ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಜಯತು ಶುಭಕಾಯ ಜಯಜಯತು ಹರಿಪ್ರೀಯಜಯತು ಜೀಯ ಮಧ್ವಾಖ್ಯಮುನಿರಾಯಪ. ರಾಮಾವತಾರದಲಿ ಹನುಮಂತನಾಗಿ ನೀತಾಮಸನ ಪುರವ ಅನಲಗಾಹುತಿಯನಿತ್ತೆಭೂಮಿಜೆಯ ಕುಶಲವನು ರಘುನಾಥಗರುಹಿದೆಸ್ವಾಮಿಕಾರ್ಯವ ವಹಿಸಿ ಖಳರ ನೀ ತರಿದೆ 1 ದ್ವಾಪರಾಂತ್ಯದಲಿ ಶ್ರೀಕೃಷ್ಣನಂಘ್ರಿಯ ಭಜಿಸಿಪಾಪಿಮಾಗಧ ಬಕ ಕೀಚಕಾದಿಗಳಕೋಪದಿಂದಲಿ ತರಿದು ಕುರುಕುಲವ ನೀನಳಿದೆ ಪ್ರ-ತಾಪದಿಂದಲಿ ಮೆರೆದೆ ಖಳರ ನೀ ಮುರಿದೆ 2 ಮಾಯಿಗಳು ಹೆಚ್ಚಿ ಮತವೆಲ್ಲ ಸಂಕರವಾಗಿತಾಯಿಗಳಿಲ್ಲದ ಶಿಶುಗಳಂತೆ ಸುಜನರಿರಲುನೀಯವತರಿಸಿ ಮತವೆಲ್ಲ ಉದ್ಧರಿಸಿ ನಾ-ರಾಯಣನೆ ಮೂಜಗಕೆ ಪರದೈವವೆಂದೊರೆದೆ 3 ದುರುಳ ವಾದಿಗಳಿಗುತ್ತರವ ಕೊಡಬೇಕೆನುತಸರುವ ಶಾಸ್ತ್ರಾಮೃತವ ಸೃಜಿಸಿ ವಾಕ್ಯಗಳ ಕ್ರೋಡಿಸಿದರುಶನ ಗ್ರಂಥಗಳ ರಚಿಸಿ ಶಿಷ್ಯರಿಗಿತ್ತೆಪರಮ ತತ್ವದ ಖಣಿಯೆ ಗುರುಶಿರೋಮಣಿಯೆ 4 ನಿನ್ನ ಮತವೇ ವೇದಶಾಸ್ತ್ರಗಳ ಸಮ್ಮತವುನಿನ್ನ ಮತವೇ ಇಹಪರಕೆ ಸಾಧನವುಪನ್ನಂಗಶಯನ ಶ್ರೀ ಹಯವದನದಾಸರೊಳುನಿನ್ನ ಪೋಲುವರುಂಟೆ ಮಧ್ವಮುನಿರಾಯ 5
--------------
ವಾದಿರಾಜ
ಶ್ರೀ ವಾಯುದೇವರ ಸ್ತುತಿ ಶ್ರೀಮದಾನಂದ ತೀರ್ಥರೆಂಬ |ಅರ್ಥೀಯ ಪೆಸರುಳ್ಳ |ಗುರುಮಧ್ವಮುನಿರಾಯ |ಏನೆಂಬೆ ನಾನಿನ್ನ ಕರುಣಕೆ ಎಣೆಗಾಣೆ ಪ ಬ್ಯಾಸರದೆ ಸರ್ವರಲ್ಲಿ |ಶ್ವಾಸ ಜಪಗಳ ಮಾಡಿಗುಂ ||ಶ್ರೀಶಗರ್ಪಿಸುತ ಹರಿ |ದಾಸರನ್ನು ಪಾಲಿಸಿದೆ 1 ಅಂದು ಹನುಮಂತನಾಗಿಬಂದು ಸುಗ್ರೀವಗೆ ಗುರುಂ ||ಅಂದವಾದ ಪದವಿತ್ತಾ |ನಂದವನು ಬಡಿಸಿದೆ ಗುರುಂ 2 ಕುಂತಿಯ ಕುಮಾರನಾಗಿ |ಹಂತ ಕೌರವರನ ಕೊಂದಿ ಗುರುಂ ||ಅಂತು ಪುಣ್ಯವ ಶ್ರೀ |ಕಂತು ಪಿತಗರ್ಪಿಸಿದೆಯೋ 3 ಅದ್ವೈತರನು ಕಾದಿ |ಗೆದ್ದು ನಿನ ಭಕ್ತರಿಗೆ ಗುರುಮಧ್ವಮುನಿರಾಯ ||ಶುದ್ಧ ತಾತ್ಪರ್ಯ ವಾಕ್ಯ |ಪದ್ಧತಿಯ ತಿಳಿಸಿದಿ ಗುರುಂ 4 ಗುರುಪ್ರಾಣೇಶ ವಿಠಲಾಪರನೆಂದು ಡಂಗುರವ ಗುರುಂ ||ಸಾರಿಸಿ ಸಜ್ಜನರನ್ನು |ಹರಿಲೋಕ ಸೇರಿಸಿದಿ ಗುರುಂ 5
--------------
ಗುರುಪ್ರಾಣೇಶವಿಠಲರು
ಮಧ್ವಮುನಿಯೆ -ಗುರು- ಮಧ್ವಮುನಿಯೆಪಮಧ್ವಮುನಿ ನಮ್ಮೆಲ್ಲರ | ಉದ್ಧರಿಸುವ ಕಾಣಿರೊ ಅ.ಪಅಂದು ಹನುಮಂತನಾಗಿ | ಬಂದ ರಾಮಪದಾರ-ವಿಂದದಿ ನೆರೆದು ತುಂಬಿಯಂದದಿ ಶೋಭಿಸಿದ 1ಏಣಾಂಕವಂಶದಿ ಪುಟ್ಟಿ | ಕ್ಷೋಣಿಪಾಲಕ ಶಿರೋಮಾಣಿಕ್ಯವಾಗಿ ಹರಿಗೆ | ಪ್ರಾಣನೆಂದೆನಿಸಿಕೊಂಬ 2ಕಟ್ಟಕಡೆಯಲ್ಲಿ ಯೋಗ | ದಿಟ್ಟನಾಗಿಪುರಂದರ|ವಿಠಲಗಾವಾಸವಾದ | ಪೆಟ್ಟಿಗೆಯೊಲೊಪ್ಪುವಂಥ 3
--------------
ಪುರಂದರದಾಸರು