ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾದವನಾಲಿಪ ಯೋಗಿಯ ನೋಡಿ | ಕಕುಲ ಮಾಡಬ್ಯಾಡಿ ಪ ಪಂಚಭೂತದ ಸಂಚಿತ ಬಿಟ್ಟು | ಪಂಚಾದಶಿಯಲಿ ಮನವಿಟ್ಟು 1 ಪರಮ ವೈರಾಗ್ಯದ ಭೋಗಿ | ಪರಶಿವ ರೂಪನೆ ತಾನಾಗಿ 2 ಇಹಪರವೆರಡೆಂಬುದ ಕಡಿದು | ಹಂಸೋಹಂ ಎಂಬನ ಪಿಡಿದು 3 ಭವ ಭಯ ಸಂಶಯಗಳನೆ ಜರಿದು |ಭವತಾರಕನಂಘ್ರಿಯ ಬೆರೆದು 4 ತಾರಕ ಮಂತ್ರವ ಜಪಿಸುತಲಿರಲು | ಅರಿತು ಜ್ಞಾನಿಯಾಗುವನೆನಲು 5
--------------
ಭಾವತರಕರು
ಎಂಥಾ ದಯಾಕರನು ನೋಡೆ ಸದ್ಗುರುರಾಯಎಂಥಾ ದಯಾಕರನು ನೋಡೆ ಅಂತರಂಗದ ತಾಪವ ಹರಿಸಿ ಅಂತರಾತ್ಮನ ತೋರಿದ ಪ ಹಸಿವು ತೃಷೆ ಪರಿಹರಿಸಿ ನಾನಾಬಗೆವಿಷಯವೆಲ್ಲವ ತೊರೆಸಿಮುಸುಕ ನುಗಿದು ಮಾಯೆಯಪರಂಜ್ಯೋತಿಯ ಬೆಳಗಿಸಿದನು ನೋಡೆ 1 ಸಂಸಾರದ ಬಹು ದುಃಖವ ಹರಿಸಿಶಿಂಶುಮಾರ ಚಕ್ರವ ಹಂಸೋಹಂಸೋಹಮೆಂದೆನ್ನನೇರಿಸಿಸಂಶಯ ಹರಿಸಿದನೆ2 ನಿರುಪಮ ನೀನೆ ಎಂದು ನಿರ್ಗುಣಪರಮ ಪುರುಷನೆ ಬಂದುಗುರು ಚಿದಾನಂದ ಸಾಕ್ಷಾತ್ಕಾರ ನೀನೆಂದುಗುರು ನೀನೆ ನಿಜವೆಂದನೆ 3
--------------
ಚಿದಾನಂದ ಅವಧೂತರು
ಇಹವಸ್ತುವೊಂದೇ ಜಗದೊಳಗೆ ಇಹವಸ್ತುವೊಂದೇಸೋಹಂ ಸೋಹಂ ಸೋಹಂ ಸೋಹಂಸೋಹಂ ಸೋಹಂ ಸೋಹಂ ಎಂದೇ ಪ ಸಂಗ ದೂರೆನಿಸಿ ಸಂಗವೆ ತಾನೆನಿಸಿಮಂಗಳ ಮಂಗಳ ಮಂಗಳ ಮಂಗಳಮಂಗಳ ಮಂಗಳ ಮಂಗಳವೆಂದೇ 1 ಜ್ಞಾನವೆ ತಾನಾಗಿ ಅಜ್ಞಾನಕೆ ತಾದೂರಾಗಿತಾನೇ ತಾನೇ ತಾನೇ ತಾನೇತಾನೇ ತಾನೇ ತಾನೇ ಎಂದು2 ವರ್ಣಂಗಳು ಆರು ಮೀರುವರ ಚಿದಾನಂದ ಗುರುಪೂರಣ ಪೂರಣ ಪೂರಣ ಪೂರಣಪೂರಣ ಪೂರಣ ಪೂರಣವೆಂದು 3
--------------
ಚಿದಾನಂದ ಅವಧೂತರು
ತ್ಯಜಿಸಬಾರದೋ ನೀವು ಸಜ್ಜನರ ಸಂಗತ್ಯಜಿಸಬಾರದೋ ನೀವು ಪ ದರುಶನ ಮಾಡೆ ದುರ್ದೋಷವು ಹರಿವುದುಸ್ಪರ್ಶವ ಮಾಡೆ ಪ್ರಪಂಚವು ಹರಿವುದು 1 ಮಾತು ಆಡುತಲಿರೆ ಮೈಯದು ಮರೆವುದುಪ್ರೀತಿಯಿಂ ಶರಣೆನೆ ಪರಿಣಾಮ ತೋರ್ಪುದು 2 ವಾಸನೆ ಇರೆ ನಿರ್ವಾಸನೆಯಹುದುಸೂಸುತಲಿಹ ಮನ ನಿಶ್ಚಿತವಹುದು 3 ಸಂಶಯವಿರೆ ನಿಃಸಂಶಯವಹುದುಹಂಸೋಹಂ ಭಾವ ಸಹಜಾವಾಗಿ ನಿಲ್ಲುವುದು 4 ಸುದತಿ ಇಹಪರ ತಾ ಬಿಡಲು ಬಹುದುಸುಧಾ ಚಿದಾನಂದನ ಬೆರೆತರೆ ತ್ಯಾಗ ಮಾಡಲು ಬಾರದು 5
--------------
ಚಿದಾನಂದ ಅವಧೂತರು
ಪಥ ಕೇಳಿನ್ನು ಪ ಅಂತರಂಗದಲಿ ಶಾಂತಿಯ ತಾಳಿ | ಅಂತರಾತ್ಮನು ನೀನೆನ್ನು | ಸತಿಸುತರಿಗೆ ಗತಿಯೇ ನಂಬಿದೆ | ಗತಿಯಿದ್ದದ್ದಾಗುವದೆನ್ನು | ಅತಿಶಯ ದುಷ್ಕರ್ಮಿಗಳು ನಿಂದಿಸೆ | ಕೃತ ಪೂರ್ವದ ಫಲವೆನ್ನು || ಸತತ ದ್ರವ್ಯವ ಬಯಸಿ ಗಳಿಸಿದೆ | ಗತಿಯಾಗುವದದು ಏನು ? | ಪತಿತ ಪಾವನ ರಘೂನಾಥನ | ನಾಮವ ಗುಪಿತದಿ ಜಪಿಸೊ ನೀನು 1 ಅಣ್ಣ ತಮ್ಮ ತಾಯಿ ತಂದೆ ಬಳಗದ | ಕಣ್ಣು ಮುಂದಿರಬೇಡಿನ್ನು | ಬಣ್ಣ ಬಣ್ಣ ಮಾತುಗಳಾಡಲು | ಪುಣ್ಯವು ಅದರಲಿ ಏನು ? || ಹೆಣ್ಣು ನೋಡಿ ಮನದಲಿ ಹಿಗ್ಗುವಿ | ಮಣ್ಣು ಕೂಡಿತದು ಏನು ? | ಹಣ್ಣು ಹಾಲು ಮೃಷ್ಟಾನ್ನಕಿಂತ ನೀ | ಉಣ್ಣು ಬ್ರಹ್ಮಾನಂದಾಮೃತವನ್ನು 2 ಅಂಶವುಳಿಯಬೇಕೆಂದರೆ ಈ ಜಗ- | ದಂಶವು ನನ್ನದು ಎನ್ನು | ಮಾಂಸಪಿಂಡ ಮುಖಾಂಡ ದಹನವು ಹುತಾಶನಗಾಹುತಿ ಎನ್ನು | ಕಂಸನ ತಂಗಿಯ ಮಗ ಪಾರ್ಥಗೆ ಹೇಳಿದ | ಸಂಶಯವ್ಯಾತಕೆ ಇನ್ನು | ಹಂಸ ಪರಮರ ಐಕ್ಯವ ತಿಳಿಯದೆ | ಹಂಸೋಹಂ ಎಂದರದೇನು ? 3 ನೋಡಿದುದೆಲ್ಲಾ ಪುಸಿಯೆಂದು | ಮಾಡೋ ನಿಶ್ಚಯವಿನ್ನು | ಆಡಬೇಡ ಅನೃತ ವಚನವನು | ಆಡುತಲಿರು ಸತ್ಯವನು | ಕೂಡಬೇಡ ಕಾಮಂದಿಯ ಸಂಗ | ಕೇಡು ತಪ್ಪದದಿನ್ನು | ರೂಢಿಯೊಳಗೆ ನರನಾಗಿ ಪುಟ್ಟಿ | ಮಾಡುತ ನಡಿ ಧರ್ಮವನು 4 ಮೂರ್ತಿ ಪಡಿ | ನಾದವನಾಲಿಸು ನೀನು 5
--------------
ಭಾವತರಕರು
ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ ಹಂಸೋಹಂ ಭಾವದ ಉಸಿರೊಡಿಯದ್ಹಾಂಗೆ ಧ್ರುವ ಎಲ್ಲದೋರ್ವದು ಮರೆದು ಎಲ್ಲರೊಳಗೆಹದರಿದು ಎಲ್ಲರೊಳಗೆಲ್ಲ ತಾನಾಗಬೇಕು ಎಲ್ಲರೊಳು ತಾನಾಗಿ ಎಲ್ಲ ತನ್ನೊಳಗಾಗಿ ಬೆಲ್ಲ ಸವಿದ ಮೂಕನಂತಾಗಬೇಕು 1 ಬಲ್ಲವತವನು ನೀಡಿ ಬಲ್ಲನೆತಾನಾಗಿ ಬಲ್ಲರಿಯೆನೆಂಬುದನು ಈಡ್ಯಾಡಬೇಕು ಬಲ್ಲರಿಯದೊಳಗಿದ್ದನೆಲ್ಲ ತಿಳಿಕೊಳ್ಳಬೇಕು ಸೊಲ್ಲಿಲ್ಹೇಳುವ ಸೊಬಗ ಬೀರದಿರಬೇಕು 2 ಸೋಹ್ಯ ಸೂತ್ರವ ತಿಳಿದು ಬಾಹ್ಯ ರಂಜನಿ ಮರೆದು ದೇಹ ವಿದೇಹದಲ್ಲಿ ಬಾಳಬೇಕು ಮಹಿಗೆ ಮಹಿಪತಿಯಾಗಿ ಸ್ವಹಿತ ಸದ್ಗುರುನಾದಶ್ರೀಹರಿ ಗುರುತನುಂಡು ಸುಖದಲಿ ಸುಖಿಸಬೇಕು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು