ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಭೂಮಿದುರ್ಗ ಮತ್ತೇಭೇಂದ್ರಿಗಮನೆ ಸ್ವ ರ್ಣಾಭ ಗಾತ್ರೆ ಸುಚರಿತ್ರೆ | ಸುಚರಿತ್ರೆ ಶ್ರೀ ಪದ್ಮ ನಾಭನ್ನ ಜಾಯೆ ವರವೀಯೆ 1 232 ದರಹಸಿತವದನೆ ಸುಂದರಿ ಕಮಲ ಸದನೆ ನಿ ವಿಧಿ ವಿಧಿ ಮಾತೆ ಲೋಕಸುಂ ದರಿಯೆ ನೀ ನೋಡೆ ದಯಮಾಡೆ 2 233 ತ್ರಿಗುಣಾಭಿಮಾನಿ ಎನ್ನವ ಗುಣದ ರಾಶಿಗಳ ವರವೀಯೆ ನಿನ್ನ ಪಾದ ಯುಗಳಕ್ಕೆ ನಮಿಪೆ ಜಗದಂಬೆ 3 234 ಪ್ರಳಯ ಕಾಲದಲಿ ಪತಿ ಮಲಗ ಬೇಕೆನುತ ವಟ ದೆಲೆಯಾಗಿ ಹರಿಯ ಒಲಿಸಿದಿ | ಒಲಿಸಿದಿ ಜಗದ ಮಂ ಗಳ ದೇವಿ ನಮಗೆ ದಯವಾಗೆ 4 235 ತಂತು ಪಟದಂತೆ ಜಗದಂತರ್ಬಹಿರದಲ್ಲಿ ಕಾಂತಮೊಡಗೂಡಿ ನೆಲೆಸಿಪ್ಪೆ | ನೆಲೆಸಿಪ್ಪೆ ನೀನೆ ನ್ನಂತರಂಗದಲಿ ನೆಲೆಗೊಳ್ಳೆ 5 236 ಈಶಕೋಟಿ ಪ್ರವಿಷ್ಟೆ ಈಶ ಭಿನ್ನಳೆ ಸರ್ವ ದೋಷವರ್ಜಿತಳೆ ವರದೇಶ | ವರದೇಶ ಪತಿದೊಡನೆ ವಾಸವಾಗೆನ್ನ ಮನದಲ್ಲಿ 6 237 ಆನಂದಮಯಿ ಹರಿಗೆ ನಾನಾಭರಣವಾದೆ ಪಾನೀಯವಾದೆ ಪಟವಾದೆ | ಪಟವಾದೆ ಪಂಕಜ ಪಾಣಿ ನೀನೆಮಗೆ ದಯವಾಗೆ 7 238ಮಹದಾದಿ ತತ್ವಗಳ ವಹಿಸಿ ನಿನ್ನುದರದೊಳು ದ್ರುಹಿಣಾಂಡ ಪಡೆದೆ ಪತಿಯಿಂದ | ಪತಿಯಿಂದ ಶ್ರೀಲಕ್ಷ್ಮಿ ಮಹಮಹಿಮಳೆ ಎಮಗೆ ದಯವಾಗೆ 8 238 ಆವ ಬ್ರಹ್ಮಾದಿ ದೇವರೆಲ್ಲರು ತವ ಕೃ ಪಾವ ಲೋಕನದಿ ಕೃತಕೃತ್ಯ | ಕೃತಕೃತ್ಯರಾಗಿ ಹರಿ ದೇವಿ ನಾ ಬಯಸುವುದು ಅರಿದಲ್ಲ 9 240 ಪಕ್ಷೀಂದ್ರವಾಹನನ ವಕ್ಷಸ್ಥಳವಾಗಿ ಅಕ್ಷಯಜ್ಞಾನಿ ಸುಖಪೂರ್ಣೆ | ಸುಖಪೂರ್ಣೆ ಕಮಲದ ಳಾಕ್ಷಿ ನೋಡೆನ್ನ ದಯದಿಂದ 10 241 ಹಲವು ಮಾತ್ಯಾಕೆ ಶ್ರೀಲಲನೆ ಶ್ರೀಜಗನ್ನಾಥ ವಿ ಮನದಲ್ಲಿ ವಾಸವಾಗೆಲ್ಲ ಕಾಲದಲಿ ಅವಿಯೋಗಿ 11
--------------
ಜಗನ್ನಾಥದಾಸರು
ಅಧ್ಯಾಯ ಮೂರು ವಚನ ಪ್ರಹ್ಲಾದ ಹೀಗೆ ಬಾಲಕರಿಗ್ಹೇ ಳುವಾಗ ಕೇಳುತಲದನು ಬೇಗಶಂಡಾಮರ್ಕ- ರ್ಹೋಳಗಿ ಹೇಳಿದರು ಚಂದಾಗಿ ದೈತ್ಯನಾಗಲಾಕ್ಷಣದಲ್ಲಿ ಬೇ ಆಗ ಪ್ರಹ್ಲಾದನಾ ಬೇಗ ಕರೆ ಕಳಿಸುತಲೆ ಹೀಗೆಂದ ಕ್ರೋಧ ಭರಿತನಾಗಿ ತಾನು 1 ರಾಗ ಆವಾತ ಬಲನಿನಗೆ ಪ ನಾನೊಬ್ಬನೆ ಬಲ ಅ.ಪ ಕುಲಭೇದ ಮಾಡುವಿಯೋ ಹುಟ್ಟಿ ನೀಕುಲಕಂಟನಾದ್ಯೋ1 ಕೆಟ್ಟರಲ್ಲಾ ಕಡುದೈತ್ಯ ಜಾಲಿಗಿಡನಾಗಿ ಹುಟ್ಟಿದ್ಯೋ 2 ಇದ್ದರೇನು ಬಿಡದೆ ಆ ಕೊಡಲಿಗೆ ಕಾವಾದ್ಯೋ 3 ವಚನ ನಾ ಮಾತುಗಳು ವಿರಸಾದ ಸರಿಸಿ ಅವನಲಿ ಸ್ನೇಹ ಸ್ಮರಿಸಿ ಅವನಲಿ ಭಕ್ತಿಸುರ ಹರುಷದಿಂದಲಿ ನುಡಿದ ಹರಿ ಹಿರಣ್ಯ ಕಶಿಪುವಿಗೆ ರಾಗ ಅವನೆ ಎನಗೆ ಬಲವು ಪ ಶ್ರೀ ವೈಕುಂಠ ಭುವನಕ್ಕೆ ಒಡೆಯಾ ಅ.ಪ ಕುಲಗಳಿಗೊಡೆಯ 1 ಅವನೆ ಪಾಲಿಸಿ ನಾಶವನು ಅವನೆ ಸರ್ವೋತ್ತಮನವನೆ ಎನ್ನೊಡೆಯಾ 2 ಸರ್ವರಲ್ಲಿ ಇಡು ಸ್ನೇಹವ ಪಾದ ಅನಂತಾದ್ರಿಗೊಡೆಯ ನಾಗಿರುವಾ 3 ರಾಗ ಮಗನಮೇಲೆ ಖಡ್ಗ ಹಿಡಿದನು 1 ಮಾತಾಡಿದ್ಹೇಳೆಲೊ ನೀನು 2 ಹರಿಯನ್ನೇ ಕೊಂಡಾಡುವೆಯಲ್ಲಾ ಆಹರಿಯ ಹೊರತು ಗತಿಯೆನಗಿಲ್ಲಾ 3 ಕಡಿದು ಬಿಡುವೆ ನಿನ್ನನ್ನು ನಾನು ಹಿಂದೆ ಕಡಿದೇನು ಮಾಡಿದಿ ಎಲೋ ನೀನು 4 ಕಂಡಂಜುವನಲ್ಲವೆಲೊ ನಾನು 5 ಸ್ಥಿರವೆಂಬುದನರಿಯೆಯೋ 6 ಶ್ರೀಹರಿವಶವಾಗಿಹುದು 7 ಅವನಿದಿರುವಾ ಸ್ಥಳವಾವುದು 8 ಕೊಡುವ ನೆನಗವತಾನು 9 ಮೂರ್ಖ ತಿಳಿ ನೀನು 10 ಪ್ರಕಟನಾಗುವ ಅನಂತಾದ್ರೀಶಾ 11 ವಚನ ದೃಢವಾದ ಕಂಬವನು ದೃಢಮುಷ್ಠಿ ಕಡುಶಬ್ಧ ತಡವಿಲ್ಲ ಹೋಯಿತು ಒಳಗೆಹಿಡಿ ಬ್ರಹ್ಮಾದಿಗಳು ಪೊಡ ನಡುವೆ ಬಂದಿತು ಎಂದು ಸಿಕ್ಕಲ್ಲೇ ಅಡಗಿದರು ಆಗ ಪಟುತರ ಶ್ರೀಹರಿಯುಕುಟಿ ಮಹಾಕಠಿನ ನರಮೃಗನಾಗಿ ಭಟರು ಇರುವಲ್ಲೆ ಆರ್ಭ ಸಂಹನನ ನರನುನರ ಸಿಂಹ ಜಿಹ್ವೆನಲಿದಾಡುವದು ದೈತ್ಯಸಿಂಹ ನಡುಗಿದನು ರಾಗ ಶೌರ್ಯದಿಂದ ಯುದ್ಧವೆಂಬೋ ಕಾರ್ಯ ಮಾಡಿದಾ 1 ಗದೆಯ ಸಹಿತ ಕೈಯ ಹರಿಯು ವದಗಿ ಹಿಡಿದನು 2 ಖಡಗಚರ್ಮ ಹಿಡಿದು ಬಂದ ನಡೆದು ಮುಂದಕ್ಕೆ 3 ತಕ್ಕವಾಗಿರುವ ಹೊಸ್ತಿಲಕ್ಕೆ ನಡೆದನು 4 ಹೃದಯದಲ್ಲಿ ಸೀಳಿದಾ 5 ಕೊಂದು ಎಲ್ಲ ಸರಳ ಮಾಡಿದಾ 6 ಸ್ತುತಿಸಿ ಪುಷ್ಟವೃಷ್ಟಿಕರೆದುರು7 ಭಯನಿವಾರಣನ ದಯದಿ ಭಯವ ಕಳೆದರು 8 ನುಡಿದವಾಗ ತೀವ್ರದಿಂದಲಿ 9 ಗಾಯನವ ಮಾಳ್ಪರು 10 ಸಾಹಿತ್ಯದಿಂದಲಿ11 ಮೂರ್ತಿ ಕಂಡು ದೂರ ನಿಂತರು 12 ಸಂತತಾನಂತದ್ರೀಶನಂತ ತಿಳಿಯರು 13 ವಚನ ಸಂಪೂರ್ಣ ಕೇಳ್ವರೂ ಅವರು ದುರಿತ ತೋರುವನು ಪ್ರತ್ಯಕ್ಷ ಚಾರ್ವನಂತಾದ್ರೀಶ ನಾರಸಿಂಹನು ಮಾಡಿರುವಲ್ಲಿ ಪೂರ್ಣವಾಯಿ ದಯದಿಂದ ಮೂರು ಅಧ್ಯಾಯ 1
--------------
ಅನಂತಾದ್ರೀಶ - ಕಥನಕಾವ್ಯಗಳು
ಕಂಡೆ ಫಂಡರಿರಾಯನ ಸಿರಿಮನ ಪ್ರಿಯನಾ ಪ ಚಂಡವಿಕ್ರಮ ಕರದಂಡ ಮುನಿಪನೊಲಿ ದಂಡಜಾಧಿಪ ಪ್ರಕಾಂಡ ಸುಪೀಠನ ಅ.ಪ. ಮಣಿಮಯ ಮಕುಟ ಮಧುಪನವಿರಪ್ಯರೇ ಪಣೆಯೊಳಿಟ್ಟ ಕಸ್ತೂರಿ ತಿ¯ಕಾ ವನÀರುಹ ಉಪಮ ಲೋಚನಯುಗ ಚಂಪಕ ಸುನಾಸ ವಕುಂಡಲವ ವಿಕಾಸವ ಕದಪಿನ ವಿಲಾಸವ ಮೊಗದ ಮಂದಹಾಸವ 1 ಕುಂದ ಕೋರಕ ದಶನಾವಳಿಯ ಬಿಂಬಾ ಅಧರ ಕಳೆಯ ಕಂಧರ ತ್ರಿವಳಿ ಪುರಂದರ ಇಭಕರ ಪೋಲುವ ಭುಜಯುಗ ವಿಶಾಲವಾ ಕರತಳರಸಾಲವ ನಖರ ಮಲ್ಲಿಕಾಸವ 2 ಅತಿವಿಸ್ತøತ ವಕ್ಷಸ್ಥಳವಾ ಸಿರಿ ಸತಿ ಸದನಾರ್ಕನಂದದಿ ಪೊಳೆವಾ ಕೌಸ್ತುಭ ದೀಧಿತಿ ವಿಲಸಿತ ವೈಜಯಂತಿಯ ಉದರ ರೋಮ ಪಂಕ್ತಿಯಾ ಕುಕ್ಷಿತ್ರಿವಳಿ ಕಾಂತಿಯಾ ನಾಭಿವಲ್ಮೀಕ ದಂತಿಹ 3 ಮುಂಬಿಸಿಲಿನಂತೆ ಕನಕ ಚೈಲಾ ಸುನಿ ತಂಬದಿ ಪೊಳೆವ ಗೋಲಿಯ ಚೀಲಾ ಕುಂಬು ಕೋಕನದ ವಿಡಂಬ ಮೇಖಲ ಕದಂಬವ ಊರು ಕದಳೀ ಜಾನುಗಳಿಂದು ಬಿಂಬನಾ ಆಚರಿಪ ವಿಡಂಬನಾ 4 ಮಾತಂಗಕರವ ಜಂಘೆಗಳ ಗುಲ್ಫ ಜಾತಿಮಣಿಕಾಂಗುಲಿ ಸಂಘಗಳ ಜ್ಯೋತಿ ಬೆಳಗೆ ಜಗನ್ನಾಥ ವಿಠಲ ನಂಘ್ರಿ ಪುಷ್ಕರಾ ಉದಿತ ಶತ ಭಾಸ್ಕರಾ ಗಭಸ್ತಿ ತಿರಸ್ಕರ ಸುಜನರಿಗೆ ಶ್ರೇಯಸ್ಕರ 5
--------------
ಜಗನ್ನಾಥದಾಸರು
ಪಾಲಿಪರೊಬ್ಬರಿಲ್ಲ ಪ ದಂಡಾದಿ ರಾಜ್ಯವು ಕೆಟ್ಟು ಪೋಕ ಪುಂಡರು ಹೆಚ್ಚಿ ಮಾರ್ಗವತೋರಿ ಕೊಟ್ಟು ಪೆಂಡಾರರಿಗೆ ಸುಲಿಗೆ ಕೊಟ್ಟು ಭೂ ಮಂಡಲದೊಳಗಣ ಜನರೆಲ್ಲ ಕೆಟ್ಟು 1 ಎತ್ತು ಮುಟ್ಟುಗಳೆಲ್ಲ ಹೋಗಿ ಬೀಳು ಬಿದ್ದು ಗದ್ದೆಯ ಪೈರು ನಿಸ್ಥಳವಾಗಿ ತುತ್ತುರಿಗಳು ಸುಟ್ಟು ಹೋಗಿ ದಂಡು ನಿತ್ತು ಪ್ರಜೆಗೆ ಮನೆ ಮುಖವಿಲ್ಲದಾಗಿ 2 ಕರಿದೋ ಬಿಳಿದೋ ಕಾಣೆ ಕ್ಷೀರ ಕೊಡುವ ತರುಗಳಿಲ್ಲವು ಮರ ಒಣಗಿ ಅರಮನೆ ಯತ್ತಣಿಂ ಘೋರ ಕರೆ ಕರೆಯೊಳು ಬಂದಿತಯ್ಯ ಗ್ರಹಚಾರ 3 ಗಂಜಿ ಗಾಸ್ಪದವಿಲ್ಲವಾಯ್ತು ಮೂರು ಸಂಜೆಯ ದೀಪಕೆ ಕೊಳ್ಳಿ ಬೆಳಕಾಯ್ತು ಅಂಜನ ಪಾತ್ರೆ ಹೆಚ್ಚಾಯ್ತು ಬದುಕಲು ನಾಲ್ಕು ವರ್ಣ ಒಂದಾಯ್ತು 4 ಕಾಲಗತಿಯು ಬಲು ಬಿರುಸು ಮುಂದೆ ಬಾಳುವ ಜನರಿಗೆ ನೃಪರಿಂದ ಹೊಲಸು ಶೂಲಿ ಸಾಯುಜ್ಯವ ಬಯಸು ಲಕ್ಷ್ಮೀ ಲೋಲನ ನಾಮವ ಮನದೊಳುಚ್ಚರಿಸು 5
--------------
ಕವಿ ಪರಮದೇವದಾಸರು
ಮುದ್ದು ಕೃಷ್ಣನ್ನ ನೋಡ ಬನ್ನಿರೆಲ್ಲ ನಮ್ಮ ಸಿರಿ ಭೂಮಿ ನಲ್ಲ ಪ. ಪಂಚ ಪಂಚ ಉಷಃ ಕಾಲದಲಿ ಎದ್ದು ಯತಿವರರು ಪಂಚಬಾಣನ ಪಿತಗೆ ನಿರ್ಮಾಲ್ಯ ತೆಗೆದು ಪಂಚ ಗಂಗೋದಕದಿ ಸ್ನಾನಗೈಸುತ ಹರಿಗೆ ಪಂಚವಿಧ ಪಕ್ವಾನ್ನ ಉಣಿಸಿ ದಣಿಸಿಹರು 1 ಕಾಲ್ಕಡಗ ಗೆಜ್ಜೆ ಪೈಜಣ ಘಲ್ಲು ಘಲ್ಲೆನುತ ಮೇಲೆ ಉಡುದಾರ ಉಡುಗೆಜ್ಜೆ ನಡುವಿನಲಿ ಬಾಲಕೃಷ್ಣಗೆ ಅಸಲಿ ಹುಲಿ ಉಗುರು ಹೊನ್ನು ಸರ ತೋಳ ಬಾಪುರಿಗಡಗ ಉಂಗುರಗಳ್ಹೊಳೆಯೆ 2 ಮುದ್ದು ಮುಖಕೊಂದು ಮೂಗುತಿ ಕರ್ಣಕುಂಡಲವು ಕದ್ದು ಬೆಣ್ಣೆಯನು ಕಡಗೋಲ ಪಿಡಿದಿಹನು ತಿದ್ದಿದ ತಿಲುಕ ಮುಂಗುರುಳೂ ಮುತ್ತಿನ ಸಾಲು ಶುದ್ಧ ಚಿನ್ನದ ರತ್ನ ಮಕುಟ ಶಿರದಲ್ಲಿ 3 ರಮ್ಯವಾಗಿಪ್ಪ ವೈಕುಂಠಪುರಿಯನೆ ಬಿಟ್ಟು ಜನ್ಮಸ್ಥಳವಾದ ಗೋಕುಲವ ತ್ಯಜಿಸಿ ತಮ್ಮವರಿಗಾಗಿ ಕಟ್ಟಿದ ದ್ವಾರಕಿಯ ಕಳೆದು ಬ್ರಹ್ಮಾದಿ ವಂದ್ಯ ತಾನಿಲ್ಲಿ ನೆಲೆಸಿಹನು 4 ಅಪಾರ ಮಹಿಮನು ಆನಂದ ತೀರ್ಥರಿಗೊಲಿದು ಪಾಪಿ ಜನರುಗಳ ಉದ್ಧರಿಸಬೇಕೆಂದು ಶ್ರೀಪತಿಯು ತಾ ಪುಟ್ಟ ರೂಪಧಾರಕನಾಗಿ ಗೋಪಾಲಕೃಷ್ಣವಿಠ್ಠಲನಿಲ್ಲಿ ನಿಂತ 5
--------------
ಅಂಬಾಬಾಯಿ
ಲಕ್ಷ್ಮೀದೇವಿ ಸ್ತೋತ್ರ ಎಂದು ಬರುವಳೋ ಗೋ-ವಿಂದನೊಲ್ಲಭೆ ಲಕ್ಷ್ಮೀ ರಂಗನ ಸನ್ನಿಧಿಗೆ ಪ ಮಂಗಳಾಂಗಿ ಸರ್ವಾಂಗ ಬಳಲಿ ಮುಖಕಂದಿ ಕಳೆಗುಂದಿದಂತೆ | ಬಲು ವ್ಯಥೆಯಂತೆ ಅ.ಪ ಶೇಷನ ಶಿಖಿ ಮ್ಯಾಲೆವಾಸುದೇವರು ಲಕ್ಷ್ಮೀ ಸಮೇತರಾಗಿರುತಿರಲುಆ ಸಮಯದಿ ಭೃಗುಮುನಿ ಬಂದು ಕೋ-ಪಿಸೆ ಸೋಕಿಸಿದನು ಪಾದವಾ | ವಕ್ಷ ಸ್ಥಳವಾ 1 ಥಟ್ಟನೆ ಇಳಿದಾಳುಸಿಟ್ಟಿನಿಂದಲಿ ಬಹು ಧಿಕ್ಕಾರ ಮಾಡಿದಳುಲಕ್ಷ್ಮೀರಮಣನೆಂಬೊ ಬಿರುದು ನಿಮಗೆ ಈಹೊತ್ತಿಗೆ ಅಲ್ಲೆಂದಾಳು | ತೆರಳಿದಳು 2 ನಿಲ್ಲದೆ ಪೊರಟಾಳುಫುಲ್ಲಾಕ್ಷಿ ಮನದೊಳು ತಲ್ಲಣಿಸುತಿರಲುವಲ್ಲಭನರಿಯದ ಸ್ಥಳವಿಲ್ಲದಿರೆ ತಾಯಿ ಕೊಲ್ಲಾಪುರಕೆ ಬಂದಾಳು | ನೆಲೆಗೊಂಡಾಳು 3 ಜಾತೆ ಬಾಮಾರನ ಮಾತೆ ಬಾ ವಾರಿಜದಳನೇತ್ರೆ ಬಾಮೂರ್ಲೋಕದೊಳಗೆ ನೀ ಪ್ರಖ್ಯಾತೆ ಬಾರೆಂದು ಶ್ರೀಮ-ನ್ನಾರಾಯಣನೆ ಕರೆಯಲು | ನಸುನಗೆಯೊಳು 4 ಜಯ ಲಕ್ಷ್ಮೀರಮಣಗೆಜಯ ಶ್ರೀನಿವಾಸಗೆ ಜಯ ಮೋಕ್ಷದಾಯಕಗೆಜಯತು ಕೊಲ್ಹಾಪುರದೊಳ್ ನೆಲಸಿದವಳಿಗೆಶ್ರೀದೇವಿಯಳಿಗೆ5 ವೆಂಕಟ ವಿಠಲವೈಕುಂಠಪತಿ ಲಕ್ಷ್ಮೀ ಶಾಂತ ಏಕಾಂತದೊಳುಶಂಖಚಕ್ರಧರ ಸರ್ವಮಂಗಳಕಾರಸಂಚಿತಾಗಮದೂರನು ಮಲಗಿರುವನು6
--------------
ವೆಂಕಟೇಶವಿಟ್ಠಲ
ಶ್ರೀ ಗುರು ಮೂರ್ತಿಯನು ನಂಬಿ ಧ್ಯಾನಿಸಿ ಜನರು | ನೀಗಿ ಚಂಚಲ ಚಿತ್ತದಾ ಭಾಗವತ ಧರ್ಮದಿಂದರ್ಚಿಸಲು ಕರುಣ ಮಳೆ | ಭವ ಪಾಶದೆಶೆಯಿಂದ ಪ ಎಳೆಯ ಮಾದಳಿರ ಸೋಲಿಸುವ ಮೃದುತರ ಬೆರಳ ನಖ ಚಲುವ ಪಾದಾ | ನಳ ನಳಿಪ ಪವಳ ಮಣಿಯಂತೆ ಹರಡಿನ ಸೊ.... ವಿಲಸಿತದ ಜಂಘೆದ್ವಯದಾ | ನಿಚ್ಚಳದ ಜಾನೂರದ ಸ್ಪುರದಾ | ವಲುಮೆಮಿಗೆ ತನು ಮಧ್ಯ ಸಂಪಿಗೆಯ ಗಂಭೀರನಾಭಿ ಕಿರು ಡೊಳ್ಳು ತ್ರಿವಳಿ ವಾಸನೆಯ ಛಂದಾ 1 ಪುತ್ಥಳಿಯ ಹಲಗಿ ಕಾಂತಿಯ ಲೊಪ್ಪುತಿಹ ಉರದ | ವತ್ತಿಡದ ಕೊರಳ ಮಾಟಾ| ಮಣಿ ಬಂಧ | ಮತ್ತ ಊರ್ಪರಿಯಕಟಾ | ಮೊತ್ತದೋರ್ವಂಡ ಭುಜ ಶ್ರವಣ ನುಣ್ಗದಪುಗಳು | ಹೆತ್ತ ಪಲ್ವಧರ ನೀಟಾ | ಸೂರ್ಯ ಪರಿನಯನ | ವೆತ್ತ ಭ್ರೂಲತೆ ಪೆರ್ನೊಸಲ ಸುಕೇಶಿಯ ಜೂಟಾ 2 ಮಣಿ ತೇಜದೊಳೆ ಯುಗ್ಮ ಕುಂಡಲಗಳು | ನವರತ್ನ ಹಾರ ಮಂಡಿತ ಪದಕ ವಡ್ಯಾಣ | ಠವ ಠವಿಸುತಿಹ ಸರಳು | ಬವರದೊಳು ಚಿತ್ತ ತೆತ್ತೀಸ ತಾಯಿತ ಕಡ ವಜ್ರ ದುಂಗುರಗಳು | ತವಕದೊಳ್ ನಿರೆ ಹಾಕಿ ದಂಬರವ ಮೌಲಿಕದ | ಕಾಲ ಕಡಗ ಅಂದುಗೆಗಳು 3 ದ್ವಿನಯನ ಮಧ್ಯ ರಾಜಿಸುವ ಮಂಟಪದೊಳಗ ಧ್ಯಾನ ಸಿಂಹಾಸನದಲಿ | ಸಾನು ರಾಗದಲಿ ಕುಳ್ಳಿರಿಸಿ ಚರಣ ದ್ವಯವ ಜ್ಞಾನ ಗಂಗೋದಕದಲಿ | ಮಾನಸದಿ ಅಭಿಷೇಕವನೆ ಮಾಡಿ ಸಲೆ ಪೂಸಿ ಆನಂದ ವಸ್ತ್ರ ಗುಣಲಿ | ಮೌನದಲಿ ಲಯಲಕ್ಷಿ ಗಂಧಾಕ್ಷತೆಯ ಸುಮನ ತಾನಿಟ್ಟು ಬೆಳಗಿ ಧೂಪದಿ ಏಕಾರತಿಗಳಲಿ 4 ಬಳಿಕ ಕಸ್ತೂರಿಯ ಕೇಶರದ ಚಂದನ ಪೂಸಿ | ಕಳೇವರಕ ವಪ್ಪಿಲಿಂದಾ | ಥಳ ಥಳನೆ ರಂಜಿಸುವ ಬಟ್ಟ ಮುತ್ತಿಶಾಶೆ ಗಳನಿಟ್ಟು ಬೇಗ ಛಂದಾ | ಚಲುವ ಮಲ್ಲಿಗೆ ಕುಂದರ್ಕೆ ಜಾಜಿ ಕೇತಕಿಯು ನಳಿನ ಮೊದಲಾದರಿಂದಾ | .....ರ ಮಾಲೆಯಾ ಹಾಕಿ ಪರಿಮಳದಿ ಧೂಪವನು | .....ಸಂಚಿತ ದಶಾಂಗದಿ ಚಕ್ಷು ಜ್ಯೋತಿಯಿಂದಾ 5 ವರಶಾಂತಿ ಶಕ್ತಿ ಯರ್ಚಿಸಿ ಕುಳ್ಳಿರಿಸಿ ಪುರುಷಾರ್ಥ ದೀಪಂಗಳು | ಮೆರೆಯುತ ಪ್ರಜ್ವಲಿಸಿ ತರುವಾಯ ಕನಕಮಯ | ಹರಿವಾಣ ಬಟ್ಟಲುಗಳು | ಪರಮಾನ್ನ ಪಂಚಭಕ್ಷಗಳನ್ನ ಸೂಪಘೃತ ಪರಿ ಪರಿಯ ಶಾಖಂಗಳು | ಸುರಸ ಪಾಲು ಮೊಸರು ತನಿವಣ್ಣಲುವಗಾಯಿಕೇಸರ | ಧರಿಯೊಳಗ ಲೇಹ ಪೇಹ ಮೊದಲಾದ ಭೋಜ್ಯಂಗಳು 6 ಇನಿತು ಅರ್ಪಿಸಿ ಸ್ವಾದುದಕ ಕೈದೊಳೆದು | ಗುಣದಿತ್ತು ತಾಂಬೂಲವಾ | ಅನುಭವದಾರತಿಯು ಪುಷ್ಪಾಂಜುಳಿ ನಮನ ಪ್ರದ ಕ್ಷಿಣ ಗೀತ ನೃತ್ಯ ಮುದವಾ | ಘನ ತೀರ್ಥಸು ಪ್ರಸಾದವ ಕೊಂಡು ಸೂರ್ಯಾಡಿ ಅನುವಾಗಿ ಸಖ್ಯದನುವಾ | ಮನುಜ ಜನ್ಮಕ ಬಂದು ಗುರು ಮಹಿಪತಿ ಸ್ವಾಮಿ | ಘನದಯವ ಪಡಕೊಂಡು ಪಡೆಯೋ ಮುಕ್ತಿಯ ಸ್ಥಳವಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು