ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಹೊರತು ಅನ್ಯರನರಿಯೆನೂ ಶ್ರೀ ವಾಸುದೇವಾ ನಿನ್ನ ಹೊರತು ಅನ್ಯನರಿಯೆನೂ ನಿನ್ನ ಹೊರತು ಅನ್ಯರರಿಯೆ ಪನ್ನಗೇಂದ್ರವಾಸ ಹರಿಯೆ ಸನ್ನುತಾತ್ಮ ನಿಜವನಿತ್ತು ಪ್ರಸನ್ನ ಗುರುವರೇಂದ್ರ ದೇವಾ ಪ ಉರಗನ್ಹೆಡೆಯ ನೆರಳ ಸ್ಥಿರವೆಂದು ಕಪ್ಪೆಯು ನಿಂತ ತೆರದಿ ವಿಷಯದೊಳಗೆ ಬೆರದು ಬೆಂದೆನು ನಾ ದುರಿತ ದುಷ್ಟಗಣದಿ ಹರಿದೂ ಮೃತ್ಯುವನೆ ಮರೆದು ಅರಿವು ಮಾಯವಾಗಿರುವ ಎನ್ನಾ ಸ್ತರದ ಆತ್ಮಪ್ರಭೆಯ ಮರೆತು ಇರುವ ಎನ್ನ ಮೇಲೆ ನಿನ್ನ ಕರುಣವಿಟ್ಟು ಕಾಯ್ದ ದೇವಾ 1 ತತ್ವವಿಂಶತಿ ನಾಲ್ಕು ಕೂಡಿದಾ ಈ ದೇಹದಲಿ ಏ ಕತ್ವವಾಗಿ ಇದನೆ ನಂಬುತಾ ಮುನ್ನರಿಯದಲೆ ವಿ ಚಿತ್ರವಾಸ್ತುವನ್ನು ಮರೆತು ಸತ್ತು ಹುಟ್ಟಿತೊಳಲಿ ಬಳಲಿ ನಿತ್ಯ ನಿಜದೊಳಿಟ್ಟ ದೇವಾ 2 ಆದಿ ಮಧ್ಯ ಅಂತರಾಂತದಿ ತುಂಬಿರುವ ವಸ್ತು ನಾದ ಬಿಂದು ಸ್ವಪ್ರಕಾಶದಿ ಹೃದಯದಲಿ ತೋರ್ಪ ಭೇದಾತೀತ ನಿರ್ವಿಕಾರದಿ ಸುಬೋಧದಿ ಆದರದಿ ಶಾಂತಿ ನಿಜದಾದಿ ಸುಖವನಿತ್ತ ಗುರು ಪಾದಪದ್ಮ ನೆನೆದು ಪೂರ್ಣನಾದ ನಾರಾಯಣ ಪ್ರಭು 3
--------------
ಶಾಂತಿಬಾಯಿ
ಪಾದ ಸೇವೆಯೊಳಿರುವಂತೆ ಕಾವುದೆನ್ನಯ ಮನ ಪಾವನ ಮೂರುತಿ ಹರಿಯೇ ಪ ಒಲವಿನ ಸಂಸಾರ ಸ್ಥಿರವೆಂದು ನಂಬುತ್ತ ಬರಿದೆ ಪೋಗದೆ ನಿಜದರಿಪಿನೋಳ್ ನಿಲಿಸೆನ್ನಾ ಹರಿಯೇ 1 ಎಂದು ಕುಂದದ ನಿತ್ಯಾನಂದವಾಗಿಹ ನಿಜ ಛಂದದೊಳಿರುವತ್ಯಾನಂದದೊಳ್ ನಿಲಿಸೆನ್ನಾ ಹರಿಯೇ 2 ಮರೆಯವೆ ಇರುವಂತೆ ಎರಕವಾಗಿಸೆನ್ನಾ ಹರಿಯೇ 3 ಆ ಸ್ವಪ್ರಕಾಶದಿ ಸೂಸದೆ ನಿಲುವಂತೆ ಭಾಸುರ ಘನಸುಖವಾಸದೊಳ್ ನಿಲಿಸೆನ್ನಾ ಹರಿಯೇ 4 ಭಾವಭಾವನೆಯಲ್ಲಿ ತೀವಿ ನಾರಾಯಣಾ ಪಾವನ ಗುರುಮೂರ್ತಿ ಸೇವೆ ಶಾಂತಿಯನೀಯೋ ಹರಿಯೇ 5
--------------
ಶಾಂತಿಬಾಯಿ