ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾವೇರಿ ಕಲುಪಾಪಹಾರಿ ಪಾವನ ಶರೀರೆ ಶುಭತೋಷಕಾರಿ ಪ ವಾಸುದೇವ ರಂಗೇಶನಾಲಯಕೆ ನೀ ನಾವರಣಳಾಗಿಪ್ಪೆ ವಿರಜೆಯಂತೇ ದೇವ ಋಷಿ ಗಂಧರ್ವ ಪಿತೃಪ ನರವರರಿಂದ ಸೇವನೀಯಳಾಗಿ ಸರ್ವಾರ್ಥ ಪೂರೈಪೆ 1 ಜಲಚರಾನ್ವೇಷಣ ಲುಬ್ಧ ಸಾಲಿಗ್ರಾಮ ತುಲಸಿ ವೃಕ್ಷವನೆ ಕೊಡಿಸಿದ ಮಾತ್ರದೀ ಕಲುಷರಾಶಿಗಳೆಲ್ಲ ಕಳೆದು ಮುಕ್ತಿಯನಿತ್ತೆ ಸಲಿಲಮಂದಿರೆ ನಿನ್ನ ಕರುಣಕೇನೆಂಬೆ 2 ರವಿ ತುಲಾರಾಶಿಗೈದಿದ ಸಮಯದೊಳಗೊಂದು ಮಜ್ಜನ ಗೈವ ಮಾನವರಿಗೆ ಪವನಾಂತರಾತ್ಮಕನ ಪಾದಕಮಲವ ತೋರಿ ಭವಜ ರೋಗವ ಕಳೆದು ಭಾಗ್ಯವಂತರ ಮಾಳ್ಪೆ 3 ಶ್ರೀ ಪವನ ಶಿವರಿಂದ ತಾ ಪೂಜೆಗೊಳುತ ಬಹು ಪರ ಮನು ವ್ಯಾಪಿಸಿಹ ನಿನ್ನೊಳದ್ಯಾಪಿ ಸ್ವರ್ಗಸ್ಥ ಜನ ರೀ ಪೊಡವಿಯೊಳು ತವ ಸಮೀಪದಲಿ ಜನಿಸುವರು 4 ಮೂಢಮತಿ ನಾನು ಕೊಂಡಾಡ ಬಲ್ಲೆನೆ ನಿನ್ನ ಬೇಡಿಕೊಂಡೆನು ಹೃದಯ ನೀಡದೊಳಗೇ ಗೂಡ ಪದ ಶಯನ ಜಗನ್ನಾಥ ವಿಠ್ಠಲನಂಘ್ರಿ ನೋಡುವ ಸೌಭಾಗ್ಯ ದಯ ಮಾಡು ಪ್ರತಿದಿನದಲ್ಲಿ ಬ 5
--------------
ಜಗನ್ನಾಥದಾಸರು
ಧನ್ಯನೋ ಶೇಷಗಿರಿದಾಸ ನೀನೂ ನಿತ್ಯ ಪ ಮುಂಗೈಯ ಮ್ಯಾಲಿನ ಗಿಳಿ ಹಾರಿಹೋದಂತೆ ರಂಗ ಮಧ್ವನ ಸ್ಮರಣೆ ಮಾಡಿಕೊಳುತ ಮಂಗಳಾಂಗನಾಗಿ ಸ್ವರ್ಗಸ್ಥನಾದಿ ಕ್ಷಣ ಭಂಗುರವೆಂಬ ಪ್ರಮಾಣ ಸಿದ್ಧಿಸಿತು ಗಡ 1 ಸತ್‍ಶಿಷ್ಯನೆಂದೆನಿಸಿಕೊಂಡದಕೆ ಎನ್ನ ಮ ನೋತ್ಸಾಹ ಮಾತ್ರ ಬಂದಾಗಲಿಲ್ಲಾ ವತ್ಸ ಕೇಳು ಉಪಸರ್ಗ ಕೂಡಿದ ನಾಭಿ ತತ್ಸಮಾನಾಯಿತೊ ಇಂದಿನಾರಭ್ಯವೂ2 ಒಂದೆ ಪ್ರವಾಹದೊಳು ಈಸು ಬೀಳಲು ಸುಳಿ ಯಿಂದ ಹಿಂದಕೆ ಒಬ್ಬನಿಂದಂತೇವೆ ಇಂದು ಎನಗಾಯಿತೊ ಭೂಮಿಯೊಳಗೆ ಋಣಾನು- ಬಂಧ ಇಂತಿರಲಿಕ್ಕೆ ಯತ್ನ ಒಬ್ಬರದಿಲ್ಲ3 ಪರಿಣಾಮಕೆ ನಿನಗೆ ಸಾನುಕೂಲಾವಾಗಿ ಅನಿಲದೇವನು ಒಲಿದು ಹರಿಯ ಕೂಡಾ ಪ್ರಣಮಪೂರ್ವಕದಿಂದ ಪಂಚತ್ವ ಐದಿದೆ ಸಾ- ಧನ ಪೂರ್ತಿಕಾಲ ಎಳ್ಳನಿತು ಉಳದಿಪ್ಪದೊ 4 ವಿಧಿ ಸಂವತ್ಸರ ಭಾದ್ರಪದ ಶುಕ್ಲದ ಭಾನು ಬಿದಿಗೆಯಲಿ ಪ್ರವರ ಗೌತಮ ಸಂಗಮಾ ನಿಧಿಯಲಿ ವಿಜಯವಿಠ್ಠಲನಂಘ್ರಿಯುಗಳವನು ಹೃದಯದಲಿ ಇಟ್ಟು ದೇಹವ ತ್ಯಾಗಮಾಡ್ದೆ 5
--------------
ವಿಜಯದಾಸ
ಶೋಭಾನೆ ಶೋಭಾನೆ ಶೋಭಾನೆ ಪ ಶ್ರೀಗಣಾಧಿಪತಿಯ ಸಂಸೇವಿಸಿ ಶಂಕರನ ಭಜಿಸಿ ವಾಗಾಭಿಮಾನಿಯೆನಿಪ ಸರಸ್ವತಿ ದೇವಿಗೆ ವÀಂದಿಸಿ ಸಾಗರಸುತೆಯರಮಣ ನಿಂತು ಪೇಳಿಸಿದ ಪರಿಯೊ ಳೀಗ ಗಂಡುಮಕ್ಕಳಾಶೀರ್ವಾದ ಪದವ ಪೇಳ್ವೆ ಸುಜನರೆಲ್ಲಾಲಿಪುದು ಶೋಭಾನೆ 1 ಬಾಲನಾಗಿ ಪ್ರಹ್ಲಾದನವೋಲ್ ಬಹುಕ್ರೀಡೆಗಳಾಡುತಲಿ ಮೇಲೆ ಪಂಚಾಬ್ದದಿ ಸದ್ ವಿದ್ಯಾಭ್ಯಾಸಗಳನೆ ಮಾಡಿ ಶಾಸ್ತ್ರಾರ್ಥವೇತ್ತನಾಗುತಲಿ ಶೀಲಾದಿ ಸದ್ಗುಣಗಳುಳ್ಳ ಬಾಲೆಯಳ ಮದುವೆಯಾಗಿ ಕಾಲ ಕಾಲದಲ್ಲಿ ದೇವಋಷಿ ಪಿತೃಗಣಗಳ ಪೂಜೆ ಅಗ್ಗಳ ನೀನಾಗು 2 ಕೆರೆಗಳ ಕಟ್ಟಿಸು ಸರೋವರಗಳನ್ನೆ ಮಾಡಿಸು ನಿ- ನಿಖಿಳ ಯಜ್ಞಗಳಾಚರಿಸು ಸತ್ಪಾತ್ರಕ್ಕೆಯಿತ್ತುದಾತನೆಂದೆನಿಸು ನಿರತ ಬಂದವರಿಗನ್ನ ನೀಡುತ್ತ ಪ್ರಸನ್ನ ಮನದಿ ಮರಗಳ ಹಾಕಿಸು ಸಪ್ತಸಂತಾನಗಳನ್ನೆಗಳಿಸು ಮಾನ್ಯರೊಳು ವರ್ತಿಸಿಸುಖಿಸು 3 ಧರ್ಮಯುಕ್ತನಾಗುತ್ತ ಅಧರ್ಮಗಳ ಬಿಡುತ ಸ- ತ್ಕರ್ಮಗಳಾಚರಿಸು ಫಲವ ಕಂಜಾಕ್ಷಗರ್ಪಿತಮಾಡು ನಿತ್ಯ ಸಂತಸದಿ ಮರ್ಮಜ್ಞರೆನಿಪ ಗುರುಹಿರಿಯರ ಸೇವಿಸುತ ಸ ಮಾಡಿ ನಿತ್ಯಸುಖಿಯಾಗು 4 ಧೀರ್ಘಾಯುವಾಗಿರು ಬಂಧು ವರ್ಗವ ಪರಿಪೋಷಿಸು ಭರ್ಗಾದಿ ದೇವತೆಗಳ ಭಕ್ತಿಯಿಂದಾ ಪೂಜಿಸಿತ್ರಿ- ಅರ್ಥಿಯ ಪೊಂದು ಸ್ವರ್ಗಸ್ಥಿತಿ ಲಯಕರ್ತ ಗುರುರಾಮವಿಠಲ ನಘ್ರ್ಯ ಸಂಪದಗಳಿತ್ತು ಆದರಿಸಿ ತನ್ನ ಭಕ್ತಾ ನಿತ್ಯ ಸತ್ಯಾಧನವ ಮಾಡಿಸುವಾ ಶೋಭಾನೆ 5
--------------
ಗುರುರಾಮವಿಠಲ