ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಶ್ರೀ ಗುರುರಾಯ ಏಳು ಪರಮಪ್ರಿಯ ಏಳು ಮಂಗಳಕಾಯ ಭಕ್ತಜನಪ್ರಿಯ ಏಳಯ್ಯ ಬೆಳಗಾಯಿತು ಪ. ಬಳಲಿ ಬಂದಿರುವಂಥ ಬಾಲ ಶಿಷ್ಯಂದಿರನು ಸುಲಲಿತದ ಪ್ರಿಯ ವಾಕ್ಯದಿಂದ ಸಂತೈಸಿ ಮಲಿನ ಮನವನೆ ತಿದ್ದಿ ಸುಜ್ಞಾನ ಬೋಧಿಸಿ ನಳಿನನಾಭನ ಪಾದಕೊಪ್ಪಿಸಲಿಬೇಕು 1 ಶುದ್ಧಾಂತಃಕರಣದಿಂ ಪೊದ್ದಿರುವ ಶಿಷ್ಯರನು ಉದ್ಧಾರಗೈಯಲಂಕಿತಗಳಿತ್ತು ಸಾರ ತತ್ವಾಮೃತವನುಣಿಸಿ ಪದ್ಮನಾಭನ ದಾಸರೆಂದೆನಿಸಬೇಕು 2 ಎದ್ದು ಸ್ನಾನವಗೈದು ತಿದ್ದಿ ನಾಮವನ್ಹಚ್ಚಿ ಪದ್ಮಾಕ್ಷಿ ತುಳಸಿ ಮಾಲೆಗಳ ಧರಿಸಿ ಗದ್ದುಗೆಯೊಳು ಕುಳಿತು ಹೃದ್ವನಜಸ್ಥಾನ ಪದ್ಮಪಾದವ ಮನದಿ ಸ್ಮರಿಸಬೇಕು 3 ಹಿಂದ್ಯಾರು ಪೊರೆದರು ಮುಂದ್ಯಾರು ಕಾಯ್ದರು ತಂದೆ ನೀವಲ್ಲದಿರೆ ಪೊಂದಿದರಿಗೆ ತಂದೆ ಮುದ್ದುಮೋಹನದಾಸವರ ಎಮ್ಮೊಳು ಕುಂದನೆಣಿಸದೆ ಕಾಯೊ ಕರುಣಾಳು ಗುರುವೆ 4 ಆಪನ್ನ ರಕ್ಷಕನೆ ಗೋಪಾಲಕೃಷ್ಣವಿಠ್ಠಲನಂಘ್ರಿ ಕಮಲ ಕೃಪಾಳು ತೋರು ನೀ ಕೃಪೆಮಾಡು ಕಣ್ತೆರದುಶ್ರೀ ಪದ್ಮಜಾತರೊಂದಿತನ ದಾಸಾರ್ಯ 5
--------------
ಅಂಬಾಬಾಯಿ
ಪುರಂದರ ಗುರುವರ ಇನ್ನು ಭಾಳ ಹೊತ್ತಾಯಿತು ಭಕುತ ಜನಪ್ರಿಯ ಪ. ಶ್ರೀಶನಪ್ಪಣೆಯಿಂದ ಭೂಲೋಕದಲಿ ಪುಟ್ಟಿ ಆಶೆಯಿಂದಲಿ ಧನ ಗಳಿಸಿ ಕೋಟಿ ವಾಸುದೇವನು ಎಚ್ಚರಿಸಲು ವೈರಾಗ್ಯ ದಾಸತ್ವದಲಿ ಜಗದಿ ಮೆರೆಯಬೇಕು 1 ವ್ಯಾಸ ಮುನಿಯಿಂದುಪದೇಶಕೊಳ್ಳಲುಬೇಕು ದಾಸತ್ವ ಜಗದಲಿ ಸ್ಥಾಪಿಸಬೇಕು ದೋಷರಹಿತ ಮಧ್ವಶಾಸ್ತ್ರ ತತ್ವಗಳ ಪ್ರ ಕಾಶಗೈಸುತ ಕವನಗೈಯ್ಯಬೇಕು 2 ಸತಿಸುತ ಪರಿವಾರ ಭೂ ಸಂಚರಿಸಬೇಕು ಸ್ತುತಿಸುತ್ತ ಹರಿಯನ್ನು ಕುಣಿಸಬೇಕು ಜತನದಿ ನಿಜತತ್ವಗಳನರಿಯಲಿಬೇಕು ಕ್ಷಿತಿಗೆ ಅಚ್ಚರಿ ಮಹಿಮೆಯ ತೋರಬೇಕು 3 ಪುಷ್ಯದಮಾವಾಸೆ ಹರಿಪುರ ಸೇರಲು ಶಿಷ್ಯಕುಲವು ಜಗದಿ ಬೆಳೆಯಲೆಂದು ಶಿಷ್ಯ ವಿಜಯದಾಸರಿಗೆ ಅಂಕಿತವನಿತ್ತು ಶಿಷ್ಯ ಪ್ರಶಿಷ್ಯ ಸಂತತಿ ಬೆಳಸಬೇಕು 4 ಪಾಪಿ ಜನಗಳ ಪಾವನಗೈಯಲಿಬೇಕು ತಾಪಪಡುವರ ಪೊರೆಯಲೆತ್ನಿಸಬೇಕು ಶ್ರೀಪತಿ ದಾಸತ್ವ ಜಗದಿ ನಿಲ್ಲಿಸಬೇಕು ಗೋಪಾಲಕೃಷ್ಣವಿಠ್ಠಲನ ಸ್ಮರಿಸಬೇಕು 5
--------------
ಅಂಬಾಬಾಯಿ