ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

5. ವಿಶಿಷ್ಟ ಗೀತೆಗಳು ಭ್ರಮರಗೀತೆ 92 ಭೃಂಗಾ ನಿನ್ನಟ್ಟಿದನೇ ಶ್ರೀರಂಗ ಮಧುರೆಲಿ ನಿಂದುಅಂಗಜಲುಬ್ಧಕ ಪೂಗೋಲಂಗಳ ತಡೆಯನಿಕ್ಕಿಅಂಗನೇರೆಂಬೋ ಹುಲ್ಲೆ ಮೃಗಂಗಳಿಗೆ ಗುರಿಯೆಚ್ಚುಹಿಂಗಿಸುತೈಧಾನೆ ಅಸುವ ಹೇ ಕಿತವಾ ಪ ನಿನ್ನ ನೋಡೆ ನಮ್ಮ ಅಚ್ಯುತನ್ನ ಕಂಡಂತಾಯಿತಯ್ಯಚನ್ನಿಗರರಸ ಕುಶಲೋನ್ನತಿಯೊಳಹನೇನೋಚಿಣ್ಣತನ ಮೊದಲಾಗವನ್ನ ಕಿತವ ಬಲ್ಲೆವೋಗನ್ನಗಾರ ಚಿತ್ತ ಚೋರನ್ನ ಶ್ರೀ ಹರಿಯಾಮನ್ನಣೆಗೆ ಮೆಚ್ಚಿ ತನುವನ್ನೊಪ್ಪಿಸಿದ ಮುಗುದೆವೆಣ್ಣುಗಳ ವಿರಹಾಬ್ಧಿಯನ್ನೆ ದಾಟಿಸುವೆನೆಂದುತನ್ನ ನೇಹವೆಂಬೋ ನಾವೆಯನ್ನೇರಿಸಿ ಮೋಸದಿನಡುನೀರೊಳು ತೊರೆದ್ಹೋದನೆ ಹೇ ಕಿತವಾ 1 ತಮ್ಮ ನಂದಗೋಪ ಯಶೋದಮ್ಮನ ಕಂಡುಬಾರೆಂದುರಮ್ಮ್ಮೆಯ ರಮಣ ನಿನ್ನನೊಮ್ಮೆ ಕಳುಹಿದನೈಸೆಹಮ್ಮುಗೆಟ್ಟಾರಮ್ಮಣೇರಿಂದುಮ್ಮಳಿಸುವೆವೊ ವೃಥಾನಮ್ಮ ಹಂಬಲಿನ್ನೇನವಗೆ ಶ್ರೀ ಹರಿಗೆಹೊಮ್ಮೇಲಟ್ಟದಲಂಚೆಯಗಮ್ಮನೇರ ಕುಚದ ಕುಂ-ಕುಮ್ಮ ಕಸ್ತೂರಿಯ ಕರದಿಮ್ಮನದಿ ಸಿಲುಕಿದಂಗೆಕಮ್ಮಗೋಲನ ಬಾಣಂಗಳುಮ್ಮಳಿ ನೋಯಿಸುತಿವೆಸುಮ್ಮನೆ ಬಾಹೋದು ಸುಲಭವೆ ಹೇ ಕಿತವಾ2 ಮಧುವೈರಿ ಮೇದಿನಿ ನಿಟ್ಟಿಸಲಾಗಮೃದುವಾಕ್ಯದೊಳೆಮ್ಮಪ್ಪಿ ಅಧರಾಮೃತ ಭೋಜನಕ್ಕೊದಗುವ ಸತತ ಸನ್ನದ್ಧ ನಮ್ಮನಗಲಿ ಕಲ್ಲೆದೆಯಾದನೆಂತೋ ಕೃಪಾಳು ಹೇ ಕಿತವಾ 3 ಮಜ್ಜನ ಸಾಯುಜ್ಯ ಸುಖವತ್ತಲಿಪ್ಪುದೂ ಶ್ರೀ ಹರಿಯಅಬ್ಜಭವ ಮುನಿಜನ ಪೂಜ್ಯನಗಲಿದ ಮ್ಯಾಲೆನಿರ್ಜೀವಿಗಳಾಗಿ ಕಣ್ಣ ಕಜ್ಜಲ ಕಲಕಿಕೊಂಡುಲಜ್ಜೆಗೆಟ್ಟು ತನುಲತೆ ಜರ್ಝರಿತದಿ ಜೀವಿಸೆವಜ್ಜರೆದೆಯಲ್ಲವೆ ನಮ್ಮದು ಹೇ ಕಿತವಾ 4 ಕೌಸ್ತುಭ ವೈಜಯಂತಿ ಮಾಲೆಶ್ರೀ ತುಲಸಿ ಘಮಘಮಿಸುತ್ತಲಿಹ ವನಮಾಲೆರತುನ ಕಂಕಣ ಭುಜಕೀರ್ತಿಯಿಂದೊಪ್ಪುವ ಪುರುಷೋತ್ತಮನ್ನ ಬಣ್ಣಿಪರುಂಟೇ ಹೇ ಕಿತವಾ 5 ಉತ್ಪಲ ಶ್ಯಾಮಲ ಮುದವೆತ್ತ ಬಾವನ್ನವದೀಡಿಅತ್ಯಮಲ ಪೊನ್ನಂಬರ ಸುತ್ತಿದಮತ್ತಾ ನೂಪುರ ಝಣತ್ಕಾರದಿ ಮಿಂಚಿಯೆಮ್ಮಚಿತ್ತಶಿಖಿಗೆ ಪೀಯೂಷಸಿಕ್ತ ಮೇಘದಂತೆ ಒಪ್ಪುವ ಶ್ರೀಹರಿಯಹೆತ್ತ ತಾಯಿ ಆಪ್ತ ಬಂಧು ಗೋತ್ರ ಗತಿ ನೀನೆ ನಮ್ಮ ಚಿತ್ತವೆಂದು ನಂಬಿ ತನ್ನ ಹತ್ತಿಲಿ ಸಾರಿದವರಒತ್ತಿ ತಾಂ ರಥವನೇರಿ ಸತ್ವರ ಬರುವೆನೆಂದುಮತ್ತಕ್ರೂರನೊಡನೈದಿದ ಹೇ ಕಿತವಾ 6 ಲಕ್ಷುಮಿರಮಣನವ ಸೂಕ್ಷುಮ ಗೊಲ್ಲತೇರಾವುಕುಕ್ಷಿಯೊಳು ಬೊಮ್ಮಾಂಡವವಗೆ ಮಕ್ಷಿಕಗಳಂತಿಪ್ಪೆವುಮೋಕ್ಷದರಸನು ಅವ ಗೋಕ್ಷೀರದಿ ತೃಪ್ತರಾವುಲಕ್ಷಿಸುವದೆಂತೋ ಎಮ್ಮನು ಶ್ರೀ ಹರಿಯುರಕ್ಷಿಸಲುದಿಸಿ ಜನರಕ್ಷಣೆಗೆ ಪಾಲÉ್ಬಣ್ಣೆಯಭಕ್ಷಿಸಿ ನಿರುತ ನಮ್ಮ ಅಕ್ಷಿಗೆ ಹಬ್ಬವನುಣಿಸಿಈ ಕ್ಷೋಣಿ ಚರಾಚರ ದೀಕ್ಷಿಗೆ ನರರ ಸಾಮ್ಯವಕ್ಷ(ಮ)ಣರಾದೆವೊ ಮೂರ್ಖರೋ ಹೇ ಕಿತವಾ 7 ಸಿರಿ ಮಂದರೋದ್ಧರನಂಘ್ರಿಯಪೊಂದುವ ಭಾಗ್ಯಕ್ಕೆಣೆ ಉಂಟೆ ಶ್ರೀಹರಿಯಅಂದೆಮ್ಮೊಳು ರಾಸಕ್ರೀಡೆಯಿಂದ ಬಂದಪರಾಧವ-ನೊಂದನೆಣಿಸದೆ ಸಲಹೆಂದು ಬಿನ್ನೈಸಿ ಸಾಷ್ಟಾಂಗದಿಂದವಂದಿಪೆವೋ ಭಕ್ತ ಬಂಧುವಿಗೆ ನಮ್ಮ ಹೃದಯ ಮಂದಿರದೊಳೆಂದೆಂದಿರೆಂದು ಹೇ ಕಿತವಾ 8 ಹೆಂಗಳೇರೊಂದಾಗಿ ಅಂತರಂಗದರಸನಾಡಿದಮಂಗಳಚರಿತೆಯನ್ನು ಸಂಗೀತದಿಂ ಪೊಗಳುತ್ತಕಂಗಳಶ್ರುಗಳೆವುತ್ತ ಇಂಗಿತಜ್ಞ ದೇವ-ನಂಗಸಂಗದ ಸುಖವ ನೆನೆದು ಶ್ರೀಹರಿಯಮಂಗಳ ವೇದಸ್ತೇಯಾರಿ ಶೃಂಗಾರ ಕೂರವ ನಮ್ಮಪೊಂಗಣ್ಣನ ಸೀಳ್ದ ನರಸಿಂಗ ವಟು ಭಾರ್ಗವನೆಅಂಗದ ಪಾರ್ಥ ಕಂಬುತುರಂಗಪ ರಂಗವಿಠಲತುಂಗ ಮಹಿಮ ನಮೋ ಎಂಬೆವೋ ಹೇ ಕಿತವಾ 9
--------------
ಶ್ರೀಪಾದರಾಜರು
ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ ಪ ಎನ್ನ ಪುಣ್ಯಗಳಿಂದ ಈ ಪರಿಯುಂಟೇನೊ ನಿನ್ನದೆ ಸಕಲ ಸಂಪತ್ತು ಅ.ಪ ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕಿನ್ನು ತಬ್ಬಿಬ್ಬುಗೊಂಡನೊ ಹಿಂದೆ ನಿಬ್ಬರದಿಂದಲಿ ಸರ್ವರ ಕೂಡುಂಬೊ ಹಬ್ಬವನುಣಿಸುವಿ ಹರಿಯೆ 1 ಸಂಜೆತನಕವಿದ್ದು ಸಣ್ಣ ಸೌಟಿನ ತುಂಬ ಗಂಜಿ ಕಾಣದೆ ಬಳಲಿದೆನೋ ವ್ಯಂಜನ ಮೊದಲಾದ ನಾನಾ ರಸಂಗಳು ಭುಂಜಿಸುವುದು ಮತ್ತೇನೊ2 ಜೀರ್ಣ ಮಲಿನ ವಸ್ತ್ರ ಕಾಣದ ನರನಿಗೆ ಊರ್ಣ ವಿಚಿತ್ರ ಸುವಸನ ವರ್ಣವರ್ಣದಿಂದ ಬಾಹೋದದೇನೊ ಸಂ ಪೂರ್ಣಗುಣಾರ್ಣವ ದೇವ 3 ನೀಚೋಚ್ಚ ತಿಳಿಯದೆ ಸರ್ವರ ಚರಣಕ್ಕೆ ಚಾಚಿದೆ ನೊಸಲ ಹಸ್ತಗಳ ಯೋಚಿಸಿ ನೋಡಲು ಸೋಜಿಗವಾಗಿದೆ ವಾಚಕ್ಕೆ ನಿಲುಕದು ಹರಿಯೆ 4 ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯಗಾಣೆ ಸತ್ಪಾತ್ರ ಕೂಡುಂಬೊ ಪದ್ಧತಿ ನೋಡೊ ಪುಣ್ಯಾತ್ಮ 5 ಮನೆ ಮನೆ ತಿರಿದರು ಕಾಸು ಪುಟ್ಟದೆ ಸು ಮ್ಮನೆ ಚಾಲ್ವರಿದು ಬಳಲಿದೆನೊ ಹಣ ಹೊನ್ನು ದ್ರವ್ಯಂಗಳಿದ್ದಲ್ಲಿಗೆ ತನಗೆ ತಾನೆ ಪ್ರಾಪ್ತಿ ನೋಡೊ ಜೀಯಾ 6 ವೈದಿಕ ಪದವಿಯನೀವಗೆ ಲೌಕಿಕ ಐದಿಸುವುದು ಬಹು ಖ್ಯಾತೆ ಮೈದುನಗೊಲಿದ ಶ್ರೀ ವಿಜಯವಿಠ್ಠಲನ ನಿನ್ನ ಪಾದಸಾಕ್ಷಿಯನುಭವವೊ 7
--------------
ವಿಜಯದಾಸ
ಹಬ್ಬವನು ಮಾಡಿದನು ಗುರುರಾಯ ಇಬ್ಬರೊಡಗೂಡಿಸುವದಿಂಗಿತದ ನೆಲೆಯರಿದು ಪ ಶ್ರವಣದಕ್ಷತೆ ಕೊಟ್ಟು ಪರಮಾರ್ಥ ದೌತಣದಿ | ಅವನಿಯೊಳು ಪರಮ ಕರುಣ ಸ್ನೇಹದಿ | ಸುವಿವೇಕ ವೈರಾಗ್ಯ ವೆಂಬ ಜಲ ಸಮಬೆರಸಿ | ತವಕದಲಿ ಮಜ್ಜನವ ಗೈಸಿದನು ಮುದದಿ 1 ಸ್ಥಿರ ಚಿತ್ತ ದಾಸನದಿ ಕುಳ್ಳಿರಿಸಿ ಸದ್ಭಾವ ಬೋಧ ಸುಧೆಯಾ ಪರಿ ಪರಿಯಲುಣಿಸಿ ಅಪರೋಕ್ಷದನುಭವ ಕಲಶ ನೆರೆವಿಡಿಸಿ ಕೈದೊಳಿಸಿ ಭವದೆಂಜಲ ಗೆಳಸೀ 2 ಸಹಜಾವಸ್ಥೆ ತಾಂಬೂಲವನು ಕರದಿತ್ತು | ವಿಹರಿಸುತ ನಿರ್ವಿಕಲ್ಪ ಸಮಾಧಿಯಾ | ವಿಹಿತದುಡುಗೊರೆ ಹೆಗಲಲಿಪೊದಿಸಿ ಪಾಲಿಸಿದ | ಮಹಿಪತಿ ಸ್ವಾಮಿ ನಂದನಗ ದಯ ಬೀರಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು