ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಯಸಾಗರ ಶಯನನೆ ಭಜಿಪೆನು ನಿನ್ನ ಭವಸಾಗರದಾಟಿಸು ಶ್ರೀಹರಿ ಎನ್ನ ಪ. ಹಿಂದೆ ಮುಂದೆ ಗತಿ ನೀನೆಂದು ನಂಬಿರುವೆ ಇಂದಿರೆಯರಸನೆ ಎಂದಿಗಾದರು ಕಾಯೊ ತಂದೆ ಬಂದು ಎನ್ನ ಬಂಧನ ಬಿಡಿಸೊ 1 ಕರುಣಾಸಾಗರ ವರದಮೂರುತಿ ನಿನ್ನ ಸ್ಮರಣೆಯೆನಗೆ ನೀ ನಿರುತದಿ ನುಡಿಸು ಪರಮಪಾಮರನಿಗೆ ನಿನ್ನ ಚರಣವ ತೋರೊ 2 ಪುಟ್ಟಿಸಿದವನೀ ಕಷ್ಟ ಪಡಿಸುವುದು ಇಷ್ಟವೆ ನಿನಗದು ಕೃಷ್ಣಮೂರುತಿ ಸೃಷ್ಟೀಶ ಶ್ರೀ ಶ್ರೀನಿವಾಸ ದೊರೆಯೆ 3
--------------
ಸರಸ್ವತಿ ಬಾಯಿ