ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಮೋಹನ ತುಪಾಕಿಯನು ಪಿಡಿದು ಹಸ್ತದಲಿ ಚೆನ್ನಾಗಿ ಶೃಂಗರಿಸುವೆ ಪ ಭಿನ್ನಭಾವನೆಯ ಕಳಿದುಳಿದು ಕೋವಿಗೆ ಮತ್ತೆ ಇನ್ನು ಜೋಡಿಲ್ಲವೆಂದು ಇಂದುಅ.ಪ. ಪ್ರೇಮರಸವೆಂಬ ಜಲದಲಿ ತೊಳೆದು ಶುಚಿಮಾಡಿ ನೇಮವೆಂದೆಂಬ ನಿರ್ಮಲವಾಗಿಹ ಆಮಹಾಕನಕ ರಜತದ ಭೂಷಣವ ತೊಡಿಸಿ ಕಾಮವನು ಸುಟ್ಟು ಮಸಿಮಾಡಿ ತುಂಬುವೆನದಕೆ ಎನ್ನೆ 1 ಹಮ್ಮಮತೆಯೆಂಬ ಗುಂಡನು ಅದರಮೇಲಿರಿಸಿ ಒಮ್ಮನಸು ಎಂಬ ಗಜದಿಂದ ಜಡಿದು ಒಮ್ಮೆ ಗುರುವಾಕ್ಯರಂಜಿಕೆಯ ಕಿವಿಯೊಳಗರದು ಬಿಮ್ಮನೇ ಬಿಗಿದು ಈಕ್ಷಿಸಿ ನೋಡುವೆ ಎನ್ನ 2 ಮೆರೆವ ಸುಜ್ಞಾನ ಜ್ಯೋತಿಯ ಬತ್ತಿಯನು ಕೊಳಿಸಿ ಭರದಿ ಬರುತಿಹ ಅಷ್ಟಮದ ಕರಿಗಳಾ ತರಿದಾರು ವೈರಿವರ್ಗಕೆ ಕೆಡಹಿ ಗುರಿಯಿಂದ ಗುರುವಿಮಲಾನಂದ ರಸಭರಿತನಾಗಿರುವಂಥ 3
--------------
ಭಟಕಳ ಅಪ್ಪಯ್ಯ
ಗುರುವಿನಾ ಬಲಗೊಂಬೆ | ಪರಗತಿ ಪಡಕೊಂಬೆ | ಸಿರಿಯಾ | ಧರಿಯಾ | ಧೊರಿಯಾ | ಚರಿಯಾ | ಸಾರಿ ಬೀರಿ ತಾರಿಸುವ ಪಾರಾವಾರ ಮಹಿಮನಾ ಪ ಶುಭ ಚರಣಕೆರಗಿ | ಕೆಡ ಗುಣಗಳ ನೀಗಿ | ಇಡುವಾ | ತುಡುವಾ | ಮುಡುವಾ | ಕುಡುವಾ | ನುಡಿ ನುಡಿಗಳಲ್ಲಿ ಬಿಡದೇ ಅಡಿಗಡಿಗೆ ನೆನೆವುತಾ 1 ಹರಿಯಲ್ಲರೊಳಗಿರಿಸೀ | ಹಮ್ಮಮತೆಯನೆ ಬಿಡಿಸಿ | ದೋರಿ ದೋರಿ ಅರಿವೈರಿ ಬೇರೆ ತೋರಿಸಿದನಾ 2 ಮೂರ್ತಿ | ಆರವಾ | ಮುರವಾ | ಘನದಿರುವ್ಹಾ ಪರವಲಿಟ್ಟನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ಮೂರುತಿಯ ತೋರಸೋ | ರಂಗಯ್ಯಾ ಪ ನಿನ್ನ ಮೂರುತಿಯ ತೋರಿಸೆನ್ನ ಕಂಗಳಿಗೆ ದಯ | ವನ್ನು ಬೀರಿ ಭವಭಯ ಬನ್ನವನು ಬಿಡಸೋ ರಂಗಯ್ಯಾ ಅ.ಪ. ಅರುಣನಖಾಂಗುಲಿ ಹೊಳೆವಾ | ಕೋಮಲ ಪಾದಾ| ಎರಡು ಜಂಘೆ ಜಾನುರವಾ |ಕಟಿ ಜಗದು | ದರನಾಭಿ ಸಿರಿವತ್ಸವಾ | ಕಂಬುಗ್ರೀವದ | ಕರಚತುಷ್ಟಯ ಮೆರೆವಾ | ಕರುನಗೆದಂತಾ | ಧರಮಿರುಪಕದಪುಶೃತಿ | ಅರಗಂಗಳನಾಸಾ | ಪೆರೆ ನೋಸಳಲಳಕದಾ ರಂಗಯ್ಯಾ 1 ಕೌಸ್ತುಭ ಕೇಯೂ | ರನ್ನು ತೋಳಬಂದಿ ಸ್ಪುರದಾ | ಕಡಗ ಮುದ್ರಾಂ | ಅಂದುಗೆ ಗೆಜ್ಜೆ | ನೀಲ ಪರಿ ಮಂದ ಮತಿಯೆನ್ನದೆ ಕರುಣಿಸಿ ರಂಗಯ್ಯಾ2 ನಿನ್ನ ಕಳೆಗಳ ತೋರಿಸಿ | ಹಮ್ಮಮತೆಯಾ | ಮನ್ನೀನವಗುಣ ಬಿಡಸೆ | ಸಂತರ ಕೈಯಾ | ಅನುದಿನ ಒಪ್ಪಿಸಿ | ಸನ್ನುತ ಮಹಿಪತಿ | ಚಿನ್ನನೊಡೆಯನೇ ಬಹ | ಜನ್ಮ ಜನ್ಮಾಂತರದಲಿ ತನ್ನವನೆಂದೆನಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸರ್ವವು ಹರಿಗೊಪ್ಪಿಸಿದರೆ ನಿಶ್ಚಿಂತೆ ಗರ್ವದಿಂದಲಿ ವ್ಯರ್ಥ ಕೆಡದಿರು ಭ್ರಾಂತೆ ಪ. ಲೇಶ ಸ್ವತಂತ್ರವನಿತ್ತದ ನಂಬೀ ಶಾಭಿಮಾನದಿ ಮಾಡುವ ಡೊಂಬಿ ದೋಷಗಳಿಂದಾಹ ಫಲವೆ ನೀನುಂಬಿ ವಾಸುದೇವನ ಮೂರ್ತಿಯನೆಂತು ಕಾಂಬಿ 1 ಹಸುತೃಷೆ ನಿದ್ರೆ ತಡೆಯಲೊಲ್ಲಿ ಯಾಕೆ ದಶಕರಣಗಳು ದುರ್ವಿಷಯದಿ ನೂಕೆ ವಶವಿಲ್ಲದಲೆ ಬಿದ್ದು ಬಳಲುವಿ ಯಾಕೆ ವಸುದೇವ ಸುತನ ಮರೆಯದಿರು ಜೋಕೆ 2 ಸತ್ಯ ಸಂಕಲ್ಪನಲ್ಲದೆ ಕರ್ತನಾವ ತತ್ವೇಶರರಿತು ಕರ್ಮವ ಮಾಳ್ಪ ಸೋವ ನಿತ್ಯ ನೀ ವರಿತ ಹಮ್ಮಮತೆಯ ಭಾವ ಹತ್ತದಂತಿರೆ ಕಾವ ಕರುಣಾಳು ದೇವ 3 ಒಡೆಯರಿಲ್ಲದೆ ಪೋದ ವೃಕ್ಷದ ಫಲವ ಬಡಿದು ತಿಂಬುವರು ಕಂಡವರೆಲ್ಲ ನೋಡು ಕರ್ಮ ಮಡದಿ ಮೊದಲುಗೊಂಡು ಕಡಲಶಯನಗರ್ಪಿಸುತ ಕಷ್ಟ ದೂಡು 4 ವಹಿಸು ಭಾರವ ಲಕ್ಷ್ಮೀಕಾಂತನ ಮೇಲೆ ಇಹರಹರಾದರದಿಂದ ತಲ್ಲೀಲೆ ಮಹಿಮೆಯ ಪೊಗಳಿ ತೂಗಾತನೂಯ್ಯಾಲೆ ಅಹಿಪತಿ ಗಿರಿರಾಜ ಎತ್ತುವ ಮೇಲೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಸ್ವಾಮೀ ರಕ್ಷಿಸು ಸುಬ್ರಹ್ಮಣ್ಯ ಕಾಮಿತಪ್ರದ ಸುರಸ್ತೋಮಾಗ್ರಗಣ್ಯಪ. ಜನ್ಮ ಜನ್ಮಾಂತರದ ಕರ್ಮಾನುಸಾರದಿಂ ದುರ್ಮತಿಗೆಳಸಿಯಹಮ್ಮಮತೆಯಲಿ ದುರಿತ ದೂರವಿರಿಸು ನಿರ್ಮಲಜ್ಞಾನೋಪದೇಶವನಿತ್ತೆನ್ನ1 ಪ್ರತ್ಯಗಾತ್ಮನ ನಾಮ ಕೀರ್ತನೆ ಗೈಯುತ್ತ ಭಕ್ತಿಸೌಭಾಗ್ಯವಿರಕ್ತಿಯ ನೀಡು ಭೃತ್ಯವತ್ಸಲ ಭವಭಯಹರ ಗಿರಿಜಾ- ಪುತ್ರನೆ ಪರಮಪವಿತ್ರ ಸುಚರಿತ್ರನೆ2 ಸುರಲೋಕವನು ಕಾವ ಧುರಧೀರ ಪ್ರಭು ನಿನಗೀ ನರಲೋಕವನು ಕಾವದುರು ಕಷ್ಟವೇನು ಪರಿಶುದ್ಧ ಸ್ಥಾನಿಕಧರಣೀಸುರಕುಲ- ಗುರುವೆಂದು ಚರಣಕ್ಕೆ ಶರಣಾಗತನಾದೆ3 ಸಾಕುವಾತನು ನೀನೆ ಸಲಹುವಾತನು ನೀನೆ ಬೇಕು ಬೇಡೆಂಬುವರ ನಾ ಕಾಣೆ ದೊರೆಯೆ ಲೋಕೇಶ ಸುಕುಮಾರ ಶೋಕಮೋಹವಿದೂರ ನೀಕರಿಸದೆಯೆನ್ನ ಸ್ವೀಕಾರ ಮಾಡಯ್ಯ4 ಪೃಥ್ವಿಯೊಳ್ಪಾವಂಜೆ ಕ್ಷೇತ್ರಾಧಿವಾಸನೆ ಸುತ್ರಾಮಾದಿ ಸುರಮೊತ್ತ ಪೂಜಿತನೆ ಕರ್ತ ಲಕ್ಷ್ಮೀನಾರಾಯಣನ ಸಾರೂಪ್ಯನೇ ದೈತ್ಯದಲ್ಲಣ ವಲ್ಲೀದೇವಿ ಮನೋಹರನೆ5
--------------
ತುಪಾಕಿ ವೆಂಕಟರಮಣಾಚಾರ್ಯ
ಸ್ವಾಮೀ ರಕ್ಷಿಸು ಸುಬ್ರಹ್ಮಣ್ಯಕಾಮಿತಪ್ರದ ಸುರಸ್ತೋಮಾಗ್ರಗಣ್ಯ ಪ.ಜನ್ಮ ಜನ್ಮಾಂತರದ ಕರ್ಮಾನುಸಾರದಿಂದುರ್ಮತಿಗೆಳಸಿಯಹಮ್ಮಮತೆಯಲಿದುರ್ಮದಾಂಧನಾದೆದುರಿತದೂರವಿರಿಸುನಿರ್ಮಲಜ್ಞಾನೋಪದೇಶವನಿತ್ತೆನ್ನ 1ಪ್ರತ್ಯಗಾತ್ಮನ ನಾಮ ಕೀರ್ತನೆ ಗೈಯುತ್ತಭಕ್ತಿಸೌಭಾಗ್ಯವಿರಕ್ತಿಯ ನೀಡುಭೃತ್ಯವತ್ಸಲ ಭವಭಯಹರ ಗಿರಿಜಾ-ಪುತ್ರನೆ ಪರಮಪವಿತ್ರ ಸುಚರಿತ್ರನೆ 2ಸುರಲೋಕವನುಕಾವಧುರಧೀರ ಪ್ರಭು ನಿನಗೀನರಲೋಕವನು ಕಾವದುರು ಕಷ್ಟವೇನುಪರಿಶುದ್ಧ ಸ್ಥಾನಿಕಧರಣೀಸುರಕುಲ-ಗುರುವೆಂದು ಚರಣಕ್ಕೆ ಶರಣಾಗತನಾದೆ 3ಸಾಕುವಾತನು ನೀನೆ ಸಲಹುವಾತನು ನೀನೆಬೇಕು ಬೇಡೆಂಬುವರ ನಾ ಕಾಣೆ ದೊರೆಯೆಲೋಕೇಶ ಸುಕುಮಾರ ಶೋಕಮೋಹವಿದೂರನೀಕರಿಸದೆಯೆನ್ನ ಸ್ವೀಕಾರ ಮಾಡಯ್ಯ 4ಪೃಥ್ವಿಯೊಳ್ಪಾವಂಜೆ ಕ್ಷೇತ್ರಾಧಿವಾಸನೆಸುತ್ರಾಮಾದಿ ಸುರಮೊತ್ತ ಪೂಜಿತನೆಕರ್ತಲಕ್ಷ್ಮೀನಾರಾಯಣನ ಸಾರೂಪ್ಯನೇದೈತ್ಯದಲ್ಲಣ ವಲ್ಲೀದೇವಿ ಮನೋಹರನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ