ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಕ್ಕೊ ಇಲ್ಲೆ ಸಿಕ್ಕಿದ ಶ್ರೀಗುರು ಪರಬ್ರಹ್ಮ ತೆಕ್ಕಿಸಿಕೊಂಬುವ ಬನ್ನಿ ಅಖರದಿ ನಮ್ಮ ಧ್ರುವ ಎಂದಿಗೆ ಬಿಡಬಾರದಿನ್ನು ತಂದೆ ನಮ್ಮಪ್ಪನ ಹೊಂದಿ ಸುಖಿಯಾಗಬೇಕು ಭಕ್ತಪಾಲಿಪನ ವಂದಿಸಬೇಕಿಂದು ಸಹಸ್ರಳದಲಿಪ್ಪನ ಸಂದೇಹವಿಲ್ಲದೆ ನೋಡಿ ಸ್ವರ್ಗಕೆ ಸೋಪಾನ 1 ಹರುಷವಾಯಿತು ಎನಗೆ ಧರೆಯೊಳಿಂದು ನೋಡಿ ಕರುಣಾಳು ಗುರುಮೂರ್ತಿಯ ಸ್ತುತಿಸ್ತವನ ಪಾಡಿ ಎರಡಿಲ್ಲದೆ ಶ್ರೀಚರಣ ವರಕೃಪೆಯ ಬೇಡಿ ಶಿರಸಾ ನಮಿಸಿದೆ ಗರ್ವಾಂಹಕಾರ ಈಡ್ಯಾಡಿ2 ಲೇಸುಲೇಸಾಯಿತು ನಮ್ಮ ವಾಸುದೇವನ ಕಂಡು ಭಾಸ್ಕರಕೋಟಿ ತೇಜನ ಸ್ಮರಣಿಯ ಸವಿಯುಂಡು ವಾಸನೆ ತೃಪ್ತ್ಯಾಯಿತು ಶ್ರೀಯೀಶನಾ ಮನಗಂಡು ದಾಸಮಹಿಪತಿಗಾನಂದವಾಯಿತು ಸದ್ಗತಿ ಸೂರೆಗೊಂಡು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಪವ ಮಾಡಿದರೇನು ತಪವ ಮಾಡಿದರೇನು ವಿಪುಲಭಕ್ತಿಯು ಮಾತ್ರ ಇಲ್ಲದಿರುವವನು ಪ ವಿಪರೀತ ಡಂಭದಲಿ ಉಪಕರಣಗಳ ತೊಳೆದು ಕೃಪೆ ಪಡೆಯದಿರೆ ಗುರು ರಾಘವೇಂದ್ರನ ಅ.ಪ ಗುರುವಿನುಪದೇಶದ ಸ್ಮರಣೆಯನು ಮರೆತವನು ಗುರುಪಾದ ಸೇವೆಯನು ತೊರೆದು ಕಿರಿದೆನ್ನುವನು ಹರಿಯನೇ ನಾ ಕಂಡೆ ಗುರುಹಂಗು ಎನಗಿಲ್ಲ ಸರಿಯಾರು ತನಗೆಂಬ ಗರುವಯುತನು1 ಗುರುವಿನೊಲವೇ ಧರ್ಮ ಗುರುಸೇವೆಯೇ ತಪ ಗುರುನಾಮವೇ ಮಂತ್ರ ಗುರುಸಿದ್ಧಿಯೇ ತಂತ್ರ ಗುರುವೇ ಸ್ವರ್ಗಕೆ ದಾರಿ ಗುರುರೂಪ [ಕಣ್‍ಸಿರಿಯು] ಗುರುವೇ ಸರ್ವಸ್ವ ಮಾಂಗಿರಿರಂಗನುಸಿರು2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾಪ ಹತ್ತಿದೆ ಜಗಕೆ ಪಾಪ ಹತ್ತಿದೆಪಾಪದೊಳಗೆ ಮಹಾಪಾಪ ಪುರುಷ ಬೀಜಕೆ ಬಂದಿದೆ ಮೃತ್ಯು ಪ ಅಂದು ಕೃತಯುಗದಿ ಪಾರ್ವತಿಯಾಯಿತು ಭಸ್ಮಾಸುರಗೆಮುಂದೆ ತ್ರೇತಾಯುಗದಿ ಸೀತೆಯಾಗಿ ಹಿಡಿಯಿತು ರಾವಣಂಗೆ ಮೃತ್ಯು1 ಹಿಂದೆ ದ್ವಾಪರಯುಗದಿ ದ್ರೌಪದಿಯಾಗಿ ದುರ್ಯೋಧನನ ಮುರಿಯಿತು ಮೃತ್ಯುಇಂದು ಕಲಿಯುಗದಿ ನೋಡಲು ಇದಕೋ ಮನೆಮನೆಗೆ ಮೃತ್ಯು 2 ಹೆಡಕತ್ತಲಿ ಕೂತು ಹಗಲು ಇರುಳು ಕಾಯಿತಿದೆ ಮೃತ್ಯುಬಿಡಿಸಿಕೊಂಡು ಸ್ವರ್ಗಕೆ ಹೋದರೆ ಬೆನ್ನ ಬಿಡದು ಅಲ್ಲಿ ಮೃತ್ಯುಅಡ ಶಿರೋಶಿ ಇಲ್ಲಿಗೆ ಬಂದರೆ ಅಡರಿ ಕೊಂಬುದು ಮೃತ್ಯು3 ಮೃತ್ಯುಭಯವ ಬಿಡಿಸಿ ಮುಂದೆ ಕಾವರಿಲ್ಲವೋಮೃತ್ಯುಂಜಯರು ಚಿದಾನಂದ ಭಕ್ತರುಂಟುನಂಬಿದರೆ ಮೃತ್ಯು ಮಗ್ಗುಲಲಿದ್ದರೇನು ಮೋಹವಿಲ್ಲದಂತೆ ಮಾಡುವುದು4
--------------
ಚಿದಾನಂದ ಅವಧೂತರು
ಭಾಗೀರಥಿ ಭಾಗೀರಥಿಬಾಗುವವರಿಗೆ ದಯವಾಗಿರತಿ ಪ. ಗಂಗೆ ಗೌತುಮೆ ತುಂಗೆ ಮಂಗಳೆ ಕೃಷ್ಣಿ ನಿನ್ನಹಿಂಗದೆ ಅವರನ ರಂಗಿಸುವರೆ ತಾಯಿ 1 ಮಾನಸ ಸರೋವರನಾನಾ ತೀರ್ಥಗಳೆಲ್ಲಧೇನಿಸಿ ನಿನ್ನಯ ಮಾನ್ಯವ ಪಡೆದಿವೆ2 ಬ್ರಮ್ಹಾಂಡ ಬಿಚ್ಚಿ ಪರಬೊಮ್ಮಗ ಮಗಳಾದಿಬೊಮ್ಮನ ತಂಗಿ ನಾವು ನಿನ್ನನು ನೆನೆದೆವು3 ಸತ್ಯ ಲೋಕವ ಸ್ಮರಿಸಿ ಮತ್ತೆ ಸ್ವರ್ಗಕೆ ಬಂದಿಪ್ರಾರ್ಥಿಸಿದ ದೈವ ನಿನ್ನ ಅರ್ಥಿಲೆ ಗೆಲಿಸಮ್ಮ 4 ಭಗೀರಥ ಕರೆಯಲು ನಗದಲ್ಲಿ ಬಿದ್ದು ಕಾಶಿನಗರಕ್ಕೆ ಬಂದ ರಮಿ ಮಗಳ ಬಲಗೊಂಬೆ 5
--------------
ಗಲಗಲಿಅವ್ವನವರು
ಮುದಕಿಯ ಕಂಡರೆ ಸೇರದೆನಗೆ ಮುದಕಿಯ ಕಂಡರೆ ಸೇರದೋಸದಮಲಪರತತ್ವದ ಗುರಿಯ ತೋರದಂತೆ ಮಾಡಿದಪಒಬ್ಬನನೊಯ್ದಿಬ್ಬರ ಮಾಡಿ ಓಡಿಶ್ಯಾಡುವ ಮುದಕಿಹಚ್ಚಿಕೊಂಡು ಜಗವೆನಲ್ಲ ಹರಿದು ಆಡುವ ಪಾಡುವ ಮುದುಕಿ1ನಿಲ್ಲದೆ ಸ್ವರ್ಗಕೆ ನರಕಕೆ ಮನಜರನೆಲ್ಲರ ತಿರುಗಿಪ ಮುದುಕಿಎಳ್ಳಷ್ಟೂ ಎಚ್ಚರ ಹುಟ್ಟಿಸದ ಎಡವಟ್ಟಾದ ಮುದುಕಿ2ಇಂದ್ರಜಾಲವ ಖರೆಯಂದದಲಿ ಎಸಗಿಕೊಂಡಿಹ ಮುದುಕಿಬಂಧಿಸಿಯಿಹಳು ಊನವಿಲ್ಲದಲೆ ಬಾಜಿಗಾರ ಮುದುಕಿ3ಏನೇನಿಲ್ಲವು ತನಗದು ರೂಪವು ಎಲ್ಲವು ಆದ ಮುದುಕಿತಾನಾರೆಂದು ತನ್ನನ್ನು ತಿಳಿಯೆ ತನ್ನೊಳಗಡಗಿಹ ಮುದಕಿ4ಮುನ್ನ ಅನಾದಿಯು ಎನಿಸಿಕೊಂಡರು ಮೂಲಮಾಯೆ ತಾ ಮುದುಕಿತನ್ಮಾತ್ರಾದ ಚಿದಾನಂದ ಬ್ರಹ್ಮದಿ ತೋರುತ ಅಡಗುವ ಮುದಕಿ5
--------------
ಚಿದಾನಂದ ಅವಧೂತರು