ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾರಿಸಬೇಕೋ ಎನ್ನಾ|ಯಾದವ ರನ್ನಾ ಪ ತಾರಿಸಬೇಕೋ ಎನ್ನಾ | ಯಾದವ ರನ್ನಾ| ಸಾರಿದೆ ನಾನು ನಿನ್ನಾ|ಘೋರ ಭವಾಂಬುಧಿಯಾ| ಪಾರಗಾಣೆನೋ ಜೀಯಾ | ವಾರೆ ಕಂಗಳೆನ್ನಾ ನೋಡಿ| ದಯಮಾಡಿ ಒಡಮೂಡಿ ಅಭಯವ ನೀಡಿ1 ತಾನಾರೆಂಬುದು ನೋಡದೇ ತನುವಿನೊಳು| ನಾ ನನ್ನದೆಂದು ಪಾಡಿದೇ| ಶ್ರೀನಾಥ ನಿನ್ನ ನಾಮಾ|ನೆನೆಯದೆ ಮನದೊಳೊಮ್ಮಾ| ನಾನಾ ವಿಷಯದೊಳು ಬೆರೆದು|ಮೈಮುರಿದು| ಹಿತಜರಿದು ಕೆಡುವಾದೇನರಿದು 2 ಶರಣರಾ ಸಂಗದೋರಿಸಿ|ಸ್ವರೂಪವಾ| ಮರೆದ ವಿಭ್ರಮ ಹಾರಿಸೀ| ಗುರುಮೂರ್ತಿ ಪ್ರಭು|ಅರಹು ನೀಡೋ ಭಕ್ತಿಯಾ| ಸುರಸಾ ಸಾರಾಯದ|ಸುಖನುಂಬೆ|ಬಲಗೊಂಬೆ| ನಮೋಯೆಂಬೆ ಎನ್ನಿಂಬ ಬಿಂಬವೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಿದರೆ ತನ್ನೊಳಗದೆ ಗೂಢವಾಗದೆ ಧ್ರುವ ಸೋಹ್ಯ ತಿಳಿಯಗೊಡದೆ ಮಾಯ ಮರಿ ಆಗ್ಯದೆ ಕಾಯದೊಳಗೆ ತಾನಾದೆ ಗುಹ್ಯವಾಗ್ಯದೆ 1 ಅಡಿ ಮೇಲು ತಿಳಿಯದೆ ಬಿಡದೆ ಸೂಸುತಲ್ಯದೆ ಹಿಡಿದೇನೆಂದರೆ ಬಾರದು ಇಡದು ತುಂಬ್ಯದೆ 2 ತೋರಿಕೆ ತೋರಿಸದೆ ಪರಿಪೂರ್ಣ ತಾನಾಗ್ಯದೆ ಮೂರುಗುಣಕೆ ಮೀರ್ಯದೆ ಬ್ಯಾರೆ ತಾನದೆ 3 ಕರುಣಿಸಿ ನೋಡುತದೆ ಕರೆದರೋ ಎನುತದೆ ಬ್ಯಾರೆ ನಿರಾಶೆವಾಗ್ಹಾದೆ ಹೊರೆಯುತಲ್ಯದೆ 4 ನೀಲವರ್ಣದೊಳದೆ ಥಳಥಳಗುಡುತದೆ ಮ್ಯಾಲೆ ಮಂದಿರದೊಳದೆ ಲೋಲ್ಯಾಡುತದೆ 5 ಗುರುತ ಕಂಡವಗದೆ ಗುರುಸ್ವರೂಪವಾಗ್ಯದೆ ಗುರು ಕೃಪೆ ಆದವಂಗದೆ ಸಾರಿ ಚಲ್ಯದೆ 6 ದಾಸ ಮಹಿಪತಿಯೊಳದೆ ವಾಸವಾಗ್ಯದೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪರಮಾನಂದ ಪರಿಪೂರ್ಣಾ ನೀ ಗುರುವರಾ ಜ್ಞಾನಾದಾತಾ ಮಾನಿತಾ ನೀ ದೇಹಾದಿಸಂಘಾತವಾ ಮೀರಿರ್ದ ಸ್ವರೂಪವಾ ಮಹಾಗೂಢವಾ ಬೋಧಿಸೀ ಮುಕುತಿ ನೀಡುತಿರುವಾ ನೀ ಸ್ವರೂಪಾಜ್ಞಾನಾ ಮಹಾಸಾಧನಾ ಪೇಳಿದ ನೀನೇ ದಯಾಘನಾ ಮಾನಿತನೇ ಪರಾತ್ಪರಾ ನಿರಾಮಯಾ ನೀನೇ ಸ್ವರೂಪಾತ್ಮನೈ ನೀನೇ ನಾನಾದೆ ದೇವಾಗುರುವೇ ಶಂಕರಾರ್ಯ
--------------
ಶಂಕರಭಟ್ಟ ಅಗ್ನಿಹೋತ್ರಿ