ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಪಾಪುರನಿವಾಸ ಪ್ರಮಥರೇಶಾ ಪ ತ್ವಂ ಪಾಹಿ ಪಾಹಿ ತ್ರಿಪುರಾರಿ ತ್ರಿನೇತ್ರ ಅ.ಪ. ಕೈಲಾಸಸದ್ಮ ಚಿತಿಚೇಲ ಭೂಷಣ ಮನೋ ಮೈಲಿಗೆಯ ಪರಿಹರಿಸೊ ನೀಲಕಂಠ ಕಾಲ ಕಾಲಗಳಲ್ಲಿ ಕಾಲನಿಯಾಮಕನ ಲೀಲೆಗಳ ತುತಿಪ ಸುಖ ನಾಲಿಗೆಗೆ ಕೊಡು ಸತತ 1 ಪಾರ್ವತೀರಮಣ ನೀ ಮೋಹಶಾಸ್ತ್ರವ ರಚಿಸಿ ಶಾರ್ವರೀಚರರ ಮೋಹಿಸಿದೆ ಹಿಂದೆ ಶುಕ ವ್ಯಾಧ ಜೈಗೀಷ ರೂಪದಲಿ ಈರ್ವಗೆ ಚರಿಯದಲಿ ಹರಿಯ ಮೆಚ್ಚಿಸಿದೆ 2 ಸುರನದೀಧರ ನಿನ್ನ ಚರಿತೆಗಳ ವರ್ಣಿಸಲು ಸುರಪಮುಖ ಸುಮನಸಾದ್ಯರಿಗಸದಳಾ ಸ್ಮರನಪಿತ ಶ್ರೀ ಜಗನ್ನಾಥ ವಿಠ್ಠಲನ ಸಂ ಸ್ಮರಣೆಯನು ಕೊಟ್ಟು ಉದ್ಧರಿಸು ದಯದಿಂದ 3
--------------
ಜಗನ್ನಾಥದಾಸರು
ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ ಕಾಣದೆ ನಿಲ್ಲಲಾರೆನೆ ಪ ಕಾಣುತ ಭಕುತರ ಕರುಣದಿ ಸಲಹುವ ಜಾಣೆ ತ್ರಿವೇಣಿ ಕಲ್ಯಾಣಿ ಸುಸನ್ನುತೆ ಅ.ಪ. ತರಣಿ ಒಂದು ಘಳಿಗೆ ನೀ ಹರಿಯ ಬಿಟ್ಟಿರಲಾರಿ ಮಂದಗಮನೆ ಎನ್ನ ಮುಂದಕ್ಕೆ ಕರೆಯೆ 1 ಕರುಣವಿಂದೆನ್ನ ಕರೆವುದು ಭವ ಸ್ಮರನಪಿತನ ಮುರಹರನ ಕರುಣದಿ 2 ಸುಜನರಿಗೆಲ್ಲ ದಾತಳೆ ಸುಶೀಲೆ ಕೇಳೆ ಕುಜನರ ಸಂಗದೂರಳೆ ನಿಜ ಪದವಿಯನಿತ್ತು ಸಲಹುವ ನಮ್ಮ ವಿಜಯವಿಠ್ಠಲ ನಿಜಪದ ತೋರಿಸೆ 3
--------------
ವಿಜಯದಾಸ