ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣಮತ ನರಸಿಂಹ | ವಿಠಲ ಪೊರೆ ಇವಳಾ ಪ ಜ್ಞಾನಗಮ್ಯನೆ ದೇವ | ಅನ್ನಂತ ಮಹಿಮಾ ಅ.ಪ. ಹಿಂದಿನದ ಸತ್ಸುಕೃತ | ದಿಂದ ವೈಷ್ಣವಪತಿಯಪೊಂದಿಹಳೊ ದೇವೇಶ | ಮಂದರೋದ್ಧಾರಿ |ಚೆಂದುಳ್ಳ ಮಧ್ವಮತ | ಸಂಧಾನ ತಿಳಿಯಲ್ಕೆ |ಇಂದೀವರಾಕ್ಷ ಹರಿ | ಚೋದಿಸೋ ಇವಳಾ 1 ಬೋಧ ಬೋಧ ದೊರಕಿಸುದೇವಆದಿ ಮೂರುತಿ ಹರಿಯೆ | ಬಾದರಾಯಣನೆ2 ಪತಿಸುತರು ಹತರಲ್ಲಿ | ವ್ಯಾಪ್ತನಾಗಿಹ ನಿನ್ನಸ್ಥಿತಿಗತಿಯನೇ ತಿಳಿದು | ಚಿಂತಿಸುವ ಪರಿಯಾಹಿತದಿಂದ ತಿಳಿಸುತ್ತ | ಸಾಧನ ಸುಸತ್ಪಥದಿರತಿಯನೆ ಕೊಟ್ಟಿವಳ | ಉದ್ದರಿಸೋ ದೇವಾ 3 ತೊಡರು ಬರಲಿ | ಅಡವಿಯಲಿ ತಾನಿರಲಿಮೃಡನುತನೆ ನಿನ್ನ ಸ್ಮøತಿ | ಬಿಡದಲೇ ಕೊಟ್ಟುಕಡು ಗುಂಭ ಸಂಸ್ಕøತಿಯ | ಮಡುವಿನಿಂದಡಬಾಕಿಬಿಡದಿವಳ ಪೊರೆಯುವುದು | ಕಡುದಯಾ ಪೂರ್ಣ4 ಗುರುಭಕ್ತಿ ಹರಿಭಕ್ತಿ | ವೈರಾಗ್ಯ ಭಾಗ್ಯದಲಿಪರಮರತಿಯನೆ ಕೊಟ್ಟು | ಹರಿ ಸ್ಮರಣೆಯೆಂಬಾವರವಜ್ರ ಕವಚವನೆ | ತೊಡಿಸೆಂದು ಪ್ರಾರ್ಥಿಸುವೆಮರುತಾಂತರಾತ್ಮಗುರು | ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಬನ್ನಿರಿ ದಾಸರೇ ಪೋಗುವಾ ನಮ್ಮ ಚನ್ನಕೇಶವನೆಂಬ ಹರಿಮಂದಿರಕೇ ಪ ಬನ್ನಿರಿ ಪೋಗುವಾ ಗುಡಿಯೊಳು ತಿನ್ನುವಾ ಚನ್ನಗೆ ಅರ್ಪಿಸಿ ತಂದ ಪಕ್ವಗಳ ಅ.ಪ. ನಾ ತಂದಿರುವೆನು ಪರಮಾನ್ನವನ್ನು ತಾತನ ನಾಮಕ್ಕೆ ಬೆರಿಸಿ ಮಾಡಿದೆನು ನೀತಿಯೊಳಾಭಕ್ತಿ ಮಧುಕ್ಷೀರವನ್ನು ಸತ್ಯದಿ ಕೂಡಿಸಿ ಸೇವಿಸುವಾ 1 ಪರಹಿತವೆನ್ನುವ ಸಕ್ಕರೆ ತಂದು ನಾ ಬೆರಿಸುವೆ ಧರ್ಮಗಳೆಂಬ ಪಾಯಸಕೇ ಹರಿಯ ಕೀರ್ತನೆಗಳ ಅಮೃತವ ಸೇರಿಸಿ ಪರಮಾನ್ನವೀ ರೀತಿ ಮಾಡಿರುವೆನಯ್ಯ 2 ಹರಿಭಕ್ತಿಯೆಂಬುವ ತಂಡುಲವನೆ ತಂದು ಹರಿಯ ಸ್ಮರಣೆಯೆಂಬ ವುದಕದಿ ತೊಳೆದು ಹರಿಯ ಭಜನೆಯೆಂಬ ಬೆಂಕಿಯ ಮೇಲಿಟ್ಟು ಸರಸದಿ ನಾ ಪಾಕವ ಮಾಡಿರುವೆ 3 ಸನ್ನುತ ದೂರ್ವಾಪಟ್ಟಣದಿ ನಿತ್ತಿರುವಂಥ ಪನ್ನಗಶಯನ ಶ್ರೀ ಹರಿಯ ನೆನೆಯುತ್ತ ಉನ್ನತ ಸೇವೆಯಿಂದಾತನ ಮೆಚ್ಚಿಸಿ ತಿನ್ನುವಾ ಕೇಶವ ನೀಯುವ ವರವಾ 4
--------------
ಕರ್ಕಿ ಕೇಶವದಾಸ
ಶ್ರೀ ವಿಷ್ಣು ಸ್ಮರಣೆಯಿಂ ಸಾಧು ಸಂಸರ್ಗಶ್ರೀ ವಿಷ್ಣು ಸ್ಮರಣೆಯೆಂಬುದೆಅಪವರ್ಗಶ್ರೀ ವಿಷ್ಣು ಸ್ಮರಣೆಲಿ ಸದ್ಬುದ್ಧಿ ದೀರ್ಘಶ್ರೀ ವಿಷ್ಣು ಸ್ಮರಣೆಗೆಚ್ಚರ ಬುಧವರ್ಗ ಪ.ಶೀತಲವಾಯ್ತುಹಾಲಾಹಲಹರಗೆಮಾತೆ ದ್ರೌಪದಿ ಲಜ್ಜೆ ಕಾಯಿತು ಮರುಗೆಪಾತಕಿಅಜಾಮಿಳನ ಪಾಪವು ಕರಗೆಪೂತರಾಗ್ವರು ಸುಜನರು ಒಳಹೊರಗೆ 1ಸಿರಿಅರ್ಥ ಮಾಡಲಚ್ಚರವಾದ ಸ್ಮರಣೆಪರಸೋದ್ವಾಪರಿಯೆಂಬುವ ಗುಹ್ಯಸ್ಮರಣೆವಿರಿಂಚಿಗೆ ತೃಪ್ತಿಯಾಗದ ನಾಮಸ್ಮರಣೆಉರಗೇಶನ ಜಿಹ್ವೆಗೆ ನಿಲುಕದ ಸ್ಮರಣೆ 2ತ್ಯಾಗಭೋಗಯೋಗ ಛಿದ್ರ ಮುಚ್ಚುವುದುಭೂಗಗನಸ್ಥರ ಪುಣ್ಯ ಹೆಚ್ಚುವುದುಕೂಗ್ಯಾಡಿ ಕುಣಿವರಾನಂದ ಫಲವಿದುಶ್ರೀ ಗಂಗಾಜನಕನ ತಂದು ತೋರುವುದು 3ಭೂಪ್ರದಕ್ಷಿಣೆ ತೀರ್ಥಯಾತ್ರೆಗೆ ಮಿಗಿಲು ಅಸಂಪ್ರಜ್ಞಾತಸ್ಥರಿಗೆ ಹರಿಗೋಲುಸುಪ್ರಾಪ್ತ ಮುಕ್ತರುಂಬಮೃತ ಕಣಗಳುಶ್ರೀ ಪ್ರಾಣನಾಥನ ನಾಮಾವಳಿಗಳು 4ಸ್ವಾದನ್ನದೊಟ್ಟಿಲು ಹರಿನಾಮಸ್ಮರಣೆಮಧ್ವಶಾಸ್ತ್ರಜÕರ ವಚನಾಗ್ನಿಗೆ ಅರಣಿಅದ್ವೈತಮತಧ್ವಾಂತಕ್ಕುದಿತ ಸತ್ತರಣಿ ಶ್ರೀಮದ್ವಿಷ್ಣು ಪ್ರಸನ್ವೆಂಕಟನ ಸ್ಮರಣೆ 5
--------------
ಪ್ರಸನ್ನವೆಂಕಟದಾಸರು
ಹರಿಯ ಚರಣವೆಂಬ ಸುರಧೇನವನುಗುರುಬೋಧೆಯೆಂಬ ಕಣ್ಣಿಯಲಿ ಕಟ್ಟಿರಯ್ಯಪ.ಭಕುತಿಯೆಂಬ ಕರುವನೆ ಬಿಟ್ಟು ನಿರುತ ವಿರಕುತಿಯೆಂಬ ಚೆನ್ನದಳಿಯ ಹಾಕಿ ||ಯುಕುತವಾದ ನಿತ್ಯಕಾಯ ಚರಿಗೆಯೊಳುಮುಕುತಿನಾಮಾಮೃತ ಕರೆದುಕೊಳ್ಳಿರಯ್ಯ 1ಕಾಮ ಕ್ರೋಧ ಲೋಭ, ಮೋಹ ಮದ ಮತ್ಸರಗಳೆಂಬಹಮ್ಮೆಂಬ ಕುರುಳನೆ ತಾಳಿ ಹಾಕಿ ||ತಾಮಸ ಜ್ಞಾನಾಗ್ನಿ ಪುಟಗೈದು ಇಂದ್ರಿಯನೇಮದ ನೀರ ಬೆರಸಿ ಕಾಯಲಿಡರೊ 2ಶಾಂತಗುಣವೆಂಬ ಹದನರಿತು ಆರಿಸಿ ಮತ್ತೆಭ್ರಾಂತಮನ ಮಜ್ಜಿಗೆಯ ಹೆಪ್ಪನಿಕ್ಕಿ ||ಕಾಂತವಿಷ್ಣು ಮಾಯಾಮಂಥದಿ ಶೋಧಿಸಿ ಸಿ -ದ್ಧಾಂತವೆಂಬ ಕಡೆಗೋಲ ನೇಣನೆ ಪಿಡಿದು 3ಪರಬೊಮ್ಮನೆನಿಪ ಬೆಣ್ಣೆಯ ಮುದ್ದಿಯನೆ ತೆಗೆದುಶರಣಮಣಿಯೆಂಬ ತುಪ್ಪವನೆ ಕಾಯಿಸಿ ||ಮರಣವೆಂಬ ನೊರೆ ತೆಗೆದೊಗೆದು ಅಮೃತವನಿರುತ ಹೃದಯವೆಂಬ ಕೊಡವನೆ ತುಂಬಿರೊ 4ಅನವರತ ಹರಿಸ್ಮರಣೆಯೆಂಬ ಬೀಸೂರಿಗೆಅನುವಾಗಿ ಕುಳಿತುಂಡು ಸುಖದಿ ತೇಗಿ ||ಚಿನುಮಯ ಚಿದಾನಂದ ಪುರಂದರವಿಠಲನಅನುದಿನ ನೆನೆ ನೆನೆದು ಸುಖಿಯಾಗಿರಯ್ಯ 5
--------------
ಪುರಂದರದಾಸರು