ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಕಲಿಗಾಲದ ಮಹಿಮೆಯ ಗುಟ್ಟು ಮುದಿತನ ಬಂದರೆ ಮಾಯದ ಪೆಟ್ಟು ಪ ವಿಧವೆಯಾದರೆ ತಲೆಯ ಮೇಲ್ಮೊಟ್ಟು ವಿಧುರನಾಗೆ ದುರ್ನೀತಿಯ ಕಟ್ಟು ಅ.ಪ ಕುರುಡನಾದರೆ ಅಣಕದ ಬಾಳು ಅರೆಕಿವುಡಗೆ ಬೈಗುಳ ಕೂಳು ನರಳಿದರೆ ಸಾಯಲಿಲ್ಲವೆಂಬ ಗೀಳು ಕೊರಗಿ ಕಣ್ಣೀರನು ಸುರಿಸುವ ಗೋಳು 1 ಇತ್ತಬಾರದಿರು ಎಂಬರು ಕೆಲರು ಅತ್ತಲೆ ಹೋಗು ಹೋಗೆಂಬರು ಕೆಲರು ಎತ್ತಹೋದರೂ ಬಂದುದೇಕೆಂಬರು ತುತ್ತೊಂದಾದರೂ ಸಿಗದೆಂಬುವರು 2 ಹದ್ದುಹದ್ದೆಂಬುವ ಬಿರುನುಡಿಯಿಂದ ಒದ್ದೋಡಿಸುವಳು ಸೊಸೆ ಮನೆಯಿಂದ ಕದ್ದೋಡುವನು ಮಗ ಭಯದಿಂದ ಮದ್ದುಕೊಡಯ್ಯ ಮಾಂಗಿರಿಯ ಗೋವಿಂದ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೋಲ ಕೋಲೆನ್ನ ಕೋಲ ಕೋಲೆನ್ನ ಕೋಲ ಕೋಲ ಶ್ರೀ ಹರಿಯ ನೆನದೇವ ಕೋಲ ಪ. ನಾರಿಯರಿಬ್ಬರಿಗೆ ಹರಿಯು ಕರೆದು ಮಾತಾಡದ್ಹಾಂಗೆ ನೀರೊಳಗೆ ಹೋಗಿ ಅಡಗಿದ ಕೋಲನೀರೊಳಗೆ ಹೋಗಿ ಅಡಗಿದ ರುಕ್ಮಿಣಿಪೋರತನವೆಂದು ಬಿಡಬೇಕು ಕೋಲ 1 ಕೃಷ್ಣ ನಮ್ಮರಮನೆ ಬಿಟ್ಹೋಗ ಬಾರದೆಂದು ಬೆಟ್ಟವ ಮ್ಯಾಲೆ ಹೊರೆಸಿದ ಕೋಲ ಬೆಟ್ಟವ ಮ್ಯಾಲೆ ಹೊರೆಸಿದ ಸತ್ಯಭಾಮೆಗಟ್ಟಿ ಎದೆಯವಳು ಹೌದು ಹೌದು ಕೋಲ 2 ನೀರಜನಯ್ಯಗೆರಡುಕ್ವಾರಿ ಚಿನ್ಹವ ಮಾಡಿ ಮಾರಿಯ ಗುರುತು ಮರೆಸಿದಿ ಕೋಲ ಮಾರಿಯ ಗುರುತು ಮರೆಸಿದಿ ನೀಲಾದೇವಿಧೈರ್ಯ ವಿನ್ನೆಷ್ಟು ಧಮಕೆಷ್ಟು ಕೋಲ 3 ಹರದೆಯರಿಬ್ಬರು ಹರಿಯ ಕರೆದು ಮಾತಾಡದ್ಹಾಂಗೆ ಉರಿಮಾರಿಮಾಡಿ ನಿಲ್ಲಿಸಿದಿ ಕೋಲಉರಿಮಾರಿ ಮಾಡಿನಿಲ್ಲಿಸಿದಿಭದ್ರಾದೇವಿಸರಿಯವರು ನೋಡಿ ನಗುತಾರೆ ಕೋಲ 4 ಕರ ಕರಿಯೆಂದು ಬಿಡಬೇಕು ಕೋಲ 5 ಮಡದಿಯರಿಬ್ಬರು ಹರಿಯ ಕರೆದು ಮಾತಾಡದ್ಹಾಂಗೆ ಕೊಡಲಿಯ ಕೊಟ್ಟು ಬಡವನೆ ಕೋಲ ಕೊಡಲಿಯ ಕೊಟ್ಟು ಬಡವನೆ ಮಾಡಿದ ಕಿಡಿಗೇಡಿತನವ ಬಿಡು ಕಾಳಿ ಕೋಲ 6 ನಲ್ಲೆಯರಿಬ್ಬರು ಹರಿಯ ಎಲ್ಲೆಲ್ಲೂ ಬಿಡದ್ಹಾಂಗೆ ಬಿಲ್ಲನೆ ಕೊಟ್ಟು ನಿಲ್ಲಿಸಿದಿಬಿಲ್ಲನೆ ಕೊಟ್ಟು ನಿಲ್ಲಿಸಿದಿ ಲಕ್ಷಣಾಕಲ್ಲೆದೆಯವಳು ಹೌದ ಹೌದ ಕೋಲ 7 ಒಳ್ಳೆಗುಣಪೂರ್ಣಗೆ ಕಳ್ಳನಂತೆ ಹೆಸರಿಟ್ಟಿಸುಳ್ಳು ನೋಡಿದರೆ ವಿಪರೀತ ಕೋಲ ಸುಳ್ಳು ನೋಡಿದರೆ ವಿಪರೀತ ಜಾಂಬವಂತಿಕೊಳ್ಳಿಯ ಗುಮ್ಮಗುರುವೇನ ಕೋಲ 8 ಮುದ್ದು ಹದಿನಾರು ಸಾವಿರ ಬುದ್ದಿವಂತರ ಕೂಡಿಹದ್ದೆರ್ದಬೌದ್ಧ ಎನುತಲೆ ಕೋಲ ಹದ್ದೆರ್ದಬೌದ್ಧ ಎನುತಲೆ ಬೆನ್ನ ಹತ್ತಲು ಇದ್ದಜನರೆಲ್ಲ ನಗುತಾರೆ ಕೋಲ 9 ನೂರು ಮಂದಿ ಹರಿಯ ದಾರಿಯ ಕಟ್ಟಲು ಹಾರಿದ ಕೃಷ್ಣ ಕುದರಿಯ ಕೋಲ ಹಾರಿದ ಕೃಷ್ಣ ಕುದುರೆ ಏರಿಕೊಂಡುಮಾರಿ ತೋರದಲೆ ಬರಲಿಲ್ಲ ಕೋಲ10 ಚಲ್ವ ರಾಮೇಶ ಎಲ್ಲ ಲಲನೆಯರಿಗೆ ಅಂಜಿಕೊಂಡುಬಲಿಯ ಮನೆ ಮುಂದೆ ಕುಳಿತಾನೆ ಕೋಲ ಬಲಿಯ ಮನೆ ಮುಂದೆ ಕುಳಿತಾನೆ ರುಕ್ಮಿಣಿಕಲಹವ ಬಿಟ್ಟು ಕರೆತಾರೆ ಕೋಲ 11
--------------
ಗಲಗಲಿಅವ್ವನವರು
ಭಾಮೆ ನೀ ತಂದು ತೋರೆ ದೇವ ದೇವೆನಿಸುವ ಶ್ರೀ ಹರಿ ವಾಸುದೇವನ ಧ್ರುವ ಬ್ರಹ್ಮಾದಿ ವಂದ್ಯನ ಹೊಮ್ಮುಕುಟದವನ ರಮ್ಯದೋರುವ ಜಗನ್ಮೋಹನನ ಘಮ್ಮನೆ ಹೊಳಿವ ಕತ್ತುರಿ ತಿಳಕನ ಸುಮ್ಮನೆ ಸುಸ್ವರದಿ ಕೊಳಲೂದುವನ 1 ಹದ್ದೆ ಅಡುವನ ಮುದ್ದು ಮಾತಿನವನ ಗೆದ್ದು ಸಿದ್ದಿಯ ಮಣಿತಂದವನ ತಿದ್ದಿ ಕುಬಜಿಗೊಲಿದು ಶುದ್ಧಮಾಡಿದವನ ಉದ್ಧವಪ್ರಿಯ ಶ್ರೀ ಆದಿಕೇಶವನ 2 ಸುಂದರ ವದನನ ಸಾಂದ್ರಸುಖದವನ ಕಂದರ್ಪಕೋಟಿ ಸುಲಾವಣ್ಯನ ಇಂದಿರೆ ರಮಣನ ಬಂದು ಮಹಿಪತಿ ಮನೋಹರ ಮಾಡುವನ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು