ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಕೂರ್ಮಚಾರ್ಯರ ಚರಣಕಮಲಯುಗ್ಮ ಮಾನವ ಪ ಧರಣಿಯೊಳಗೆ ಸುಕ್ಷೇತ್ರಗಾಲವ ಪುರದಿ ಶ್ರಿ ನರಶಿಂಹಾ ಚಾರ್ಯರ ತರುಣಿಯಳ ಗರ್ಭಾಬ್ಧಿಯಲಿಹಿಮ ಕರನ ತೆರದಲಿ ಜನಿಸಿಮೆರೆದ ಅ.ಪ ವರಕೊಲ್ಹಾಪುರದಿ ಪೋಗಿರಲು ಸುಂದರವಾದ ಸಿರಿಯರೂಪವ ಕಾಣುತ್ತ ಅರಿತು ಪ್ರಾರ್ಥಿಸಲು ಶ್ರೀ ನರಶಿಂಹಾರ್ಯರಿಗೊಲಿದು ಕರುಣದಿಂದಲಿ ಕೊಟ್ಟಂಥ ಚರಣಕವಚ ಸ್ವರಣ ಸಂಪುಟದಲ್ಲಿ ನಿರುತ ಪೂಜೆಯ ಮಾಡುತ್ತ ಪ್ರವಚನಾಸಕ್ತ ಧರೆಯೊಳಗೆ ಬಹು ಶರಣು ಜನ ರಘ ತರಿದು ಸೌಖ್ಯವ ಗರಿವುದಕೆ ಸಂ ಚರಿಸುತಲಿ ಸಚ್ಛಾಸ್ತ್ರ ಮರ್ಮವ ನರುಹಿಜನರನುದ್ಧರಿಸಿದಂಥ 1 ಪೊಳೆವ ಫಾಲದಿ ಪುಂಡ್ರ ತಿಲಕ ಮುದ್ರಾಕ್ಷತಿ ವಿಲಸಿತ ಶುಭಗಾತ್ರದಿ ಅಲವ ಬೋಧರ ಮತದೊಳು ತತ್ವಬೋಧಕ ಸುಲಲಿತೋಪನ್ಯಾಸದಿ ಬಲು ವಿಧಾರ್ಥವ ಪೇಳಿಕುಳಿತಪಂಡಿತರನ್ನು ಒಲಿಸುತಿರೆ ಪೂರ್ವದಿ ಪಂಢರಪುರದಿ ಭವ ಮುದ್ಗಲಾಚಾರ್ಯರಿ ಗೊಲಿದು ಬಂದಿಹ ಚಲುವ ವಿಠ್ಠಲ ಮೂರುತಿಯ ಪದ ಜಲಜ ಮಧುಕರರೆನಿಸಿದಂಥ 2 ಜಡಜಾಪ್ತನುದಯದಿ ನಡೆದು ದ್ವಿಜಗೃಹದೇವ ರಡಿ ಗೊಂದನೆಯ ಮಾಡುತ್ತ ಎಡೆಬಿಡದಲೆ ತಮ್ಮ ಅಡಿಗೊಂದಿಸುವ ಭಕ್ತ ಗಡಣವ ಮನ್ನಿಸುತ ಬಿಡದೆ ಶತತ್ರಯ ಕೊಡ ಜಲದಲಿ ಸ್ನಾನ ದೃಢಮನದಲಿ ಮಾಡುತ್ತ ತಂತ್ರ ಸಾರೋಕ್ತ ಎಡಬಲದಿ ಶೇವೆಯನು ಮಾಡುವ ಪೊಡವಿಸುರಕೃತ ವೇದ ಘೋಷದಿ ಜಡಜನಾಭನ ಪೂಜಿಸುವ ಬಹು ಸಡಗರವ ನಾನೆಂತು ಬಣ್ಣಿಪೆ 3 ಭೂತಲದಲಿ ಶ್ರೇಷ್ಠವಾತ ಮಾತಾಂಬುಧಿ ಶೀತ ಕಿರಣನೆನಿಸಿ ಪ್ರಾತರಾರಭ್ಯ ಶ್ರೀನಾಥನೆ ಪರನೆಂಬೊ ಶಾಸ್ತ್ರದಿ ಮನವಿರಿಸಿ ಖ್ಯಾತ ಸತ್ಯಧ್ಯಾನ ತೀರ್ಥರೆಂಬುವ ಗುರು ಪ್ರೀತಿಯ ಸಂಪಾದಿಸಿ ಪುತ್ರರಿಗೆ ಬೋಧಿಸಿ ಪ್ರೀತಿಯಲಿ ಶಿಷ್ಯರಿಗೆ ಭಗವ ದ್ಗೀತೆಯನು ಪ್ರತಿದಿನದಿ ಪೇಳುತ ಪಾತಕವ ಪರಿಹರಿಸಿ ಪರಮ ಪು- ನೀತ ಗಾತ್ರರ ಮಾಡಿ ಸಲಹಿದ 4 ಧರೆಯೊಳಧಿಕಮಾದ ಗಿರಿ ವೇಂಕಟೇಶನ ದರುಶನವನೆ ಕೊಳ್ಳುತ ಗುರುವಾಜ್ಞೆಯಲಿ ಬಂದು ವರ ಸಭೆಯೊಳು ತಮ್ಮ ಪರಿವಾರದಿಂದಿರುತ ವರಷ ಶಾರ್ವರಿಯೊಳು ವರ ಮಾಘ ಪ್ರತಿಪದ ಬರಲು ಧ್ಯಾನವ ಮಾಡುವ ಹರಿಪದಾಸಕ್ತ ಪರಮ ಭಕುತಿಯಲಿಂದ ಶೇವಿಪ ಶರಣು ಜನ ಮಂದಾರ ನೆನಿಸುತ ಮೆರೆವ ಕಾರ್ಪರ ನಿಲಯ ಶಿರಿನರ ಹರಿಯ ಪುರವನು ತ್ವರದಿ ಶೇರಿದ 5
--------------
ಕಾರ್ಪರ ನರಹರಿದಾಸರು
ನೋಡಿದೆ ವೇಂಕಟ ನಿನ್ನ ಪ ಕೊಂಡಾಡಿ ಬೇಡಿದೆ ವರವನ್ನ ಆಹಾ ರೂಢಿಯೊಳಗೆ ನಿನಗೆ ಈಡುಗಾಣೆನೊ ದೇವ ನಾಡುದೈವಗಳೆಲ್ಲ ಒಡಿಪೋದವೊ ಸ್ವಾಮಿ ಅ.ಪ ಮಣಿಗಣಮಯದ ಕಿರೀಟ, ಕಪ್ಪುವ ರಣಕುಂತಲದ ಲೋಲ್ಯಾಟ, ಯುಗತ ರಣಕುಂಡಲ ಬಹು ಮಾಟ ಅರ ಗಿಣಿ ಶÀಶಿಪೋಲ್ವ ಲಲಾಟ ಆಹಾ ಎಣೆಗಾಣೆ ಕಸ್ತೂರಿ ಮಣಿರ್ದಿಪ ಭ್ರೂಯುಗ ಕುಣಿಯುತ ಸ್ಮರಧನು ಗಣಿಸದೊ ಎಲೋದೇವಾ 1 ವಾರಿಜಯುಗಸಮನಯನ, ನಾಸ ಚಾರುಚಂಪಕ ತೆನೆ, ವದನದೊಳು ತೋರುವ ಸುಂದರರದನ ಪಂಕ್ತಿ ಸಾರಿದಾಧರ ಬಹು ಅರುಣ, ಆಹಾ ಸಾರಸಮುಖದೊಳು ಸೇರಿ ಶೋಭಿಪ ಚುಬಕ ಕೂರುಮಯುಗಕದಪು ಸಾರಕಟಾಕ್ಷವ 2 ಕಂಧರಾಂಕಿತ ಸತ್ರಿರೇಖಾ, ಕಂಠ ಪೊಂದಿಪ್ಪೊದ್ವರ್ತುಲ ಕ್ರಮುಕ, ಕೊರಳ ಸುಂದರಕೌಸ್ತುಭಪದಕ, ಬಹು ಬಂಧುರ ಚೆÉೈತ್ರ ಸುರೇಖ ಆಹಾ ಹಿಂದೆ ಸಿಂಹÀದ ಹೆÉಗಲಿನಂದದಲೊಪ್ಪಿದ ಸ್ಕಂಧದಿ ಶೋಭಿಪ ಒಂದು ಸರಿಗೆಯನ್ನು 3 ಸ್ವನ್ನ ಏಕಾವಳಿಹಾರಾ, ಬಾ ಪುತ್ಥಳಿ ಸಿರಿಯಾಕಾರ, ಬಹು ಚನ್ನವಾಗಿಹ ನಾನಾಹಾರ, ಶುಭ್ರ ವರ್ಣ ಶೋಭಿಪ ಜನಿವಾರ ಆಹಾ ಇನ್ನು ಗುಂಡಿನಮಾಲೆ, ಘನ್ನ ಜಲಸರಪಳಿ ಉನ್ನತದಾನಘ್ರ್ಯ ರನ್ನ ಜಯಂತಿಯಾ 4 ಶಿರಿವತ್ಸಲಾಂಛನಹೃದಯ, ಸುರ ಕರಿಕರತೆರಬಾಹು ಶಿರಿಯಾ, ನಾಲ್ಕು ಕರಗಳೊಪ್ಪವವೀಪರಿಯ, ಮೇಲಿ ನ್ನೆರಡು ಹಸ್ತದಿ ಶಂಖ ಅರಿಯ ಆಹಾ ವರರತ್ನ ಮುದ್ರಿಕೆ ಧರಿಸಿದ ಬೆರಳುಳ್ಳ ಕರತೋಡ ಕಡಗಕ್ಕೆ ಸರಿಗಾಣೆ ಧರೆಯೊಳು 5 ಪರಮವೈಕುಂಠದಕಿಂತ ಈ ಧರಿತಳವದಿಕವೆನ್ನು ತಾ ಬಲ ಕರದಿಂದ ಜನಕೆ ತೋರುತಾ ಬಾಹು ಎರಡು ಆಜಾನುಪೂರಿತಾ ಆಹಾ ಸ್ವರಣರತ್ನ ಖಚಿತ ವರನಾಗಭೂಷಣ ಧರಿಸಿ ಟೊಂಕದಿ ವಾಮಕರವಿಟ್ಟು ಮೆರೆವೋದು 6 ಹಸ್ತಯುಗದಿ ತೋಡ್ಯ ಕಡಗ, ಪ್ರ ಶಸ್ತ ರತ್ನದ್ಹರಳಸಂಘ ರಚಿತ ಸಿಸ್ತಾದÀ ಉಂಗುರ ಬೆಡಗ, ಬಹು ವಿಸ್ತರಾಂತರ ಭುಜಯುಗ ಆಹಾ ಹಸ್ತಿವರದ ಸಮಸ್ತಲೋಕಕೆ ಸುಖ ವಿಸ್ತಾರ ನೀಡುತ ಸಿಸ್ತಾದ ದೇವನ 7 ಉದರ ತ್ರಿರೇಖ ರೋಮಾಳಿನಾಭಿ ಪದುಮ ಶೋಭಿಪ ಗುಂಭಸುಳಿ ಮೇಲೆ ಉದಯಾರ್ಕ ಪೋಲುವ ಕಲೆ ಇಂದ ಸದಮಲಾಂಬರಪಟಾವಳಿ ಆಹಾ ಬಿದುರಶೋಭಿüತ ಮಹಾಚÀದುರದೊಡ್ಯಾಣವು ಪದಕ ಮುತ್ತಿನ ತುದಿ ವಿಧವಿಧ ಪೊಳೆವೋದು 8 ರಂಭೆ ಪೋಲುವ ಊರುಸ್ತಂಭ, ಇಂದು ಡಿಂಬ ಭಕ್ತ ಕ ದಂಬ ಮೋಹಿಪ ವಿಡಂಬ ಆಹಾ ಅಂಬುಜಾಸನಪಿತನ ತುಂಬಿದ ಮೀನ್ಜಂಘ ನಂಬಿದ ಜನರನ್ನ ಇಂಬಾಗಿ ಸಲಹೋನಾ 9 ಪರಡೆರಡು ಮಾಣಿಕ್ಯಾವರಣ, ಪೊಳೆವ ಕಿರುಗೆಜ್ಜೆನೂಪುರಾಭರಣ ಇಟ್ಟು ಮೆರೆವೊ ಗಂಗೆಯ ಪೆತ್ತ ಚರಣ ಯುಗ ನಿರುತ ಭಜಿಪರೊಳತಿ ಕರುಣ ಆಹಾ ಮರೆಯದೆ ಮಾಡುತ ಪರಿಪರಿ ಸೌಖ್ಯವ ಕರೆದುನೀಡುವನಹಿಗಿರಿವಾಸ ಶ್ರೀಶÀನ್ನ 10 ಪೋತೇಂದು ನಖಯುತ ಬೆರಳ ಸಾಲು ದೂತತತಿಗೆ ಸುಖಗಳನಿತ್ತು ನೀತಙÁ್ಞನ ಭಕ್ತಿಗಳ ನಿತ್ಯ ಪ್ರೀತಿಪಡೆಯೆ ಮುಕ್ತಿಗಳ ಆಹಾ ವಾತಗುರುಜಗನ್ನಾಥವಿಠಲನತಿ ನಿತ್ಯ 11
--------------
ಗುರುಜಗನ್ನಾಥದಾಸರು