ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಚಮುಖ ಹನÀುಮತೇ ಶರಣುಮಾಂಪಾಹಿ ಪ ಜ್ಞಾನ ಬಲ ರೂಪನೇ ಹನುಮ ಮುಖ್ಯಪ್ರಾಣ ಅನಿಮಿಷವೃಂದದಲಿ ಪ್ರವರನೇ ಶರಣು ಅನುಪಮಾನಂದಮಯ ಅನಘ ಸೀತಾಪತಿಯ ಅನುಪಮ ಮಹಾದಾಸ ಹನುಮ ಪಾಲಯಮಾಂ 1 ನಿರುಪಮಮಹಾತೇಜ ಸರ್ವತೋಮುಖ ಉಗ್ರ ವೀರ ಭೀಕರ ಮೃತ್ಯುಮಾರಕ ಮಹಾವಿಷ್ಣು ನರಸಿಂಹ ಶುಭಕರಗೆ ಪ್ರಿಯತಮನೆ ಶರಣಾದೆ ಕರುಣದಿಂದಲಿ ಎನ್ನ ತ್ರುಟಿ ಬಿಡದೆ ಸಲಹೋ 2 ಬಂಗಾರಮಯ ಸುಧಾ ಪೂರ್ಣ ಕುಂಭವುಕರದಿ ಜಂಗಮದ ಸ್ಥಾವರದ ವಿಷಹರ ಅಭಯದ ಖಗರಾಜನಿಗೆ ವರನೆ ತದ್ರೂಪಮುಖಧರನೆ ಗಮನ ಶ್ರೀಕರನ ಒಲಿಸೆನಗೆ 3 ಅರಿ ಶಂಖಧರ ಅಭಯ ಸದ್ವರಹಸ್ತ ಭೂಮಿಧರ ಸರ್ವವಾಂಛಿತ ಸಿದ್ಧಿದಾತ ಭೂಮ ನಿರ್ಮಲ ಕೋಲ ರೂಪ ಸರ್ವೋತ್ತಮನು ಮನ್ಮನದಿ ಪೊಳೆವಂತೆ ನೀದಯ ಮಾಡೋ 4 ಜ್ಞಾನ ವಿದ್ಯಾಕಾಂತಿ ಪ್ರತಿ ವಾದಿಜಯದಾತ ಮನಬುಧ್ಧಿದೇಹ ದಾರುಢ್ಯ ಸ್ಥೈರ್ಯ ಘನ ಭಕ್ತಿ ಮುಕ್ತಿ ಸಾಧನ ವೀವ ಹಯಶೀರ್ಷ ಪ್ರಸನ್ನ ಶ್ರೀನಿವಾಸನ ಒಲಿಸೆನಗೆ ಗುರುತಮನೇ 5 || ಶ್ರೀ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಕೃಷ್ಣಾರ್ಪಣಮಸ್ತು ||
--------------
ಪ್ರಸನ್ನ ಶ್ರೀನಿವಾಸದಾಸರು