ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ಞಾನವಂತರ ಸಂಗವಿರಲು ಸ್ನಾನವ್ಯಾತಕೆ ಪ ನಾನು ಎಂಬುದ ಬಿಟ್ಟ ಮೇಲೆ ನರಕವ್ಯಾತಕೆ ಅ.ಪ. ಮೃತ್ತಿಕೆ ಶೌಚ ಮಾಡದವನ ಆಚಾರವ್ಯಾತಕೆಸತ್ಯವಾದಿ ಆಗದವನ ನಂಬಿಗೆ ಯಾತಕೆ ||ಚಿತ್ತಶುದ್ಧಿ ಇಲ್ಲದವನ ವೈರಾಗ್ಯವ್ಯಾತಕೆಉತ್ತಮ ಹಿರಿಯರಿಲ್ಲದಂಥ ಸಭೆಯು ಯಾತಕೆ 1 ಪತಿಯ ಆಜ್ಞೆ ಮೀರಿದವಳ ವ್ರತಗಳ್ಯಾತಕೆಸತಿಗೆ ಅಳುಕಿ ನಡಿಯುವವನ ಸಾಹಸವ್ಯಾತಕೆ ||ಯತಿಯ ನಿಂದೆ ಮಾಡುವವನ ಮತಿಯು ಯಾತಕೆಅತಿ ವಿರೋಧ ಬಡಿಸುವಂಥ ಅಣ್ಣನ್ಯಾತಕೆ 2 ಹರಿಕಥೆಯ ಕೇಳದವನ ಕಿವಿಯು ಯಾತಕೆಮುರಹರನ ಮೂರ್ತಿಯ ನೋಡದಂಥ ಕಂಗಳ್ಯಾತಕೆ ||ಮರುತ ಮತವ ಪೊಂದದವನ ಬಾಳ್ವೆ ಯಾತಕೆಎರಡಾರು ನಾಮವಿಡದ ಶರೀರವೇತಕೆ3 ತಂದೆ ತಾಯಿ ಮಾತು ಕೇಳದ ಮಕ್ಕಳ್ಯಾತಕೆಬಂಧು ಬಳಗ ಉಳ್ಳದವನ ಭಾಗ್ಯವ್ಯಾತಕೆ ||ಬಂದ ಅತಿಥಿಗನ್ನವನಿಕ್ಕದ ಸದನವೇತಕೆ ಗೋ-ವಿಂದನಂಘ್ರಿ ಸ್ಮರಿಸದಂಥ ನಾಲಿಗ್ಯಾತಕೆ 4 ಮಕ್ಕಳನ್ನ ಮಾರಿಕೊಂಬ ತಂದೆಯಾತಕೆರೊಕ್ಕಕಾಗಿ ಬಡಿದಾಡುವ ತಮ್ಮನ್ಯಾತಕೆ ||ಕಕ್ಕುಲಾತಿ ಬಡುವ ಸಂನ್ಯಾಸವ್ಯಾತಕೆಠಕ್ಕು ಭಕುತಿ ಮಾಡುವಂಥ ದಾಸನ್ಯಾತಕೆ 5 ಆಗಿ ಬರದವರ ಅನ್ನ ಉಣ್ಣಲ್ಯಾತಕೆರೋಗವಾದ ನರಗೆ ಹೆಣ್ಣಿನ ಭೋಗವ್ಯಾತಕೆ ||ಯೋಗಿಯಾದ ಮೇಲೆ ದ್ರವ್ಯದ ಆಶೆಯಾತಕೆಭಾಗೀರಥಿಯ ಮಿಂದ ಮೇಲೆ ಪಾಪವ್ಯಾತಕೆ 6 ವೇದವನ್ನು ಓದದಂಥ ವಿಪ್ರನ್ಯಾತಕೆಕಾದೊ ರಣಕೆ ಅಂಜುವಂಥ ಕ್ಷತ್ರಿಯನ್ಯಾತಕೆ ||ವಾದವನ್ನು ಮಾಡುವಂಥ ಬಂಟನ್ಯಾತಕೆಸಾಧುಗಳಿಗೆ ಎರಗದವನ ಶಿರವಿದ್ಯಾತಕೆ 7 ಯಾತ್ರೆ ತೀರ್ಥ ಮಾಡದಂಥ ಪಾದವ್ಯಾತಕೆಪಾತ್ರರ ಸಂಗವಾಗದವನ ಜನ್ಮವ್ಯಾತಕೆ ||ಸ್ತೋತ್ರಕೆ ಮರುಳಾಗುವವಗೆ ಸಾಧನ್ಯಾತಕೆಪಾರ್ಥ ಸಖನ ತಿಳಿಯದವನ ಜ್ಞಾನವ್ಯಾತಕೆ 8 ಗುರೂಪದೇಶವಿಲ್ಲದಂಥ ಮಂತ್ರವ್ಯಾತಕೆಅರಿತು ವಿದ್ಯ ಪೇಳದ ಉಪಾಧ್ಯನ್ಯಾತಕೆ ||ಹರುಷವನ್ನು ತಾಳದಂಥ ಜ್ಞಾನಿ ಯಾತಕೆಕರಣ ಶುದ್ಧಿ ಇಲ್ಲದವನ ಸ್ನೇಹವ್ಯಾತಕೆ 9 ಗಾಣ ಕಟ್ಟಿದೆತ್ತಿಗೆ ಗೆಜ್ಜೆಯಾತಕೆ ||ರಾಣಿ ಇಲ್ಲದವನು ಮಾಡುವ ಬದುಕು ಯಾತಕೆತಾನು ಉಣ್ಣದೆ ಪರರಿಗಿಕ್ಕದ ಧನವಿದ್ಯಾತಕೆ 10 ಧರ್ಮವಿಲ್ಲದೆ ರಾಜ್ಯ ಆಳುವ ಪ್ರಭುವಿದ್ದ್ಯಾತಕೆಮರ್ಮವರಿತು ನಡೆಯದಂಥ ಹೆಣ್ಣು ಯಾತಕೆ ||ನಿರ್ಮಲಾಂಗನಾದ ಮೋಹನ ವಿಠಲನ ಗುಣಕರ್ಮ ಕ್ರಿಯಾ ತಿಳಿದ ಮ್ಯಾಲೆ ನಿರ್ಣಯವ್ಯಾತಕೆ 11
--------------
ಮೋಹನದಾಸರು
ವಾಸುದೇವನನಾ ಶ್ರೈಸದಿಹ ಉಪಾಸನ್ಯಾತಕೆ ಧ್ಯಾಸ ಬಲಿಯದಿಹ ಮಿಗಿಲಭ್ಯಾಸವ್ಯಾತಕೆ ಧ್ರುವ ಹೃದಯ ಶುದ್ಧವಾಗದೆ ಉದಯಸ್ನಾನವ್ಯಾತಕೆ ಬದಿಯಲೀಹ್ಯ ವಸ್ತುಗಾಣದ ಜ್ಞಾನವ್ಯಾತಕೆ ಉದರ ಕುದಿಯು ಶಾಂತ ಹೊಂದದ ಸಾಧನ್ಯಾತಕೆ ಬುಧರ ಸೇವೆಗೊದಗದೀಹ ಸ್ವಧನವ್ಯಾತಕೆ 1 ಭಾವ ನೆಲಿಯುಗೊಳ್ಳ ದೀಹ್ಯ ಭಕುತಿದ್ಯಾತಕೆ ಕಾವನಯ್ಯನ ಕಾಣದೀಹ್ಯ ಯುಕತದ್ಯಾತಕೆ ದೇವದೇವನ ಸೇವೆಗಲ್ಲದ ಶಕುತ್ಯದ್ಯಾತಕೆ ಹ್ಯಾವ ಹೆಮ್ಮೆ ಅಳಿಯದೀಹ್ಯ ವಿರುಕಿತ್ಯಾತಕೆ 2 ತತ್ವ ತಿಳಿಯದಿಹದೀ ವಿದ್ವತ್ವವ್ಯಾತಕೆ ಸತ್ವಗುಣದ ಲಾಚರಿಸದಿಹ್ಯ ಕವಿತ್ಯವ್ಯಾತಕೆ ಚಿತ್ತಶುದ್ಧವಾಗದಿಹ ಮಹತ್ವವ್ಯಾತಕೆ ವಿತ್ತ ಆಶೆಯು ಅಳಿಯದಿಹ ಸಿದ್ಧತ್ವವ್ಯಾತಕೆ 3 ನೀತಿಮಾರ್ಗವರಿಯದೀ ಹ ರೀತ್ಯದ್ಯಾತಕೆ ಮಾತುಮಿತಿಗಳಿಲ್ಲದವನು ಧಾತುವ್ಯಾತಕೆ ಅಮೃತ ಊಟವ್ಯಾತಕೆ ಜ್ಯೋತಿ ತನ್ನೊಳರಿಯದಲೆ ಉತ್ತಮದ್ಯಾತಕೆ 4 ನಿತ್ಯ ಶ್ರವಣವ್ಯಾತಕೆ ನೆನವು ನೆಲೆಯಾಗೊಳ್ಳದಿಹ ಮನನವ್ಯಾತಕೆ ತನುವಿನಲ್ಲಿ ಘನವು ಕಾಣದನುಭವ್ಯಾತಕೆ ದೀನಮಹಿಪತಿಸ್ವಾಮಿಗಾಣದ ಜನಮವ್ಯಾತಕೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು