ಅನುದಿನ ಆನಂದವು ಹೊಂದಿರೆ
ಕೈವಲ್ಯವು ಅಂದಿರೆ ಪ
ಪಾದಾನ ಸೇರಿ ನಂಬಿರೆ
ಕಂಡು ಅವರಕೂಡಿರೆ
ತಂದವನ ಕೀರ್ತನೆಗಳು ಮಾಡಿರೆ
ಕಲ್ಮಷವನು ಕಳಿಯೀರೆ 1
ನಾಲಗೀಯಲಿ ಸ್ಮರಿಸೀರೆ
ವರ್ಣನೆಯನು ಬಿಡದರೆ
ನೇವೇದ್ಯಾದಿ ನಿವೇದಿಸಿದರೆ
ಸರ್ವೋತ್ತಮನ ನಂಬಿರೆ 2
ಮನದಲ್ಲಿ ಕೊಂಡಾಡಿರೆ
ಘನದಲ್ಲಿ ನೀವು ಪಾಡಿರೆ
ವರಿಸಿನ್ನು ಕುಣಿದಾಡಿರೆ
ಸಿದ್ಧ ಮುಕುತಿ ಎನ್ನೀರೆ 3