ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರವ ಪಿಡಿದು ರಕ್ಷಿಸೈ ಪ ಸಿರಿ ಅ.ಪ ಉರಿವಕಿಚ್ಚಿನೊಳುನಿಂದು ಸ್ಮರಿಸಬಾರದಕೆಟ್ಟಪಾಪದಿ ಬೆರತುಸತಿಸುತಬಂಧುಮೋಹದಿ ಮರತು ವಿಷಯದಿ ಮುಳುಗಿಪೋದೆನು 1 ಇಂದು ನತಪಾಲ ನೀನೆ ಎಂದು ನುತಿಸಿ ಬೇಡುವೆ ಕರವಜೋಡಿಸಿ ಮತಿಯ ನೀನೆನಗಿತ್ತು ಬೇಗದಿ 2 ಬಾಧೆ ಘನವಾಗಿ ಇರುವದಯ್ಯ ಹರಡಿ ವೈಷ್ಣವರನ್ನು ದುಃಖದೊ ನಿರಂತರ ವ್ಯಾಪಿಸಿರ್ಪುದ 3 ಶ್ರೀಶನೀಕೋಪಬಿಟ್ಟುಸಂತತರಂಗ ದಾಸನೋಳ್ಮನವನಿಟ್ಟೂ ನಾಶಮಾಡದೆ ಬಿಟ್ಟರಿಳೆಯೊಳು ಪೋಷ ಯದುಗಿರಿವಾಸಪರಮನೆ4
--------------
ರಂಗದಾಸರು
ದಯಪಾಲಿಸೆಲೊ ರಂಗ ಭ್ರಮಿಪ ಮನಕೆ ಶಾಂತಿ ಪ ತನುಮನಧನಮೋಹವನು ಪರಿಹರ ಮಾಡಿ ಅನುದಿನ ತವಧ್ಯಾನ ಆನಂದ ಕರುಣಿಸೊ 1 ಸ್ಮರಿಸಬಾರದ ಸ್ಮರಿಸಿ ದುರಿತಕ್ಕೆ ಗುರಿಯಾಗಿ ಪರಿಪರಿ ಮರುಗುವ ದುರ್ಮನ ದೂರಮಾಡೊ 2 ನೀನೆ ಎನ್ನಯ ಮಹಪ್ರಾಣೇಶ ಶ್ರೀರಾಮ ನಾನಾಕಾಮಿತ ಬಿಡಿಸಿ ಜ್ಞಾನಪದವಿ ನೀಡೊ 3
--------------
ರಾಮದಾಸರು
ನಾ ಮಾಡಿದತಿಶಯ ಅಪರಾಧ ಅಹಾ ಸ್ವಾಮಿದ್ರೋಹವೆ ಮಾಡಿದೆ ಪ ನೇಮವಿಲ್ಲದೆ ಪಾಪ ಕಾಮಿಸಿ ಮಾಡಿ ಹರಿ ಪ್ರೇಮಕ್ಕೆ ದೂರಾದೆ ಪಾಮರತನದಿ ಅ.ಪ ಗುರುನಿಂದೆ ಮಾಡಿದೆ ಸ್ಮರಿಸಿದೆನನುದಿನ ಸ್ಮರಿಸಬಾರದ ಸ್ತ್ರೀಯರ ಶರಣಜನರು ಕಂಡು ಶಿರವ ಬಾಗದೆ ಮಹ ಗರುವದಿಂ ಚರಿಸಿದೆ ಪರಿಪರಿ ಜಗದಿ 1 ಲಕ್ಷಿಸದೆ ಪರರರ್ಥ ಭಕ್ಷಿಸಿ ಇಲ್ಲೆನುತ ಪಕ್ಷಿಗಮನನ ಸಾಕ್ಷಿಟ್ಟು ಲಕ್ಷದಶಶತಪಾಪ ಲಕ್ಷ್ಯವಿಲ್ಲದೆ ಗೈದು ಶಿಕ್ಷೆಗೆ ಗುರಿಯಾದೆ ಮೋಕ್ಷವನರಿಯದೆ 2 ಪಿತಮಾತೆಯರ ನೂಕಿ ಇತರರ ಜತೆಯೊಳು ಮತಿಗೆಟ್ಟು ಮಮತಿಟ್ಟಿಹೆ ಮಿತಿಯಿಲ್ಲದನೃತ ಕ್ಷಿತಿಯೊಳು ಸರಿಧರ್ಮ ಹಿತಚಿಂತನಿನಿತಿಲ್ಲದತಿಭ್ರಷ್ಟನಾದೆ 3 ಮಣಿದು ದೈನ್ಯೆಂಬರಿಗೆ ಘನಹಾಸ್ಯಗೈಯುತ ಮನವ ನೋಯ್ಸಿದೆ ಬೆನ್ನ್ಹಚ್ಚಿ ಕನಿಕರೆಂಬುದು ಎನ್ನ ಕನಸಿನೊಳಿನಿತಿಲ್ಲ ಮನಸಿನಂತ್ವರ್ತಿಸಿ ಘನಕರ್ಮಿಯಾದೆ 4 ಇಂತು ಪಾಪಿಗೆ ಸುಖವೆಂತು ತ್ರಿಜಗದೊಳು ಕಂತುಜನಕ ಶ್ರೀರಾಮ ಭಕ್ತವತ್ಸಲ ನೆಂಬ ಬಿರುದು ವಹಿಸಿದಿ ಎನ್ನ ದೆಂಥ ತಪ್ಪಿರೆ ಕ್ಷಮಿಸಿ ಸಂತಸದಿಂ ಪೊರೆ 5
--------------
ರಾಮದಾಸರು