ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೋಗಣೆಯ ಮಾಡು ಸಾರಸುಖದೊಡೆಯ ಪ. ಸತ್ಯವಾದ ಜಗಕೆ ಕರ್ತುಕಾರಣ ನೀನೆ ಮುಕ್ತಿದಾಯಕ ನಿತ್ಯತೃಪ್ತನಹುದೈ ಸತ್ಯವಾದವತಾರ ಸಕಲಗುಣ ಪರಿಪೂರ್ಣ ಸಿರಿ ಪರಮ ದಯಾಳು1 ಅಣುರೋಮಕೂಪದಲಿ ಅಂಡಜಾಂಡಗಳಿರಲು ಘನಕೃಪಾಂಬುಧಿ ನಿಮ್ಮ ಪೊಗಳಲಳವೆ ಫಣಿಶಾಯಿಯಾಗಿದ್ದ ಭುವನವ್ಯಾಪಕ ಹರಿಯ ಘನಭಕುತಿಲ್ಯಜಭವರು ಪೂಜೆಮಾಡುವರು 2 ಗಂಗೆಗೋದಾವರಿ ತುಂಗಭದ್ರೆ ಯಮುನೆ ರÀಂಗಸನ್ನಿಧಿಯಾದ ಕಾವೇರಿಯು ಮಂಗಳ ಭೀಮರಥಿ ನಿಮಗೆ ಮಜ್ಜನಕೆ ಅಣಿಮಾಡಿ ಅಂಗಜನಯ್ಯ ಭಾಪೆಂದು ಪೊಗಳೆ 3 ರನ್ನಮಯವಾಗಿರ್ದ ಹೊನ್ನಮಂಟಪದೊಳಗೆ ಸ್ವರ್ಣಪಾತ್ರೆಗಳಲ್ಲಿ ಸ್ವಯಂಪಾಕವು ನಿನ್ನ ಸೊಸೆ ವಾಣಿ ಭಾರತಿದೇವಿ ಕಡುಜಾಣೆ ಚೆನ್ನಾಗಿ ನೈವೇದ್ಯವನ್ನೆ ಮಾಡುವರು 4 ಗಂಧ ಕಸ್ತೂರಿ ಪುನುಗು[ಚಂದನ] ಜವ್ವಾಜಿ ಮುಂದೆ ಕುಂಕುಮದ ಕೇಸರಿಯ ಲೇಪ ಚೆಂದದ ಕೇದಿಗೆ ಮುಡಿವಾಳ ಸಂಪಿಗೆ ಕಂದರ್ಪನಯ್ಯಗೊಪ್ಪಿತು ಮಲ್ಲಿಗೆ 5 ದೆಸೆದೆಸೆಗೆ ಪರಿಮಳಿಪ ಕುಶಲದ ಚಿತ್ರಾನ್ನ ಬಿಸಿದೋಸೆಗೆ ಬೆಣ್ಣೆ ಲೇಹ್ಯಪೇಯ ಬಸಿರೊಳಗೆ ಈರೇಳು ಜಗವನಿಂಬಿಟ್ಟವಗೆ ನಸುನಗುತ ಇಂದಿರಾದೇವಿ ಬಡಿಸೆ 6 ನೂರು ಯೋಜನದಗಲ ಸರಸಿಜ ಬ್ರಹ್ಮಾಂಡ ಹದಿ ನಾರು ಬಣ್ಣದ ಚಿನ್ನದ್ಹರಿವಾಣವು ಸಾರೆಯಲಿ ಪೊಂಬಟ್ಟಲೆಂಬ ಸಾಗರದೊಳಗೆ ಮೇರುಗಿರಿಯೆಂಬೊ ದೀಪಗಳು ಬೆಳಗೆ 7 ಘೃತ ಸೂಪ ಲೋಕಪತಿಗನುವಾದ ದಿವ್ಯಾನ್ನವು ಬೇಕಾದ ಪಂಚಭಕ್ಷ್ಯ ರಸಾಯನವ ಏಕಾಂತದಲ್ಲಿ ನಿಮ್ಮ ದೇವಿ ಬಡಿಸೆ 8 ಖಳರಕುಲವೈರಿಗೆ ತಿಳಿನೀರುಮಜ್ಜಿಗೆ ಎಳನೀರು ಪಾನಕ ಸೀತಳುದಕ ಬಳಲಿದಿರಿ ಬಳಲಿದಿರಿ ಎನುತ ಹಯವದನಗೆ ನಳಿನಾಕ್ಷಿ ಕರ್ಪೂರವೀಳ್ಯವನೆ ಕೊಡಲು 9
--------------
ವಾದಿರಾಜ
ಇದೇ ನೋಡಿರೋ ಸ್ವಯಂಪಾಕ ಸದಮಲಾನಂದಸುಖ ದ್ರುವ ಶುದ್ಧ ಮಾಡಿ ಹೃದಯಸ್ಥಳ ಇದು ಏಕಾಗ್ರ ನಿರ್ಮಳಾ ಸಾಧ್ಯಗೊಂಡು ಮನಾನುಕೂಲ ಸಿದ್ಧಿ ಇದೇವೇ ಸುಶೀಲಾ 1 ಭಕ್ತಿವೈರಾಗ್ಯೊಲಿಹೂಡಿ ನಿತ್ಯಙÁ್ಞನಾಗ್ನಿ ಒಡಗೂಡಿ ತತ್ವ ಪಂಚಪಾತ್ರೆಯಮಾಡಿ ಸತ್ಯಸಂಕಲ್ಪ ಇದೇ ನೋಡಿ2 ಸಕಲ ಸಾಮುಗ್ರಿಯ ಸಂಚಿತಾ ಪಕ್ವಆಯಿತು ಆಯಿತು ಮುಖ್ಯಮಹಿಪತಿಗಿದೆ ಸ್ವಹಿತಾ ಸುಖದೋರಿದ ಗುರುನಾಥಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಶವಿಧ ಬ್ರಹ್ಮರ ಮನೆಯಲಿ ಭಿಕ್ಷವ ಕೊಳುತಿಹ ಅವಧೂತದಶವಿಧ ಬ್ರಹ್ಮರ ವಿವರವನೀಗಲೆ ಪೇಳುವೆ ಪ್ರಖ್ಯಾತ ಪ ಸತ್ಯವು ಶೌಚವು ಸಮಸ್ತ ಬ್ರಹ್ಮವು ಸರ್ವದಿ ದಯವಿಟ್ಟಿಹನುನಿತ್ಯವು ತತ್ವವು ಈತನು ಬ್ರಾಹ್ಮಣರೊಳಗೆ ಬ್ರಾಹ್ಮಣನು 1 ಮಾಯೆಯು ಇಲ್ಲವು ಸ್ನಾನಕರ್ಮದಲಿ ದೇವಗೋವು ಪ್ರಿಯನುಆಯುಧದಿಂ ರಣ ಜಯಿಸುವನೀತನು ಬ್ರಾಹ್ಮಣ ಕ್ಷತ್ರಿಯನು2 ಸಿದ್ಧವು ಕರ್ಮದಿ ದೇವಗೋವುಗಳ ಪೂಜಿಸುತಿಹನೀತಉದ್ದಿಮೆ ಮಾಡುವ ನಾನಾ ಬ್ರಹ್ಮರೊಳು ವೈಶ್ಯನೆ ಇವನೀತ 3 ಚಲ್ಲಣ ಹಾಕಿಯೆ ಮಿಣಿನೊಗ ಹೊತ್ತಿಹನೀತಎಲ್ಲ ಕೃಷಿಯ ವ್ಯವಹಾರವನು ಮಾಡುವ ಬ್ರಾಹ್ಮಣರೊಳು ಇವ ಶೂದ್ರ 4 ಹಲಬರು ಇಹೆವೆಂದು ಸ್ವಯಂಪಾಕಕೆತ್ತುವ ಮಾಡುತ ಬಹುಜಾಲಆಚಾರದ ಸೋಗಿನಲಿ ಹೊರಗುಂಬುವರು ಬ್ರಾಹ್ಮಣಮಾರ್ಜಾಲ 5 ಎಡಗೈ ಅರಿಯನು ಬಲಗೈ ಅರಿಯನು ನುಡಿವನು ಬಿರುಮಾತಉಡುವನು ಹಬ್ಬಕೆ ಧೋತ್ರವ ಬ್ರಾಹ್ಮಣರೊಳಿವನೀಗ ಕುರುಬ 6 ಚೋರರ ಕೂಡಿಯೆ ಪಾಲನೆಕೊಂಬನು ಮಾಡುತ ಬಲು ಘಾತಆರಾದರನು ಅರಿಯನು ಬ್ರಾಹ್ಮಣರೊಳವ ಕಿರಾತ 7 ಕಾಣನು ಭೇದವ ತಂದೆ-ತಾಯಿಯಲಿ ಜೀವರುಗಳ ನೋಡಪ್ರಾಣವ ಕೊಂಬನು ಬ್ರಹ್ಮೆಂತೆನ್ನದೆ ಬ್ರಾಹ್ಮಣರೊಳಿವ ಕಟುಕಾ 8 ಬಗೆ ಬಗೆ ನಾಮವು ನಿರಿವುಡಿಧೋತ್ರವು ಸಂಧ್ಯಾಧಿಗಳವ ದೃಶ್ಯಸೊಗಸನೆ ಮಾಡಿಯೆ ಕಣ್ಣನೆ ಹಾರಿಪ ಬ್ರಾಹ್ಮಣರೊಳಿವ ವೇಶ್ಯಾ9 ಸಹೋದರಿ ರಜಕೀಪರಿಭಾಳಾಮಾಯಾದಿ ಸ್ವಪಚಳ ಹೋಗುವ ಬ್ರಾಹ್ಮಣರೊಳಿವ ಚಂಡಾಲ10 ಪರಿ ದಶವಿಧ ಬ್ರಹ್ಮರುಗಳಲಿ ಭಿಕ್ಷೆಯ ಬೇಡುತಭೂಪ ಚಿದಾನಂದ ಅವಧೂತ ಸದ್ಗುರು ಮನವೊಪ್ಪಿಯೆ ಉಂಬ 11
--------------
ಚಿದಾನಂದ ಅವಧೂತರು
ವಿಶೇಷ ಆ ಹಣ್ಣು ಈ ಹಣ್ಣು ನೆನಸಿ ಫಲವೇನೆ ಈ ಹುಣಸೇಹಣ್ಣಿಗೆ ಸಮಬಾಹೋದೇನೆ ಪ ಹಡಗಿಂದ ಬಂದಿತು ಉತ್ತತ್ತಿ ಹಣ್ಣು ಬಡವರಿಗೆ ಬೇಕಾದ ಬಾಳೆಯ ಹಣ್ಣು ಕೂತರೆ ಏಳದು ಕುಂಬಳದ್ದಲ್ಲ ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 1 ಮಕ್ಕಳು ಬಯಸುವ ಚಕ್ಕೋತ ಹಣ್ಣು ಸಕ್ಕರೆ ಸವಿಯಾದ ಅನಾಸಿನ ಹಣ್ಣು ರುಚಿ ಹಲಸಿನ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 2 ದಾಹವಡಗಿಸುವದು ದ್ರಾಕ್ಷಿಯ ಹಣ್ಣು ದೊರೆಗಳು ತಿನ್ನುವ ದಾಳಿಂಬೆ ಹಣ್ಣು ಫರಂಗಿಯರು ತಿನ್ನುವ ಪನ್ನೇರಳೆ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 3 ಅತಿಮಧುರವಾದ ಕಿತ್ತಲೆ ಹಣ್ಣು ಯತಿಗಳಿಗಾನಂದ ಸೀತಾಫಲದ್ಹಣ್ಣು ಅತಿರುಚಿಯಾದ ಅಂಜೂರದ ಹಣ್ಣು ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 4 ಮಾನವಂತರು ತಿನ್ನುವ ಮಾವಿನ ಹಣ್ಣು ಜ್ಞಾನಿಗಳಿಗೆ ರಾಮನಾಮದ ಹಣ್ಣು ದೀನಜನರು ತಿಂಬ ಮೂಸುಂಬೆ ಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 5 ಅಪರೂಪದಲಿ ಬೆಳೆದ ಮಾದಳದ್ಹಣ್ಣು ಕಪಿಗಳು ತಿನ್ನುವ ಸೀಬೆಯ ಹಣ್ಣು ತಪಸ್ವಿಗಳಾಹಾರ ಜಂಬುನೇರಳೆಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 6 ಪರಿ ಔಪಧಕೆ ಹೆರಳೆಯ ಹಣ್ಣು ಮರ್ಯಾದೆಗೆ ಕೊಡುವ ನಿಂಬೆಯ ಹಣ್ಣು ಪರಮ ರೂಪಿಯಾದ ಕರಬೂಜದ್ಹಣ್ಣು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 7 ಬಡವರಿಗೂ ಈ ಹುಣಸೇ ಹಣ್ಣಿರಬೇಕು ಬಲ್ಲಿದರಿಗೂ ಹುಣಸೇ ಹಣ್ಣಿರಬೇಕು ರುಚಿ ಎಲ್ಲ ಜನರುಗಳು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 8 ಹುಣಸೇಹಣ್ಣಿಲ್ಲದೆ ಭಾಂಡ ಶುದ್ಧಿಗಳಿಲ್ಲ ಹುಣಸೇ ಇಲ್ಲದೆ ಸ್ವಯಂಪಾಕ ರುಚಿಯು ಇಲ್ಲ ಹುಣಸೇ ಮರಕ್ಕಿಂತ ಗಟ್ಟಿ ಮರಗಳಿಲ್ಲ ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 9 ಹುಣಸೇಕಾಯಿಯ ಕುಟ್ಟಿ ರಸವ ಮಾಡುವರು ಹುಣಸೇಹಣ್ಣನು ಕುಟ್ಟಿ ಅಣಿಮಾಡಿಡುವರು ಹುಣಸೇಹಣ್ಣಿನ ಬೆಲೆ ಮುಗಿಲಿಗೇರಿರಲು ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 10 ಹರಿಯ ಅಪ್ಪಣೆಯಂತೆ ಹುಣಸೆಯ ಮರಹುಟ್ಟಿ ಪರರಿಗೆ ಉಪಕÀರಿಸುವದಿದು ಹರಿಯಾಜ್ಞೆ ವರದ ಶ್ರೀ ಹರಿ ಕಮಲನಾಭ ವಿಠ್ಠಲನಿಚ್ಛೆ ‌‌ಎಲ್ಲರಿಗೂ ಬೇಕಾದ ಈ ಹುಣಸೇಹಣ್ಣು 11
--------------
ನಿಡಗುರುಕಿ ಜೀವೂಬಾಯಿ
ಸಾರ ತಿಳಿಯದೆ ಭೇದಾಭೇದ ವಿದ್ಯಾತಕೆ ಸೂಸುವದ್ಯಾತಕೆ ಹರಿಭಕುತಿಗೆ ಧ್ರುವ ಬಲಮುಣುಗುವದಿದ್ಯಾಕೆ ಬಲುವ ಭಾವದ ಕೀಲ ತಿಳಿಯದೆ ಮಾಲಿಜಪಕೈಯಲ್ಯಾತಕೆ ತಲೆ ಮುಸಕ್ಯಾತಕೆ ಹಲವು ಜನ್ಮ ಹೊಲಿಯು ತೊಳಿಯದೆ ಶೀಲಸ್ವಯಂಪಾಕ್ಯಾತಕೆ 1 ಹರಿಯ ಚರಣಾಂಬುಜನವರಿಯದೆ ಬರಿಯ ಮಾತಿನ್ಯಾತಕೆ ಗುರುವಿನಂಘ್ರಿಯ ಗುರುತವಿಲ್ಲದೆ ಶರಣಸಾವಿರವ್ಯಾತಕೆ ತುರಿಯಾವಸ್ಥೆಯೊಳರಿತು ಕೂಡದೆ ತೋರಿಕೆಯ ಡಂಭವ್ಯಾತಕೆ ತರಣೋಪಾಯದ ಸ್ಮರಣಿ ಇಲ್ಲದೆ ತರ್ಕಭೇದಗಳ್ಯಾತಕೆ 2 ಅಂತರಾತ್ಮದ ತಂತುವಿಡಿಯದೆ ಗ್ರಂಥಪಠಣಗಳ್ಯಾತಕೆ ಕಂತುಪಿತನಾರ್ಚನೆಯನರಿಯದೆ ತಂತ್ರ ಮಂತ್ರಗಳ್ಯಾತಕೆ ಪಂಥವರಿಯದೆ ಪರಮಯೋಗದಾನಂತ ವ್ರತವಿದುವ್ಯಾತಕೆ 3 ಸೋಹ್ಯವರಿಯದೆ ಶ್ರೀಹರಿಯ ನಿಜಬಾಹ್ಯರಂಜನೆವ್ಯಾತಕೆ ಗುಹ್ಯಮಹಾಮಹಿಮೆಯು ತಿಳಿಯದೆ ದೇಹ ಅಭಿಮಾನ್ಯಾತಕೆ ಸಾಹ್ಯವಿಲ್ಲದೆ ಶ್ರೀಹರಿಯ ದೇಹದಂಡದ್ಯಾತಕೆ ಮಹಾವಾಕ್ಯದಿತ್ಯರ್ಥವರಿಯದೆ ಸಾಯಸಬರುವದ್ಯಾತಕೆ 4 ಭಾಗ್ಯಭಕುತಿ ವೈರಾಗ್ಯವಿದು ನಿಜಯೋಗಾನಂದದ ಭೂಷಣ ಶ್ಲಾಘ್ಯವಿದು ತಾ ಇಹಪರದೊಳು ಸುಗಮ ಸುಪಥಸಾಧನ ಸಾರ ಯೋಗಿ ಮಾನಸಜೀವನ ಬಗೆಬಗೆಯಲನುಭವಿಸಿ ಮಹಿಪತಿಯೋಗ್ಯನಾಗೋ ಸನಾತನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು