ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನೆಲ್ಲಿ ಪರಮುಕ್ತಿ ಸಾಧನವು ನಿಮಗೆ ಭಿನ್ನ ಭೇದವಳಿಯದ ಕುನ್ನಿಮನುಜರಿಗೆ ಪ ಆಸೆಮೊದಲಳಿದಿಲ್ಲ ಮೋಸಕೃತಿನೀಗಿಲ್ಲ ಹೇಸಿ ಸಂಸಾರದ ವಾಸನ್ಹಿಂಗಿಲ್ಲ ದೋಷಕೊಂಡದಿ ನೂಕ್ವ ಕಾಸಿನಾಸ್ಹೋಗಿಲ್ಲ ದಾಸಜನ ವ್ಯಾಸಂಗ ಕನಸಿನೊಳಗಿಲ್ಲ 1 ಸತಿಮೋಹ ಕಡಿದಿಲ್ಲ ಸುತರಾಸೆ ಬಿಟ್ಟಿಲ್ಲ ಅತಿಭ್ರಮೆ ಸುಟ್ಟಿಲ್ಲ ಹಿತಚಿಂತನಿಲ್ಲ ಸ್ಮøತಿವಾಕ್ಯ ಅರಿತಿಲ್ಲ ಅತ್ಹಿತಪಥಗೊತ್ತಿಲ್ಲ ಗತಿಮೋಕ್ಷ ಕೊಡುವಂಥ ಪವಿತ್ರರೊಲಿಮಿಲ್ಲ 2 ಹಮ್ಮು ದೂರಾಗಿಲ್ಲ ಹೆಮ್ಮೆಯನು ತುಳಿದಿಲ್ಲ ಬ್ರಹ್ಮತ್ವ ತಿಳಿದಿಲ್ಲ ಚುಮ್ಮನದಳಿಕಿಲ್ಲ ಕರ್ಮ ತುಸು ತೊಳೆದಿಲ್ಲ ಧರ್ಮಗುಣ ಹೊಳಪಿಲ್ಲ ನಿರ್ಮಲಾನಂದ ಪದವಿ ಮರ್ಮ ಗುರುತಿಲ್ಲ 3 ಸತ್ಯಸನ್ಮಾರ್ಗವಿಲ್ಲ ಭೃತ್ಯನಾಗಿ ನಡೆದಿಲ್ಲ ಉತ್ತಮರೊಳಾಡಿಲ್ಲ ಮತ್ರ್ಯಗುಣ ತೊಡೆದಿಲ್ಲ ನಿತ್ಯಸುಖ ದೊರೆವಂಥ ಸತ್ಸೇವೆಯಿಲ್ಲ4 ಮೂರಾರು ಕೆಡಿಸಿಲ್ಲ ಈರೈದು ತರಿಸಿಲ್ಲ ಆರೆರಡು ಮುರಿದಿಲ್ಲ ತಾರತಮ್ಯವಿಲ್ಲ ಸಾರಮೋಕ್ಷದೀಪ ಧೀರ ಶ್ರೀರಾಮನಡಿ ಗಂ ಭೀರ ದಾಸತ್ವ ಸವಿಸಾರ ಕಂಡಿಲ್ಲ 5
--------------
ರಾಮದಾಸರು
ಏನಿದೇನಿದನ್ಯಾಯ ಕೇಳಲಾಗದಯ್ಯ ಧ್ಯಾನದಿಂದಾನೆಂಬ ಹೀನ ಜನರ್ವಚನ ಪ ಪರಮಪುರುಷರ ಚರಿತ ಪರಮ ಭಕ್ತಿಯಲಿಂದ ಬರೆದೋದಿಕೇಳಿದರೆ ಪರಮಪದವೆನುತ ವರವೇದ ಸ್ಮøತಿವಾಕ್ಯ ಅರಿದರಿದು ಸಚ್ಚರಿತ ಬರೀಬಾರದೆನ್ನುವ ನರಗುರಿಗಳ ವಚನ 1 ಕನಸುಮನಸಿನೊಳೊಮ್ಮೆ ಜನಕಜೆಯವರನಂಘ್ರಿ ನೆನೆವರ್ಗೆ ಭವಬಂಧವಿನಿತಿಲ್ಲವೆನುತ ಮನುಮುನಿಗಳ್ಬರೆದಿಟ್ಟ ಘನತರದ ವಚನಗಳನು ಮನನ ಮಾಡಳಿವ ಬಿನಗುಜನರ್ವಚನ 2 ಬೀಳುತೇಳುತಲೊಮ್ಮೆ ನೀಲಶ್ಯಾಮನ ದಿವ್ಯ ಮೇಲು ಮಹಿಮೆಯ ಮನದಾಲಿಸಲು ಜವನ ದಾಳಿ ಸೋಂಕದು ಎಂದು ಶೀಲದೊರೆದ್ವಚನಗಳ ಕೇಳಿ ತಿಳಿಯದ ಮಹ ಕೀಳುಜನರ್ವಚನ 3 ಹರಿನಾಮ ಕೀರ್ತನೆಯಿಂ ಜರಾಮರಣ ಕಂಟಕª À ಕಿರಿದು ಮಾಡಿ ದಾಟಿದರು ಗುರುಹಿರಿಯರೆಲ್ಲ ನಿರುತ ನಿಜ ತಿಳಿಯದೆ ಹರಿಸ್ಮರಣೆ ಸ್ಮರಿಸದೆ ಬರಿದೆ ಬ್ರಹ್ಮೆಂಬ ಮಹನರಕಿಗಳ ವಚನ 4 ಪರಮ ಶ್ರೀಗುರುರೂಪ ವರದ ಶ್ರೀರಾಮನಂ ನೆರೆನಂಬಿ ಒಲಿಸದೆ ಗುರುವಾಗಿ ಜಗದಿ ಅರಿವಿತ್ತು ಆತ್ಮನ ಕರುಹು ತೋರಿಸಿ ಪರಮ ಪರತರದ ಮೋಕ್ಷಮಂ ಕರುಣಿಸುಯೆಂತು 5
--------------
ರಾಮದಾಸರು
ಬೇಗನೆ ದಯಮಾಡೊ ಸಾಗರ ನಿಲಯ ನಾಗಶಯನ ನೀನು ಹ್ಯಾಗೆ ಮಹ ಕರುಣಾಳು ಪ ಭಕ್ತರ ದುರ್ಭವ ಕತ್ತರಿಸದೆ ಇಡೀ ಭಕ್ತರ ಬೆಂಬಲೆಂಬೋಕ್ತಿ ಸತ್ಯವೇನು 1 ಪಾದ ನುತಿಸಲು ಕಾಯದಾದಿ ನುತ ಪೋಷನೆಂಬ ಮಹ ಸ್ಮøತಿವಾಕ್ಯ ಸರಿಯೇನೋ 2 ಶ್ರೀಶ ಶ್ರೀರಾಮ ನಿನ್ನದಾಸರ ನೊರೆದಿಹಿ ದಾಸರ ಪ್ರಾಣನೆಂಬುವಾಚ ಲೇಸೇನೆಲೋ 3
--------------
ರಾಮದಾಸರು