ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಈ) ತಾತ್ವಿಕ ಕೃತಿಗಳು ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಪ ರಾಮಾನುಜ ಬೆಳೆದ ಧರೆಯೊಳಗೆ ಅ.ಪ ನಾರದ ಬಿತ್ತಿದ ನಾರಾಯಣ ಬೀಜಕೆ ಧೀರಾಂಬರೀಷನು ಗೊಬ್ಬರವಾದ ಕು- ಮಾರ ಪ್ರಹ್ಲಾದನು ನೀರಾಗೆರೆದ ಆ ರುಕುಮಾಂಗದ ಗಾಳಿಯಾದ1 ನಾರಾಯಣನೆಂಬ ಬೀಜಮಂತ್ರವು ಕು- ವರ ಧ್ರುವನ ಕಾವಲಿನಲ್ಲಿ ಸರಸರ ಬೆಳೆಯಿತು ಆಳುವಾರರು ಭೂ ಸುರ ಭಾಗವತರುಗಳಲಿ 2 ರಮಾನುಜನಿದರ ಒಕ್ಕಣೆಮಾಡಿ ಸಮಾನತೆಯಿಂದ ಹಂಚಿದನು ಶ್ರಿಮಣಿಯಲ್ಲಿ ತುಂಬಿದನು ಸಮಾನ ವೇದವೆನಿಸಿದನು 3 ಹಬ್ಬಿತು ಹರಡಿತು ಧರೆಯೆಲ್ಲ ಉಬ್ಬಿತು ಉಲಿಯಿತು ಗಿರಿಯೆಲ್ಲ ಅಬ್ಬಬ್ಬ ಜಾಜಿಪುರೀಶ ಕೇಶವನಾಮವು ಹಬ್ಬವಾಯಿತು ನಮಗೆಲ್ಲ 4
--------------
ನಾರಾಯಣಶರ್ಮರು
ಕಣ್ಣ ಹಬ್ಬವಾಯಿತು ಎನಗಿಂದು ಧನ್ಯಧನ್ಯಗೈಸಿದ ದೀನಬಂಧು ಧ್ರುವ ತುಂಬಿತುಳುಕುತಲ್ಯದ ಬ್ರಹ್ಮಾನಂದ ಹಂಬಲಿಟ್ಟು ನೋಡನುಭವದಿಂದ ಗುಂಭಗುರತವಾಗದೇ ನಿಜಾನಂದ ನಂಬಿ ನಡಿಯಲಿಕ್ಕಿದೆ ಬಲು ಚಂದ 1 ಕಣ್ಣು ಮುಟ್ಟಿನೋಡಲು ಖೂನಗೊಟ್ಟು ಪುಣ್ಯ ಹೊಳೆಯುತಲ್ಯದೆ ಎದುರಿಟ್ಟು ಎನ್ನ ಮ್ಯಾಲೆ ಸದ್ಗುರು ದಯವಿಟ್ಟು ಚಿನ್ನುಮಯದೋರಿದ ನಿಜಗುಟ್ಟು 2 ಹೇಳಲಿನ್ನೇನದನುಭವಸುಖಾ ಥಳಥಳಗುಡುತದೆ ಕೌತುಕಾ ಕೇಳಿಕೋ ಬೇಕಿದುವೆ ಗುರುಮುಖಾ ಹೇಳಿಕುಡುವ ಮಹಿಪತಿಗುರು ಥೋಕಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಬ್ಬವೆನಗಿಂದು ಧರೆಯೊಳು ನೋಡಿ ಇಬ್ಬರೊಂದಾದ ನೆಲೆನಿಜಗೂಡಿ ಉಬ್ಬಿ ಉನ್ಮನವಾಗಿ ಎನ್ನೊಳು ಕೊಬ್ಬಿದೆನು ಘನಸುಖ ಬೆರದಾಡಿ 1 ಉಬ್ಬಸೆನಗಿನ್ನು ಹಿಂಗಿತು ನೋಡಿ ಹಬ್ಬದೂಟದ ಸವಿರಸಗೂಡಿ ಹಬ್ಬಿಹವಣಿಸಿ ಬೀಳುವ ಗರ್ಭಪಾಶವನೆಗಳೆದೆನು ಈಡ್ಯಾಡಿ 2 ಹಬ್ಬವಾಯಿತು ಮಹಿಪತಿಗಿಂದು ಒಬ್ಬನಿಜವಾದ ಗುರು ಕೃಪಾಸಿಂಧು ಹಬ್ಬಹರುಷದಿ ನೆಲೆನಿಭಗೊಂಡಿÀನ್ನು ಶೋಭಿಸಿತು ಶುಭಕರ ದಿವಸಿಂದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು