ಯಾಕೆ ರಂಗ ನಿನಗೆ ಮಾಕಾಂತೆಯೊಳು ಗರ್ವ |
ಲೋಕದೊಳು ಅಬಲೆಯೇನೋ ಕೇಳಯ್ಯಾ ನೀನು ಪ
ಮೀನಾವತಾರವ ನೀನಂದು ವಿಡಿದರೆ |
ಮೀನಾಂಬಕಿ ತಾನಾದಳೋ1
ಬೆಟ್ಟವ ಬೆನ್ನಿಲಿ ಕಷ್ಟದಿ ನೆಗೆದರೆ |
ಬಟ್ಟ ಕುಚಗಳ ಹೊತ್ತಳೋ 2
ಧರೆಯ ಭಾರವ ತಾಳಿದರ ನಿನ್ನಾಭಾರವನು |
ಧರಿಸಿದಳಂದಗಲದಲೆ 3
ಸಿಂಹಾನನನಾಗಿ ಮಹಿಮೆ ದೋರಿಸಿದರೆ |
ಸಿಂಹದಂತೆ ನಡು ನಡುವಾದಳೋ 4
ಬಲಿ ಬಾಗಿಲಕಾಯಿದರೆ ನೆಲೆಸಿಹಳವಳಲ್ಲಿ |
ಬಲಿಯಾ ಭಾಗ್ಯ ರೂಪವಾಗಿ5
ಸುರರ ಹೊರಿಯಲಿಕ್ಕೆ ಪರಶವ ಪಿಡಿದರೆ |
ಪರಸಗೈಯ್ಯ ತಾನಾದಳೋ 6
ಹರನಾ ಚಾಪವನೆಗೆದರೆ ಅದನೆವೆ ಮುನ್ನೆ |
ಕರೆದಲೆ ತ್ಯಾಡಿದಳೊ 7
ಸೆರೆಹರಿದು ಸ್ತ್ರೀಯರಾ ತಂದರೆ ನಾರದರಿಂದ |
ಸೆರೆವಿಡಿಸೆ ಕೊಂಡಳೋ 8
ಮುಪ್ಪರ ಹೊಕ್ಕರೆ ನೀವಪ್ಪುತಲಿ ಹನಿನ್ನಾ |
ಮುಪ್ಪುರದಲಿ ಮೆರೆದಳೋ 9
ತುರುಗವ ಏರಿಕೊಂಡು ತಿರುಗಲು ನಿನ್ನಾಕೂಡ |
ತುರಗಮನಿ ತಾನಾದಳೋ 10
ಕಡೆಯಕಾಲಕ ನೀರೊಳೊಡಗೂಡಿ ಮಲಗಲು |
ಒಡನೆ ವಟದೆಲೆ ಯಾದಳೋ11
ಗುರು ಮಹಿಪತಿ ಪ್ರಭು ಚರಿತೆಯಾ ನಿಮ್ಮೀರ್ವರ |
ಭರದಿ ಹೇಳಲೆನ್ನಳವೇ 12