ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಬಾ ಸರಸ್ವತೀ ದೇವಿ ಜಗ- ದಂಬಾ ಸರಸ್ವತೀ ದೇವಿ ಪ. ಅಂಭೋಜನಯನೆ ರೋ- ಲಂಬಕುಂತಳೆ ಜಗ . . . . ಅ.ಪ. ರುದ್ರಾದಿ ಸುರಕುಲ ಸಿದ್ಧಿಪ್ರದಾಯಕಿ ಶುದ್ಧ ಸತ್ವಕಲಾಪೆ ಶ್ರದ್ಧಾಭಕ್ತಿಸ್ವರೂಪೆ 1 ಮಾತ್ರಾಸ್ವರವರ್ಣಮಾನಿ ವಾಣಿ ಕಲ್ಯಾಣಿ ಸೂತ್ರಾರ್ಥಬೋಧಿನಿ ವಿಧಾತನ ರಾಣಿ 2 ಕ್ಷೀರಾಬ್ಧಿಶಾಯಿ ಲಕ್ಷ್ಮೀನಾರಾಯಣನ ಕರು- ಣಾರಸಪೂರೆ ಸುವಿಚಾರೆ ಗಂಭೀರೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅಂಬಾ ಸರಸ್ವತೀ ದೇವಿ ಜಗ- ದಂಬಾ ಸರಸ್ವತೀ ದೇವಿ ಪ. ಅಂಭೋಜನಯನೆ ರೋ- ಲಂಬಕುಂತಳೆ ಜಗ . . . . ಅ.ಪ. ರುದ್ರಾದಿ ಸುರಕುಲ ಸಿದ್ಧಿಪ್ರದಾಯಕಿ ಶುದ್ಧ ಸತ್ವಕಲಾಪೆ ಶ್ರದ್ಧಾಭಕ್ತಿಸ್ವರೂಪೆ 1 ಮಾತ್ರಾಸ್ವರವರ್ಣಮಾನಿ ವಾಣಿ ಕಲ್ಯಾಣಿ ಸೂತ್ರಾರ್ಥಬೋಧಿನಿ ವಿಧಾತನ ರಾಣಿ 2 ಕ್ಷೀರಾಬ್ಧಿಶಾಯಿ ಲಕ್ಷ್ಮೀನಾರಾಯಣನ ಕರು- ಣಾರಸಪೂರೆ ಸುವಿಚಾರೆ ಗಂಭೀರೆ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪಾದವ ನುತಿಸುವೆ| ದೇವಿ ಜಯ ಜಯ ಪ ದಾತೆ ಜಯ ಜಯ ಅ.ಪ ರವಿಶಶಿಶೋಭಿತೆ| ಪಾವನಚರಿತೆ || ಕುವಲಯದಳ ಸು| ಶ್ಯಾಮಲೆ ಕೋಮಲೆ 1 ಗಾನವಿಲೋಲೆ| ಘನಗುಣಶೀಲೆ|| ದೀನಜನಾವಳಿ| ಪಾಲಯೆ ಸದಯೆ2 ಭಕ್ತವಶಂಕರೆ| ಭಜಕಸುಖಂಕರೆ|| ಮುಕ್ತಿದಾತೆ ಶಿವ| ಶಕ್ತಿಸ್ವರೂಪೆ 3
--------------
ವೆಂಕಟ್‍ರಾವ್
ರಂಗನಾಯಕಿಗಾರತೀ ಅಂಗನೆಯರು ಬೆಳಗಿರೆ ಅಂಗಜನಜನನಿಗೆ ಮಂಗಳಗಾತ್ರೆಗೆ ಮಂಗಳವೆನ್ನಿರೆ ಪ. ಪ್ರೇಮಮಯ ಸ್ವರೂಪೆಗೆ ರಾಮಣೀಯಕ ಮೂರ್ತಿಗೆ ಪ್ರೇಮತಳೆದಾಮೋದದಿಂ ಕಾಮಿತವೀಯೆನುತಾ ನಮಿಸುತ 1 ಮಾತೆಯೇ ಪರದೈವವು ನೀತಿತಾನಿದು ಸತ್ಯವು ವಾತಾತ್ಮಜ ಸಂಸೇವಿತೆ ಸೀತೆಯ ಜಗನ್ಮಾತೆಯೆನ್ನುತ 2 ಕಾಂತ ಶೇಷಗಿರೀಶನ ಅಂತರಂಗದ ದಯೆಯೆನೆ ಇಂತೆಮ್ಮ ಸುಸ್ವಾಂತರ್ಕಳೆಂದಂತೆಸಗುವಂತ ಶ್ರೀಕಾಂತೆಯೆ ತಾನೆನೆ3
--------------
ನಂಜನಗೂಡು ತಿರುಮಲಾಂಬಾ
ವಾಣಿ ಬ್ರಹ್ಮನ ರಾಣಿ ಕಲ್ಯಾಣೀ| ಫಣಿವೇಣಿ ಸದ್ಗುಣ | ಶ್ರೇಣಿ ವೀಣಾ ಪುಸ್ತಕ ಪಾಣಿ ಪ ಜಾಣೆ ಶ್ರೀ ಜಗತ್ರಾಣಿ ಶಾಸ್ತ್ರ ಪ್ರ- ವೀಣೆ ವೇದ ಪ್ರಮಾಣಿ ನಿನಗೆಣೆ | ಗಾಣೆ ಸಂತತಕೇಣವಿಡದೆನ್ನಾಣೆ | ನೆಲಸಿರು ಮಾಣದೆನ್ನೊಳು ಅ.ಪ. ತ್ರಿಜಗ ಶುಭ ಕಾಯೇ | ಓಂಕಾರರೂಪಿಣಿ | ಮಾಯೆ ಮುನಿಜನಗೇಯೆ ಸುಖದಾಯೇ || ತೋಯಜಾಂಬಕಿ ಶ್ರೀಯರ ಸೊಸೆ | ಆಯದಿಂದಲಿ ಶ್ರೇಯಸ್ಸುಖಪದ - ವೀಯೆ ಸಂತತ ಕಾಯೆ ಶತಧೃತಿ ಪ್ರೀಯೆ | ನೀನೆನಗೀಯೆ ವಾಕ್ಸುಧೆü 1 ಅಕ್ಷರ ಸ್ವರೂಪೆ ನಿರ್ಲೇಪೇ | ಮೌನಿಜನ ಮಾನಸ | ಪಕ್ಷ ಸಕಲಾಧ್ಯಕ್ಷೆ ಶುಭಚರಿತೇ | ಸೂಕ್ಷ್ಮ ಸ್ಥೂಲ ಸುಲಕ್ಷಣಾನ್ವಿತೆ | ಮುಮುಕ್ಷು ಜನ ನಿಜ | ಭಕ್ತಿ ಭುಕ್ತಿವರ ಪ್ರದಾಯಕಿ | ಮುಕ್ತಿ ಸುಖ ಸೌಖ್ಯ ಪ್ರದಾಯಕಿ 2 ಸುಂದರಾಂಗಿ ಆನಂದ ಗುಣ ಭರಿತೇ | ವಂದಿಸುವೆ ತವಪದ -| ದ್ವಂದಕಾನತನಾಗಿ ಸಚ್ಚರಿತೇ | ಯೆಂದು ಮದ್‍ಹ್ವನ್ ಮಂದಿರದಿ ನೀ | ನಿಂದು ಆಪದ್ ಬಂಧು ಕರುಣಾ | ಸಿಂಧುವನು ನಾನೆಂದು ಪೊಗಳ್ವಾ -| ನಂದವರ ಸದಾನಂದ ಪಾಲಿಸೇ 3
--------------
ಸದಾನಂದರು
ಶಾಂಭವಿ ಶೈಲಜೆ ಅಂಬಿಕೆ ದೇವಿ ಅಂಬುರು ಹಾಸನೆ ಪಾಲಿಸು ಪ್ರೇಮದಿ ಪ ಅಕ್ಷಯ ರಾಕ್ಷಸನಾಶಿನಿ ಯಕ್ಷಸುಪೋಷಿಣೆ 1 ದಿವ್ಯಸ್ವರೂಪೆ ಭವ್ಯಕಲಾಪೆ ಸ್ತವ್ಯ ಸ್ವರೂಪಿಣಿ ಗರ್ವ ವಿದಾರಿಣೆ 2 ಪಾಲಿಸು ಶಂಕರಿ ಗೌರಿ 3 ಪ್ರೇಮದಿ ಸ್ವರ್ನಸುಗಾತ್ರಿ 4 ಧ್ಯಾನವಗೈಯುವೆ ಧೇನುಪುರೀಶೆ 5
--------------
ಬೇಟೆರಾಯ ದೀಕ್ಷಿತರು