ಒಟ್ಟು 8 ಕಡೆಗಳಲ್ಲಿ , 4 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಚೆನ್ನಿಗರಾಯ ನನ್ನೀನಾಗರ ಏಳು ಪ. ಏಳೆನ್ನ ಕಣ್ಮಣಿಯೇ ಕಾಳಿಮರ್ಧನಕೃಷ್ಣ ಅ.ಪ. ಮಾರನೆಯ ದಿನದಲ್ಲಿ ನೀ ಹಾರುತ್ಯಾರುತ ಬಂದು ಸೀರೆ ಸೆರಗನು ಪಿಡಿದು ಬೆಲ್ಲವನು ಬೇಡಲು ಕೇಳಿಕೊಳ್ಳವುದೇಕೆ ಹಗಲುಗಳ್ಳನೆ ಹೋಗು ಒಳಿತು ಚೋರರಿಗೆಲ್ಲ ಕೇಳಿ ಕೊಳಲೆಂದೆ 1 ಚೋರ ನೀನೆಂದುದಕ್ಕೆ ಈ ಸೀರೆಯನು ಜರಿವರೇ ಚೋರನಲ್ಲವೇ ನೀನು ಮಧ್ವರ ಹೃದಯ ಕದ್ದ 2 ಜಾರ ನೀನೆಂದುದಕೆ ಕರೆಕರೆಗೊಳಿಸುವರೆ ಜಾರೆಯಾಸಹುದು ನೀನಲ್ಲ ಜಾರರಮಣ 3 ಕಂಡದನು ಆಡಿದರೆ ಕಡುಕೋಪವ್ಯಾತಕೆ ಹಿಂಡು ಗೋವಳಲೊಡೆಯ ಪುಂಡನೀನಹುದು 4 ಮಜ್ಜನವ ಮಾಡಿಸುವೆ ಸುಳಿಗುರುಳ ತಿದ್ದುವೆ ಸಜ್ಜಾದ ಚಂದನದ ಚಂದ್ರಮನ ಫಣಿಯಲಿಡುವೆ 5 ಗೊಲ್ಲಬಾಲರು ಈಗ ಕರೆಯಲು ಬರುವರು ಮೆಲ್ಲಗೆ ಎದ್ದು ನೀ ಬೆಲ್ಲವನು ಮೆಲ್ವ ಬಾಲಕೃಷ್ಣ 6 ಮಧ್ವೇಶ ನೀನೇಳು ಮುದ್ದು ಮೊಗದವನೆ ಏಳು ಹದ್ದುವಾಹನ ಏಳೂ ಹಾಲಕುಡಿಯೇಳು 7 ಹಾಲು ಬೆಲ್ಲವ ಸವೆದು ಸುಧೆಯನು ಸುರಿಸೇಳೋ ಪಾಲಗಡಲ ಶಯನ ಶಯನದಿಂದೇಳೋ 8 ಮುನಿಸು ಏಕೇಕೆ ರಮಣ ಮುಸುಕನು ತೆಗೆದೇಳು ತಿನಿಸು ತಿಂಡಿಯ ಕೊಡುವೆ ತನಿವಣ್ಣ ಕೊಡುವೆ 9 ಚಿನ್ನದಾ ಒಂಟೆಳೆಯ ರನ್ನಧಾಭರಣ ಭಿನ್ನ ಭಿನ್ನವಾದ ಆಭರಣಗಳಿಡುವೆ ಕೃಷ್ಣ 10 ಹೆಚ್ಚೇನು ಪೇಳಲಿ ಮಗಸಾಮ್ರಾಜ್ಯದ ದೊರೆತನವು ನಿನ್ನದೊ ಸ್ವಚ್ಚಾಗಿ ಹೇಳುವೆನು ಫಲಿಸೇಳು ಕೃಷ್ಣಾ 11 ಬಾಧಿಸದೆ ಜಾಗವನು ಬಿಟ್ಟೇಳೊ 12 ಏನು ಬಯಸಿದ ಕೊಡುವೆ ಮನಬಯಕೆ ಪೂರೈಸೊ ಮನದನ್ನನೇ ಎನ್ನ ಕಾಳಿಮರ್ಧನಕೃಷ್ಣ 13
--------------
ಕಳಸದ ಸುಂದರಮ್ಮ
ಗಂಗೆ ನಿನಗೋಸ್ಕರ ನಾನು ನಮೋ ಎಂಬೆತುಂಗೆ ಎನ್ನ ಪಂಥವ ಕೇಳಿ ಗೆಲಿಸೆಂಬೆ ಪ. ಅಚ್ಯುತನ ನಖತಾಕಿ ಬಿಚ್ಚಿ ಬ್ರಹ್ಮಾಂಡವುಸ್ವಚ್ಚಜಲವಾಗಸುರಿದಾವುಸ್ವಚ್ಚ ಜಲವಾಗ ಸುರಿದಾವುಅಜನೋಡಿ ಉತ್ಸಾಹದಿ ನುತಿಸಿದ1 ತಂದೆಯ ನಖದಿಂದ ಬಂದ ಜಲಕಂಡು ಮಂದಜಾಸನು ಸ್ತುತಿಸಿದಮಂದಜಾಸನು ಸ್ತುತಿಸಿದ ಸರಸ್ವತಿಬಂದು ಆರುತಿಯ ಬೆಳಗೋಳು 2 ತುಂಬಿ ಭೂಮಂಡಲ ಪತಿಯ ಚರಣವಭೂಮಂಡಲ ಪತಿಯ ಚರಣವ ತೊಳೆಯಲುಕೊಂಡಾಡಿ ಹರನು ಧರಿಸಿದ 3 ರೇಣು ರೇಣು ಹರಿದಿಲ್ಲಿ ಬಂತೆಂದುಸುರರು ಸಂತೋಷಪಡುತಲಿ4 ವಿಷ್ಣುಪದಿಯೆಂದು ಇಟ್ಟರು ನಾಮವಧಿಟ್ಟ ರಾಮೇಶನ ಮಗಳಿಗೆ ಧಿಟ್ಟ ರಾಮೇಶನ ಮಗಳಿಗೆ ಧೃವರಾಯಎಷ್ಟು ಭಕ್ತಿಂದ ಸ್ತುತಿಸಿದ 5
--------------
ಗಲಗಲಿಅವ್ವನವರು
ನಾನು ತಿಳಿದವನಲ್ಲ ನೀ ಕಾಯ್ದೆ ಶ್ರೀ ಕೃಷ್ಣ ನಾನರಿಯದಿರ್ದಡಿದ ನೀನರಿಯದವನೇ ಪ ಒಂದು ದಿನ ನಿನ್ನ ಧ್ಯಾನದಿ ನಡೆದು ಬರುತಿರಲು ಕೊಂದು ಚೂತದ ನೆಳಲಸಾರಿ ನಾನು ಒಂದು ನಿಮಿಷಮ ನೀರ ತಡಿಯಲಿ ಸಂಚರಿಸುತಿರ ಲೊಂದು ತಕ್ಷಕ ಬಂದು ವನವ ಹೊಕ್ಕಿರಲು 1 ಮಲ ಮೂತ್ರದುಪಹತಿಯ ಪರಿಹರಿಸಿ ಕೈಗಳನು ಜಲಮೃತ್ತಿಕೆಗಳಿಂದ ತೊಳೆದು ತೊಳೆದು ಎಳೆ ಬಿಸಿಲ ಸೇವಿಸುತ ದಂತಧಾವನ ಗೈದು ಸಲಿಲವನೆ ಮುಕ್ಕುಳಿಸಿ ಕೇಲದೊಳುಗಿದು 2 ನಿಂತು ಕಾಲ್ಮೊಗ ದೊಳೆದು ಆಚಮಿಸಿ ಆದಿತ್ಯ ನಂತಿ ಕಕೆ ಸಲಿಲಮಂತಿದ್ದಿ ಜಪವಾ ಅಂತ ರಂಗದಿ ಜಪಿಸಿ ಮುಗಿಸಿ ವಸ್ತ್ರಗಳಿಟ್ಟು ಗೊಂತಿಗೈತಂದವನು ಮರಳಿಧರಿಸಿ 3 ಹಚ್ಚಡವ ಹೊದ್ದು ಮುಂದಕೆ ನಡೆದು ಬರುತಿರ ಲಾಶ್ಚರ್ಯವೆನಿಸಿ ಬದಿಯೊಳಗುಮ್ಮಲು ಸ್ವಚ್ಚವಲ್ಲವಿದೆಂದು ಕಿಮುಚಿನಾ ನೋಡಿ ಬಲು ಬೆಚ್ಚಿ ಹಚ್ಚಡ ಬಿಸುಡೆ ಬಿಚ್ಚೆ ಪೆಡೆಯಲು ಕಂಡೆ 4 ನೀ ಕೊಲುವ ಕಾಲದೊಳು ಕೊಲುವರಿಲ್ಲ ಲೋಕೈಕನಾಥ ಚಿಪ್ಪಳಿ ವೇಣುಗೋಪಾಲ ನೀ ಕರುಣದಿಂ ಕಾಯ್ದೆ ಎನ್ನಸುವನು 5
--------------
ಕವಿ ಪರಮದೇವದಾಸರು
ಪತಿವ್ರತೆ ಹ್ಯಾಂಗಿರಬೇಕು ನಿಜವಾಗಿ ಪ ರತಿಪತಿಪಿತನನ್ನು ಪತಿಯಲ್ಲಿ ನೆನೆಯುತ್ತ ಅ.ಪ. ಹೊತ್ತಾರೆ ಏಳಬೇಕು ಪತಿಗೆ ವಂದಿಸಬೇಕು ನಿತ್ಯತುಳಸಿಗೆರಗಿಕೃತ್ಯಮಾಡಲಿಬೇಕು ಅತ್ತೆಮೆಚ್ಚಿಸಬೇಕು ತೊತ್ತಿನಂತಿರಬೇಕು ರತಿಯ ನೀಡುತ ಪತಿಗೆ ಹಿತದಿಂದ ಬಾಳಬೇಕು 1 ಮಿತಮಾತು ಇರಬೇಕು ಸುತರ ಪಾಲಿಸಬೇಕು ಮತಿಮತದಿ ನಡಿಬೇಕು ಅತಿಥಿ ಪೂಜಿಸಬೇಕು ವ್ರತನೇಮ ವಿರಬೇಕು ಗತಿ ಹರಿಯೆ ತಿಳಿಬೇಕು ಮಾತ್ಸರ್ಯಬಿಡಬೇಕು ತೃಪ್ತಿಯಿರಲಿಬೇಕು 2 ನೆರೆಹೊರೆ ಗಂಜಬೇಕು ತಿರುಗೋದು ಬಿಡಬೇಕು ತಿರಿ ತಿಂಡಿ ಬಿಡಬೇಕು ಹರಟೆಗಳ ಬಿಡಬೇಕು ಹರಿಕಥೆ ಕೇಳಬೇಕು ಹರಿದಿನ ಮಾಡಬೇಕು ಹರಿಯ ಪಾಡಲಿಬೇಕು 3 ನೆಟ್ಟಕುಂಕುಮ ಬೇಕು ಕೆಟ್ಟವರ ಬಿಡಬೇಕು ಕಟ್ಟಿ ಆಶೆಯ ಬಿಟ್ಟು ತೃಪ್ತಿಯಿಂದಿರಬೇಕು ಕಷ್ಟಬಂದರು ಬಹು ಗುಟ್ಟಿನಿಂದಿರಬೇಕು ನೆಂಟರೊಡನೆ ಕಠಿಣ ನಿಷ್ಟೂರ ಬಿಡಬೇಕು 4 ಚುಚ್ಚಬಾರದು ಚಾಡಿ ಬಿಚ್ಚಬಾರದು ಗಾಡಿ ಹಚ್ಚಬಾರದು ವಿಷಯ ಕೊಚ್ಚಬಾರದು ಜಂಭ ಹುಚ್ಚಳಂತಿರದ್ಹಾಂಗೆ ಸ್ವಚ್ಚನಡತೆಯು ಬೇಕು 5 ಪಾಪವ ತೊರಿಬೇಕು ಲೇಪನವ ಬಿಡಬೇಕು ಕೋಪವ ಬಿಡಬೇಕು ಕಪಟತ್ವ ಬಿಡಬೇಕು ರೂಪ ಮದವ ಬಿಟ್ಟು ಚಪಲತ್ವ ತೊರಿಬೇಕು ವಿಪರಿತ ಮಡಿಬಿಟ್ಟು ಶ್ರೀ ಪತಿಯ ನೆನಿಬೇಕು 6 ಅಂಗ ಶುದ್ಧಿಯು ಬೇಕು ಶೃಂಗಾರ ರಸಬೇಕು ನಗೆಮೊಗವಿರಬೆಕು ಸವಿಮಾತು ಗುಣಬೇಕು ಭಂಗಾರ ವಿಡಬೇಕು ರಂಗಗೆನ್ನಲಿ ಬೇಕು ಮಂಗಳಾಂಗ ನಮ್ಮ “ಶ್ರಿ ಕೃಷ್ಣವಿಠಲ” ನ್ನ ಹಿಂಗದೆ ನೆನೆಬೇಕು ಅಂಗಿನೀಗಲಿ ಬೇಕು 7
--------------
ಕೃಷ್ಣವಿಠಲದಾಸರು
ಬರುವ ಸಂದಣಿ ಭಾಳೆ ಭಾಳವೆ ಅಲ್ಲಿ ರಂಭೆ ಊರ್ವಶಿಯರ ಸಮ್ಮೇಳವೆ ಪ. ವರಗಿರಿ ವಾಸನ ಕರೆಯ ಬರುವ ಸೊಬಗು ಧರೆಯ ಮ್ಯಾಲಿಲ್ಲ ಸುಂದರಿಯೆ ರುಕ್ಮಿಣಿಯೆ 1 ಪಾಂಚಾಲಿ ಮೊದಲಾದ ಕೆಂಚೆಯರ ಆಭರಣವುಮಿಂಚಿನಂತೆ ಹೊಳೆಯುತ ಸಿದ್ಧರಾಗಿಹರಮ್ಮ ಚಂಚಲೆಯರು2 ಕಾಲಿಂದಿ ಮೊದಲಾದವರು ಭಾಳ ವಸ್ತಗಳಿಟ್ಟುವೈಯಾರಿಯರು ಒಲಿಯುತ ವ್ಯಾಳಾಶಯನನ ಬಳಿಗೆ 3 ಭದ್ರೆ ಮೊದಲಾದವರು ತಿದ್ದಿ ತಳಪಿಟ್ಟು ಶುದ್ಧ ವಸ್ತಗಳಿಟ್ಟುಸಿದ್ಧರಾಗಿಹರಮ್ಮ ಅನಿರುದ್ದನ ಕರೆಯಲು4 ಮಂದಗಮನೆಯರು ಗಂಧಕಸ್ತೂರಿ ಪುಷ್ಪಅಂದಾಗಿ ಧರಿಸಿ ಆನಂದವಾಗಿಹರಮ್ಮ5 ಕಾಲಂದುಗೆಗೆಜ್ಜಿ ತೋಳಲೆ ತಾಯಿತ ಭಾರಿ ವಸ್ತಗಳಿಟ್ಟು ಲೋಲ್ಯಾಡುತಿಹರಮ್ಮ6 ಅಚ್ಚಮುತ್ತಿನ ವಸ್ತ ಸ್ವಚ್ಚತೋರುವಂತೆ ಬಿಚ್ಚಿ ಚಾದರ ಹೊತ್ತು ಮಚ್ಚನೇತ್ರಿಯರೆಲ್ಲ 7 ಅಂದುಗೆ ಅರಳೆಲೆ ಬಿಂದುಲಿ ಭಾಪುರಿ ಕಂದರಿಗೊಸ್ತಗಳಿಟ್ಟು ಆನಂದವಾಗಿಹರಮ್ಮ8 ಮುತ್ತಿನ ಝಲ್ಲೆ ವಸ್ತಗಳಿಟ್ಟು ಫುಲ್ಲನಾಭನ ಕರೆಯಲು ಎಲ್ಲರೂನಿಂತಾರೆ9 ಶ್ರೇಷ್ಠ ರಾಮೇಶನ ಅಷ್ಷೊಂದು ಕರೆಯಲು ಪಟ್ಟಾವಳಿಗಳನುಟ್ಟು ಧಿಟ್ಟೆಯರು ನಿಂತಾರೆ10
--------------
ಗಲಗಲಿಅವ್ವನವರು
ಮಂದಾಸಲ ರಗಳೆ ರಾಮ ಪದಾಂಬುಜ ಭೃಂಗಗೆ ಜಯ ಜಯ ತಾಮಸ ಕುರುಕುಲ ಧ್ವಂಸಕ ಜಯ ಜಯ ಶ್ರೀ ಮತ್ಪೂರ್ಣ ಪ್ರಜ್ಞಗೆ ಜಯ ಜಯ 1 ವಾಸುದೇವ ಸುನಾಮಕ ಜಯ ಜಯ ದೋಷ ಜ್ಞಾನ ವಿನಾಶಕ ಜಯ ಜಯ ಸೂರ್ಯ ವ್ಯಾಸ ಸುಭೋಧೆಯ ದರ್ಪಣ ಜಯ ಜಯ 2 ಶುಭಗುಣಲಕ್ಷಣ ಶೋಭಿತ ಜಯ ಜಯ ಭವ ಮೋಚಕ ಜಯ ಜಯ ಇಭವರದಾಜ್ಞಾಧಾರಕ ಜಯ ಜಯ ವಿಭುಧ ಸುಖಾಂಬುಧಿ ಸೋಮನೆ ಜಯ ಜಯ3 ನಿತ್ಯ ಸದಾಗಮ ಕೋಶಗೆ ಜಯ ಜಯ ಸತ್ಯವತೀಸುತ ಪ್ರೀಯಗೆ ಜಯ ಜಯ ಸತ್ಯಾಖ್ಯಾತ ಸುಮಿತ್ರಗೆ ಜಯ ಜಯ ಸುರತರು ಜಯ ಜಯ 4 ಅಚ್ಚುತ ಪ್ರೇಕ್ಷರ ಶಿಷ್ಯಗೆ ಜಯ ಜಯ ಸ್ವಚ್ಚಗುಣಾರ್ಣವ ಋಜುಪತಿ ಜಯ ಜಯ ಕೆಚ್ಚೆದೆ ವೀರಾಗ್ರೇಸಗೆ ಜಯ ಜಯ ಪಾವಕ ಜಯ ಜಯ 5 ಶೃತಿತತಿ ವಿಮಲ ಸುಭೋದಕ ಜಯ ಜಯ ರತಿಪತಿ ಪಿತವರ ದೂತಗೆ ಜಯ ಜಯ ಕ್ಷಿತಿಧರ ದ್ವಿಜಶಿವವಂದಿತ ಜಯ ಜಯ 6 “ಶ್ರೀ ಕೃಷ್ಣವಿಠಲ” ಸದಾರತ ಜಯ ಜಯ ಲೋಕ ಹಿತಪ್ರದ ನಿಜಗುಣ ಜಯ ಜಯ ಶ್ರೀಕರ ಶುಭಕರ ಜಯಕರ ಜಯ ಜಯ ಆಕಮಲಾಸುತ ರಯೀಪತಿ ಜಯ ಜಯ 7
--------------
ಕೃಷ್ಣವಿಠಲದಾಸರು
ಕಂಡು ಅಂಜಿದೆವಯ್ಯ ವೆಂಕಟನಿನ್ನ ಕಂಡು ಅಂಜಿದೆವಯ್ಯಪುಂಡರಿಕಾಕ್ಷ ನಿನ್ನ ಸೊಂಡಿಲಮಾರಿಸಾಲದೆ ವದನವ ಪ.ಅಚ್ಯುತನಿನಗುಣ ಸ್ವಚ್ಚವೆÉಂದು ಬರಲುಮಚ್ಚಕೂರ್ಮಅತಿ ಹುಚ್ಚುರೂಪಗಳು1ಮುರಲಿಧರ ನಿನಗೆ ಎರಗಲು ಬಂದರೆಕ್ವಾರಿದಾಡಿಲುರಿಬಾಯಿ ತೆರೆದದ್ದು ನಾವು 2ಸುರತನೆಂದು ನಾವು ನಿರುತಲಿ ಬಂದರೆತಿರಕ ಕೊಡಲಿ ಎತ್ತಿ ಕರಕರ ಬಡಿಸÀುವ 3ಕೊಂಡಾಡೊ ಗುಣವಿಲ್ಲ ಹೆಂಡÀತಿಯನೆ ಒಲ್ಲಿಬಂಡಿ ಮುರಿದು ಅತಿದಿಂಡೆ ಪುರುಷನ 4ಉತ್ತಮನೆ ರಮಿಯರಸು ಬತ್ತಲಿದ್ದ ಮ್ಯಾಲೆಹತ್ತಿ ಕುದುರೆ ಕತ್ತಿ ಸುತ್ತ ಬೀಸುವನ 5
--------------
ಗಲಗಲಿಅವ್ವನವರು
ರನ್ನ ಚಿನ್ನದಕೋಲಹೊನ್ನು ಮುತ್ತಿನಕೋಲಪನ್ನಂಗಶಯನ ನಲಿದು ಒಲವೊ ಕೋಲ ಪ.ಇಂದಿರೇಶಗೆ ರಾಯ ಗಂಧ ಕಸ್ತೂರಿ ತೀಡಿಮಂದಾರಮಲ್ಲಿಗೆ ಮಾಲೆ ಚಂದದಲ್ಹಾಕಿ1ಶ್ರೀದೇವಿಯರಿಗೆ ಭದ್ರಾ ಕ್ಯಾದಿಗೆ ಮಲ್ಲಿಗೆ ಮುಡಿಸಿಊದು ಪರಿಮಳ ಮ್ಯಾಲೆ ಮೋದವ ಬಟ್ಟು 2ಅಂಬುಜಾಕ್ಷರಿಗೆ ರಾಯ ತಾಂಬೂಲ ಅಡಿಕೆಯ ಕೊಟ್ಟುಕಂಬುಕಂಠರಿಗೆ ಎರಗಿ ಸಂಭ್ರಮದಿಂದ 3ಸರಸಿಜಮುಖಿಯರಿಗೆ ಅರಿಷಿಣಕುಂಕುಮಹಚ್ಚಿಸರಸದ ವಸ್ತಗಳ ದ್ರೌಪತಿ ಅರಸಿಗೆ ಇಟ್ಟು 4ಪಚ್ಚಮುತ್ತಿನ ವಸ್ತ ಅಚ್ಯುತನಂಗದಲೆ ಇಟ್ಟುಉಚಿತ ವಸ್ತ್ರಗಳ ಕೊಟ್ಟು ಸ್ವಚ್ಚ ಮನದಿ 5ರುಕ್ಮಿಣಿ ಅರಸಿಯರಿಗೆ ಅನಘ್ರ್ಯ ವಸ್ತ್ರವಕೊಟ್ಟುಶೀಘ್ರದಿಂದ ಎರಗಿ ದ್ರೌಪತಿ ಹಿಗ್ಗಿದಳು 6ತಂದೆ ರಾಮೇಶಗೆ ಮಂದಗಮನೆಯರೆಲ್ಲಗಂಧ ಕುಂಕುಮ ವೀಳ್ಯ ವಸ್ತ ಅಂದದಿಕೊಟ್ಟು 7
--------------
ಗಲಗಲಿಅವ್ವನವರು