ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಸನ್ನ ಶ್ರೀನಿವಾಸ ಕಲ್ಯಾಣ ಜಯ ಜಯ ಜಯ ಶ್ರೀನಿವಾಸ ಕೃತಿ ಮಾಯಾ ಶ್ರೀಶ ಭಯಬಂಧಮೋಚಕ ಜೀಯ ಆಹ ಸುಂದರ ಚಿನ್ಮಯಾನಂದ ಜ್ಞಾನಾತ್ಮನೆ ಮಂದಜಭವ ಸುರವೃಂದ ಸಂಸೇವ್ಯ ಜಯ ಪ ಸುರಸರಿತ ತೀರದಿಂದ ಸುರಮುನಿ ಭೃಗು ಬಂದು ನಿನ್ನ ಪರಸಮರಹಿತನೆಂದರಿತ ಆಹ ಸಿರಿಯು ನಿನ ಭಾವವನುಸರಿಸಿ ಬೇಗ ಕರವೀರ ಪುರ ಪೋಗೆ ಗಿರಿಪುತ್ತ ಪೊಕ್ಕೆಯೊ 1 ಮೇರುಸುತನೆ ಹಾಟಕಾದ್ರಿ ವೀರ ಭಕುತ ವೃಷಭಾದ್ರಿ ಸರೀಸೃಪಾವರಿಸಿದ ಸೌರಭ್ಯಗಿರಿಯಿದು ಪರವೇಂಕಟಾದ್ರಿಯು ಹರಿತು ವಿಪ್ರನ ಪಾಪ 2 ನೀನಿದ್ದ ಸ್ಥಳವೇ ವೈಕುಂಠ ನಿನಗಾರು ಸಮರುಂಟೆ ಶ್ರೀಶ ದೀನ ಸುಜನರಿಗೆ ನಂಟ ಆಹ ಧೇನು ಪಾಲ್ಗರೆಯಲು ಪಾಲಕ ಹೊಡೆಯಲು ದೀನರಕ್ಷಕ ನೀನು ಶಿರಸಿತ್ತು ಪೊರೆದೆಯೊ 3 ಏಳು 2ತಾಳದ ಉದ್ದ ರಕ್ತ ತಾಳಲಾರದೆ ಬಿದ್ದ ಗೋಪ ಚೋಳರಾಯಗೆ ಕೊಟ್ಟೆ ಶಾಪ ಆಹ ಪೇಳಬಲ್ಲೆನೆ ನಿನ್ನ ಅತಿಶಯ ಲೀಲೆಯ ಶೀಲ ಸುರರ ಗುರು ಚಿಕಿತ್ಸೆಯನೈದಿದೆ 4 ಸ್ವಗತ ಭೇದವಿಲ್ಲದಂಥ ಸ್ವಚ್ಛ ಚಿತ್ಸುಖಮಯನಂತ ಸ್ವಾನಿರ್ವಾಹಕ ವಿಶೇಷ ಆಹ ಶ್ವೇತವರಾಹನ ಸಂವಾದದಿಂದಲಿ ಸ್ವೀಕರಿಸಿದೀ ಸ್ಥಳ ಮೊದಲು ಪೂಜೆಯ ಕೊಟ್ಟು 5 ಸರಸ್ವತೀ ಸ್ವಾಮಿ ಪುಷ್ಕರಣಿ ಸುರಮುನಿನರರಿಗೆ ಸ್ನಾನ ಪರಸುಖಮಾರ್ಗ ಸೋಪಾನ ಆಹ ಸುರತಟಿನ್ಯಾದಿ ಸುತೀರ್ಥಗಳೆಲ್ಲವು ಸರಿತವಾಗಿರುತವೆ ಈ ಸ್ವಾಮಿ ತೀರ್ಥದಿ 6 ಆದಿಕಾರಣ ನಿನ್ನ 3ಲೀಲಾ ಮೋದಸಂಭ್ರಮವನ್ನು ನೋಡೆ ಕಾದುಕೊಂಡಿಹರು ಕೋವಿದರು ಆಹ ಸಾಧು ಸಂಭಾವಿತ ಬಕುಳಾದೇವಿಯುಗೈದ ನಿತ್ಯ ಸಂತೃಪ್ತ 7 ಮಂಗಳ ಚಿನ್ಮಯ ರಂಗಾ - ನಂಗನಯ್ಯನೆ ಮೋಹನಾಂಗ ತುಂಗ ಮಹಿಮನೆ ಶುಭಾಂಗ ಆಹ ಬಂಗಾರ ಕುದುರೆ ಮೇಲಂಗನೇರಲಿ 4ಬಂದ ಶೃಂಗಾರವೇನೆಂಬೆ ಎಂದಿಗೂ ಸ್ವರಮಣ8 ತೋಂಡಮಾನ ರಾಯನಣ್ಣ ಚಂಡಭೂಪನು ಆಕಾಶ ಕಂಡನು ಕಮಲದೊಳ್ ಶಿಶುವ ಆಹ ಅಖಿಳ ಕೋಟಿ ಅಸಮ ಈ ಶಿಶುವನ್ನು ಹೆಂಡತಿ ಧರಣಿಯು ಕೊಂಡಳು ಮಗಳಾಗಿ 9 ಮೂಲೇಶ ನಿನ್ನಯ ರಾಣಿ ಮೂಲಪ್ರಕೃತಿ ಗುಣಮಾನಿ ಭವ ತಾಯಿ ಆಹ ಶೀಲ ಭೂಪಾಲನ ಸುತೆ ಪದ್ಮಾವತಿಯೆಂದು 5 ಬಾಲೇರ ಸಹ ಪುಷ್ಪವನಕೆ ಬಂದಿಹಳೊ 10 ಮಹಿದೇವಿ ಕಮಲವಾಸಿನಿಯು ಬಹಿನೋಟಕ್ಕೆ ರಾಜಸುತೆಯು ಬಹು ಚಿತ್ರ ಪುಷ್ಪವ ಕೊಯ್ಯೆ ಆಹ ಮಹತಿಪಾಣಿಯು ಬಹು ವಯೋರೂಪದಲಿ ಬಂದು ಅಹಿತಲ್ಪ ಶ್ರೀಶನೆ ಪತಿಯೆಂದು ನುಡಿದ 11 ಹಾಟಕಗಿರಿಯಿಂದ ನೀನು ಬೇಟೆಯಾಡುವ ರೂಪ ತಾಳಿ ಘೋಟಕವೇರಿ ಸಂಭ್ರಮದಿ ಆಹ ಆಟವಾಡುವ ಬಾಲೆ ಬಳಿಯಲ್ಲಿ ಬಂದು ನೀ ನಾಟಕವಾಡಿದ್ದು ಪಾಡಲರಿಯೆನೊ 12 ನಿತ್ಯನಿರ್ಮಲ ಅವಿಕಾರ ಮತ್ರ್ಯರವೋಲು ನೀ 1ನಟಿಸೋ ಕೃತ್ಯಗಳರಿವರು ಯಾರೋ ಆಹ ಭೃತ್ಯವತ್ಸಲ ನೀನು ಬಕುಳೆಯ ಬಳಿ ಪೇಳಿ ಸಂತ್ಯಸಂಕಲ್ಪ ನಿನ ಸಂದೇಶ ಕಳುಹಿದೆ 13 ಪೊಂದಿದೆ ಫುಲ್ಕಸೀ ರೂಪ ಮಂಧಜಭವ ಶಿಶುವಾಗೆ ನಂದಿನಿಧರ ಯಷ್ಟಿಯಾದ ಆಹ ಮಂದಜಭವಾಂಡ ಗುಣಗುಲ್ಮ ಮಾಡಿ ನೀ ಕಂಧರದಲಿ ಗುಂಜ ಕಂಬುಸರವ ತೊಟ್ಟೆ 14 ನಾರಾಯಣಪುರಿಯಲ್ಲಿ ಮಾರನಯ್ಯನೆ ನಿನ್ನ ಸುಗುಣ ವಾರಿಧಿ ಪೊಕ್ಕಳು ಪದುಮೆ ಆಹ ಪುರಿಪ ಧರಣೀದೇವೀ ಪುತ್ರಿಗೆ ಜ್ವರವೆಂದು ಪರಿಪರಿ ಪರಿಹಾರ ಪರದು ನೋಡಿದರಾಗ 15 ಶುದ್ಧ ಸುಂದರ ಸುಖಕಾಯ ವೃದ್ಧ ಫುಲ್ಕಸೀ ವೇಷಧಾರಿ ಬದ್ಧ ಶೋಕರ ಬಳಿ ಪೋದೆ ಆಹ ಇದ್ದ ಸುದ್ದಿಯ ಅಬದ್ಧವಿಲ್ಲದೆ ಪೇಳಿ ಮುದ್ದು ಪದ್ಮೆಗೆ ಅನಿರುದ್ಧನೆ ಪತಿಯೆಂದೆ 16 ವಹಿಸಿ ನಿನ ಶಾಸನ ಬಕುಳ ಮಹದೇವನಾಲಯದಿಂದ ಮಹಿಳೆಯರ ಸಹ ಕೂಡಿ ಆಹ ಮಹಿದೇವಿಯಲಿ ಪೋಗಿ ವಿಹಿತ ಮಾತುಗಳಾಡಿ ಬಹು ಶುಭವಾರ್ತೆಯ ತಂದು ಪೇಳಿದಳೊ 17 ಶುಕಮುನಿ ಕರಪ್ರದವಾದ ಆಕಾಶ ನೃಪ ಲಗ್ನಪತ್ರ ಸ್ವೀಕರಿಸಿದೆ ಬಹು ಹಿತದಿ ಆಹ ವಾಗೀಶ ಶಶಿಧರ ನಾಗೇಶ ಸೌಪರ್ಣ ನಾಕೀಶ ಮೊದಲಾದ ಸುರರನು ಕರೆದೆ 18 ಶಿಷ್ಟ ಸನ್ಮುನಿಜನ ಕೂಟ ತುಷ್ಟ ಸುಮನಸ ಸಮೂಹ ಶ್ರೇಷ್ಠಸುಗಂಧಿ ಆಗಮನ ಆಹ ಸೃಷ್ಟ್ಯಾದಿಕರ್ತೆ ನಿನ ಸುಮಹೋತ್ಸವ ನೋಡಿ ಇಷ್ಟಾರ್ಥ ಪಡೆವರು ಎಷ್ಟೆಂಬೆ ವಿಭುವೆ 19 ಮಾಯ ಜಯೇಶ ಶ್ರೀವತ್ಸ ಛಾಯೇಶಗುಪಾಯ ಪೇಳಿ ತೋಯಜೆಯನು ಕರೆತಂದೆ ಆಹ ಸಿರಿ ಕೃತಿ ಕಾಂತಿ ನಿನ್ನಿಂದ ವಿಯೋಗರಹಿತರು ಎಂದೂ ಎಲ್ಲೆಲ್ಲೂ 20 ಬೃಹದಣುವಿಗೆ ಸತ್ತಾಪ್ರದನೆ ಸುಹೃದ ಸಂತೃಪ್ತ ಮುಖಾಬ್ಧೇ ದೃಢವ್ರತ ಶುಕಮುನಿಗೊಲಿದೆ ಆಹ ಬೃಹತೀ ಫಲಾನ್ನವನುಂಡು ಫೂತ್ಕಾರದಿ ಗೃಹ ಬಹಿರದಿ ಇದ್ದ ಜನರ ತೃಪ್ತಿಸಿದೆ 21 ಸುಜನರಿಗಾನಂದ ದಾತ ದ್ವಿಜರೂಢ ಜಗದೀಶ ನೀನು ಅಜಸುರರೊಡಗೂಡಿ ಬರೆ ಆಹ ಅಜಿತ ಚಿನ್ಮಯ ನಿನ್ನ ಆಕಾರ ನೃಪ ನೋಡಿ ನಿಜವಾಗಿ ಕೃತಕೃತ್ಯ ಧನ್ಯ ತಾನೆಂದ 22 ಅಜರ ಮಂದಿರ ಪೋಲ್ವ ಮನೆಯು ಪ್ರಜುವಲಿಸುವ ದಿವ್ಯ ಸಭೆಯು ನಿಜಭಕ್ತ ಪುರುಜನ ಗುಂಪು ಆಹ ದ್ವಿಜರ ವೇದಗಾನ ವಾದ್ಯ ಘೋಷಿಸಲಾಗ ನಿಜಸತಿ ಪದ್ಮೆಗೆ ಮಾಂಗಲ್ಯ ಧರಿಸಿದೆ 23 ಸುರಮುನಿಜನ ಮೂರು ವಿಧಕೆ ತರತಮ ಯೋಗ್ಯತೆ ಆರಿತು ಪರಿಪರಿ ಸಾಧನವಿತ್ತೆ ಆಹ ನೀರರುಹಜಾಂಡವು ನಿನ್ನಾಧೀನವು ಸಿರಿಭೂದೊರೆಯೇ ಶ್ರೀನಿವಾಸ ದಯಾನಿಧೆ 24 ನೀ ನಿಂತು ನುಡಿಸಿದೀ ನುಡಿಯು ನಿನ್ನಡಿಗಳಿಗೆ ಅರ್ಪಣೆಯು ಚನ್ನಮಾರುತ ಮನೋಗತನೆ ಆಹ ವನರುಜಹಾಸನ ತಾತ ಪ್ರಸನ್ನ ಶ್ರೀನಿವಾಸ ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ 25
--------------
ಪ್ರಸನ್ನ ಶ್ರೀನಿವಾಸದಾಸರು
ಷಣ್ಮಹಿಷಿಯರು ನಗ್ನ ಜಿತು ನೃಪ ಭಗಿನಿ ತನುಜೆ ಕಾಯೇ |ಲಗ್ನ ಗೈಸೆನ್ನ ಮನ ದೋಷಘ್ನನಲ್ಲೀ ಪ ಮಿತ್ರಾಖ್ಯ ಹರಿಪ್ರಾಪ್ತಿ ನಿತ್ಯದಲಿ ಚಿಂತಿಸುತಮಿತ್ರವಿಂದಾಭಿಧೆಯು ನೀನು ಆಗೀ |ಎತ್ತ ನೋಡಿದರತ್ತ ಶ್ರವಣ ಭಕ್ತಿಗೆ ಮುಖ್ಯಪಾತ್ರವೆಂದರುಹುತ್ತ ಅಂತೆ ಆಚರಿಪೇ 1 ಹರಿಕಥಾಮೃತ ಸರಿತು ಹರಿಯದಿಹ ಸ್ಥಳವೇನುಹರಿ ಪದಾಶ್ರಿತರಹಿತ ಮತ್ತೆ ಉತ್ಸವವೂ |ವಿರಹಿತದ ಪಾತ್ರಗಳ ತ್ವರಿತದಲಿ ತ್ಯಜಿಸುತ್ತಸರಿಯುವುದೆ ಲೇಸೆಂದು ಭೋದಿಸಿಹೆ ದೇವಿ2 ಹರಿಕಥೆಯ ಕೇಳುವುದೆ ಕರ್ಣಕ್ಕೆ ಭೂಷಣವುಹರಿಕಥೆಯ ಪೇಳುವುದೆ ವಾಗ್ಭೂಷಣಾ |ಪರಿಪರಿಯ ಅಂಗಗಳ ಹರಿಪರವ ಗೈಯ್ಯುವುದೆಪರಮ ಸತ್ಸಾಧನವು ಎಂತೆಂದು ಪೇಳ್ದೇ 3 ಈ ಪರಿಯ ತಪದಿಂದ ಶ್ರೀ ಪತಿಯ ಮನ ಒಲಿಸಿಸಾಪರೋಕ್ಷಿತೆಯಾಗಿ ಶ್ರವಣ ಭಕ್ತಿಯಲೀ |ಆ ಪರಮ ಪುರುಷನ್ನ ಕೈಪಿಡಿದು ಕೃತಕೃತ್ಯೆನೀ ಪರಮ ಕೃಪೆಯಿಂದ ಕಾಪಾಡು ಎಮ್ಮ 4 ಇಂದಿರಾ ರಮಣಂಗೆ ಎಂದೆಂದು ವೈರಿಗಳುವಿಂದಾನುವಿಂದರೆಂಬೀರ್ವ ಭ್ರಾತೃಗಳ |ಸಂದು ದುರ್ಯೋಧನಗೆ ನಿನ್ನನರ್ಪಿದ ಹದನಮಂದಿ ಎದುರಿಲಿ ಕೃಷ್ಣ ಭಗ್ನವನೆ ಗೈದ 5 ಶ್ರವಣ ಭಕ್ತ್ಯಭಿಮಾನಿ ಚಿತ್ತದಲಿ ನೀನಿದ್ದುಪವನ ಮತ ತತ್ವಗಳ ಶ್ರವಣ ಗೈಸೀ |ಭವವನಧಿ ಉತ್ತರಿಪ ಹವಣೆ ನೀ ತೋರಿ ತವಧವಗೆ ಭಿನ್ನೈಸುವುದು ಎಮ್ಮ ಹಂಬಲವ 6 ಸವನ ಮೂರಲಿ ಆಯು ವಿವಿಧ ಭವಣೆಗಳಿಂದಪ್ರವಹಿಸುತ ಸಾಧನೆಗೆ ವಿಘ್ನವಾಗಿಹುದುಪವನಾಂತರಾತ್ಮ ಗುರು ಗೋವಿಂದ ವಿಠಲನಪಾವನ್ನ ಪದಕಾಂಬ ಹವಣೆ ತಿಳಿಸಮ್ಮಾ 7
--------------
ಗುರುಗೋವಿಂದವಿಠಲರು