ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಬ್ಜಭವಪಿತ | ಮದ್ಗುರ್ವಂತರ್ಯಾಮಿ | ಸಲಹಯ್ಯ ಕುಬ್ಜ ಮೂರುತಿ | ಯಾದ ಗುರು | ಗೋವಿಂದ ವಿಠಲಯ್ಯ ||ಪ| ಈಶ ತಂದೆ ವೆಂಕ | ಟೇಶ ವಿಠಲನ | ದಾಸ ಸಹವಾಸ |ದೋಷ ರಾಶಿಯ | ನಾಶ ಗೈಸಿತು | ಶ್ರೀಶ ಕೇಶವನೇ 1 ಮರಣ ಸಮಯದಿ | ಚರಣ ಪುಷ್ಕರ | ಭಜಿಸಿದ ಜಮಿಳನ |ಕರುಣದಿಂದಲಿ | ಮರೆದ ವೋಲ್ | ಎನ್ನ ಮನಕೆ ಬಾ ನಾರಾಯಣ 2 ಭೇದ ಮತವೆಂ | ಬಬ್ಧಿಯಲಿ | ಉದಿಸಿವೆನು ಕಾಣಯ್ಯ |ಮಧ್ವಪತಿ | ಮದ್ಭಾರ ನಿನ್ನದು | ಸಲಹೊ ಮಾಧವನೆ 3 ಗೋವಿದಾಂಪತಿ | ಗೋಪ ಪಾಲಕ | ಶ್ರೀಶ ಗೋವಿಂದಮಾವ ಕಂಸನ | ಕೊಂದಸಿರಿ | ಗೋವಿಂದ ಸಲಹಯ್ಯ 4 ಸಿರಿ | ಕೃಷ್ಣ ಬೇಡುವೆ | ಕಷ್ಟ ಬಿಡಿಸಯ್ಯ |ವೃಷ್ಟಿಕುಲ ಸಂ | ಪನ್ನ ಪಾವನ | ವಿಷ್ಣು ಮೂರುತಿಯೆ 5 ವೇದಗಮ್ಯ | ದಯಾಪಯೋನಿಧಿ | ಸಾಧು ವಂದಿತನೆ |ಮೋದದಿಂ | ತವಪಾದ ಪೂಜಿಪೆ | ಪಾಲಿಸೈ ಮಧುಸೂಧನ 6 ಕಾಯ ಮಮತೆಲಿ | ಕಟ್ಟೆ ಧರ್ಮಾತ್ಮ |ಭವದ ಭವಣೆಯ | ಬಿಡಿಸುವುದು | ಬಲಿವರದ ತ್ರಿವಿಕ್ರಮ 7 ವಿಮಲ ಸತ್ಕಲ್ಯಾಣ | ಗುಣ ನಿಸ್ಸೀಮ | ಸುಜ್ಞಾನಾಅಮರಾರಿಯ ಧ್ವರ | ಕೆಡಿಸಿ ಉಳಿಸಿದೆ | ಶೀಲ ವಾಮನ 8 ಹೃದಯ ಶೋಭಿತ | ಮೋದಮಯ | ಮಧ್ವಾಂತರಾತ್ಮಕನೇ |ಆದಿಮೂರುತಿ | ಸಾಧು ವಂದಿತ ಕಾಯೋ ಶ್ರೀಧರನೇ 9 ಭಂಜನ ಬಿಸಜ ಭವ ಪಿತ | ಈಶ ಸರ್ವೇಶಾ |ಒಸೆದು ಬೇಡುವೆ | ಕಸರು ಕರ್ಮವ | ಹರಿಸೋ ಹೃಷಿಕೇಶ 10 ಬದ್ಧ ಜೀವನ | ಅಬದ್ಧ ಮಾಡಲು | ತಿದ್ದಿ ಸೃಜಿಸಿದೆಯೋ |ಸದ್ಗುರುವೆ ಮತ್ | ಪೊದ್ದಿಕೆಯ ಕಳೆ | ಪದ್ಮನಾಭನೆ 11 ಸಿರಿ ಮನೋಹರ |ಧಾಮತ್ರಯ ಸು | ತ್ರಾಮ ವಂದಿತ | ಪಾಲಿಸೈ ದಾಮೋದರ 12 ಪಂಕ ಕಳೆಯಯ್ಯ |ವೆಂಕಟಾ ಬಿರು | ದಾಂಕ ಜಯ ಜಯ | ಸಂಕರುಷಣ 13 ವಿಶ್ವ ವ್ಯಾಪಕನೇಶ್ರೀಶ ಸದ್ಮನೆ | ವಾಸುದೇವನೆ | ಪೋಷಿಸೈ ಪರಮಾತ್ಮನೇ 14 ನಿರವದ್ಯ ಆಪನ್ನ ಪಾಲನೆ | ಪೊರೆಯೊ ಪ್ರದ್ಯುಮ್ನ 15 ಅನಿರುದ್ಧ 16 ಕರಿವರನು ತವ | ಚರಣ ಸರಸಿಜ | ನಂಬಿ ಮೊರೆಯಿಡಲು |ಕರದ ಚಕ್ರದಿ | ತರಿದು ನಕ್ರನ | ಬಿಸುಟ ದೊರೆ ಪುರುಷೋತ್ತಮ 17 ದರ ಚಕ್ರಧರ | ಅಧೋಕ್ಷಜ18 ತರಳ ಕರೆಯಲು | ಭರದಿ ಕಂಬದಿ | ಬಂದ ತ್ರಿಪದಾಹ್ವದುರುಳ ಹಿರಣ್ಯನ | ತರಿದು ಭಕ್ತನ | ಸಲಹಿದ್ಯೋ ನರಸಿಂಹನೆ 19 ಕಚ್ಛಪ ಅಚ್ಯುತ | ಸಲಹೊ ಚ್ಯುತಿ ದೂರ | 20 ಸಾನುಕೂಲವು | ಸಕಲ ಸಾಧನ | ನಿನ್ನ ಭಜಿಸುವಗೇ ಜ್ಞಾನಗಮ್ಯ | ಅನಾದಿ ರೋಗವ | ನೀಗೋ ನೀ ಜನಾರ್ಧನ 21 ಸ್ಮರ ಕೋಟಿ ಸುಂದರ | ಪಾಹಿ ಉಪೇಂದ್ರ 22 ಮರದಿ ಎಂಜಲ | ಸವಿದು ಶಬರಿಯ | ಕಾಯ್ದೆ ಮುರವೈರಿ ತ್ವರದಿ ತ್ವತ್ಪದ | ವನಜ ಕಾಂಬುವ | ಹದನರುಹು ಶ್ರೀಹರಿ 23 ಜಿಷ್ಣು ಸಖ | ಶಿಷ್ಟೇಷ್ಟಪರಿ | ಹರಿಸಯ್ಯ ಮುತೃಷ್ಣಾ |ಕೃಷ್ಣೆ ಗಕ್ಷಯ | ವಸನ ದಾತನೆ | ಕಾಯೊ ಶ್ರೀ ಕೃಷ್ಣ 24 ನಿರುತ ನಿನ್ನಯ | ಚರಣ ಪುಷ್ಕರ | ಮಧುಪನೆನಿಸಯ್ಯಸ್ಮರಿಪರಘ | ಪರಿಹರಿಪ ಗುರು | ಗೋವಿಂದ ವಿಠಲಯ್ಯಾ | 25
--------------
ಗುರುಗೋವಿಂದವಿಠಲರು