ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀ ಕರುಣಿಸದಿರೆ ಸಾಕುವರ್ಯಾರು ದಯಾಕರ ಮೂರುತಿ ರಾಘವೇಂದ್ರ ಪ ಪಾರು ಮಾಡೊ ಸಂಸಾರಭವದಿ ಅ- ಪಾರ ಮಹಿಮ ಗುರು ರಾಘವೇಂದ್ರಾ ದೂರ ನೋಡಿದರೆ ಬಿಡಿಸೋ ತವ ಚರ- ಣಾರವಿಂದಕೆ ಕೊರಳನು ಕಟ್ಟಿಸೊ 1 ಒಡವೆ ವಸ್ತುಗಳ ಮಡದಿ ಮಕ್ಕಳ ಕೊಡು ಎನುತಲಿ ಬೇಡುವುದಿಲ್ಲ ಒಡೆÉಯನೆ ನಿನ್ನಯ ಅಡಿಗಳಲಿ ದೃಢ ಭಕುತಿಯ ಕೊಡದಿರೆ ಬಿಟ್ಟವನಲ್ಲ 2 ನರರ ಸೇವೆಯಾ ಬಿಡಿಸೋ ಹರಿವಾಯುಗಳ ಸೇವೆಯಾ ಹಿಡಿಸೊ ವರದ ಹನುಮೇಶವಿಠಲನಾ ಸರ್ವೋತ್ತಮನೆಂದು ಕರೆದವನೆ 3
--------------
ಹನುಮೇಶವಿಠಲ
ಮಂಗಳ ಶ್ರೀ ಯತಿವರಗೆ ಮಂಗಳ ಶ್ರೀ ಹರಿಸುತಗೆ ಶೋಣಿತ ಪುರಧೀಶÀಗೆ ಮಂಗಳ ಗುರುವರಗೆ ಪ ಹರಿಸರ್ವೋತ್ತಮನೆಂದು ಪರಮ ಭಕ್ತಯಲಿಂದು ಹರುಷದಿ ಶ್ರೀ ನರಹರಿಯನು ಖಂಬದಿ ತ್ವರದಲಿ ಕರೆದವಗೆ 1 ಪರಿಮಳ ಗ್ರಂಥವ ಮಾಡಿ ಹರಿಯ ಪಾದಕೆ ನೀಡಿ ಪರಮ ಸುಧೀಂದ್ರರ ಕರದಲಿ ಯತಿ ಆಶ್ರಮ ಪಡೆದವಗೆ 2 ಭಕ್ತರ ಭಾಗ್ಯನಿಧಿಗೆ ನಿತ್ಯಸುಖಾ ಪಡೆದವಗೆ ಮುಕ್ತಿಯ ದ್ವಾರವ ತೋರುವ ಗುರುರಾಘವೇಂದ್ರನಿಗೆ 3 ಕರುಣಾಸಾಗರನೀತಾ ಕರೆದಲ್ಲೆ ಬರುವಾತಾ ಪೊರೆಯಂದೊದರಲು ಭಕ್ತರ ಪಿಡಿಯುವ ಮೀರದೇ ಕಾಯ್ವವಗೆ 4 ವರಧೀರ ಹನುಮೇಶವಿಠಲನಾ ನಿಜದಾಸಾ ಸರಸದಿ ಅರ್ಚನೆಗೊಳ್ಳುವ ಮಂತ್ರಾಲಯ ಪುರವಾಸನಿಗೆ 5
--------------
ಹನುಮೇಶವಿಠಲ