಸಂಪ್ರದಾಯ ಏಕಾಂತ ಭಕ್ತ ಪ್ರಿಯ ಜೋಜೋ | ಹರಿಯೇಏಕಮೇವಾದ್ವಿತೀಯ ಜೋಜೋ ಪ ಮತ್ಸ್ಯಕೂರ್ಮನೆ ಕೋಲ ಜೋಜೋವತ್ಸ ಪರಿಪಾಲ ನೃಹರಿ ಜೋಜೋ 1 ಕಾಶ್ಯಪಿಯನಳೆದವನೆ ಜೋಜೋಕಾಶ್ಯಪಿಯ ಪ್ರದಾತ ಜೋಜೋ 2 ದಶಗ್ರೀವ ಸಂಹಾರ ಜೋಜೋಅಸುರ ಪೂಥಣಿ ಹರನೇ ಜೋಜೋ 3 ತ್ರಿಪುರೆಯರ ವ್ರತಭಂಗ ಜೋಜೋನಿಪುಣ ಹಯವೇರಿದವಗೆ ಜೋಜೋ 4 ಗುರುರಾಜವರದಾಶ್ವ ಮುಖ ಜೋಜೋಗುರು ಗೋವಿಂದ ವಿಠ್ಠಲನೆ ಜೋಜೋ5
--------------
ಗುರುಗೋವಿಂದವಿಠಲರು
ಸ್ಮರಿಸೆನ್ನ ಮನವೇ ಯಾದವ ರಾಯನಾ| ಸರಸಿಜೊವನುತ ಭಕುತರ ಪ್ರೀಯನಾ ಪ ವರನಿಗ ಮೋಯಿದವನಾ ಶೀಳಿ ಎಳಹಿದವನಾ| ಶರಧಿ ಮಥನ ಗೋಸುಗನ ಪೊತ್ತನಾ ಧರಣಿಯಾ ತನ್ನ ಕೋರೆ ದಾಡಿಲಿರಿಸಿದಿಹನಾ| ಶರಣ ಪ್ರಲ್ಹಾದನ ಸುಸ್ಮರಣೆ ಗೊಲಿದನಾ1 ಭೂಸುರೋತ್ತಮನಾಗಿ ದಾನವ ಬೇಡಿದನಾ| ಹೇಸದೇ ಕ್ಷತ್ರಿಯರ ಕುಲ ಕೊಂದನಾ| ವಾಸು-ಕ್ಯಾ ಭರಣನ ಧನುವ ಮುರಿದವನಾ| ವಾಸವಾತ್ಮಜ ಮಿತ್ರ ದೇವಕಿ ಕಂದನಾ2 ಪತಿವೃತೆ ನಾರಿಯರ ವೃತಭಂಗ ಮಾಡಿದನಾ| ಸಿತ ಹಯವೇರಿದ ಶ್ರೀ ಜಗದೀಶನಾ| ಪತಿತ ಪಾವನನಾದಾ ಅನಂತಾವತಾರನ| ನುತ ಗುರು ಮಹಿಪತಿ ನಂದನ ಪ್ರೀನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಂಗಳ ಮಹಿಮಗೆ ನೀರಾಜನಂಗಳ ಪೈಸರಿಸಿ ಭೃಂಗಾಳಕಂಗಳೆಯರು ಸ್ಮಿತವದನಂಗಳೆಯರು ಶಿರಿ ತಿರುವೆಂಗಳಪತಿಗಾರತಿಯ ಬೆಳಗಿರೆ ಪ.ಅಕ್ರಮದಲಿಶ್ರುತಿಕದ್ದೊಯ್ದವನಾಕ್ರಂದಿಸಿ ಸೀಳಿದಶುಭಮತ್ಸ್ಯಾಕೃತಗೆ ಜಗಂಗರ್ಭಾಕೃತಗೆ ಹತತಮವ್ಯಾಕೃತಗಾರತಿಯ ಬೆಳಗಿರೆ 1ಇಂದಿರನೈಶ್ವರ್ಯವು ಮಕರದಮಂದಿರ ಮಗ್ನಾಗಿರೆ ಗಿರಿಭೃತಕಂಧರಗೆ ಕಚ್ಛಪ ಸುಂದರಗೆ ಕರುಣಾಸಾಂದರಗಾರತಿಯ ಬೆಳಗಿರೆ 2ಪೊಂಗಣ್ಣಿನದಿತಿಜಕ್ಷಿತಿಯಹಿಂಗದೆ ಬೈಚಿಡಲು ಕ್ರೋಡದಿಭಂಗಿತಗೆ ವಸುಮತಿ ಸಂಗತಗೆ ದಿವಿಜರಇಂಗಿತಗಾರತಿಯ ಬೆಳಗಿರೆ 3ದಾನವಗಂಜದೆ ಶಿಶು ವರಹರಿನೀನೆ ಗತಿಯೆನೆ ಕಾಯ್ದ ಸುಜಾಣನಿಗೆ ನಿಜಜನಪ್ರಾಣನಿಗೆ ನರಪಂಚಾನನಗಾರತಿಯ ಬೆಳಗಿರೆ 4ಧರ್ಮದಿ ಕೊಬ್ಬಿದ ಬಲಿಚಕ್ರನಮರ್ಮದಿ ಜಡಿದ ವಿಚಿತ್ರಕರ್ಮನಿಗೆ ಧೃತಮೃಗಚರ್ಮನಿಗೆ ಅಣುವಟುಶರ್ಮನಿಗಾರತಿಯ ಬೆಳಗಿರೆ 5ವೀರ ಕ್ಷತ್ರಿಯರ ಕುಲ ಸಂಹಾರ ರೇಣುಕೆ ಕಂಠ ವಿದಾರಿಗೆ ವಿತರಣ ಶೂರಗೆಘೋರಕುಠಾರಿಗಾರತಿಯ ಬೆಳಗಿರೆ 6ಮುನಿಮಖಪಾಲಕ ತ್ರಯಂಬಕಧನುಹರ ಸೀತಾವರ ದಶಮುಖಹನನಗೆ ಮತ್ತವನನುಜಪಗೆ ಅಂಜನಾತನುಜಪಗಾರತಿಯ ಬೆಳಗಿರೆ 7ಪೊಂಗೊಳಲೂದುತ ಗೋಜಂಗುಳಿಹೆಂಗೆಳೆಯರ ಮೋಹಿಪ ತಾವರೆಗಂಗಳಗೆ ಸುಖದ ತರಂಗನಿಗೆ ಪಾಂಡವಸಂಗನಿಗಾರತಿಯ ಬೆಳಗಿರೆ 8ನೀಚರ ಬಲವಳಿಯಲು ಸತ್ವರಖೇಚರನಾರಿಯರ ವ್ರತಹೃತಆಚರಗೆಜಿತಬೌದ್ಧಾಚರಗೆ ನಿಗಮವಿಗೋಚರಗಾರತಿಯ ಬೆಳಗಿರೆ 9ಸಂಕರ ಕಲಿಯಂ ಮಥಿüಸಲು ತಾಬಿಂಕದಿ ಹಯವೇರಿದ ಸದ್ಧರ್ಮಾಂಕುರಗೆ ವರ್ಧಿಪ ಕಿಂಕರಗೆ ಪ್ರಸನ್ವೆಂಕಟರೇಯಗಾರತಿಯ ಬೆಳಗಿರೆ 10
--------------
ಪ್ರಸನ್ನವೆಂಕಟದಾಸರು
ಮಂಗಳಂಜಯಮಂಗಳಂ ಪ.ನಿಗಮವ ತಂದಾ ಮತ್ಸ್ಯನಿಗೆನಗವ ಬೆನ್ನಲಿ ಪೊತ್ತ ಕೂರ್ಮನಿಗೆ ||ಜಗವನುದ್ಧರಿಸಿದ ವರಹಾವತಾರಗೆಮಗುವನು ಕಾಯ್ದ ಮುದ್ದು ನರಸಿಂಹಗೆ 1ಭೂಮಿಯ ದಾನವ ಬೇಡಿದಗೆಆ ಮಹಾಕ್ಷತ್ರಿಯರ ಗೆಲಿದವಗೆ ||ರಾಮಚಂದ್ರನಾದ ಸ್ವಾಮಿಗೆ ಸತ್ಯಭಾಮೆಯರಸ ಗೋಪಾಲಕೃಷ್ಣಗೆ 2ಬತ್ತಲೆ ನಿಂತಿಹ ಬುದ್ಧನಿಗೆಉತ್ತಮ ಹಯವೇರಿದ ಕಲ್ಕಿಗೆ |ಹತ್ತವತಾರದಿ ಭಕ್ತರ ಸಲಹುವಸತ್ಯ ಶ್ರೀ ಪುರಂದರವಿಠಲನಿಗೆ 3
--------------
ಪುರಂದರದಾಸರು
ಮರೆಯದಿರು ಶ್ರೀ ಹರಿಯನು ಪ.ಮರೆಯದಿರು ಶ್ರೀ ಹರಿಯ ಮರಣಾತುರದಿ ಮಗನಕರೆದವಗೆ ಸಾಯುಜ್ಯವಿತ್ತ ನಾರಾಯಣನಸ್ಮರಣೆಯನು ಮಾಡುವರಚರಣ ಸೇವಕರಿಂಗೆಪರಮಪದವೀವ ಹರಿಯಅಪದೇವಕಿಯ ಬಂಧುವನು ಪರಿದವನ ಪೂತನಿಯಜೀವರಸವೀಂಟಿದನ ಮಾವನನು ಮಡುಹಿದನಪಾವನ ತರಂಗಿಣಿಯ ಪದನಖದಿ ಪಡೆದವನಗೋವರ್ಧನೋದ್ಧಾರನ ||ದಾವಾನಲನ ಪಿಡಿದು ನುಂಗಿದನ ಲೀಲೆಯಲಿಗೋವತ್ಸ ಗೋಪಾಲ ರೂಪವನು ತಾಳ್ದವನದೇವಮುನಿ ಮುಖ್ಯ ಸುರರಾರಾಧಿಸುವನ ಶ್ರೀ ಪಾದವನುಭಜಿಸು ಮನವೆ 1ಕಂಜಸಂಭವಪಿತನ ಕರುಣಾಪಯೋನಿಧಿಯಕುಂಜರನ ನುಡಿಕೇಳಿ ಒದಗಿದನ ರಣದೊಳು ಧ-ನಂಜಯನ ಜೀವವಂ ಕೃಪೆಯಿಂದ ಕಾಯ್ದವನಆಂಜನೇಯನ ನಾಳ್ದನ ||ರಂಜಿಸುವ ಕೌಸ್ತುಭವಿಭೂಷಣನ ಜಲಧಿಯಲಿನಂಜಿನೊಡೆಯನ ಮೇಲೆ ಮಲಗಿದನ ತಮದೊಳಗೆ ಪ -ರಂಜ್ಯೋತಿಮಯನಾಗಿ ಬೆಳಗುವನಶ್ರೀ ಚರಣಕಂಜವಂ ಭಜಿಸು ಮನವೆ 2ವಾರಿಧಿಯೊಳಾಡಿದನ ವರಗಿರಿಯ ತಾಳಿದನಧಾರಿಣಿಯ ತಂದವನ ದೈತ್ಯನನು ಕೊಂದವನಮೂರಡಿಯಲಳೆದವನ ಮೊನೆಗೊಡಲಿ ಪಿಡಿದವನ ನೀರಧಿಯಬಂಧಿಸಿದನ||ದ್ವಾರಕೆಯನಾಳ್ದವನ ತ್ರಿಪುರಗಳ ಜಗುಳ್ದವನಚಾರುಹಯವೇರಿದನ ಸಕಲ ಸುಜನರ ಪೊರೆವಧೀರ ಪುರಂದರವಿಠಲನ ಚರಣಕಮಲವನುನಂಬಿ ನೀ ಭಜಿಸು ಮನವೇ 3
--------------
ಪುರಂದರದಾಸರು