ಸ್ವಾಮಿ ನೀನೆ ಸಕಲಾಧಾರ ಸದ್ಗುರುದಾರ ಧ್ರುವ
ಅಣುರೇಣು ಪರಿಪೂರ್ಣ ನೀನೆ ಶ್ರೀನಾರಾಯಣ
ತನುಮನಕರಣ ಪ್ರಾಣದೊಳು ವ್ಯಾಪಕ
ಗುಣಜನಮನ ಸ್ಥಾನದೊಳು ನಿಜಾಧಿಷ್ಠಾನ
ನಾನಾ ಪರಿಯ ಖೂನ ನೀನೆ ಚೈತನ್ಯ ಘನ 1
ಪಾರಾವಾರ ದೂರ ಸುರಜನರ ಮಂದಾರ
ಕರುಣಾಕರ ಸ್ಥಿರ ಪರಮ ಙÁ್ಞನ ಗಂಭೀರ
ದುರುಳ ಜನ ಸಂಹಾರ
ಸಾರ ಗುರು ನೀನೆ ಸಾಕಾರ 2
ದಾತ ನೀನೆ ವಿಶ್ವವಂದಿತ
ಗುಣಾತೀತ ಸ್ವತ:ಮುನಿಜನರ ಸ್ವಹಿತ
ಅನುದಿನ ಸದೋದಿತ
ದಾತ 3