ಶ್ರೀ ವಾದಿರಾಜರು
ಕರುಣದಿ ನೋಡೋ ಮದ್ಗುರುವರ ವಾದಿರಾಜನಂಬಿದ ಭಕ್ತರ ಸುರತರುವೇ ಪ
ಪರಿಪರಿ ಭವಸಾಗರದಲಿ ಮುಳುಗುವತರಳನ ಮರೆವುದು ಥರವೇ ಅ.ಪ.
ನಿಗಮ ವಿನುತ ಹಯವದನನಬೇಗ ಒಲಿಸಿದೆ ನೀ ಮುದದಿಯೋಗ ಜಿತಾಸನನಾಗಿರುವನೆ ತಲೆಬಾಗುವೆ ಭಯವಳಿ ತ್ವರಿತ 1
ವಾದದೊಳ್ ವಾದಿಗಳನೆ ಗೆದ್ದು ಗುರುಮತಸಾಧಿಸಿದೆಯೊ ಬಲವಂತಸಾಧು ಸೇವಿತ ನಿನ್ನ ಪಾದವ ನಂಬಿದೆ ಭವಬಾಧೆ ಕಳೆಯೋ ಮಹಂತಕ್ರೋಧ ರಹಿತ ಪಂಚಭೇಧ ಸುಜ್ಞಾನವಬೋಧಿಸುವ ದಯವಂತ 2
ಅತಿ ವಿಮಲನೆ ನಿನ್ನ ಸ್ತುತಿಸಲರಿಯೆ ನಾನುಮತಿವಂತನೆ ಮಹಾದಾತಾಸತತ ಬೇಡುವೆನು ಶ್ರೀಪತಿ ಭಜನೆಗೆ ಮನಜಿತವಾಗಿ ಇರಲಯ್ಯ ತಾತಕ್ಷಿತಿಯೊಳು ಕಂಡ ದುರ್ಮತಿಗಳ ಬಿಡಿಸೋದತಿ ಅಧಿಕವೇನೋ ಅನಾಥನಾಥಪತಿತ ಪಾವನ ರಮಾಪತಿ ವಿಠಲನ ನಿರುತ ನೋಳ್ಪ ಲಾತವ್ಯಬ್ಯಾತ 3