ಒಟ್ಟು 7 ಕಡೆಗಳಲ್ಲಿ , 2 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಬಾಲಕೃಷ್ಣ ವರ್ಣನೆ) ಕಂಸಾರಿ ಕೃಷ್ಣಾ ಕಾಡದಿರೆನ್ನನು ಪ ಹಳ್ಳದ ತಡಿಯಲ್ಲಿ ಮಳಲು ತೋಡಿ ತೋಡಿ ಗೊಲ್ಲಿತೆರೊಡÀನಾಡಿ ಕಲಿತ್ಯೋ ಬೆಡಗಾ ಅಹಿನೇರಿ ಹುಡುಗಾ ಮಾಡಿದಿ ತುಡುಗಾ 1 ನೀರಿಗ್ಹೋಗುವಾಗ ದಾರಿಗಡ್ಡಕಟ್ಟಿ ನಾರಿ ನೀನಾರೆಂದ್ವಿಚಾರಿಸುವೀ ದೂರದಲ್ಲಿರುವಿ ಬದಿಯಲ್ಲಿ ಬರುವಿ ಬೇರೆ ಕರೆವೆ ಈ ಬುದ್ಧಿ ತರವೆ 2 ವರ ಕದರುಂಡಲಗಿ ಹನುಮಯ್ಯನೊಡೆಯನೆ ನಿನಗೆಣೆಯಿಲ್ಲವೊ ವನಜನಾಭಾ ವನಿತೆಯರೆಲ್ಲಾ ಒಲಿಸಿದೆಯಲ್ಲಾ ಮನುಜನಲ್ಲಾ ಮಾಯದ ಗೊಲ್ಲಾ 3
--------------
ಕದರುಂಡಲಗಿ ಹನುಮಯ್ಯ
100(ಅ) ತುಳಸಿದೇವಿ ಶರಣು ಹೊಕ್ಕೆನು ಕಾಯೆ ಶ್ರೀ ತುಳಸಿ ತಾಯೆ ನಾರಾಯಣನ ಪ್ರೀಯೇ ತರಣಿಕೋಟಿ ದಿವ್ಯ ಪ್ರಕಾಶ ಹರಿಚರಣಕಮಲಕಾಭರಣಿಯೆನಿಪಳೆ ಪ ಉದಧಿಯೊಳುದಿಸಿದಮೃತವ ಮುದದಿಂದಲಿ ಶ್ರೀಧರನು ನೋಡಿ ಸ್ವೀಕಾರವನು ಮಾಡಿ ಆ- ನಂದಲಾನಂದ ಬಾಷ್ಪಗಳು ಉದುರಲಕ್ಷಿಯೊಳು ಉದುಭವಿಸಿದೆಯೆ ನೀನು ಪದುಮಮುಖಿಯೆ ನಿಮ್ಮ ಅದುಭುತ ಮಹಿಮೆಯು ಪದ ಕವಿಗಳಿಗೆಲ್ಲ ಪೊಗಳಲಸಾಧ್ಯ 1 ನಿಮ್ಮ ಮೂಲ ಮಧ್ಯಾಗ್ರದಲಿ ಬ್ರಹ್ಮಾದಿ ಸುರರು ಸುಮ್ಮನದಿಂದ ಒಲಿದಿಹರು ಒಮ್ಮನದಿಂದ ಸ್ತುತಿಸಲು ಶುಭಗುಣವಂತೆ ಧರ್ಮಾರ್ಥ ಕಾಮ ಮೋಕ್ಷಗಳ ಗಮ್ಮನೆ ಕೊಡುವ ನಮ್ಮಮ್ಮಗೊಲಿದು ನಿನ್ನಮ್ಮಿದವರಿಗಾಧರ್ಮದ ನಿಧನೆ (?) 2 ನಿಷ್ಠೀಲಿ ನಿಮ್ಮ ಭಜಿಸುವ ಭಕುತರಿಗೆ ಬಂದ ಕಷ್ಟವ ಕಳೆದು ಕೈವಿಡಿದು ದುಷ್ಟ ಸಂಗವನೆ ಬಿಡಿಸಿ ಇಹಪರದಲ್ಲಿ ವಿಷ್ಣುಭಕ್ತರಿವರೆಂದೆನಿಸಿ ಶ್ರೇಷ್ಟ ಕದುರುಂಡಲಗಿ ಹನುಮಯ್ಯನೊಡೆಯನು ಶ್ರೀ- ಕೃಷ್ಣನ ಲೋಕದಿ ಸಂತುಷ್ಟಬಡಿಸುವಾ 3
--------------
ಕದರುಂಡಲಗಿ ಹನುಮಯ್ಯ
ಬಾಯಿ ತೆರೆದ ಬಗಿಯೇನೊ ದೇವದೇವ ತೋಯಜದಳ ನೇತ್ರನೆ ನೀಯೆನಗಿದು ಪೇಳೈ ನಿಜವಾಗಿ ಲಕ್ಷ್ಮೀನಾ ರಾಯಣ ನರಸಿಂಹನೆ ಪ ಅಸುರನ ಉದರವ ಹಸನಾಗಿ ಬಗೆವಾಗ ಬಾಯ ತೆರೆದಿಯಾ ಬಿಸಜ ಭವಾಂಡವು ಬಸುರೊಳಗಿದ್ದ ಉ- ಬ್ಬಸಿಗೆ ಬಾಯ ತೆರೆದಿಯೊ 1 ಮಡದೀಯ ರೂಪಕ್ಕೆ ಮರುಳಾಗಿ ಅದರಿಂದ ಬಿಡದೆ ಬಾಯ ತೆರೆದಿಯಾ ದೃಢದಿ ಪ್ರಹ್ಲಾದನ ಒಡೆಯ ರಕ್ಷಿಸೊ ನುಡಿಗೆ ಬಾಯ ತೆರೆದಿಯೊ 2 ಗುರು ಸತ್ಯಬೋಧರಾಯರ ನಿತ್ಯಭಜನೆಗೆ ಬರಿದೆ ಬಾಯ ತೆರೆದಿಯೊ ವರ ಕದರುಂಡಲಗಿ ಹನುಮಯ್ಯನೊಡೆಯನೆ ಕರವ ಮುಗಿವೆ ಕರುಣಿಸೊ 3
--------------
ಕದರುಂಡಲಗಿ ಹನುಮಯ್ಯ
ಮರೆಯದಿರು ಹರಿಯಮರೆವರೆ ಮೂರು ಲೋಕದ ದೊರಿಯ ಪ ಮದಗಜ ಹರಿಯೆಂದು ಕರೆಯಲುಒದಗಿ ಆಕ್ಷಣ ಬಂದುಮುದದಿ ನಕ್ರನ ಕೊಂದು ಸಲ-ಹಿದ ಸದ್ಭಕ್ತರ ಬಂಧುಹದುಳ ಪ್ರಹ್ಲಾದನ ಹೆದರಿಸಿದಸುರನಉದರವ ಬಗೆದಂಥದುಭುತ ಮಹಿಮನ1 ನಾರಿಯು ತನ್ನ ಕರೆದ ಮಾತ್ರದಿಸೀರೆಯ ಮಳೆಗರೆದಕ್ರೂರ ಖಳನ ತರಿದು ಆ ಪಾಂಡವರಆರಣ್ಯದಿ ಪೊರೆದಗಾರಾದಜಮಿಳ ನಾರಗ ಎನಲುಪಾರಗಾಣಿಸಿದಪಾರ ಗುಣನಿಧಿಯ 2 ದುರಿತ ಭವ ಪಾಶಾ - ಅವಗೆಂದೆಂದಿಗಿಲ್ಲ ಕ್ಷೇಶಾತಂದೆ ಕದರುಂಡಲಗಿ ಹನುಮಯ್ಯನೊಡೆಯಚಂದಾದಿಕೇಶವನ ನೆನೆದವರೆಂದಿಗು ಧನ್ಯರು3
--------------
ಕನಕದಾಸ
ಮುದದಿ ನಕ್ರನ ಕೊಂದು ಸಲಹಿದ ಸದುಭಕುತರ ಬಂಧು 1 ನಾರಿಯು ತನ್ನ ಕರೆದಾ ಮಾತ್ರದಿ ಸೀರೆಯ ಮಳೆಗರೆದಾ ಕ್ರೂರ ಖಳರ ಮುರಿದಾ ಪಾಂಡವ- ರಾರಣ್ಯದಿ ಪೊರೆದಾ ನಾರಗೆ ಅಜಮಿಳ ನಾರಾಯಣನೆನೆ ಪಾರುಗಾಣಿಸಿದಪಾರಗುಣನಿಧಿಯಾ 2 ಒಂದು ಬಾರಿಗೆ ಶ್ರೀಶನ ನೆನೆದರೆ ದುರಿತ ನಾಶಾ ಬೆಂದದ್ದು ಬಹುಪಾಶಾ ಅವಗಿ- ನ್ನೆಂದಿಗಿಲ್ಲವೊ ಕ್ಲೇಶಾ ತಂದೆ ಕದರಂಡಲಗಿ ಹನುಮಯ್ಯನೊಡೆಯ ಗೋ- ವಿಂದನ ನೆನೆದವರೆಂದಿಗು ಧನ್ಯರು 3
--------------
ಕದರುಂಡಲಗಿ ಹನುಮಯ್ಯ
ಲಕ್ಷ್ಮೀದೇವಿ ನಮಿಸುವೆ ನಮ್ಮಮ್ಮ ಅಮಿತ ಮಹಿಮಳೇ ಆದಿ ಲಕುಮಿಯೇ ಅನುದಿನ ಸಲಹಮ್ಮ 1 ಅಜತ ನಾಮಕನೆ ಆದಿ ದೈವವೆಂದು ತ್ರಿಜಗಮ ತಿಳಿವಂತೆ ನಿಜ ಪುರುಷನಿಗೆ ವನಮಾಲೆಯ ಹಾಕಿ ಭಜಿಸಿದೆ ಬಲವಂತೆ 2 ಕಮಲಜ ಮೊದಲಾದ ಸುಮನಸರಿಂದಲಿ ಕ್ರಮದಿ ಪೂಜೆಗೊಂಬೆ ಸಮನಿಲ್ಲದ ಸೌಭಾಗ್ಯವ ಕೊಡು ನೀ ಮಹ ಜಗದಂಬೆ 3 ಕಮಲವಾರಿಧೆ ಕಮಲಲೋಚನೆ ಕರವೀರ ಪುರಧೀರೆ ವರ ಕದರುಂಡಲಗಿ ಹನುಮಯ್ಯನೊಡೆಯನಉರದೊಳು ಸ್ಥಿರವಾಸೆ 4
--------------
ಕದರುಂಡಲಗಿ ಹನುಮಯ್ಯ
ಸಂಸಾರವೆಂಬ ಸರ್ಪದ ಬಾಧೆಯನ್ನು ಕಂಸಾರಿ ಕೇಳು ಸೈರಿಸಲಾರೆ ಇನ್ನು ಪ ಕಚ್ಚಿ ಬಹುಕಾಲ ಕಡಿಮ್ಯಾಗಲೊಲ್ಲದು ಹೆಚ್ಚುತಲೆ ವೋಗುತಿದೆ ಪೇಳಲೇನು ಅಚ್ಯುತನೆ ನಿಮ್ಮ ನಾಮ ಮಂತ್ರದೌಷಧಿಯನ್ನು ಮುಚ್ಚಿ ಕೊಡುಯೆಂದು ಮನದಲ್ಲಿ ನಿಂದು 1 ಮತ್ತೆ ಮಹಾಪಾಪವೆಂಬ ವಿಷ ತಲೆಗೇರಿ ತತ್ತರಿಸಿ ಕಳವಳಗೊಳಿಸುತಲಿದೆ ಉತ್ತಮರಾ ಜ್ಞಾನವೆಂಬುತ್ತಾರವನೆ ಕೊಟ್ಟು ಹತ್ತುನೂರು ನಾಮದೊಡೆಯ ಹರಿಯೆ ಸಲಹೆನ್ನ 2 ಬೆಂದ ದುರ್ವಿಷಯಗಳು ಹಂದಿನಾಯ್ಗಳಿಗುಂಟು ಎಂದು ದೊರೆವುದೋ ದ್ವಿಜಾಗ್ರಕುಲವು ಎಂದಾದರೂ ಒಮ್ಮೆ ಬಯಸುವಂತಿ ಭಕುತಿ ಕೊಡು ತಂದೆ ಕದರುಂಡಲಗಿ ಹನುಮಯ್ಯನೊಡೆಯಾ 3
--------------
ಕದರುಂಡಲಗಿ ಹನುಮಯ್ಯ