ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾಹ್ನವಿ ಜಗತ್ರಯ ಪಾವನಿ ಪ್ರಣತಕಾಮದೆ ಪದ್ಮಜಾಂಡ ಸಂಭೂತೆ ಪ ಸೃಷ್ಟೀಶ ಪದಜಾತೆ ವಿಶ್ವಮಂಗಳ ಮಹೋ ತ್ಕøಷ್ಟ ತೀರ್ಥಗಳೊಳುತ್ತಮಳೆನಿಸುವೇ ಕಷ್ಟವರ್ಜಿತವೆನಿಪ ತ್ರಿಪಥಗಾಮಿನಿ ದಯಾ ದೃಷ್ಟಿಯಿಂದಲಿ ನೋಡು ಪ್ರತಿದಿನದಿ ಎನ್ನಾ 1 ಕರ್ಮ ಸಾಕ್ಷಿಯೆನಿಸುತಿಹ ಅರ್ಕದೇವನು ಬಂದ ಸಮಯದಲ್ಲಿ ಶರ್ಕರಾಹ್ವರು ಸ್ನಾನಗೈಯೆ ದುರಿತಗಳು ಸಂ ಪರ್ಕವಾಗದ ತೆರದಿ ಸಂತೈಪೆ ದಯದಿ 2 ಕಾರುಣಿಕ ಬಹಿರಾವರಣದಿಂದ ನೀ ಪೊರಟು ವಾರಾಹಿಯೊಡಗೂಡಿ ಭಕ್ತಜನರ ಪ್ರಾರಬ್ಧ ಕರ್ಮಗಳನುಣಿಸಿ ಮುಕ್ತರನ ಮಾಳ್ಪೆ ದೂರಗೈಸುವೆ ಸಂಚಿತಾಗಾಮಿಗಳನೂ 3 ನಂದಿನೀ ನಳಿನಿ ಸುಸೀತಾ ಮಲಾಪಹರ ಳೆಂದ ಮಾತ್ರದಿ ಪುನೀತರನು ಮಾಳ್ಪೆ ಸಂದರುಶನ ಸ್ವರುಶನ ಸ್ನಾನಗಳ ಫಲ ಪು ರಂದರಾರ್ಯರೆ ಬಲ್ಲರಲ್ಪರು ಅರಿಯರು 4 ಮಾತೆ ವಿಜ್ಞಾಪಿಸುವೆ ಬಿನ್ನಪವ ಕೇಳು ಸಂ ಪ್ರೀತಿಯಿಂದಲಿ ಕರುಣಿಸೆನಗೆ ಇದನೆ ಶ್ರೋತವ್ಯ ವಕ್ತವ್ಯ ಮಂತವ್ಯ ಸ್ತವ್ಯ | ಜಗ ನ್ನಾಥ ವಿಠ್ಠಲನೊಬ್ಬನೆಂದು ತಿಳಿವಂತೇ5
--------------
ಜಗನ್ನಾಥದಾಸರು
ದಾಸನಾದ ಮೇಲೆ ಈಶ ದೂರುಂಟೆ ಆಸೆನೀಗಲು ಸುಖದ ರಾಶಿ ಬೇರುಂಟೆ ಪ ದೋಷಕ್ಕಂಜಿದಮೇಲೆ ಸನ್ಮಾರ್ಗ ಬೇರುಂಟೆ ಕ್ಲೇಶ ನೀಗಿದಮೇಲೆ ಪುಣ್ಯ ಇನ್ನುಂಟೆ ಹೇಸಲು ಪ್ರಪಂಚಕೆ ಸತ್ಸಂಗ ಬೇರುಂಟೆ ವಾಸನ್ಹಿಂಗಿದಮೇಲೆ ವೈರಾಗ್ಯವುಂಟೆ 1 ಜ್ಞಾನಗೂಡಿದಮೇಲೆ ಮತ್ತೆ ತೀರ್ಥಗಳುಂಟೆ ಧ್ಯಾನವಿಡಿದಮೇಲೆ ಅನ್ಯಮೌನುಂಟೆ ಹೀನಗುಣ ತೊಳೆದಮೇಲಿನ್ನು ಸ್ನಾನಗಳುಂಟೆ ಮಾನಸವು ಶುದ್ಧಿರಲು ಬೇರೆ ಮಡಿಯುಂಟೆ 2 ಕೈವಲ್ಯ ಇನ್ನುಂಟೆ ಶರಣು ಪೊಂದಿದಮೇಲೆ ಪರಮಾರ್ಥ ಬೇರುಂಟೆ ಅರಿವನರಿತರೆ ಬೇರೆ ಪರಲೋಕ ಇರುಲುಂಟೆ ಶರಣರೊಲಿದಮೇಲ್ಹರಿಚರಣ ಹೊರತುಂಟೆ 3 ಸಫಲನಾದಮೇಲೆ ವ್ರತನೇಮ ಬೇರುಂಟೆ ಗುಪಿತವರಿತಮೇಲೆ ಪರತತ್ವವುಂಟೆ ಅಪರೂಪ ಧ್ಯಾನಿರಲು ತಪ ಬೇರೆ ಇರಲುಂಟೆ ಅಪರೋಕ್ಷಜ್ಞಾನ್ಯಾದ ಮೇಲೆ ಮಿಕ್ಕಸಾಧನುಂಟೆ 4 ಮಾನಹೋದಮೇಲೆ ಮರಣ ಬೇರಿರಲುಂಟೆ ನಾನತ್ವ ಪೋದಮೇಲೆ ಸತ್ಕರ್ಮವುಂಟೇ ಧ್ಯಾನದಾಯಕ ಮಮಪ್ರಾಣ ಶ್ರೀರಾಮನಡಿ ಖೂನ ತಿಳಿದ ಮೇಲೆ ಮುಕ್ತಿ ಬೇರುಂಟೆ 5
--------------
ರಾಮದಾಸರು
ಪಾಪೋಸು ಹೋದುವಲ್ಲಾ ಪ ಅಪಾರ ಜನ್ಮದಿಂದ ಆರ್ಜನ ಮಾಡಿದ ಅ.ಪ. ಉರುಗಾದ್ರಿಯಲ್ಲಿ ಸ್ವಾಮಿ ಪುಷ್ಕರಣಿ ಮೊದಲಾದಪರಿಪರಿ ತೀರ್ಥ ಸ್ನಾನಗಳ ಮಾಡಿಹರಿದಾಸರ ಕೂಡ ಶ್ರೀನಿವಾಸ ಮೂರ್ತಿದರುಶನದಲಿ ಮೈಮರೆತು ಇದ್ದೆನು ಎನ್ನ 1 ಪರಮ ಭಾಗವತರು ಹರಿಕಥೆ ಹೇಳಲುಪರಮ ಹರ್ಷದಿಂದ ಕೇಳುತಿದ್ದೆಪರಮ ಪಾಪಿಷ್ಠರ ಪಾಲಾಗಿ ಹೋದಾವುಪರಮಾತ್ಮನ ಚಿತ್ತಕೆ ಬಂದಿತೀಗೆನ್ನ 2 ಮಾಯಿ ಒಲಿದು ಎನಗೆ ಕೊಂಡು ಕೊಟ್ಟಿದ್ದಳುದಾಯಿಗಾರರು ನೋಡಿ ಸಹಿಸಲಿಲ್ಲಾಮಾಯಾರಮಣ ನಮ್ಮ ಮೋಹನ್ನ ವಿಠಲನ್ನಮಾಯದಿಂದಲಿ ಮಟ್ಟವಾಯಿತು ಎನ್ನ 3
--------------
ಮೋಹನದಾಸರು
ಮನಮುಟ್ಟಿ ಮಾಡುವದೆ ಭಕ್ತಿಗಳು ಶ್ರುತದೃಷ್ಟನು ಮನದಿಂದ ಮಾಡುವ ನೇಮನಿತ್ಯಗಳು ಮಹಾ ಧರ್ಮಶಾಸ್ತ್ರಗಳು ಯತಿ ಕುಲದೀಪಗಳು 1 ತ್ರಿವೇಣಿ ಸಂಗಮ ಸ್ನಾನಗಳು ಮಹಾದಿವ್ಯ ಮಡಿಯಗಳು ಇಟ್ಟಿಹ ದ್ವಾದಶ ನಾಮಗಳು ಮನಗಂಡಿಹದೇ ಶ್ರೀಮುದ್ರೆಗಳು 2 ಸ್ಮರಣೆಯೊಳಿಹುದೆ ಸಂಧ್ಯಾನಗಳು ಜಪಸರ ಮಾಲೆಗಳು ಜಪತಪ ಧ್ಯಾನವೆ ಮೌನಗಳು ನಿರ್ಧಾರದಿ ಗುರುಪಾದ ನಿಶ್ಚೈಸಿಹ ವ್ರತ ಆಚಾರವೇ ನಿಷ್ಠೆಗಳು 3 ಮಾಡುವುದೇ ದೇವಪೂಜೆಗಳು ಅಂತ:ಕರಣದಿ ಗುರುಚರಣದ ಅಭಿಷೇಕಜ್ಞಾನ ಭಾಗೀರಥಿ ತೀರ್ಥಗಳು ಚಿತ್ತಚಿಂತನದಿ ದಿವ್ಯ ವಸ್ತ್ರಗಳು ಪರಿಮಳಪುಷ್ಪಗಳು 4 ಅನಿಮಿಷ ನೇತ್ರದಿ ನೋಡುವ ಘನ ಚಿತ್ಪ್ರಕಾಶವೆ ಸದಾನಂದದ ಮೊದಲಾದ ಸತ್ವರಜತಮ ಏಕಾರ್ತಿಗಳು ಸದ್ಭಾವನಿ ತಾಂಬೂಲಗಳಿಂದಲಿ ರತಿಮನ ಘನ ಮಂಗಳಾರ್ಚನಿ ಪಂಚ ಪ್ರಕಾಶಗಳು 5 ಶ್ರೀಗುರು ಸೇವೆ ಸತ್ಕಾರಗಳು ಜಯ ಲಕ್ಷ್ಮಿಯ ಷೋಡಶ ಉಪಚಾರಗಳಿಂದಲಿ ಮಹಾದಿವ್ಯ ಪೂಜೆಗಳು ತಲ್ಲೀನವು ಅಗಿಹ ಗುರುಪಾದದಿ ಪ್ರದಕ್ಷಿಣೆವೆ ಗುರುನಾಮವೇ ಸದ್ಗತಿ ಮುಕ್ತಿಗಳು 6 ಆತ್ಮಾನುಭವ ಗುರುದಾಸರಿಗಲ್ಲದೆ ಬಲ್ಲವೇನು ಪಶುಪ್ರಾಣಿಗಳು ಸಾಕ್ಷಾತ್ಕಾರಗಳು ಭಾಸ್ಕರ ಸ್ವಾಮಿಗಳು ತ್ರಾಹಿ ಜೀವನಮುಕ್ತಿಗಳು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ರಾಮ ರಾಮೆನ್ನಿರೊ ಸೀತಾಪತಿ ರಾಮ ರಾಮೆನ್ನಿರೊಪ. ಗಂಗೆಯೊಳ್ ಮುಳುಗಲ್ಯಾಕೆ ನಡೆದು ಬಲು ಭಂಗವ ಪಡುವುದ್ಯಾಕೆ ಮಂಗಲದಾತ ನರಸಿಂಗನ ನಾಮವ ಹಿಂಗದೆ ನೆನೆದರಿಷ್ಟಂಗಳ ಕೊಡುವ1 ಉಪವಾಸ ಮಾಡಲ್ಯಾಕೆ ಕಪಟದೊಳು ಗುಪಿತದಿ ಕುಳ್ಳಲ್ಯಾಕೆ ಉಪಮೆರಹಿತ ಶ್ರೀಪತಿ ಕೃಷ್ಣರಾಯನ ಜಪಿಸಿ ಬಂದರೆ ಜನ್ಮ ಸಫಲವಾಗುವುದಲ್ಲೋ2 ಧ್ರುವನು ಸದ್ಗತಿ ಪಡೆದ ಕರುಣದಿಂದ ಪವಮಾನಿಗೆ ಒಲಿದ ಭುವನ ಈರಡಿ ಮಾಡಿ ಬಲಿಯನ್ನು ಸಲಹಿದ ಬವರದೊಳಗೆ ದಾನವರನ್ನು ಮಡುಹಿದ3 ಯಾತ್ರೆಗೆ ಪೋಗಲ್ಯಾಕೋ ಕಾವಡಿ ಪೊತ್ತು ತೀರ್ಥಸ್ನಾನಗಳ್ಯಾತಕೋ ಮಾಧವ ಶತಪತ್ರನಾಭನ ಸಂ- ಕೀರ್ತನಾದಿಗಳೆ ಪರತ್ರಸಾಧನವಲ್ಲೊ4 ಭೂರಿಯಾಯಾಸವ್ಯಾಕೋ ಬರಿದೆ ಸಂ- ಸಾರವ ನಂಬಲ್ಯಾಕೋ ಮಾರಾರಿಸಖ ಲಕ್ಷ್ಮೀನಾರಾಯಣನನ್ನು ಸೇರಿ ಭಜಿಪರ ಉದ್ಧಾರಮಾಡುವ ಶ್ರೀ5
--------------
ತುಪಾಕಿ ವೆಂಕಟರಮಣಾಚಾರ್ಯ
ಏನಮಾಡಿದರೆನ್ನ ಭವಹಿಂಗದು |ದಾನವಾಂತಕ ನಿನ್ನ ದಯವಾಗದನಕ ಪಅರುಣೋದಯಲೆದ್ದು ಅತಿಸ್ನಾನಗಳ ಮಾಡಿ |ಬೆರಳನೆಣಿಸುತ ಸ್ಮರಿಸಿ ನಿಜವರಿಯದೆ ||ಶರಣು ಸಾಷ್ಟಾಂಗವನು ಹಾಕಿದೆನು ಶತಸಹಸ್ರ |ಹರಿನಿನ್ನ ಕರುಣಾ ಕಟಾಕ್ಷವಿರದನಕ1ಶೃತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ |ಅತಿ ಶೀಲಗಳನೆಲ್ಲ ಮಾಡಿ ದಣಿದೆ ||ಗತಿಯ ಪಡೆಯುವೆನೆಂದು ಗಯೆ ಕಾಶಿಯ ಮಾಡಿದೆನು |ರತಿಪತಿಯ ಪಿತ ನಿನ್ನ ದಯವಾಗದನಕ 2ದಾನವನು ಮಾಡಿದೆನು ಮೌನವನು ತಾಳಿದೆನು |ಙ್ಞÕನ ಪುರುಷಾರ್ಥಕ್ಕೆ ಮನವೀಯದೆ ||ಶ್ರೀನಾಥ ದಯಪೂರ್ಣ ಪುರಂದರವಿಠಲನ |ಧ್ಯಾನಿಸುವರೊಡನಾಡಿ ನೆಲೆಗೊಳ್ಳದನಕ 3
--------------
ಪುರಂದರದಾಸರು
ಪಾಪೋಸು ಹೋದುವಲ್ಲ - ಸ್ವಾಮಿ ಎನ್ನ -ಪಾಪೋಸು ಹೋದುವಲ್ಲ................... ಪ.ಅಪಾರ ಜನುಮದಿ ಆರ್ಚನೆಯ ಮಾಡಿದ ..........ಅಪಉರಗಾದ್ರಿಯಲಿ ಸ್ವಾಮಿ ಪುಷ್ಕರಣಿ ಮೊದಲಾದ |ಪರಿಪರಿ ತೀರ್ಥ ಸ್ನಾನಗಳ ಮಾಡೆ ||ಹರಿದಾಸರ ಕೊಡಿ ಶ್ರೀನಿವಾಸನ ಸಂ -ದರುಶನದಲ್ಲಿ ಮೈಮರೆದಿದ್ದೆನೊ ಎನ್ನ 1ಪರಮ ಭಾಗವತರು ಹರಿಕಥೆ ಪೇಳಲು |ಪರಮ ಭಕುತಿಯಲಿ ಕೇಳುತಿದ್ದೆ ||ಪರಮ ಪಾಪಿಷ್ಠರ ಪಾಲಿಗೆ ಪೋದವು |ಪರಮಾತ್ಮನ ಮನಸಿಗೆ ಬಂತು ಹೀಗೆ ............. 2ಮಾಯೆ ಒಲಿದು ಎನಗೆ ತಂದು ಕೊಟ್ಟದ್ದಳು |ದಾಯಾದಿಗಳು ನೋಡಿ ಸಹಿಸಲಿಲ್ಲ ||ಮಾಯಾ ರಮಣ ನೋಡಿ ಪುರಂದರವಿಠಲಮಾಯೆಯಿಂದ ಮಟ್ಟಮಾಯವಾದವು ಈಗ 3
--------------
ಪುರಂದರದಾಸರು
ರಾಮ ರಾಮೆನ್ನಿರೊ ಸೀತಾಪತಿ ರಾಮ ರಾಮೆನ್ನಿರೊ ಪ.ಗಂಗೆಯೊಳ್ ಮುಳುಗಲ್ಯಾಕೆ ನಡೆದು ಬಲುಭಂಗವ ಪಡುವುದ್ಯಾಕೆಮಂಗಲದಾತ ನರಸಿಂಗನ ನಾಮವಹಿಂಗದೆ ನೆನೆದರಿಷ್ಟಂಗಳ ಕೊಡುವ 1ಉಪವಾಸ ಮಾಡಲ್ಯಾಕೆ ಕಪಟದೊಳುಗುಪಿತದಿ ಕುಳ್ಳಲ್ಯಾಕೆಉಪಮೆರಹಿತ ಶ್ರೀಪತಿ ಕೃಷ್ಣರಾಯನಜಪಿಸಿ ಬಂದರೆ ಜನ್ಮ ಸಫಲವಾಗುವುದಲ್ಲೋ 2ಧ್ರುವನು ಸದ್ಗತಿ ಪಡೆದ ಕರುಣದಿಂದಪವಮಾನಿಗೆ ಒಲಿದಭುವನಈರಡಿಮಾಡಿ ಬಲಿಯನ್ನು ಸಲಹಿದಬವರದೊಳಗೆ ದಾನವರನ್ನು ಮಡುಹಿದ 3ಯಾತ್ರೆಗೆ ಪೋಗಲ್ಯಾಕೋ ಕಾವಡಿ ಪೊತ್ತುತೀರ್ಥಸ್ನಾನಗಳ್ಯಾತಕೋಕರ್ತುಮಾಧವಶತಪತ್ರನಾಭನ ಸಂ-ಕೀರ್ತನಾದಿಗಳೆ ಪರತ್ರಸಾಧನವಲ್ಲೊ 4ಭೂರಿಯಾಯಾಸವ್ಯಾಕೋ ಬರಿದೆ ಸಂ-ಸಾರವ ನಂಬಲ್ಯಾಕೋಮಾರಾರಿಸಖ ಲಕ್ಷ್ಮೀನಾರಾಯಣನನ್ನುಸೇರಿ ಭಜಿಪರ ಉದ್ಧಾರಮಾಡುವ ಶ್ರೀ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ