ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುತಿ | ಪರನ ಪೊರದೇ ಪ ನೋಡಿದಾಕ್ಷಣದಲ್ಲಿ ಅನಂತ ಜನ್ಮದಿಂದ | ಮಾಡಿದ ಪಾಪಗಳು ಪರಿದವಯ್ಯ | ಆಡಲೇನು ತೋಯ ಸ್ಪರ್ಶವಾಗಲು | ನಲಿ | ದಾಡಿದರು ಗೋತ್ರಜರು ಇವನ ಪುಣ್ಯಕ್ಕೆ ಎಣಿಯೇ 1 ಮಿಂದು ಮನಃಪೂರ್ವಕದಿ ಕೊಂಡಾಡಲು ವಳಗೆ | ಪೊಂದಿದ ದಾಸವರು ಸುಮ್ಮನಹರೋ | ವೃಂದಾರಕರ ಬಳಗ ಇವನ ಸಾಧನೆ ಮಾಳ್ಪಾ ನಂದದಲಿ ಇಪ್ಪನೆ ಅಭಿಮೊಗರಾಗಿ2 ವರನ ಕೊಡುವೆನೆಂದು ವೈಷ್ಣವ ಮಣಿಯಿಂದ | ಧರೆಯೊಳಗೆ ಜನಿಸದೆ ಜಗಜ್ಜನನಿ | ಕರಸಿಕೊಂಡೆ ನೀನು ವರದೆ ವರದೆ ಎಂದು | ವರವ ಕೊಡು ಎನಗೆ ಸುಜನರು ಮೆಚ್ಚವಂದದಲಿ 3 ಇದನೆ ಬೇಡಿಕೊಂಬೆ ಇರಳು ಹಗಲು ನೀನೆ | ಒದಗಿ ಬಿನ್ನಹ ಮಾಡು ನಿನ್ನ ಪತಿಗೆ | ಮುದದಿಂದ ಹರಿಯಾಪ್ರವಿಷ್ಠಾಪ್ರವಿಷ್ಠ ಕಥೆ | ತುದಿನಾಲಿಗೆಯಲ್ಲಿ ಬರಲಿ ಬಣ್ಣಿಸುವಂತೆ 4 ಪಾಂಚಜನ್ಯಾದ್ರಿಯಲ್ಲಿ ಉದುಭವಿಸಿ ತುಂಗೆಯೊಳು | ಪಂಚನದಿ ಸಂಗಮವೆಂದೆನಿಸಿದೆ | ಪಂಚವಿಂಶತಿ ನಮ್ಮ ವಿಜಯವಿಠ್ಠಲದೇವ | ಮೂರ್ತಿ ಮನದೊಳಗಿರಲಿ5
--------------
ವಿಜಯದಾಸ
ಭಜಿಸುವೆನು ನಾನಿನ್ನ ಭಕ್ತಾಧೀನ ಅಜಹರನುತ ಅಗಣಿತಚರಿತ ಹರಿ ಪ ಅಂದು ಮುನಿಸತಿ ಶಾಪದಿಂದ ಶಿಲೆಯಾಗಿರೆ ಛಂದದಿ ಚರಣಾರವಿಂದ ಸ್ಪರ್ಶವಾಗಲು ಕುಂದು ಪರಿಹಾರವಾಗಿ ಸುಂದರ ಮಣಿಯಾದಳೆಂದು ನಿಮ್ಮಯ ಪಾದದ್ವಂದ್ವ ಬಿಡದಲೆ ನಾ 1 ಕಂದ ಕರೆಯಲು ಶ್ರೀ ಗೋವಿಂದ ಘನ ಸ್ತಂಭದೊಳ್ ಬಂದು ದೈತ್ಯನ ಕೊಂದ ಇಂದಿರಾರಮಣ ಕಂದರ್ಪ ಜನಕ ಮುಚುಕುಂದ ವರ ಕೃಷ್ಣಾ ಮಂದರಧರ ಸಲಹೆಂದು ಅನವರತ 2 ದೃಢ ಧ್ರುವರಾಯನ ಬಿಡದೆ ಮಲತಾಯಿ ತಾ ಅಡವಿಗೆ ನೂಕಿಸಲು ಕಡು ಮುದದಿ ಕಡಲಶಯನ ಜಗದೊಡಿಯನೆ ಕಾಯ್ದೆ ಗರುಡವಾಹನನೊಡನೆ ನುಡಿಯಯ್ಯ 3 ದುರುಳ ರಾವಣನ ದಶಶಿರಗಳು ಖಂಡಿಸಿ ಶರಣೆಂದು ವಿಭೀಷಣ ಗೇ ಸ್ಥಿರದಿ ಪಟ್ಟವನಿತ್ತು ಪರಮಪುರುಷ ಶಿರಿವರ ನರಹರಿ ಶೌರಿ ಮೊರೆ ಹೊಕ್ಕೆ ರಕ್ಷಿಸೋ ಮುರಹರ ಕರುಣಾಂಬುಧೆ 4 ಕರಿಸರೋವರದಿ ಮಕರಿಯ ಬಾಧೆಗೆ ಸಿಕ್ಕು ಹರಿನೀನೆ ಗತಿಯೆಂದು ಸ್ಮರಿಸುತಲಿರಲು ಭರದಿಪೋಗಿ ಕಷ್ಟಪರಿಹರಿಸಿ ಪೊರೆದಿ ಶ್ರೀಧರವರÀ ಹೆನ್ನೆಯಪುರ ಲಕ್ಷ್ಮೀನರಸಿಂಗ 5
--------------
ಹೆನ್ನೆರಂಗದಾಸರು