ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ರಕ್ಷಿಪೆ ಎನಗೆಂತು ಶಿಕ್ಷಕರಿಲ್ಲ ಪ ಸಕಳ ಸಂಶಯಗಳ ವಿಕಳವ ಮಾಡಿಸಿ ಅಕಳಂಕ ಮತಿ ಸೋಮ ಸುಕಳ ಮಾಡುವರಿಲ್ಲ 1 ಸಂತತ ನಿನಗೇನು ಅಂತರ ಸ್ಥಿತಿಯೆಂದು ಚಿಂತಿಪ ಬಂಧು ಆದ ಸಂತ ಜನರ ಕಾಣೆ 2 ಪರಿಪರಿ ಬಗೆಯಿಂದ ಪರತತ್ವಗಳನು ಅರಿದು ತಿಳಿಪದ್ಯಚ್ಚರಿಪರು ಎನಗಿಲ್ಲ3 ತುತಿ ಮಾಡಿ ಕೆಲರು ಸನ್ಮತಿಯಾಗೊಡಿಸುವರು ಕ್ಷಿತಿಯೊಳಗೆನಗುಪಕೃತಿಯ ಮಾಡುವರಿಲ್ಲ 4 ಹಲವು ಪರಿಯಲೆನ್ನ ಸಲಹುವ ಗುರುದೈವ ಕುಲಪ ವಾಸುದೇವವಿಠಲ ನೀ ಕರುಣಿಸೊ 5
--------------
ವ್ಯಾಸತತ್ವಜ್ಞದಾಸರು
ಎಂಥಾ ಸ್ಥಿತಿಯೆ ಶ್ರೀರಾಮಗೆ ಪ ಚಿಂತಿತ ಫಲದಗೆ ಚಿಂತಾಪ್ರಾಪ್ತಿಯೆ ಅ.ಪ. ಲೋಕೈಕನಾಥಗೆ ಈ ಕಪಿನಾಥನು ಸು- ಗ್ರೀವನು ನಾಥನೆಂದೆನಿಸುವ ಪರಿಯೆ 1 ಸಕಲ ಲೋಕ ಶರಣ್ಯಗೆ ಕಕುಲತೆಯಿಂದನ್ಯರಲಿ ದೈನ್ಯವೆ 2 ಯಾವನನುಗ್ರಹ ಬೇಡುವರು ಈ ವಿಭುವಿಗೆ ಸುಗ್ರೀವನ ದಯವೆ 3 ಎಲ್ಲರ ದುಃಖವ ಪರಿಹರಿಸುವನಿಗೆ ಇಲ್ಲಿ ಸುಗ್ರೀವನೊಳ್ ದೈನ್ಯದ ಮೊರೆಯೆ 4 ಕರಿಗಿರೀಶನ ಕಾರ್ಯಕೆ ಕಪಿವರ ಪರಿ ಮಾಡಿಸುವುದೆ 5
--------------
ವರಾವಾಣಿರಾಮರಾಯದಾಸರು
ದೇವನಾ ದರುಶನಾ ಜೀವನಾ ಪಾವನಾ ಗುರುವಿನಾ ಪ್ರವಚನಾ ಸಾವಿನಾ ನಾಶನಾ ಪ ಸ್ವಾತ್ಮದ ಜ್ಞಾನೋದಯ ಜಗದಿ ಪೂರ್ಣ ನಿರ್ಭಯ ಬ್ರಹ್ಮಪದದ ತನುಮಯ ತಾನೇ ಶುದ್ಧ ಚಿನುಮಯ 1 ಜ್ಞಾನದ ಪೂರ್ಣಾನುಭವ ನಿರ್ವಿಕಲ್ಪ ಸ್ಥಿತಿಯೆ ಶಿವಾ ದುರುಳ ಭವ ಗುರುವಿತ್ತಾತ್ಮಾನುಭವ 2 ಜೀವನ್ಮುಕುತಿ ಆನಂದ ತಿಳಿಯೆ ನೀನೆ ಮುಕುಂದ ಅರಿತು ನೋಡು ಇದನೆಂದ ಗುರುಶಂಕರನಾ ಕಂದಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ನಾಲಿಗೆ ತುದಿಯಲ್ಲಿ ರಾಮ ಎಂಬೊ ನಾಮ ವ್ಯಾಳಿಗೆ ಒದಗಿಸೋ ಹರಿಯೆ ಮರಿಯೆ ಪ ಕಾಲನ ದೂತರು ಕಠಿಣರೆ ಸರಿ ವ್ಯಾಳಿಯು ಹೇಳಿ ಕೇಳಿ ಬರುವದಲ್ಲ ಆಲಯದವರ ಶಕುತಿಯಲ್ಲೇನೋ ಲಾಲಿಸಬೇಕೇನೊ ಎನ್ನ ಬಿನ್ನಪ 1 ಕಾಲನ ಸ್ಥಿತಿಯೆಂತು ಮೇಷದ ಗುಂಪಿಗೆ ತೋಳದ ಪರಿಯೆಂದು ನಾ ಕೇಳಿ ಬಲ್ಲೆ ಕಾಳು ಕಪಟೆ ತಿಂಬ ಮೂಷಕಗಳಿನ್ನು ಕಾಲ ಭುಜಂಗದಂತೆ ಕಂಡು ಬಲ್ಲೆನೊ2 ಹೇಸಿ ವಿµಯವೆಂಬಾ ಮಡಿವಿನೊಳಗೆ ವೈದು ಮೋಸಗೊಳಿಸುವ ಸ್ಥಿತಿಯು ಮನಸಿನ ಪರಿ ತಿಳಿದಿನ್ನು ಈ ಸಮಯಕ್ಕೆ ನಾಮ ಒದಗಿಸಯ್ಯ 3
--------------
ವ್ಯಾಸತತ್ವಜ್ಞದಾಸರು