ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧ್ಯಾನವನೆ ಮಾಡಿ ನವರತ್ನ ಸಿಂಹಾಸನಸಾನಂದದಿಂದ ನಿಮಗರ್ಪಿಸುವೆನುಶ್ರೀ ನಿಧಿಯೆ ಪಾದ್ಯಾಘ್ರ್ಯ ಮಧುಪರ್ಕಗಳನು ಸು-ಮ್ಮಾನದಿಂದರ್ಪಿಸುವೆ ಗೌರಿ ದೇವಿ ಜಯ 1 ತುಂಗಭಧ್ರಾ ಸರಸ್ವತಿ ಯಮುನೆ ಕಾವೇರಿಗಂಗಾದಿ ಶುಭತೀರ್ಥ ಸಲಿಲದಿಂದಮಂಗಲಸ್ನಾನವನೆ ರಚಿಸಿ ಜಡೆವೆಣೆದು ಕುಸುಮಂಗಳಂ ಮುಡಿಗೆ ಮುಡಿಸುವೆನಂಬಿಕೆ 2 ಚಂದ್ರಗಾವಿಯ ಸೀರೆ ಕುಪ್ಪಸವ ತೊಡಿಸುವೆನುಚಂದದಿಂದರಿಸಿನವ ಲೇಪಿಸುವೆನುಚಂದ್ರಕಸ್ತೂರಿ ತಿಲಕ ಕುಂಕುಮದ ರೇಖೆಯನುಅಂದದಿಂದಿಡುವೆ ಶ್ರೀ ಗೌರಿ ನಿಮಗೆ3 ಕಣ್ಣ ಕಪ್ಪಿಟ್ಟು ಕರಯುಗಕೆ ಗಂಧವ ತಿವುರಿಚಿನ್ನದಾಭರಣ ನಿಕರವನಿಡುವೆನುರನ್ನ ದುಂಗುರ ಹಾರ ಪದಕದಿಂದ ಶೃಂಗರಿಸಿನಿನ್ನ ಪದಯುಗವ ಪೂಜಿಪೆನು ಗೌರಿ ಜಯ4 ಚಾರು ಪುನ್ನಾಗ ಪೂಗಸಿರಿಸ ಸುರಹೊನ್ನೆ ಸಂಪಗೆ ಮೊದಲಾದ ಪೂಸರವ ಸಿರಿಮುಡಿಗೆ ಮುಡಿಸುವೆನು ಗೌರಿ ಜಯ 5
--------------
ಕೆಳದಿ ವೆಂಕಣ್ಣ ಕವಿ
ಪೂಜೆಯ ಮಾಡಿದೆನೆ ದೇವರ ಪೂಜೆಯ ಮಾಡಿದೆನೆಈ ಜಗದರಸ ಚಿದಾನಂದ ತಾನೆಂದು ಪ ಶುದ್ಧ ಸ್ನಾನವನೆ ಮಾಡುತ ನಿರ್ಮಲ ವಸನವನುಬಂಧಿಸಿ ಬಿಗಿದು ಸ್ವಸ್ಥಾನಾಸ ಮಧ್ಯದಲ್ಲಿ ಕುಳಿತು 1 ನಿಸ್ಪøಹ ಭಸಿತವನೇ ಧರಿಸುತ ನಿಷ್ಕಲಂಕನಾಗಿವಿಶ್ವೇಶ್ವರ ವಿರೂಪಾಕ್ಷನೇ ತಾನೆಂದು 2 ಸರ್ವ ಪೂಜಿತನು ತಾನೀಗ ಸರ್ವನಿವಾರಿತನುಸರ್ವರೂಪಕ ತಾನೀಗೆಂದು ಧ್ಯಾನವರ್ಪಿಸಿದೆನೆ3 ಆನಂದ ವ್ಯಾಪಕನೆ ತಾನೀಗ ಆನಂದ ರೂಪಕನೇಆನಂದಾತ್ಮಕ ತಾ ನೀಗೆಂದಾಹ್ವಾನ ವರ್ಪಿಸಿದನೆ 4 ಇಂದ್ರಿಯ ರೂಪಕ ತಾನೀಗ ಇಂದ್ರಿಯ ವ್ಯಾಪಕನೇಇಂದ್ರಿಯ ಸಾಕ್ಷಿಕ ತಾನೀಗೆಂದು ಸಿಂಹಾಸನವರ್ಪಿಸಿದೆನೆ 5 ನಿಶ್ಚಲಾತ್ಮಕನವ ತಾನೀಗ ನಿಶ್ಚಲೈಕ್ಯನಾದನಿಶ್ಚಲವಸ್ತು ನಿಜತಾನೇ ಎಂದಘ್ರ್ಯವರ್ಪಿಸಿದೆನೆ 6 ವಿಶ್ವ ವಿಶ್ವಭೋಕ್ತøವಿಶ್ವಲೀಲಾತ್ಮಕ ತಾನೀಗೆಂದು ಪಾದ್ಯವರ್ಪಿಸಿದೆನೆ 7 ನಿಗಮ ಗೋಚರ ತಾನೆಂದು ಸ್ನಾನವರ್ಪಿಸಿದೆನೆ 8 ಅಂಬರ ವ್ಯಾಪಕನೇಅಂಬರದೊಳು ಚಿದಂಬರ ತಾನೆಂದು ವಸ್ತ್ರವರ್ಪಿಸಿದೆನೆ9 ಚೈತನ್ಯಾಧಾರ ತಾನೀಗ ಚೈತನ್ಯಾದೂರ ಚೈತನ್ಯಾಧಿಪತಾನೆಂದು ಯಜ್ಞೋಪವೀತ ವರ್ಪಿಸಿದನೆ10 ಕಲುಷ ನಿರ್ಜಿತನೇಕಲುಷ ಹರತಾ ನಿಜವೆಂದಾಭರಣವರ್ಪಿಸಿದೆನೆ11 ಲೇಪಕ್ಕಾಧಾರ ತಾನೀಗ ಲೇಪ ನಿರಾಧಾರಲೇಪಹರ ತಾ ನಿಜವೆಂದು ಅನುಲೇಪವರ್ಪಿಸಿದೆನೆ12 ಪುರತನು ವಿಸ್ತರಿಸಿ ತಾನೀಗ ಪುರಾಧಿಪತಾನೆನಿಸಿಪುರುಷೋತ್ತಮ ತಾನೆಂದು ಸುಪುಷ್ಪವರ್ಪಿಸಿದೆನೆ13 ಪರ ಇಹವು ತಾನೇ ತಾನೀಗ ಪರಾತ್ಪರನು ತಾನೆಪರವಸ್ತು ತಾ ನಿಜವೆಂದು ಧೂಪವರ್ಪಿಸಿದೆನೆ 14 ಜ್ಯೋತಿಯ ರೂಪ ತಾನೀಗ ಜ್ಯೋತಿ ನಿರ್ಮಯನುಜ್ಯೋತಿಯಹ ಚಿಜ್ಯೋತಿಯು ತಾನೆಂದು ಜ್ಯೋತಿಯರ್ಪಿಸಿದೆನೆ 15 ನಿತ್ಯ ತೃಪ್ತನುನಿತ್ಯತೃಪ್ತ ತಾನೆಂದು ನೈವೇದ್ಯವರ್ಪಿಸಿದೆನೆ 16 ಮಂಗಳವೆ ಆದ ತಾನೀಗ ಮಂಗಳಾಂಗನಾದಮಂಗಳ ಮೂರುತಿ ತಾನೆಂದು ತಾಂಬೂಲವರ್ಪಿಸಿದೆನೆ 17 ನಿರ್ವಿಕಾರ ನಿಜ ತಾನೀಗ ನಿರಾವಲಂಬ ನಿಜ ನಿ-ರಾವರಣ ತಾನೆಂದು ಪ್ರದಕ್ಷಿಣವರ್ಪಿಸಿದೆನೆ 18 ಜಯ ಜಯಾತ್ಮಕನೆ ತಾನೀಗ ಜಯ ಸದಾತ್ಮಕನೆಜಯನಿತ್ಯಾತ್ಮಕ ತಾನೆಂದು ನಮಸ್ಕಾರವರ್ಪಿಸಿದೆನೆ19 ಲೋಕೈಕನಾಥ ತಾನೀಗ ಏಕೈಕ ನಾಥನುಏಕ ನಾಥನು ತಾನೆಂದು ವಿಸರ್ಜನವರ್ಪಿಸಿದೆನೆ 20 ಪರಿ ಪರಿ ಮಾಡಿದೆನೆ 21
--------------
ಚಿದಾನಂದ ಅವಧೂತರು
ಪೂಜೆಯನು ಮಾಡಿರೊ ಪಾಪಿಪುರುಷನಿಗೆಕಾಯಮಲತೋಯದ ಸ್ನಾನವನೆ ಮಾಡಿಸಿನಯನ ನಾಸಿಕದ ಮಲ ಗಂಧಲೇಪನ ಮಾಡಿಗುಪಿತದಲಿ ಗುದಮಲ ಹಸ್ತೋದಕವ ಕೊಟ್ಟುಅಷ್ಟಮದ ದರಿದ್ರ ಅಲ್ಪಬಲನೆ ಕ್ರೂರನವವಿಧ ದ್ವೇಷಕೆ ನೀನೆ ಅಧಿಕಾರಿಯು
--------------
ಗೋಪಾಲದಾಸರು