ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂಬೂರಿ ಹಿಡಿಸಿದನು ಪ ಅಂಬುಜಾಕ್ಷನು ದಯದಿ ಅ.ಪ ನಂಬೀದ ಜನರಿಗೆ ಬೆಂಬಲ ತಾನೆಂಬ ನಂಬಿಕೆ ಹೃದಯದಿ ತುಂಬುತ ತಾನೀಗ 1 ಆಶಾ ಪಾಶಕೆ ಸಿಲುಕಿ ಬೇಸತ್ತು ಬೆಂಡಾಗಿ ಮೋಸ ಹೋಗುತ್ತಲಿದ್ದೆ ಶ್ರೀಶ ದಯಾಂಬುಧಿ 2 ಹುಟ್ಟಿದ ದಿನದಿಂದ ಕಷ್ಟದಲ್ಲೇ ಬಂದೆ ಮುಟ್ಟಲಿದನು ಈಗ ಸಂತುಷ್ಟಿಯ ಕಂಡೆನು 3 ಕಾಡಿ ಬೇಡುವರಿಲ್ಲ ನಾಡೆಲ್ಲ ನಮ್ಮದೇನೆ ನೀಡುವ ದೊರೆ ಒಬ್ಬ ಈಡಿಲ್ಲದವನಾತ 4 ವಿಧಿ ವಿಸ್ಮರಣೆ ನಿಷೇಧ ಹರಿನಾಮ ಸುಧೆಯನ್ನು ಕರೆದು ಕರೆದು ಕುಡಿವೆ5 ತಂಬೂರಿ ಸಿಗುವುದು ತುಂಬ ಭಾಗ್ಯವು ಸತ್ಯ ಹಂಬಲಂಗಳ ಬಿಡಿಸಿ ತುಂಬುವ ಹರಿ ಮನದಿ6 ಪುಣ್ಯ ರಾಶಿಗಳೆಲ್ಲ ವದಗಿ ಬಂದವೊ ಏನೋ ಚಿನ್ಮಯ “ಶ್ರೀ ಕೃಷ್ಣವಿಠಲ”ನ ದಾಸನಾದೆ7
--------------
ಕೃಷ್ಣವಿಠಲದಾಸರು
ಬೂದಿ ಮುಚ್ಚಿದ ಕೆಂಡದಂತಿಪ್ಪರು ಪ ಈ ಧರೆಯ ಮೇಲೆ ಶ್ರೀ ಹರಿಭಕ್ತ ಜನರು ಅ.ಪ ಅಂಗ ನೋಡಲು ಅಷ್ಟಾವಕ್ರವಾಗಿಪ್ಪರು ಕಂಗಳಿಂದಲಿ ನೋಡೆ ಘೋರತರರು ಮಂಗಳಾಂಗನ ಅಂತರಂಗದಲಿ ಭಜಿಸುತ್ತ ಹಿಂಗದೆ ಸಂತಜನ ಸಂಗದೊಳಗಿಹರು 1 ನಾಡ ಜನರುಗಳಂತೆ ನಡೆಯರು ನುಡಿಯರು ಕೂಡರು ಕುಟಿಲಜನ ಸಂಘದಲ್ಲಿ ಒಡಲು ತುಂಬಿಸಿಕೊಳರು ರೂಢಿಯೊಳಗೆಂದೆಂದು ಗೂಢವಾಗಿಹರು2 ಡಂಭಕತನದಿಂದ ಗೊಂಬೆನೆರಹಿಕೊಂಡು ಡೊಂಬ ಕುಣಿದಂತೆ ಕುಣಿದಾಡರು ಹಂಬಲಂಗಳ ಬಿಟ್ಟು ಹರುಷವುಳ್ಳವರಾಗಿ ಬಿಂಬ ಮೂರುತಿಯನ್ನು ಕೊಂಡಾಡುತಿಹರು 3 ಶತ್ರು ಮಿತ್ರರುಗಳ ಸಮನಾಗಿ ಎಣಿಸುವರು ಪುತ್ರ ಮಿತ್ರ ಭ್ರಾತೃಗಳ ನೆಚ್ಚರು ಯಾತ್ರೆ ತೀರ್ಥಂಗಳಿಗೆ ಹೋಗುತ್ತ ಶ್ರೀ ಹರಿಯ ಸ್ತೋತ್ರಗಳ ಮಾಡಿ ಸಾಧನೆ ಮಾಡಿಕೊಂಬುವರು 4 ಕಷ್ಟ ಸೌಖ್ಯಂಗಳನು ಕಲಿವರದಗರ್ಪಿಪರು ಇಟ್ಟುಕೊಟ್ಟಿದ್ದನ್ನ ಹರಿಕೊಟ್ಟನೆಂಬುವರು ಸಿರಿ ವಿಜಯವಿಠ್ಠಲನ ಪದಪದ್ಮಾ ಮುಟ್ಟಿ ಭಜಿಸಿ ಮುಕ್ತ ಸಾಮಾಜ್ರ್ಯ ಪಡೆಯುವರು5
--------------
ವಿಜಯದಾಸ