ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಕ್ಕವನೇನೆ ಮಿಕ್ಕಾದಂಥ | ಮಕ್ಕಳಿಲ್ಲೇನೆ, ನಿಮ್ಮವರೊಳು ||ದಿಕ್ಕಿಲ್ಲವೇನೆ, ಇವಗೆ ತಕ್ಕ |ಬುದ್ಧಿಯ ಕಲಿಸುವವರಿನ್ನು ಪ ತಂಡ ತಂಡದಿ ಬರುತಿಹ ನಮ್ಮನ |ಕಂಡು ಆಡುವ ಆಟಕಿಯ ಬಿಟ್ಟು ||ಚೆಂಡು ಪುಟಿದು ಬಂತು ಬಚ್ಚಿಟ್ಟಿರ್ಯಾಕೆಂದು |ದುಂಡ ತೋಳಗಳೆತ್ತಿ ಭಂಡು ಮಾಡುವನಿವ 1 ಶಿಶುವೆಂದು ಎತ್ತಪ್ಪಿಕೊಂಡು ಮುದ್ದಿಡಲು |ದಶನಗಳಿಂದಧರ ನೋಯಿಸಲು ||ಆಶೆಯಲಸುವ ಪೀರಿದವನಿವನೆಂದಂಜಿ |ಸೊಸಿಯನ್ನಬ್ಬರಿಸಿ ಬೀದಿಯೊಳಂದು 2 ಆರಿಲ್ಲದಾಗೊಬ್ಬವನನ್ನು ಬಾಲಕನೆಂದು |ದ್ವಾರವಿಕ್ಕಿ ನೀರೆ ಮೇಲಿರಿಸಿ ||ಬಾರಯ್ಯ ಮುದ್ದು ಕೊಡಯ್ಯ ಎನೆ ಹದಿ- |ನಾರು ವರುಷದವನಾದ ರುಕ್ಮಭೂಷಾ 3
--------------
ರುಕ್ಮಾಂಗದರು
ನಾರಾಯಣನೆಂಬ ನಾಮವೇ ಮೂಲಮಂತ್ರಓರಂತೆ ಜಪಿಸುವೆನು ಶ್ರೀಹರಿ ಹರಿ ಪ. ಆರ ಬಿಡುವೆನು ಮತ್ತಾರ ಕೂಡುವೆನುಆರಾರಿಗೊಡಲನೀವೆಆರಂಘ್ರಿಗೆರಗುವೆ ಆರಾರ ಮನ್ನಿಸುವೆಆರಿಂದ ಉದರ ಪೂರ್ತಿ 1 ಆರಿದ್ದರೇನುಫಲ ಆರು ಬಗೆಯನರಿತುಆರುಸಾವಿರವನೋದಿನೂರ ನೀರೊಳಗಿಟ್ಟು ಆರೆಂಟ ನೆನೆದು ಹದಿ-ನಾರನಾದರು ಕೊಟ್ಟನೆ 2 ಇಬ್ಬರೊಳಗೆ ಎನಗೊಬ್ಬನೆ ಸಾಕು ಕಣ್ಗೆಹಬ್ಬವಾವನ ಕಂಡರೆಒಬ್ಬನಿಗೋಸುಗ ಮತ್ತೊಬ್ಬನ ಭಜಿಸುವೆಅಬ್ಜಾಕ್ಷ ಹಯವದನ3
--------------
ವಾದಿರಾಜ
ಬಾರೊ ಮನಕೆ ಮುರಾರಿ ಗೋಪಾಲಕೃಷ್ಣ ಬಾರೊ ಬೇಗ ಹದಿ- ನಾರು ಸಾವಿರದ ನೂರೆಂಟು ನಾರೇರ ಮನೋಹರ ಪ. ನೀಯೆನಗಿಂಬೆಂದರಸುತ ನಂಬಿಹೆನು ಸಂಬಾಳಿಸುತಿಹ ದೊರೆ ನೀನು ತುಂಬಿದ ದುರಿತಾಡಂಬರ ಓಡಿಸಿ ಬೆಂಬಲನಾಗಿರು ಕಂಬ್ವರಧರನೆ1 ಬಲೆಯನು ಕೆಡವುತ ಬೇಗದಲಿ ಕಳದನುಗಾಲವು ಕಾವುತಲಿ ಸುಲಲಿತ ವಕ್ಷಸ್ಥಳದಲಿ ಭಾರ್ಗವಿ ಲಲನೆಯನಿರಿಸಿದ ನಳಿನಜ ಜನಕಾ 2 ಮಾನ್ಯ ಪರಾಪರ ಮೂರುತಿಯೆ ಚಿನ್ಮಯ ನಿನಗಿದು ಕೀರುತಿಯೆ ಪನ್ನಗ ಗಿರಿವರ ಪದಯುಗ ಪದ್ಮಗ- ಳೆನ್ನ ಶಿರದೊಳಿಸುನ್ನತ ಕರುಣದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಲೋಕನೀತಿ (ಅ) ಅಂಟಿ ಅಂಟದ ಹಾಗೆ ಇರಬೇಕು ಪ ಈ ತಂಟೆ ಸಂಸಾರದ ಬುದ್ಧಿ ಉಂಟಾದವರಿಗೆಲ್ಲಾ ಅ.ಪ ಎಂಟು ಮದಗಳನ್ನು ಬಿಡಬೇಕು | ಹದಿ- ನೆಂಟನೇ ತತ್ವ ತಿಳಿಯಬೇಕು ಭಂಟನಾಗಿ ವೈಕುಂಠ ಸೇರುವದಕೆ 1 ಶತ್ರುಗಳಾರ್ವರ ಗೆಲ್ಲಬೇಕು | ನಿಜ- ಮಿತ್ರರಾರ್ವರೊಳು ನಿಲ್ಲಬೇಕು ರಾತ್ರಿ ಹಗಲು ಪತ್ನೀಪುತ್ರರೊಡನೆ ಕಮಲ- ಪತ್ರದಿ ನೀರಿದ್ದ ರೀತಿಯಿಂದಲಿ ತಾನು 2 ಮಾನವಮಾನ ಒಂದಾಗಬೇಕು | ಅನು- ಮಾನವಿಲ್ಲದೆ ತಿರುಗಲುಬೇಕು ಇನ್ನೇನಾದರು ಗುರುರಾಮವಿಠಲನಾ- ಧೀನನೆನುತ ಮದ್ದಾನೆಯಂದದಿ ತಾನು 3
--------------
ಗುರುರಾಮವಿಠಲ
ನರಜನ್ಮ ಬಂದುದಕೆ ಇಪ್ಪತ್ತು ಆರುಕಳೆ|ವರದೊಳಿಹ ಹರಿರೂಪ ಚಿಂತಿಸುವದೂ ಪಎರಡನಂತದ ಮ್ಯಾಲೆ ಒಂಬತ್ತಧಿಕ ನೂರು |ಸ್ವರುಪದೊಳಗಿಹವು ಆಮ್ಯಾಲೆ ಇಚ್ಛಾ ||ವರಣದಲಿ ಒಂದು ಲಿಂಗದಲಿ ಆರೊಂದಧಿಕ |ಅರುವತ್ತು ರೂಪಗಳು ಉಂಟು ಕೇಳೀ 1ಎಪ್ಪತ್ತರೊಂಬತ್ತಧಿಕ ನೂರು ಅವ್ಯಕ್ತ- |ಕಿಪ್ಪವು ಅವಿದ್ಯದೊಳು ಯೇಳು ಅಧಿಕಾ ||ಇಪ್ಪತ್ತುಕರ್ಮಕಾಮಾವರಣದಲಿ ಮೂರು |ಇಪ್ಪತ್ತು ಮೂರು ಅರುವತ್ತು ಎಂಟೂ 2ಮಾರಮಣ ಜೀವ ಪರಮಾಚ್ಚಾದಿಕೆರಡರೊಳು |ಬ್ಯಾರೆ ಬ್ಯಾರಿಪ್ಪ ಒಂಬತ್ತು ರೂಪಾ ||ನಾರಾಯಣಾದಿ ಐದರೊಳಗೊಂದೊಂದೇವೆ |ತೋರುತಿಹವಜಪಿತನ ವಿಮಲ ಮೂರ್ತೀ 3ಎರಡು ಲಕ್ಷೆರಡು ಸಾವಿರದ ನಾನೂರು ಈ- |ರೆರಡಧಿಕ ತೊಂಬತ್ತು ಅನಿರುದ್ಧದೀ ||ಮೆರವ ಶ್ರೀವಾಸುದೇವನಾರಾಯಣ ಕವಚದಿ |ಇರುವ ಒಂದೊಂದು ಆನಂದಮಯದೀ 4ಇನ್ನುವಿಜ್ಞಾನಮನವಾಙುï ಶ್ರೋತೃ ಚಕ್ಷು ಪ್ರಾ- |ಣನ್ನಮಯ ಹೀಗೆ ಯೇಳೊಂದರೊಳಗೇ ||ವನ್ನಜಾಕ್ಷನರೂಪಒಂದೊಂದೆ ಇಹವೆಂದು |ಚೆನ್ನಾಗಿ ಭಕ್ತಿಪೂರ್ವಕ ತಿಳಿವದೂ5ಸ್ಥೂಲವಾದಂಗದಲಿ ಮೂವತ್ತೆರಡು ಕೋಟಿ |ಯೇಳೂ ಲಕ್ಷದ ಮೇಲೆ ರಮ್ಯವಾಗೀ ||ಶ್ರೀಲೋಲ ತೊಂಬತ್ತು ಮೂರು ಸಾವಿರದ ಹದಿ- |ನೇಳಧಿಕ ಎಂಟು ಶತರೂಪದಲಿಹಾ 6ಈರನಂತ ಮೂವತ್ತೆರಡು ಕೋಟಿ ನವಲಕ್ಷ |ಆರಧಿಕ ತೊಂಬತ್ತು ಸಾವಿರೆಂಟೂ ||ನೂರು ಐವತ್ತೆಂಟು ರೂಪಗಳು ಸ್ತಂಭಾದಿ |ವಾರಿಜಭವಾಂತ ದೇಹಗಳೊಳೀಹವೂ 7ಮೋದತೀರ್ಥರ ಮತವ ಪೊಂದಿದವರೀರೂಪ|ಸಾದರದಿ ಚಿಂತಿಸುವದೇ ಮೋಕ್ಷಕೇ ||ಸಾಧನವಿದು ಸಾತ್ವಿಕರಿಗಲ್ಲದಲೆ ಅನ್ಯ- |ವಾದಿಗಳಿಗುಪದೇಶ ಮಾಡಸಲ್ಲಾ8ಪ್ರಾಣೇಶ ವಿಠ್ಠಲನ ಸುಮೂರ್ತಿ ಈ ಪರಿಯಿಂದ |ಧ್ಯಾನಕ್ಕೆ ತಂದು ಹಿಗ್ಗದಲೆ ಬರಿದೇ ||ಏನು ಓದಿದರು ಕೇಳಿದರು ತಪ ಮಾಡಿದರು |ಆನಿ ತಿಂದಕಪಿತ್ಥದಂತೆರಿವದೂ 9
--------------
ಪ್ರಾಣೇಶದಾಸರು