ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗದಾಭಿರಾಮನಿಗೆ ಮಿಗಿಲಾರು ಲೋಕದೊಳಗೆ ಪ ವರ ವಾಲ್ಮೀಕಿ ಮುನಿಯು ಮುರನೆಂದು ಸ್ಮರಿಸಿದದಕೆ ಕರುಣಾಳು ನೀನಾವದಕೆ ತ್ವರ ಕೃಪೆಯ ಮಾಡಿದದಕೆ 1 ಪರಮಾಂಜನೆಯ ಸುತಗೆ ಸ್ಥಿರ ಪದವಿಯ ನಿತ್ತದದಕೆ ಧರಣೀಶ ತವ ಚರಣಕೆ ಶಿರಬಾಗಿ ಬೀಳ್ವದದಕೆ 2 ಪಾದ ಸೋಕಿಂದದಕೆ ಘನ ಶಿಲೆ ವನಿತೆಯಾದದಕೆ ಹನುಮೇಶವಿಠಲನೆಂಬೋದಕೆ ಅನುಮಾನಬಾರದದಕೆ 3
--------------
ಹನುಮೇಶವಿಠಲ
ನೀರಜಾಕ್ಷ ನಿರ್ದಯವ್ಯಾಕೊ ಕರುಣದಿ ಎನ್ನಾ ಪ ಒಡಲಿಗನ್ನಾ ತೊಡಲು ಅರಿವೆ ಕೊಡುವವರನು ನಾ ಕಾಣೆ ಹರಿಯೇ ಬಡತನ ಕಂಗೆಡಿಸಿತೋ ಕಡೆಗ್ಹಾಯಿಸಯ್ಯ ತ್ವರದಿ ಗುಣಮಣಿಯೇ 1 ಖೂಳ ಜನರ ಆಳಾಗಿ ನಾ ಹಾಳು ಒಡಲನ್ನು ಹೊರೆಯಲಾರೇ ಕೂಳಿಗೋಸುಗ ಬಾಳಾಯ್ತೀಪರಿ ತಾಳಲಾರೆ ಕಾಯೋ ಮುರಾರೇ2 ನೀ ಕೈಬಿಡಬ್ಯಾಡೋ ಶ್ರೀ ಹನುಮೇಶವಿಠಲನೆ ಎನ್ನಾ ಇಷ್ಟದಂದರಿ ಥಟ್ಟನೆ ಮಾಡೋ 3
--------------
ಹನುಮೇಶವಿಠಲ
ಸತ್ಯಜ್ಞಾನ ತೀರ್ಥರಿತ್ತರಂಕಿತವನ್ನು ಇನ್ನೇನಿನ್ನೇನು ನಿತ್ಯ ಹರಿಯ ಭಜಿಸುವ ಅಧಿಕಾರಿಯಾದೆನಿನ್ನೇನಿನ್ನೇನು 1 ಕಷ್ಟಬಟ್ಟ ದಿವ್ಯ ಶ್ರೇಷ್ಠಮಾರ್ಗವು ಸಿಕ್ಕಿತಿನ್ನೇನಿನ್ನೇನು ಎಷ್ಟು ಪೇಳಲಿ ಎನ್ನಾದೃಷ್ಟವು ತೆರೆಯಿತು ಇನ್ನೇನಿನ್ನೇನು 2 ಹನುಮೇಶವಿಠಲನೆಂಬೊ ನಾಮ ಅಂಕಿತವಿತ್ತರಿನ್ನೇನಿನ್ನೇನು ದಿನವು ದೈವಗಳಿಗೆ ನಮಿಸಿ ಬೇಡ್ವದು ತಪ್ಪಿತಿನ್ನೇನಿನ್ನೇನು 3
--------------
ಹನುಮೇಶವಿಠಲ