ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

3. ದೇವ-ದೇವತೆಗಳ ಸ್ತುತಿ ದೇವಿ ನೀಕರುಣಿಸಮ್ಮಾ|| ಮನದಲಿ ಭಜಿಸುವೆ ತಾಯಿ ಪ ವಾರಿಜಮುಖಿ ನಿನ್ನ ವಂದಿಸುವೆ ನಾನು ದಾರಿದ್ರ್ಯ ಪರಿಹರಿಸಿ ದಯಮಾಡಿ ಸಲಹಮ್ಮಾ 1 ಸಾಗರನ ಸುತೆ ಸಕಲ ಲೋಕ ಮಾತೆ ನಾಗಶಯನ ನುರದಲಿ ನಲಿದಾಡುವಿ 2 ಮದಗಜಗಾಮಿನಿ ಮಹಿಮಾ ಪ್ರಕಾಶಿನಿ ಪದುಮನಾಭನ ಪಟ್ಟಿದ ರಾಣಿ 3 ಚಂದಿರಮುಖಿ ಚಲುವಕಾಂತೆ ಸೀತೇ ಇಂದ್ರಾದಿಗಳಿಗೊಲಿದಿಷ್ಟಾರ್ಥ ವೀಯುವಿ 4 ಅರವಿಂದಾಲಯರನ್ನೆ ಆನಂದ ಪರಿಪೂರ್ಣೆ 'ವರ ಹೆನ್ನೆ ವಿಠಲನ’ ರಮಾ ನಮ್ಮಮ್ಮಾ ಕಾಯಮ್ಮಾ 5
--------------
ಹೆನ್ನೆರಂಗದಾಸರು
ಎಲ್ಲಿಗೆ ಗಮನವಿದು ದುರ್ಗಾಂಬಿಕೆ ಎಲ್ಲಿಗೆ ಗಮನವಿದು ಪ. ಗಮನ ಹರವಲ್ಲಭೆ ನೀ ದಯ- ದಲ್ಲಿ ಬಾಲಕನೊಳು ಮೆಲ್ಲನಿಂದರುಹವ್ವಅ.ಪ. ಚಂಡಿಕೆ ಮಹಮ್ಮಾಯೆ ದೇವಿ ಪ್ರ- ಚಂಡ ಲೋಕತಾಯೆ ಖಂಡಪರಶುಪ್ರಿಯೆ ಅಖಿಲ ಭೂ- ಮಂಡಲಕಧಿಪತಿಯೆ ದಂಡಿಗೆ ಮೇಲೇರಿಕೊಂಡು ದುಷ್ಟರ ಶಿರ- ಚೆಂಡಾಡಿ ಶರಣರ ಕೊಂಡಾಡಿ ಪೊರೆವುತ1 ನಿಲ್ಲು ನಿಲ್ಲು ಜನನಿ ಬಾಲಕ- ನಲ್ಲವೆ ಹೇ ಕರುಣಿ ಪುಲ್ಲನಯನೆ ತ್ರಿಗುಣಿ ದಯವಿನಿ- ತಿಲ್ಲವೆ ನಾರಾಯಣಿ ಮಲ್ಲಿಗೆಗಂಧಿ ಪಥವೆಲ್ಲಿಯು ಕಾಣದೆ ಸಲ್ಲಲಿತಾಂಘ್ರಿಯ ನಿಲ್ಲದೆ ಬೇಡುವೆ 2 ದಾರಿ ಯಾವುದಮ್ಮ ಮುಕ್ತಿಯ ದಾರಿ ತೋರಿಸಮ್ಮ ಸೇರಿದೆ ನಾ ನಿಮ್ಮ ಭವಾಬ್ಧಿಯ ಪಾರುಗಾಣಿಸಮ್ಮ ಚಾರುನಿಗಮ ಶಿರಭೋರೆನಿಪ ವಿಚಾರ- ಸಾರವಿತ್ತು ದಯಪಾಲಿಸು ಶುಭವರ3 ಕಷ್ಟದುರಿತ ಭಯವ ತಾ ಬಡಿ- ದಟ್ಟಿ ಭಕ್ತಕುಲದ ಶ್ರೇಷ್ಠತನದಿ ಪೊರೆವ ತನ್ನ ಇಚ್ಛೆಯ ಕೈಗೊಳುವ ಲಕ್ಷ್ಮೀನಾರಾಯಣದಿಟ್ಟಭಗಿನಿ ಶಿವೆ ಕಟ್ಟಿಲಪುರದೊಳು ಗುಟ್ಟಿನಿಂ ನೆಲಸಿಹೆ4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಎಲ್ಲಿಗೆ ಗಮನವಿದು ದುರ್ಗಾಂಬಿಕೆ ಎಲ್ಲಿಗೆ ಗಮನವಿದುಪ. ಗಮನ ಹರವಲ್ಲಭೆ ನೀ ದಯ- ದಲ್ಲಿ ಬಾಲಕನೊಳು ಮೆಲ್ಲನಿಂದರುಹವ್ವಅ.ಪ. ಚಂಡಿಕೆ ಮಹಮ್ಮಾಯೆ ದೇವಿ ಪ್ರ- ಚಂಡ ಲೋಕತಾಯೆ ಖಂಡಪರಶುಪ್ರಿಯೆ ಅಖಿಲ ಭೂ- ಮಂಡಲಕಧಿಪತಿಯೆ ದಂಡಿಗೆ ಮೇಲೇರಿಕೊಂಡು ದುಷ್ಟರ ಶಿರ- ಚೆಂಡಾಡಿ ಶರಣರ ಕೊಂಡಾಡಿ ಪೊರೆವುತ 1 ನಿಲ್ಲು ನಿಲ್ಲು ಜನನಿ ಬಾಲಕ- ನಲ್ಲವೆ ಹೇ ಕರುಣಿ ಪುಲ್ಲನಯನೆ ತ್ರಿಗುಣಿ ದಯವಿನಿ- ತಿಲ್ಲವೆ ನಾರಾಯಣಿ ಮಲ್ಲಿಗೆಗಂಧಿ ಪಥವೆಲ್ಲಿಯು ಕಾಣದೆ ಸಲ್ಲಲಿತಾಂಘ್ರಿಯ ನಿಲ್ಲದೆ ಬೇಡುವೆ 2 ದಾರಿ ಯಾವುದಮ್ಮ ಮುಕ್ತಿಯ ದಾರಿ ತೋರಿಸಮ್ಮ ಸೇರಿದೆ ನಾ ನಿಮ್ಮ ಭವಾಬ್ಧಿಯ ಪಾರುಗಾಣಿಸಮ್ಮ ಚಾರುನಿಗಮ ಶಿರಭೋರೆನಿಪ ವಿಚಾರ- ಸಾರವಿತ್ತು ದಯಪಾಲಿಸು ಶುಭವರ 3 ಕಷ್ಟದುರಿತ ಭಯವ ತಾ ಬಡಿ- ದಟ್ಟಿ ಭಕ್ತಕುಲದ ಶ್ರೇಷ್ಠತನದಿ ಪೊರೆವ ತನ್ನ ಇಚ್ಛೆಯ ಕೈಗೊಳುವ ಲಕ್ಷ್ಮೀನಾರಾಯಣದಿಟ್ಟಭಗಿನಿ ಶಿವೆ ಕಟ್ಟಿಲಪುರದೊಳು ಗುಟ್ಟಿನಿಂ ನೆಲಸಿಹೆ4
--------------
ತುಪಾಕಿ ವೆಂಕಟರಮಣಾಚಾರ್ಯ
ಶರಣು ಗಿರಿಯ ತಿಮ್ಮಾ | ಶರಣು ಪುರುಷೋತ್ತಮಾ | ಶರಣು ಮಹಾ ಮಹಿಮ | ಶರಣು ಪರಬೊಮ್ಮಾ | ಪರಿಹರಿಸುವದು ಹಮ್ಮಾ ಪ ವರೇಣ್ಯ | ಭಂಗ | ಹರಿಸಿದ ಶಿರಿ ರಂಗ | ವಿಹಂಗ | ತುರಗ ತುರಗ ವದನ | ಸದನ ಕರ ಮುಗಿವೆನೈಯಾ | ಕರದ ಮಾತಿಗೆ ಜೀಯಾ | ಭರದಿಂದ ಕೊಡು ಮತಿಯಾ 1 ಪಾದದಲಿ ಪೆಣ್ಣಾ | ಮೋದದಲಿ ಪೆತ್ತ ಚಿಣ್ಣಾ | ನಾದ ಬಲು ಪಾವನ್ನಾ | ಭೇದಾರ್ಥ ಜ್ಞಾನ | ಆದರಿಸೆ ಅನುದಿನಾ | ನೀ ದಯದಲಿ ಕೊಡು | ಈ ದೇಹ ನಿನ್ನ ಬೀಡು | ಯಾದುದೆ ಇತ್ತ ನೋಡು 2 ಜಲದೊಳಗಾಡಿದೆ | ಚಲಕೆ ಬೆನ್ನ ನೀಡಿದೆ | ನೆಲ ಬಂದು ನೆಗಹಿದೆ | ಖಳನನ್ನ ಕೆಡಹಿದೆ | ಇಳಿಯ ಮೂರಡಿ ಮಾಡಿದೆ | ಕುಲವ ಕೂಡಲಲಿ ಹಾರ | ಜಾರ ಚೋರ | ಅಳಿದೆ ಮುಪ್ಪುರು ಶೂರಾ | ವಿಜಯವಿಠ್ಠಲ ಪಾರಾ | ಫಲವೀವೆ ಧರಣೀಧರಾ 3
--------------
ವಿಜಯದಾಸ