ಏನ ಹೇಳಲಿ ನರಹರಿ ನಿನ್ನ ಮಹಿಮೆಯ ಪ.
ನಿನ್ನ ಧ್ಯಾನ ಮಾಡೇನೆಂದರೆ ನಿಲ್ಲಗೊಡದು ಮನ ಅ.ಪ.
ಸಚ್ಚಿದಾನಂದನ ಪಾದಾರವಿಂದವಮೆಚ್ಚಿ ಹಸನಾಗಿ ಇರು ಎಂದೆಡೆಹುಚ್ಚೆದ್ದ ಕಪಿಯಂತೆ ವಿಷಯವೆಂಬಡವಿಲಿಕಿಚ್ಚುಕಂಗೊಂಡು ಎನ್ನ ಕಾಡುತಿದೆ ರಂಗ 1
ವಾಸುದೇವನ ಗುಣಗಳ ಸ್ತುತಿಸದೆ ದು-ರಾಸೆಯೊಳು ಬಿದ್ದು ಕಾಡುತಿದೆಲೇಸಾಗಿ ನಾಯಿಬಾಲಕೆ ನಾರಾಯಣ ತೈಲಏಸುಬಾರಿ ತೀಡಿದರೆ ನೀಟಾಗುವುದೊ2
ಸಾಧು ಸಜ್ಜನರ ಸಂಗವ ಮಾಡಲೊಲ್ಲದೆಬಾಧಿಸುತಿದೆ ದುಷ್ಟಸಂಗದಿಂದಮಾಧವ ಭಕ್ತವತ್ಸಲ ಹಯವದನನೆನೀ ದಯಮಾಡಿ ನಿನ್ನಂತೆಮಾಡೆನ್ನ ಮನ 3