ವೇಣುನಾದ ಪ್ರಿಯ ಗೋಪಾಲಕೃಷ್ಣ ಪ.
ವೇಣುನಾದ ವಿನೋದ ಮುಕುಂದಗಾನವಿನೋದ ಶೃಂಗಾರ ಗೋಪಾಲ ಅ.ಪ.
ವಂದಿತಚರಣ ವಸುಧೆಯಾಭರಣಇಂದಿರಾರಮಣ ಇನಕೋಟಿತೇಜಮಂದರಧರ ಗೋವಿಂದ ಮುಕುಂದಸಿಂಧುಶಯನ ಹರಿ ಕಂದರ್ಪಜನಕ 1
ನವನೀತಚೋರ ನಂದಕುಮಾರಭುವನೈಕವೀರ ಬುದ್ಧಿವಿಸ್ತಾರರವಿಕೋಟಿತೇಜ ರಘುವಂಶರಾಜದಿವಿಜವಂದಿತ ದನುಜಾರಿ ಗೋಪಾಲ2
ಪರಮದಯಾಳು ಪಾವನಮೂರ್ತಿವರ ಕೀರ್ತಿಹಾರ ಶೃಂಗಾರಲೋಲಉರಗೇಂದ್ರಶಯನ ವರ ಹಯವದನಶರಣರಕ್ಷಕ ಪಾಹಿ ಕೋದಂಡರಾಮ 3