ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಪರಿಯಲಿ ನಿಮ್ಮನೊಲಿಸಿ ಮೆಚ್ಚಿಪ ವಿಧವುರವೆಯಷ್ಟು ತೋರದಲ್ಲ ಪ ದೇವ ದೇವೇಶ ನೀನೆಂದು ನಂಬಿರಲು ಕೃ-ಪಾವಲೋಕನದಿ ಸಲಹೊ ದೇವಅ ಫಣಿರಾಜನಾಸನದಿ ಕುಳಿತಿಹಗೆ ಅರಿವೆಯಾಸನವ ನಾನೆಂತ್ಹಾಸಲಿಘನವಾದ ಗಂಗೆಯನು ಪಡೆದವಗೆ ಕಲಶ ನೀರನದೆಂತು ಮೈಗೆರೆಯಲಿತನುವಿನ ಪರಿಮಳವು ಘಮಘಮಿಪನಿಗೆ ಸುಚಂದನವದೆಂತು ನಾ ಪೂಸಲಿಅನವರತ ನಾಭಿಯೊಳು ಶತಪತ್ರವಿಹಗೆ ಮಿಕ್ಕಿನ ಪೂವ ಮುಡಿಸಲೆಂತೈ ದೇವ 1 ಸುರುಚಿರೋಜ್ವಲ ಪೀತವಾಸನಿಗೆ ಉಡುಗೊರೆಯಅರಿವೆಯೇನನು ಪೊದಿಸಲಿವರ ಕೌಸ್ತುಭವು ಕೊರಳೊಳಗೆ ಇಪ್ಪವಗೆ ಆ-ಭರಣವಾವುದ ತೊಡಿಸಲಿತರಣಿ ಶತಕೋಟಿತೇಜನ ಮುಂದೆ ಹ್ಯಾಗೆ ನಾ-ಪೆರತೊಂದು ದೀಪವಿಡಲಿನೆರಹಿದ ಫಣಿಪತಿಯ ಸ್ತೋತ್ರದೂರನ ನಾನುಸ್ಮರಿಪೆನೆಂತಯ್ಯ ದೇವ ದೇವ 2 ವನಜಜಾಂಡ ಕೋಟಿಯುದರಂಗೆ ಆವುದನುಉಣಿಸಿ ತೃಪ್ತಿಯ ಮಾಡಲಿಅನಿಮಿಷರಿಗಮೃತವನ್ನೆರೆದವನ ತೃಷೆಯ ನೀ-ರಿನೊಳೆಂತು ಸಂತವಿಡಲಿವಿನತೆಯಾತ್ಮಜ ಪಕ್ಷದನಿಲನಿರೆ ಬೇರೆ ಬೀ-ಸಣಿಗೆಯನ್ನೇಂ ಬೀಸಲಿಅಣುರೇಣು ಪರಿಪೂರ್ಣ ಮೂರುತಿಗೆ ನಾ ಪ್ರದ-ಕ್ಷಿಣೆಯೆಂತು ಸುತ್ತಿಬರಲಿ ದೇವ 3 ಮಿಗೆ ಫಣಿಯ ಫಣದಾತಪತ್ರವಿರುವಂಗೆ ನೆರ-ಳಿಗೆ ಕೊಡೆಯನೇಂ ಪಿಡಿಯಲಿಪಗಲಿರುಳು ಸಾಮಗಾನ ಪ್ರಿಯನ ಮುಂದೆ ಗೀ-ತಗಳ ನಾನೇಂ ಪಾಡಲಿಜಗವರಿಯೆ ಲಕ್ಷ್ಮೀದೇವಿಪತಿಗೆ ಎಷ್ಟು ಹೊ-ನ್ನುಗಳ ದಕ್ಷಿಣೆಯ ಕೊಡಲಿನಿಗಮತತಿ ಕಾಣದಿಹ ಮಹಿಮನಿಗೆ ನಮಿಸುವಬಗೆಯ ನಾನರಿವೆನೆಂತೈ ದೇವ 4 ಒಲಿಸುವುದನರಿಯೆ ಮೆಚ್ಚಿಸುವ ಬಗೆಯರಿಯೆ ಹೊ-ಗಳುವ ಹೊಲಬ ನಾನರಿಯೆನುತಿಳಿದುದಿಲ್ಲವು ಷೋಡಶೋಪಚಾರದ ಪೂಜೆ-ಗಳಲೊಂದು ಪರಿಯಾದರೂನೆಲೆಯ ಕಾಣೆನು ನಿಗಮಶಾಸ್ತ್ರ ನವವಿಧ ಭಕ್ತಿ-ಯೊಳಗೊಂದು ಬಗೆಯಾದರೂಅಳಿಲಸೇವೆಯನೊಪ್ಪಿಸಿಕೊಂಡು ಶರಣನ ಸಲಹೊನೆಲೆಯಾದಿ ಕೇಶವನೆ ಸ್ವಾಮಿ - ಪ್ರೇಮಿ5
--------------
ಕನಕದಾಸ
ಶ್ರೀ ತುಳಸಿ ಇಂದಿರೆ ವಂದೆ ಆನಂದೀ ತುಳಸೀದೇವಿ ನಂಬಿದೆ ಸುರಸುಂದರಿ ಪ ಎಂದೆಂದಿಗೂ ನಾ ನಿನ್ನಧೀನವೆ ಮಾತೆ ಸಿಂಧುಶಯನ ಪ್ರಿಯೆ ವರದೆ ಆನಂದದೆ ಅ.ಪ ಆದಿಕಾರಣ ವಿಷ್ಣು ಪ್ರಿಯಳೆ ಶ್ಯಾಮಲೆ ಕೋಮಲೆ ವಿಧಿಶರ್ವವಂದಿತೆ ವಿದ್ಯಾಧರಾದಿ ಅರ್ಚಿತೆ ಆದರದಲಿ ನಿನ್ನ ಪಾದಪಂಕಜಗಳ ಪ್ರತಿದಿನ ಸ್ಮರಿಪೆನೆ ವೃಂದಾವನಸ್ಥಿತೆ ತುಳಸಿ ಸುರೇಶ್ವರಿ1 ಈರಾರು ಅಕ್ಷರ ಮಂತ್ರ ಸುಪ್ರತಿಪಾದ್ಯೆ ನಾರದನುತೆ ನಾರಾಯಣ ಮನಃಪ್ರಿಯಳೆ ಪಾತಕ ಬಹು ಪಾಪಹಾರಿಣಿ ನಿನ್ನ ಎನ್ನ ವರದೆ ತುಳಸೀದೇವಿ 2 ನಿನ್ನ ಸ್ಮರಣೆ ಮಾಡೆ ಸರ್ವತ್ರ ವಿಜಯವಹುದೆ ನಿನ್ನ ಸಂದರ್ಶನದಿ ಸರ್ವಪಾಪವು ಪೋಪುವೆ ಪಾತಕ ತಾಪಾದಿ 1 ಗಳಳಿಯೆ ಘನ್ನ ಪ್ರಸನ್ನ ಶ್ರೀನಿವಾಸನ ನಿಜಸತಿ ವಿರಜೆ ತುಳಸೀಮಾತೆ 3
--------------
ಪ್ರಸನ್ನ ಶ್ರೀನಿವಾಸದಾಸರು