ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ನಿನ್ನ ನೋಡುವೆ ಪ.
ಹಾಡಿ ದಣಿಯುವೆ ಅ.ಪ
ಅನುದಿನದಿ ನಿನ್ನ ನಾಮ ನೆನೆಯುವಂತೆ ಜಿಹ್ವೆಯಲ್ಲಿ
ನಿತ್ಯ 1
ಹರುಷದಿಂದ ನಿನ್ನ ನಾಮ ಸ್ಮರಿಸುವೆನೋ ದೇವ ದೇವ ಎನ್ನ
ಮರಣ ಸಮಯದಲ್ಲಿ ನಿನ್ನ ಸ್ಮರಣೆ ಇತ್ತು ಕಾಯೋ 2
ಮೊದಲಿನಿಂದ ಭಜಿಸಿದೆನಾ ಹೃದಯದಲ್ಲಿ ನೋಯುತಿರುವೆ
ಮುದದಿ ಬಂದು ಎನ್ನ ಜಿಹ್ವೆಗೊದಗೊ ಆಗ ಶ್ರೀ ಶ್ರೀನಿವಾಸ 3