ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ಧ್ರುವ ಬಲ್ಲೆ ಬಲ್ಲೆನೆಂಬರು ಬಲ್ಲರಿಯದಿಹದನು ಬಲ್ಲರೆ ನೀವಿನ್ನು ಹೇಳುವುದು ತಾನಾ 1 ಕಣ್ಣು ಕಾಂಬುವದೇನು ಕಣ್ಣಿನೊಳಿಹುದೇನು ಕಣ್ಣು ಕಾಂಬುವ ಗತಿ ತಿಳಿಯುವುದು ತಾನಾ 2 ಕಿವಿಯ ಕಿವಿಯೆಂಬುದೇನು ಕಿವಿಯ ಕೇಳುವುದೇನು ಕಿವಿಯ ಕೇಳುವ ಗತಿ ತಿಳಿಯುವದು ತಾನಾ 3 ಮೂಗು ಮೂಗೆಂಬುದೇನು ಮೂಗಿನೊಳಾಡುವದೇನು ಆಡುವ ಗತಿಗಳ ತಿಳಿಯುವದು ತಾನಾ 4 ಬಾಯಿ ಬಾಯೆಂಬುದೇನು ಬಾಯಿಯೊಳ ನುಡಿವದೇನು ಬಾಯಿ ನುಡಿವ ಗತಿ ತಿಳಿಯುವದು ತಾನಾ 5 ದೇಹ ದೇಹೆಂಬುದೇನು ದೇಹದೊಳಿಹುದೇನು ದೇಹದೊಳಿಹ ವಸ್ತು ತಿಳಿಯುವದು ತಾನಾ 6 ಪ್ರಾಣವೆಂಬುದೇನು ಕರಣವೆಂಬುದೇನು ತತ್ತ್ವವೆಂಬುದೇನು ತಿಳಿಯುವದು ತಾನಾ 7 ಜೀವ ಅಂಬುದೇನು ಜೀವಭಾಗಗಳೇನು ಜೀವ ಶಿವದ ಗತಿ ತಿಳಿಯುವದು ತಾನಾ 8 ಆರುವ್ಹೆಂಬುದೇನು ಮರವ್ಹುವೆಂಬುದೇನು ಇದರೊಳು ಖೂನ ಕುರುಹು ತಿಳಿಯುವುದು ತಾನಾ 9 ಕನಸುವೆಂಬುದೇನು ಕನಸು ಕಾಂಬುವದೇನು ಕನಸು ಹೇಳುವದೇನು ತಿಳಿಯುವುದು ತಾನಾ 10 ಹಗಲು ಎದ್ದಿಹದೇನು ಇರಳು ಮಲಗುವದೇನು ಇದರ ಹಗರಣವನು ತಿಳಿಯುವದು ತಾನಾ 11 ಹುಟ್ಟಿ ಬಾಳುವದೇನು ಸತ್ತು ಹೋಗುವದೇನು ಸತ್ತು ಹುಟ್ಟುವದೇನು ತಿಳಿಯುವದು ತಾನಾ 12 ಹೆಣ್ಣು ಗಂಡೆಂಬುವದೇನು ಹೆಣ್ಣು ಗಂಡು ಕೂಡುವದೇನು ಕೂಡುವದೇನೆಂದು ತಿಳಿಯುವದು ತಾನಾ 13 ಅನುಭವ ಗತಿಗಳ ತಿಳಿಯಲು ಆತ್ಮದೊಳು ತಿಳಿಯಲು ಜನ್ಮವು ಅಳಿಯುವದು ತಾನಾ 14 ಆತ್ಮ ಅನುಭವವು ತಿಳಿಯುವದು ಗುರುಕೃಪೆಯು ತಿಳಿಯಲು ಜೀವನ್ಮುಕ್ತಿಯು ತಾನಾ 15 ಮಹಿಪತೆಂಬ್ಹೆಸರನು ಕರೆದರೊ ಎಂಬುವದೇನು ಓ ಎಂಬುವದೆನಗಿನ್ನು ತಿಳಿಯಿತು ತಾನಾ 16 ಇಂತು ಪರಿಯಾಯವು ತಿಳುಹಿದ ಗುರುರಾಯ ಎನ್ನೊಳು ಭಾಸ್ಕರ ಗುರು ತಾನೆ ತಾನಾ 17
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಮ್ಮನೆ ಹೋಗುತಾದಲ್ಲೋ ಇಷ್ಟಾರ್ಥಪಡಿದೇ ಸುಮ್ಮನೆ ಹೋಗುತಾದಲ್ಲೋ ಪ ಸುಮ್ಮನೆ ಹೋಗುತಾದೆ ಹೆಮ್ಮಾರಿಗೀಡಾಗಿ ಮರ್ಮವರಿತು ಪರಬ್ರಹ್ಮನ ಕೂಡದೆ ಅ.ಪ ಎಷ್ಟೋ ಸುಕೃತವಡೆದು ಈ ನರಜನ್ಮ ತೊಟ್ಟು ಸೃಷ್ಟಿಗೆ ಇಳಿದು ಹುಟ್ಟಿ ಬಂದಂಥ ಕಾರ್ಯ ಬಿಟ್ಟು ಮರವೆಗೂಡಿ ಕೆಟ್ಟು ಹೋಗ್ಯಾದೋ ವಯ ಕೃಷ್ಣಾರ್ಪಣೆನದೆ ಸುಟ್ಟು 1 ವಯವೆಂಬ ಧನ ಪಡೆದು ಈ ಮಹದನು ಭವದ ಸಂತೆಗೆ ಇಳಿದು ಭವದ ಜಯೆಂಬ ಅನುಭವದ ವ್ಯಾಪಾರ ಮಾಡಿ ಭವಹರನ ಕಾಣದೆ ಜವನಗೀಡಾಗಿ ತಾನು 2 ಅರಿವಿನಾಲಯ ಪೊಕ್ಕು ಸಂಸಾರವೆಂಬ ಮರೆವಿನ ಬಲೆಯೊಳ್ ಸಿಕ್ಕು ಪರಮಪುರುಷ ಸಿರಿಯರಸ ಶ್ರೀರಾಮನ ಚರಣಕಮಲಕ್ಕೆ ಸಲ್ವ ವರಮೋಕ್ಷ ಪಡೆಯದೆ ಲ
--------------
ರಾಮದಾಸರು
ಕಂದ ಹಾಲ ಕುಡಿಯೊ-ನಮ್ಮ ಗೋ-|ವಿಂದ ಹಾಲ ಕುಡಿಯೊ ಪವೃಂದಾವನದೊಳು ಬಳಲಿ ಬಂದೆಯೊ ರಂಗ ಅ.ಪಶೃಂಗಾರವಾದ ಗೋವಿಂದ-ಚೆಲುವ |ಪೊಂಗೊಳಲೂದುವ ಚೆಂದ ||ಅಂಗನೆಯರ ಒಲುಮೆಯಿಂದ-ನಮ್ಮ |ಮಂಗಳಮೂರತಿಯ ಮೋರೆ ಬಾಡಿತಯ್ಯ 1ಆಕಳೊಡನೆ ಹರಿದಾಡಿ-ನಮ್ಮ |ಶ್ರೀಕಾಂತ ಗೆಳೆಯರ ಕೂಡಿ ||ಲೋಕವಈರಡಿಮಾಡಿ-ನಮ್ಮ |ಸಾಕುವ ಪಾದವು ಬಳಲಿದುವಯ್ಯ 2ಸದಮಲ ಯೋಗಿಗಳೆಲ್ಲ-ನಿನ್ನ |ಪದವ ಬಣ್ಣಿಸುತಿಪ್ಪರೆಲ್ಲ ||ಯದುಕುಲ ಚೌಪಟ ಮಲ್ಲ-ಹಾಲ |ಹದನು ವಿೂರಿತಯ್ಯ ಪುರಂದರವಿಠಲ 3
--------------
ಪುರಂದರದಾಸರು
ಕೊಡುವುದೆಂದು ಎನ್ನ ಕೊಂಬುದೆಂದು-ಕೈ-|ಪಿಡಿವುದೆಂದು ನೀ ಒಲಿವುದೆಂದು ಪಕೊಡುಕೊಂಬ ಮಹದನುಗ್ರಹದವನೆಂದು ನಿ-|ನ್ನಡಿಗೆ ಸೇರಿದೆನಯ್ಯ ಬಡತನಕೌಷಧ ಅ.ಪಶ್ವಾನಸೂಕರ ಜನ್ಮ ನಾನುಂಬೆ ನನ್ನಲ್ಲಿ |ನೀನೇ ತತ್ತದ್ರೂಪನಾದೆಯಲ್ಲ ||ಹೀನರೊಳ್ ನಾನತಿ ಹೀನನಾಗಿ-ಅಭಿ-|ಮಾನಿಯಾಗಿ ಕಾಲಕಳೆದೆನಲ್ಲ ||ವಾನರನಂಗೈಯ ಮಾಣಿಕ್ಯದಂತೆನ್ನ |ಮಾನದಂತರ್ಯಾಮಿ ಸಿಕ್ಕೆಯಲ್ಲ ||ಏನೇ ಆದರು ನಿನ್ನೊಳೆನಗೆ ಮುಂದೆ ಭಕ್ತಿ-|ಙ್ಞÕನ-ವೈರಾಗ್ಯ ಭಾಗ್ಯಗಳನು ದೇವ 1ಕಾಡಿನ ಮೃಗವು ತಾ ಹಾಡಿದರೆ ನಂಬಿ |ಆಡುವುದಲ್ಲದೆ ಓಡುವುದೆ? ||ಕಾಡುವ ಪಶುವಿನ ಬಾಲವ ಕಟ್ಟಿಸಿ |ಕೂಡೆ ಪಾಲ್ಗರೆಯಲು ಒದೆಯುವುದೆ? ||ಆಡುವ ಶಿಶು ತಪ್ಪಮಾಡಲು ಜನನಿ-ಕೊಂ-|ಡಾಡುವಳಲ್ಲದೆ ದೂಡುವಳೆ ||ಮೂಢ ಬುದ್ದಿಯೊಳು ಕೆಟ್ಟಿನೆಂದು-ಕೋಪ |ಮಾಡಬೇಡ ದಯೆಮಾಡಿ ನೀಡಿಷ್ಟವ 2ಹಣ್ಣಾದ ಹೊತ್ತು ಬಾಯ್ ಹುಣ್ಣಾದ ತೆರನಂತೆ |ನಿನ್ನ ಸೇರುವ ಯತ್ನ ಬಿಟ್ಟು ನಾನು ||ಹೆಣ್ಣು ಹೊನ್ನು ಮಣ್ಣಿಗಾಗಿಯೆ ಭ್ರಮೆಗೊಂಡೆ |ಸುಣ್ಣಕಿಕ್ಕಿದ ನೀರಿನಂತಾದೆನು ||ಎನ್ನಪರಾಧವನಂತ ಕ್ಷಮಿಸು ನೀನು |ಮನ್ನಿಸದಿರಲಾರಿಗೆ ಪೇಳ್ವೆನು ||ಓಂ ನಮೋ ಶ್ರೀಹರಿಎಂಬ ಪೂರ್ಣಙ್ಞÕನ-|ವನ್ನು ಪುರಂದರವಿಠಲನ ಎನ್ನಪ್ಪನೆ 3
--------------
ಪುರಂದರದಾಸರು